ಮತ್ತೊಂದು ಶಾಪಿಂಗ್ ವಿಡಿಯೋ ಅಪ್ಲೋಡ್ ಮಾಡಿದ ನಿವೇದಿತಾ ಗೌಡ. ಅಮ್ಮ-ಮಗಳ ಶಾಪಿಂಗ್ ಕ್ರೇಜ್ ಹೇಗಿತ್ತು ನೋಡಿ....

ಸ್ಯಾಂಡಲ್‌ವುಡ್‌ ಬಾರ್ಬಿ ಡಾಲ್ ನಿವೇದಿತಾ ಗೌಡ ಸದ್ಯಕ್ಕೆ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡು ತವರು ಮನೆ ಮೈಸೂರಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ತಾಯಿ ಜೊತೆ ಮಾಲ್ ಆಫ್ ಮೈಸೂರಿಗೆ ಭೇಟಿ ಕೊಟ್ಟು ಸಿಕ್ಕಾಪಟ್ಟೆ ಶಾಪಿಂಗ್ ಮಾಡಿದ್ದಾರೆ. ನಿವೇದಿತಾ ಗೌಡ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಶಾಪಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ ಜೊತೆ ಚಿಟ್ಟಿ ಅಂದ್ರೆ ಎಷ್ಟು ಇಷ್ಟ ಎಂದು ಹೇಳಿಕೊಂಡಿದ್ದಾರೆ. 

ನಿವೇದಿತಾ ಶಾಪಿಂಗ್:

'9 ತಿಂಗಳು ನಂತರ ನಾನು ಮೈಸೂರಿಗೆ ಬಂದಿರುವೆ ಹೀಗಾಗಿ ಮಮ್ಮಿ ಮತ್ತು ನಾನು ಶಾಪಿಂಗ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿ ಜನಪ್ರಿಯ ಮಾಲ್‌ ಆಫ್‌ ಮೈಸೂರಿಗೆ ಭೇಟಿ ಕೊಡುತ್ತಿದ್ದೀವಿ. ಶಾಪಿಂಗ್ ಅಂದ್ರೆ ನನಗೆ ತುಂಬಾನೇ ಇಷ್ಟ, ನನಗೆ ಎಷ್ಟು ಇಷ್ಟ ಅದಕ್ಕೂ ಡಬಲ್ ಮಮ್ಮಿಗೆ ಶಾಪಿಂಗ್ ಅಂದ್ರೆ ಇಷ್ಟ. ಏನೆಲ್ಲಾ ಶಾಪಿಂಗ್ ಮಾಡ್ತೀವಿ ಅಂತ ವಿಡಿಯೋ ಮಾಡಿ ನಿಮಗೆ ತೋರಿಸುವೆ. ಇವತ್ತು ಕೊಂಚ ಚೇಂಜ್ ಇರಲಿ ಎಂದು ನಾನು Two wheelerನ ಬಳಸುತ್ತಿದ್ದೀವಿ. ಯಾಕೆ ಅಂದ್ರೆ ದ್ವಿಚಕ್ರ ವಾಹನದಲ್ಲಿ ನಾನು ಓಡಾಡಿ ತುಂಬಾ ಅಂದ್ರೆ ತುಂಬಾ ದಿನ ಆಯ್ತು ಮೈಸೂರಿಗೆ ಬಂದ್ರೆ ಮಾತ್ರ ಬಳಸುವುದು. ಮಮ್ಮಿ ಜೊತೆ ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ನಿವೇದಿತಾ ವಿಡಿಯೋದಲ್ಲಿ ಮಾತನಾಡಿದ್ದಾರೆ. 

