ನಿವೇದಿತಾ ಗೌಡಗೆ ಬಿಗ್ ಸರ್ಪ್ರೈಸ್‌ ಕೊಟ್ಟ ಚಂದನ್ ಶೆಟ್ಟಿ. ಮನೆ ತುಂಬಾ ತುಂಬಿರುವ ಅತಿಥಿ ನೋಡಿ ಏನಂದ್ರು ನೆಟ್ಟಿಗರು? 

ಬಿಗ್ ಬಾಸ್‌ ಬಾರ್ಬಿ ಡಾಲ್ ನಿವೇದಿತಾ ಗೌಡ ಹಾಗೂ Rapper ಚಂದನ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಸಾಕು ನಾಯಿ ಜೊತೆ ವಿಡಿಯೋ, ಇನ್‌ಸ್ಟಾಗ್ರಾಂ ರೀಲ್ಸ್, ಫೋಟೋ ಶೂಟ್‌ ಹಾಗೂ ಮುಂದಿನ ಆಲ್ಬಂ ಬಗ್ಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಆದರೆ ಈ ಸಲ ನಿವೇದಿತಾ ಶೇರ್ ಮಾಡಿಕೊಂಡಿರುವ ಫೋಟೋ ತುಂಬಾನೇ ಡಿಫರೆಂಟ್ ಆಗಿದೆ...

ಗುಡ್‌ ನ್ಯೂಸ್‌ ರಿವೀಲ್ ಮಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಂಪತಿ? 

ನಿವಿ ಇನ್‌ಸ್ಟಾ:
Teddybearಗಳು ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಎಷ್ಟೇ ದೊಡ್ಡದಿರಲಿ, ಚಿಕ್ಕದಿರಲಿ ತಮ್ಮ ಮನೆಯಲ್ಲಿ ಅದಕ್ಕೆಂದೇ ಜಾಗ ಮಾಡುತ್ತಾರೆ. ಪುಟ್ಟ ಪಾಪು ರೀತಿಯಲ್ಲಿ ಮುದ್ದು ಮಾಡುತ್ತಾರೆ. ಬೆಸ್ಟ್‌ಫ್ರೆಂಡ್‌ ರೀತಿಯಲ್ಲಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಆ ಬೊಂಬೆಯೊಟ್ಟಿಗೊಂದು ಆತ್ಮೀಯ, ಆವಿನಾಭಾವ ಬಾಂಧವ್ಯ ಬೆಳೆಯಿಸಿಕೊಳ್ಳುತ್ತಾರೆ.

View post on Instagram

ನಿವೇದಿತಾಗೆ ಮನೆಯಲ್ಲೊಂದು ಬೆಸ್ಟ್‌ ಫ್ರೆಂಡ್‌ ಇರಲಿ ಎಂದು ಚಂದನ್ ಶೆಟ್ಟಿ ಟೆಡ್ಡಿಬೇರ್‌ ಗಿಫ್ಟ್ ನೀಡಿದ್ದಾರೆ. ನಿವೇದಿತಾ ವಾಸ ಮಾಡುವ ಮನೆ ಹಾಲ್‌ ತುಂಬಾ ತುಂಬಿ ಹೋಗಿದೆ ಈ ಬೊಂಬೆ. ಕೇಸರಿ ಬಣ್ಣದ ಈ ಬೊಂಬೆ ಮೇಲೆ ನಿವೇದಿತಾ ಬಿದ್ದಿದ್ದಾರೆ. ಸಾಕು ನಾಯಿ ಕುಕ್ಕಿ ಹಾಗೂ ಟೆಡ್ಡಿಯನ್ನು ನಿವಿ ಅಪ್ಪಿಕೊಂಡಿದ್ದನ್ನು ಆಶ್ಚರ್ಯದಿಂದ ನೋಡುತ್ತಿದೆ. ಈ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಶೇರ್ ಮಾಡಿಕೊಂಡಿದ್ದಾರೆ. ' ತುಂಬಾನೇ ಇಷ್ಟವಾಗಿದೆ ಟೆಡ್ಡಿ. ಇದಕ್ಕೇನೆಂದು ಹೆಸರಿಡಲಿ?' ಎಂದು ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ.\

ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್‌ ಮುಟ್ಟಿದ ನಿವೇದಿತಾ ಗೌಡ! 

ಸಿಕ್ಕಾಪಟ್ಟೆ ಫನ್ನಿಯಾಗಿ ಚಂತಿಸುವ ನೆಟ್ಟಿಗರು, 'ಲೊಡ್ಡು ಲಲಿತಾ',' ದೊಡ್ಡ ನಿವಿ', 'ಗಂಡ' ಅಂತೆಲ್ಲಾ ಹೆಸರನ್ನು ಸೂಚಿಸಿದ್ದಾರೆ. ಇನ್ನು ಕೆಲವರು ನಿಮ್ಮ ಮನೆಯಲ್ಲಿ ಇದನ್ನು ಇಡಲು ಜಾಗ ಇದ್ಯಾ ಎಂದೂ ಪ್ರಶ್ನಿಸಿದ್ದಾರೆ.