ಕಲರ್ಸ್ ಸೂಪರ್ ಬದಲಾಗಿ ಈ ಬಾರಿ ಕಲರ್ಸ್ ಕನ್ನಡದಲ್ಲಿಯೇ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಬಿಗ್‌ಬಾಸ್ ಪ್ರಸಾರವಾಗುವ ಮುನ್ನ ಪ್ರೊಮೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಸೀಸನ್ ಪ್ರೋಮೋ ಸಹ ಶೂಟ್ ಆಗಿದ್ದು, ಪೋಮೋ ಮೇಕಿಂಗ್ ರಿಲೀಸ್ ಮಾಡಲಾಗಿದೆ. ಕಿಚ್ಚ ಹಾಗೂ ಕಲರ್ಸ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹಾಗೂ ಇತರರು ಶೂಟಿಂಗ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಆದರೆ, ಡಾಕ್ಟರ್ ಜತೆಗಿದ್ದಾರೆ. ಕಿಚ್ಚನ ಕಣ್ಣೇಕೆ ಟೆಸ್ಟ್ ಮಾಡುತ್ತಾರೆಂಬುವುದು ಮಾತ್ರ ಅರ್ಥವಾಗುತ್ತಿಲ್ಲ.

‘ಈ ಸಲ ಬಿಗ್‌ಬಾಸ್‌ನಲ್ಲಿ ಸೆಲೆಬ್ರಿಟಿಗಳು ಮಾತ್ರ’!

ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೋ ಮೇಕಿಂಗ್ ವಿಡಿಯೋಗೆ ಶೇರ್ ಮಾಡಿಕೊಂಡಿದ್ದು, ‘ಅಲ್ಲಿ ಪೂಜೆ ನಡೆಯಿತು. ಡಾಕ್ಟರ್ ಬಂದ್ರು, ಕಾಫಿ ವಿತ್ ಕಿಚ್ಚ ಕೂಡ ಆಗಿಹೋಯ್ತು! ಆದ್ರೆ ಅಲ್ಲಿ ನಡೆದಿದ್ದು ಏನು? ನಿಮಗೇನಾದ್ರೂ ಗೊತ್ತಾ?’ ಎಂದ್ಹೇಳಿ ಮತ್ತಷ್ಟು ಕುತೂಹಲ ಕೆರಳಿಸಲಾಗಿದೆ.

 

ಈ ಬಿಗ್‌ಬಾಸ್‌ ಸೀಸನ್‌ನಲ್ಲಿ ಏನೋ ಇದೆ ಟ್ವಿಸ್ಟ್? ಪ್ರೋಮೋ ಸಹ ವಿಶೇಷವಾಗಿರುವಂತೆ ಕಾಣಿಸುತ್ತಿದೆ. ಪಾಲ್ಗೊಳ್ಳುವ ಸ್ಪರ್ಧಿಗಳು ಇನ್ನೆಷ್ಟು ಸ್ಪೆಷಲ್ ಆಗಿರಬಹುದು? ಬಿಗ್‌ಬಾಸ್, ಬಿಗ್‌ಬಾಸ್...ನೋಡಿ ಸ್ವಾಮಿ..!