ಇಡೀ ದಿನ ಶಾಪಿಂಗ್ ಮುಗಿಸಿ ಸಮಯ ಸಿಗದ ಕಾರಣ ನಿವಿ ಏನೆಲ್ಲಾ ಖರೀದಿ ಮಾಡಿದ್ದಾರೆ ಎಂದು ಮನೆಗೆ ಬಂದು ತೋರಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶಾಪಿಂಗ್ ಮಾಡಿ ರಾತ್ರಿ 9 ಗಂಟೆಗೆ ಮನೆಗೆ ಬಂದಿದ್ದಾರೆ. ಮೈಸೂರಿನಲ್ಲಿ ತುಂಬಾನೇ ಟ್ರಾಫಿಕ್ ಆಗಿದೆ ನಾನು ಹೇಗೋ ಟೂ-ವೀಲರ್‌ ಅಂತ ಆರಾಮ್ ಆಗಿ ಮನೆಗೆ ಬಂದಿದ್ದೀವಿ. 'ನಾನು ಖರೀದಿ ಮಾಡಿರುವ ಬಟ್ಟೆಗಳಲ್ಲಿ ಹೆಚ್ಚಾಗಿ ನೀವು ಚಿಟ್ಟೆ ನೋಡಬಹುದು ನನಗೆ ಚಿಟ್ಟೆ ಅಂದ್ರೆ ತುಂಬಾನೇ ಇಷ್ಟ. ಮತ್ತೊಂದು ಸೀಕ್ರೆಟ್ ಏನೆಂದರೆ ನನಗೆ ಆಗುವ ಡ್ರೆಸ್ ನನ್ನ ಅಮ್ಮ ಕೂಡ ಬಳಸಬಹುದು, ಅಮ್ಮ ತೆಗೆದುಕೊಳ್ಳುವ ಡ್ರೆಸ್‌ ನನಗೂ ಇಷ್ಟ ಆಗುತ್ತದೆ' ಎಂದು ನಿವಿ ಹೇಳಿದ್ದಾರೆ.

ಫ್ಯಾಮಿಲಿ ಪ್ಲಾನಿಂಗ್, ಸಂಬಳ ಮತ್ತು ಚಂದನ್ ಎಲ್ಲಿ?

- ನಿಮ್ಮ ಏಜ್‌ ಅಂಡ್‌ ಹೈಟ್ ಎಷ್ಟು?
ಹುಡ್ಗೀರು ಯಾವತ್ತಾದ್ರೂ ಏಜ್ ಹೇಳ್ತಾರಾ?ನಾನು ರಿವೀಲ್ ಮಾಡೋಲ್ಲ ಆದರೆ 18 ಕ್ಕೂ ಹೆಚ್ಚು ವಯಸ್ಸು ಆಗಿದೆ. ಟಿವಿಯಲ್ಲಿ ನಾನು ತುಂಬಾ ಹೈಟ್ ಕಾಣಿಸುತ್ತೀನಿ ಆದರೆ ನಾನು ಇರೋದು 5'3'' ಅಷ್ಟೆ. ಹೀಲ್ಸ್‌ ಹಾಕೊಂದು 5'6'' ಕಾಣಿಸುತ್ತೀನಿ.

Niveditha Gowda ನಿವೇದಿತಾ ಚಂದನ್ ಶೆಟ್ಟಿ ಲಿಪ್‌ಲಾಕ್‌ ವಿಡಿಯೋ ವೈರಲ್!

- ನೀವು ಪ್ರಗ್ನೆಂಟ್ ಅಂತ ರೂಮರ್ಸ್‌ ಇದೆ. ಇದಕ್ಕೆ ನಿಮ್ಮ ರೆಸ್ಪಾನ್ಸ್‌ ಏನು?
ನನಗೆ ಎಷ್ಟೊಂದು ಸಲ ಕಾಲ್ ಮಾಡಿ ಕೇಳುತ್ತಾರೆ. ಸದ್ಯಕ್ಕೆ ಮಕ್ಕಳು ಮಾಡಿಕೊಳ್ಳುವ ಪ್ಲ್ಯಾನ್ ಇಲ್ಲ. ಲೈಫ್‌ನ ಎಂಜಾಯ್ ಮಾಡಬೇಕು ಮಕ್ಕಳಿಗೆಂದು ಟೈಮ್ ಕೊಡಬೇಕು ತುಂಬಾ ಕೇರ್ ಮಾಡಬೇಕು. ಈಗ ಅದೆಲ್ಲಾ ಮಾಡಲು ಆಗುದಿಲ್ಲ. ಏನಾದರೂ ಇದ್ದರೆ ನಾನೇ ಅನೌನ್ಸ್ ಮಾಡ್ತೀನಿ...

YouTube video player