ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಹರ್ಷಿತಾ ವೆಂಕಟೇಶ್ ಹಾಗೂ ವಿನಯ್ ಆಗಸ್ಟ್‌ 14ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮಾರ್ಚ್‌ 27ರಂದು ನಡೆಯಬೇಕಾಗಿದ್ದ ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊರೋನಾ ಕಾಟದಿಂದ ಮುಂದೂಡಿದ್ದರಂತೆ. 

 

ಶಾಸ್ತ್ರೋಕ್ತವಾಗಿ ಮದುವೆ ಆಗಬೇಕೆಂಬುದು ಹರ್ಷಿತಾ ಕನಸಾಗಿತ್ತು. ಆದರೆ 1800 ಮಂದಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಲಾಕ್‌ಡೌನ್‌ ನಿಯಮಗಳ ಪ್ರಕಾರ ಕೇವಲ 50 ಮಂದಿಗೆ ಮಾತ್ರ ಮತ್ತೆ ಆಹ್ವಾನ ನೀಡಬೇಕಾಗಿತ್ತಂತೆ. ಮದುವೆಯಾಗಿ 6 ದಿನಗಳು ಮಾತ್ರ ಮನೆಯಲ್ಲಿದ್ದು, ಶೂಟಿಂಗ್‌ಗೆಂದು ಹೈದರಾಬಾದ್‌ಗೆ ತೆರಳಿದ್ದರಂತೆ. ತಮ್ಮ ಕೆಲಸವನ್ನು ಅರ್ಥ ಮಾಡಿಕೊಳ್ಳುವ ಅತ್ತೆ, ಮಾವ ಹಾಗೂ ಗಂಡ ಪಡೆದುಕೊಂಡಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. 

ನಖರಾ ಗರ್ಲಾನಿ ನಿಖಾ ರಹಸ್ಯ; ಸುವರ್ಣ ನ್ಯೂಸ್‌ನಲ್ಲಿ ತಾಯಿ ಮಾಡಿದ್ರು ರಿವೀಲ್..! 

ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫ್ರೀ ವೆಡ್ಡಿಂಗ್ ಶೂಟ್‌ ವಿಡಿಯೋ ಹಾಗೂ ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
 
ಕಾರ್ತಿಕ ದೀಪ, ಮೇಘ ಮಯೂರಿ, ಚಂದನದ ಗೊಂಬೆ ಸೇರಿ ಅನೇಕ ಕನ್ನಡ ಧಾರಾವಾಹಿಗಳಲ್ಲಿ ಹಾಗೂ ಎರಡು ತೆಲುಗು ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ.

ವಯಸ್ಸು 30 ದಾಟಿದೆ, ಮದ್ವೆ ಮಾತೇ ಇಲ್ಲ ಅಂತಾರೆ ಈ ತಾರೆಯರು!