ಮಕ್ಳು ಮಾಡ್ಕೊಂಡ್ರೆ ಅವ್ರೆ ನಂಗೆ ಊಟ ಮಾಡಿಸಬೇಕು; ತಾಯಿತನದ ಬಗ್ಗೆ ನಿವೇದಿತಾ ಗೌಡ ಶಾಕಿಂಗ್ ಹೇಳಿಕೆ

ವೈರಲ್ ಆಗುತ್ತಿದೆ ನಿವೇದಿತಾ ಗೌಡ ಮತ್ತೊಂದು ವಿಡಿಯೋ. ಮಕ್ಕಳನ್ನು ನೋಡಿಕೊಳ್ಳುವುದು ಹೇಗೆಂದು ತೋರಿಸಿಕೊಟ್ಟ ಸುಂದರಿ...

Kannada Niveditha Gowda talks about parenting in nanamma superstar reality show vcs

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತೊಮ್ಮೆ ವೀಕ್ಷಕರನ್ನು ಮನೋರಂಜಿಸಲು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರಿಯಾಲಿಟಿ ಶೋನಲ್ಲಿ ಎರಡು ವಿಶೇಷ ಸ್ಕಿಟ್ ಮಾಡುತ್ತಿದ್ದಾರೆ. ಸ್ಕಿಟ್‌ ನಂತರ ನಿರೂಪಕ ನಿರಂಜನ್ ದೇಶಪಾಂಡೆ ಕೊಡುವ ಟಾಸ್ಕ್‌ ಮಾಡುವಾಗ ಮಗುವನ್ನು ಹೇಗೆ ನೋಡಿಕೊಳ್ಳಬೇಕು, ನನ್ನ ಮಕ್ಕಳು ನನ್ನನ್ನು ನೋಡಿಕೊಳ್ಳಬೇಕು ಎಂದು ಹೇಳುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಒಮ್ಮೆ ಶಾಕ್ ಆದ ನಟಿ ತಾರಾ ಅನುರಾಧ ಕೂಡ ಪ್ರಶ್ನೆ ಮಾಡಿದ್ದಾರೆ. 

'ನನ್ನ ಮಗುನೇ ಊಟ ಮಾಡಿಸಬೇಕು ಅಡುಗೆ ಮಾಡಬೇಕು. ಪಕ್ಕಾ ಹಾಗೆ ಮಾಡುತ್ತೀನಿ. ನನಗೆ ಮಗು ಹುಟ್ಟರೆ ಅದಕ್ಕೆ ಎಲ್ಲಾ ಹೇಳಿ ಕೊಡುತ್ತೀನಿ. ಅಡುಗೆ ಮಾಡಿ ಕೊಟ್ಟರೆ ನಾನು ಖುಷಿಯಾಗಿರುತ್ತೀನಿ' ಎಂದು ನಿವೇದಿತಾ ಗೌಡ ಹೇಳಿದ್ದಾರೆ. ತಕ್ಷಣವೇ ತಾರಾ ' ನಿನ್ನ ಮಗುವಿಗೆ ಅಡುಗೆ ಮಾಡುವುದು ನೀನು ಹೇಳಿಕೊಡಬೇಕು ಅಂದ್ರೆ ಮೊದಲು ನಿನಗೆ ಅಡುಗೆ ಮಾಡಲು ಬರಬೇಕು ಅಲ್ವಾ' ಎನ್ನುತ್ತಾರೆ. 'ಅಯ್ಯೋ ಮೇಡಂ ಈಗ ಅಡುಗೆ ಮಾಡುವುದು ಕಷ್ಟವಲ್ಲ ಯೂಟ್ಯೂಬ್‌ ಇದೆ ಅಲ್ವಾ' ಎಂದಿದ್ದಾರೆ ನಿವಿ.

ಶೋನಲ್ಲಿ ನಿವೇದಿತಾಗೆ ಕೈಗೆ ಒಂದು ಗೊಂಬೆ ಕೊಟ್ಟು ಅದಕ್ಕೆ ಹೆಸರಿಟ್ಟು ಹೇಗೆ ಸಮಾಧಾನ ಮತ್ತು ಪ್ರೀತಿ ಮಾಡುತ್ತಾರೆಂದು ತೋರಿಸಬೇಕು. ನಿವಿ ಕೈಗೆ ಒಂದು ಆಟದ ಗೊಂಬೆ ಕೊಡುತ್ತಾರೆ 'ಈ ಮಗುವಿಗೆ ನಾನು ಚಾನ್ವಿ ಎಂದು ಹೆಸರಿಡುವೆ. ಚಂದನ್‌ ಹೆಸರಿನಿಂದ ಚಾನ್ ನನ್ನ ಹೆಸರಿನಿಂದ ನಿವಿ..ಎರಡು ಸೇರಿಸಿ ಚಾನ್ವಿ ಎಂದು ಕರೆಯುವೆ'ಎಂದಿದ್ದಾರೆ. ಮಗುವನ್ನು ಸಮಾಧಾನ ಮಾಡುವಾಗ 'ಅಳ ಬೇಡ ಪಾಪ ಅಳಬೇಡ ಚಿನ್ನಿ ಪಾಪ..ಅಲ್ಲಿ ನೋಡು ಚಂದ ಮಾಮ ..ಊಟ ಮಾಡ್ತೀಯಾ? ಏನ್ ತಿನ್ನುತ್ತೀಯಾ? ಚಿಕನ್ ಬೇಕಾ ಫ್ರೆಂಡ್ ಫ್ರೈಸ್ ಬೇಕಾ ಗೋಬಿ ಮಂಚೂರಿ' ಎಂದು ನಿವೇದಿತಾ ಕೇಳುವಾಗ ಮಾತನ್ನು ಸೃಜನ್ ಅಲ್ಲಿಗೆ ನಿಲ್ಲಿಸಿ 'ನಿನ್ನ ಕೈಯಲ್ಲಿರುವುದು ಮಗುನಾ ನಾಯಿ ಮರಿ ನಾ?' ಎಂದಿದ್ದಾರೆ. 

