ಬಿಗ್ ಬಾಸ 7 ಗೆ ದಿನಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗುವವರ್ಯಾರು ಎಂಬುದು ಭಾರೀ ಕುತೂಹಲ ಮೂಡಿಸಿದೆ. ಈ ಸೀಸನ್ ನಲ್ಲಿ ಜನಸಾಮಾನ್ಯರಿಗೆ ಅವಕಾಶ ಇರುವುದಿಲ್ಲ. ಕೇವಲ ಸೆಲಬ್ರಿಟಿಗಳಿಗೆ ಮಾತ್ರ ಅವಕಾಶ ಎನ್ನಲಾಗಿದೆ. ಬಿಗ್ ಬಾಸ್ ಮನೆ ಸೇರುವ ಸೆಲಬ್ರಿಟಿಗಳು ಯಾರ್ಯಾರು? ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈ ಹೆಸರುಗಳು ಬಲವಾಗಿ ಕೇಳಿ ಬರುತ್ತಿದೆ. ಆದರೆ ವಾಹಿನಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. 

ಬಿಗ್ ಬಾಸ್ ಕಿಚ್ಚ ಸುದೀಪ್ ಸಂಭಾವನೆ ರಿವೀಲ್!

 

ಕುರಿ ಪ್ರತಾಪ್, ಜೈ ಜಗದೀಶ್, ರಾಜಾ- ರಾಣಿ ಧಾರಾವಾಹಿಯ ಚುಕ್ಕಿ ಪಾತ್ರಧಾರಿ ಚಂದನ ಅನಂತಕೃಷ್ಣ, ಹಾಸ್ಯಗಾರ ರಾಜು ತಾಳಿಕೋಟೆ, ಕಿನ್ನರಿ ಧಾರಾವಾಹಿಯ ಭೂಮಿ ಶೆಟ್ಟಿ, ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್, ಗಾಯಕ, ನಟ ವಾಸುಕಿ ವೈಭವ್ , ದುನಿಯಾ ರಶ್ಮಿ, ಪಂಕಜ್ ಎಸ್ ನಾರಾಯಣ್, ನಿರೂಪಕಿ ಚೈತ್ರಾ ವಾಸುದೇವನ್, ರಾಧಾ ರಮಣ ವಿಲನ್ ಸುಜಾತಾ, ರವಿ ಬೆಳಗೆರೆ ಹೆಸರು ದಟ್ಟವಾಗಿ ಕೇಳಿ ಬರುತ್ತಿದೆ. 

ಬಿಗ್ ಬಾಸ್ ಕಂಟೆಸ್ಟಂಟ್ ಗಳ ಬಗ್ಗೆ ವಾಹಿನಿ ಸೀಕ್ರೆಟ್ ಬಿಟ್ಟು ಕೊಟ್ಟಿಲ್ಲ. ಕೊನೆ ಕ್ಷಣದವರೆಗೂ ಗೌಪ್ಯತೆ ಕಾಪಾಡಿ ಸರ್ಪ್ರೈಸ್ ನೀಡಲು ನಿರ್ಧರಿಸಿದೆ. ಈ ಸಲ ಒಟ್ಟು 17 ಸ್ಪರ್ಧಿಗಳು ಇರಲಿದ್ದಾರೆ. 

ಬಿಗ್ ಬಾಸ್ ಪ್ರೋಮೋ ಮೇಕಿಂಗ್: ಕಿಚ್ಚನಿಗ್ಯಾಕೆ ಹೆಲ್ತ್ ಚೆಕ್ ಅಪ್?

ಇಂದು ಬಿಗ್ ಬಾಸ್ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಕಲರ್ಸ್ ಕನ್ನಡ ಹೆಡ್ ಪರಮೇಶ್ವರ್ ಗುಂಡ್ಕಲ್, ಈ ಶೋ ನಡೆಸಿಕೊಡೋಕೆ ಸೂಕ್ಷ್ಮ ಸಂವೇದನೆ ಇರಬೇಕು, ಇಂಟಲೆಜೆನ್ಸ್, ಸ್ಪಾಂಟೆನಿಟಿ, ಟವರಿಂಗ್ ಪರ್ಸನಾಲಿಟಿ, ಶುದ್ಧ ಕನ್ನಡ, ಪಾಪ್ಯುಲಾರಿಟಿ ಮತ್ತು ಅನುಭವ ಹಾಗೂ ಮಾತಿನಲ್ಲಿ ತೂಕ ಇರಬೇಕು. ಇದೆಲ್ಲವೂ ಕಿಚ್ಚ ಸುದೀಪ್ ಅವರಲ್ಲಿದೆ. ಹೀಗಾಗಿ ಸುದೀಪ್ ಅವರೇ ಬಿಗ್ ಬಾಸ್ ಗೆ ಬೇಕು ಅನ್ನೋದು ನಮ್ಮ ಆಸೆ ಆಗಿತ್ತು. ಅದರಂತೆ ಈ ಸೀಸನ್ ನ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ’ ಎಂದರು. 