Kannada Niveditha Gowda talks about parenting in nanamma superstar reality show vcs

ಈ ಗೇಮ್ ನಡೆಯುವಾಗ ನಿವಿ ಜೊತೆ ನಿರಂಜನ್ ಪತ್ನಿ ಯಶಸ್ವಿನಿ ಕೂಡ ಭಾಗಿಯಾಗಿದ್ದರು. 'ಯಾಕೆ ಮಗು ಅಳುತ್ತೀಯಾ? ನೀನು ಕೂಡ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ಹೋಗಬೇಕಾ? ಅಪ್ಪನಿಗೆ ಹೇಳೋಣ' ಎಂದು ಹೇಳುತ್ತಿದ್ದಂತೆ ಗೊಂಬೆ ಅಳುವುದನ್ನು ನಿಲ್ಲಿಸುತ್ತದೆ. ಇಷ್ಟು ಬೇಗ ಹೇಗೆ ಅಳುವುದು ನಿಲ್ಲಿಸಿತ್ತು ಎಂದು ಪ್ರಶ್ನೆ ಮಾಡಿದ್ದಾಗ 'ಮಗುವಿಗೆ ಗೊತ್ತು ನನ್ನ ಅಮ್ಮ ಸೂಪರ್ ಸ್ಟಾರ್' ಎಂದಿದ್ದಾರೆ ಯಶಸ್ವಿನಿ.  

ನೆಟ್ಟಿಗರಿಗೆ ಟಾಂಗ್‌ ಕೊಟ್ಟ ನಿವಿ:

'ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ ಆದರೆ ಇದೆಲ್ಲಾ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್‌ಸೆನ್ಸ್‌ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ' ಎಂದು ನಿವೇದಿತಾ ಬರೆದುಕೊಂಡಿದ್ದಾರೆ. 

ವಾಟರ್ ಮಿಕ್ಸ್‌ ,5 ಮಿರ್ಚಿ; ಮೆಣಸಿನಕಾಯಿ ಬಜ್ಜಿ ಮಾಡಿದ ನಿವೇದಿತಾ ಹಿಗ್ಗಾಮುಗ್ಗಾ ಟ್ರೋಲ್

'ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡಿದ್ದರೆ ತಪ್ಪಲ್ಲ ಆದರೆ ಹುಡುಗಿ ಪ್ರವಾಸ ಮಾಡಿದ್ದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ? ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿರುವೆ ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್‌ ಮಾಡುತ್ತಿರುವೆ ಎಂದು ಕಾಮೆಂಟ್‌ ಮಾಡುತ್ತಿರುವವರಿಗೆ ಒಂದು ಪ್ರಶ್ನೆ..ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್‌ ಸೆಟ್‌ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದ್ದರು ನಿಮಗೆ ಏನು ಸಮಸ್ಯೆ? ಇದು ನಿಮಗೆ ಸಂಬಂಧಿಸಿ ವಿಚಾರವಲ್ಲ' ಎಂದು ನಿವೇದಿತಾ ಹೇಳಿದ್ದಾರೆ.

ಹೊಸ ಮನೆಗೋಗಿ ಒಂದುವರೆ ವರ್ಷ ಆದ್ರೂ 1 ಸಿಲೆಂಡರ್ ಖಾಲಿ ಆಗಿಲ್ಲ: ನಿವೇದಿತಾ ಗೌಡ

'ಇಷ್ಟು ನೆಗೆಟಿವ್‌ ಜನರು ಇದ್ದರೂ ನನ್ನ ಪರವಾಗಿ ಮಾತನಾಡುತ್ತಿರುವವರಿದ್ದಾರೆ ಅವರಿಗೆ ತುಂಬಾ ಥ್ಯಾಂಕ್ಸ್‌. ಕೆಟ್ಟ ಜನರ ನಡುವೆ ಒಳ್ಳೆ ಪ್ರಪಂಚವಿದೆ ಒಳ್ಳೆ ಜನರಿದ್ದಾರೆ ಅಂತ ತೋರಿಸುತ್ತಿದ್ದಾರೆ' ಎಂದಿದ್ದಾರೆ ನಿವಿ.

 

Latest Videos
Follow Us:
Download App:
  • android
  • ios