ಕಿಚ್ಚ ಸುದೀಪ್ ಮಾತನಾಡಿ, ಬಿಗ್ ಬಾಸ್ ಸೀಸನ್ ನಲ್ಲಿ ಮತ್ತೆ ಭಾಗಿಯಾಗ್ತಿರೋದು ಖುಷಿ ತಂದಿದೆ‌. ಏಳು ವರ್ಷ ಕಳೆದೋಗಿರೋದೆ ಗೊತ್ತಾಗಿಲ್ಲ. ಕನ್ಸಲ್ಟೆಂಟ್ ಲಿಸ್ಟನ್ನು ಕೂಡ ನಾನೆಂದು ಕೇಳೋದಿಲ್ಲ. ಅದು ರೆಸ್ಪಾನ್ಸಿಬಿಲಿಟಿ. ಮನೆಯೊಳಗೆ ಕಳಿಸುವಾಗ ಗೊತ್ತಾಗುತ್ತದೆ ಎಂದರು.  

ಬಿಗ್ ಬಾಸ್ ನಿಂದ ಒಂದೊಳ್ಳೆ ಅನುಭವ ಸಿಕ್ಕಿದೆ. ಫಸ್ಟ್ ಸೀಸನ್ ಸ್ಪರ್ಧಿಗಳು ನನಗೆ ತುಂಬಾ ಫೇವರಿಟ್ ಅವರಲ್ಲಿ ತುಂಬಾ ಇನೋಸೆನ್ಸ್ ಇತ್ತು. ಅವ್ರಿಗೆ ಬಿಗ್ ಬಾಸ್ ಅನ್ನೋದು ಏನು ಅಂತಲೇ ಗೊತ್ತಿರಲಿಲ್ಲ. ಹೇಗೆ ನಡೆಯುತ್ತೆ ಅನ್ನೋದು ಗೊತ್ತಿರಲಿಲ್ಲ. ಆದ್ರೆ ಮುಂದೆ ಬಂದೋರು ಗೆಲ್ಲೋಕೋಸ್ಕರ ಏನೇನು ಮಾಡ್ಬೇಕೋ ಅದೆಲ್ಲ ಮಾಡಿದ್ರು ಆದ್ದರಿಂದ ಫಸ್ಟ್ ಸೀಸನ್ ಸ್ಪರ್ಧಿಗಳು ನನಗಿಷ್ಟ ಎಂದು ಸುದೀಪ್ ಹೇಳಿದರು. 

ಬಿಗ್ ಬಾಸ್ ಬರೀ ಮನೆಯಲ್ಲ. ಅದೊಂದು ಕೋಟೆ. ಟಿವಿಯಲ್ಲಿ ನೋಡೋದೇ ಬೇರೆ. ಅಲ್ಲಿರೋದೇ ಬೇರೆ. ಅದೊಂದು ಗೂಸ್ಬಂಪ್ ಮೂಮೆಂಟ್. ಹತ್ತಿರದಿಂದ ನೋಡ್ಬೇಕು. ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ ಎಂದು ಮನೆಯೊಳಗಿನ ಪ್ರಪಂಚವನ್ನು ಬಿಚ್ಚಿಟ್ಟರು. 

ಬಿಗ್ ಬಾಸ್ ಮನೆಗೆ ಬೆಳಗೆರೆ, ‘ಟೈಗರ್ ಜಿಂದಾ ಹೈ’

ಬಿಗ್ ಬಾಸ್ ಮುಂದಿನ 5 ಸೀಸನನ್ನು ಹೋಸ್ಟ್ ಮಾಡಲು 20 ಕೋಟಿ ಸಂಭಾವನೆ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಇದಿನ್ನೂ ಅಧಿಕೃತವಾಗಿಲ್ಲ. ಅದ್ಭುತವಾದ ಮ್ಯಾನರಿಸಂ, ನಿರೂಪಣೆ ಮೂಲಕ ಬಿಗ್ ಬಾಸ್ ತುಂಬಾ ಎತ್ತರಕ್ಕೆ ಕೊಂಡೊಯ್ದವರು ಸುದೀಪ್. ವೀಕೆಂಡ್ ಗಳಲ್ಲಿ ಕಾಣಿಸಿಕೊಳ್ಳುವ ಸುದೀಪ್ ಗಾಗಿ ಪ್ರೇಕ್ಷಕವರ್ಗ ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಕಾಯುತ್ತಿರುತ್ತಾರೆ. ಇವರನ್ನು ಬಿಟ್ಟು ಬೇರೆ ಯಾರೂ ನಡೆಸಿಕೊಡಲು ಸಾಧ್ಯವಿಲ್ಲ ಎನ್ನುವಷ್ಟರಮಟ್ಟಿಗೆ ಛಾಪು ಮೂಡಿಸಿದ್ದಾರೆ.