ನೈಟ್ ಕರ್ಫ್ಯೂ ದಿನ ನಡೆದದ್ದು ಏನು? ಯಾಕೆ ಸುಳ್ಳು ತೋರಿಸುತ್ತಿದ್ದೀರಿ ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ ದಿವ್ಯಾ ಸುರೇಶ್.
ರಾಜ್ಯದಲ್ಲಿ ಓಮಿಕ್ರಾನ್ (Omicron) ಪ್ರಕರಣ ಹೆಚ್ಚಾಗುತ್ತಿರುವ ಕಾರಣ ರಾಜ್ಯ ಸರ್ಕಾರ 10 ದಿನಗಳ ಕಾಲ ನೈಟ್ ಕರ್ಫ್ಯೂ (Nighr Cerfew) ಜಾರಿಗೊಳಿಸಿದೆ. ಈ ವೇಳೆ ಎಂ.ಜಿ ರಸ್ತೆಯಲ್ಲಿ ಪಾರ್ಟಿ ಮಾಡುತ್ತಿದ್ದ ನಟಿ ದಿವ್ಯಾ ಸುರೇಶ್ (Divya Suresh) ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದೆ ಎಂದ ಸುದ್ದಿ ಆಗಿತ್ತು. ಆದರೆ ಅಂದು ನಡೆದದ್ದು ಏನು? ಏನೆಲ್ಲಾ ಆಗಿತ್ತು, ತನ್ನ ಬಳಿ ಏನು ಸಾಕ್ಷಿ ಇದೆ ಎಂದು ಎಂದು ದಿವ್ಯಾ ಸುರೇಶ್ ಮಾತನಾಡಿದ್ದಾರೆ.
'ನಡೆದ ಘಟನೆ ಬಗ್ಗೆ ನಾನು ಮಾತನಾಡಬೇಕು. 9 ಗಂಟೆಗೆ ನಾವಿದ್ದ ಹೋಟೆಲ್ (Hotel) ಕ್ಲೋಸ್ ಆಗುತ್ತೆ ನಾನು 9.10ಕ್ಕೆ ಕೆಳಗೆ ಬರ್ತೀವಿ. ಆಗ ನಾನು ಕ್ಯಾಬ್ (Cab) ಕೂಡ ಬುಕ್ ಮಾಡ್ತೀವಿ. ಅದನ್ನು ನಾನು ಪೊಲೀಸರಿಗೆ ತೋರಿಸಿದ್ದೆವು ಕೂಡ. ಪೊಲೀಸರು (Police) ಸರಿ ನೀವು ಬುಕ್ ಮಾಡಿ ಹೊರಡಿ ಅಂತ ಹೇಳಿದ್ರು. ಅಲ್ಲಿದ್ದ ಕ್ಯಾಮೆರಾಗಳು ನನ್ನ ನೋಡಿದ ತಕ್ಷಣ ನನ್ನ ಮೇಲೆ ಅಟ್ಯಾಕ್ ಮಾಡುತ್ತಾರೆ. ಕಲಾವಿದೆ ಆಗಿ ನನಗೂ ಭಯ ಇದ್ದೇ ಇರುತ್ತೆ ಪಬ್ಲಿಕ್‌ನಲ್ಲಿ ಯಾರಾದ್ರೂ ವಿಡಿಯೋ ಮಾಡಿದ್ರೆ ಏನು ಆಗಬಹುದು. ನಾನು ಹೊರಡಬೇಕಿತ್ತು. ಅವರ ಜೊತೆ ಅಲ್ಲೇ ವಾದ ಮಾಡಿಕೊಂಡು ನಿಂತಿದ್ದರೆ ರಾತ್ರಿ 10 ಗಂಟೆ ಆದರೂ ಮನೆಗೆ ಹೋಗಲು ಆಗುತ್ತಿರಲಿಲ್ಲ' ಎಂದು ದಿವ್ಯಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನಾವು ಕೆಳಗೆ ಬಂದಾಗ ರಾತ್ರಿ 9.10 ಆಗಿತ್ತು.ಕ್ಯಾಬ್ ಬುಕ್ ಮಾಡಿರುವ ಸಾಕ್ಷಿ ಇದೆ. ಹೋಟೆಲ್‌ನಲ್ಲಿ ಬಿಲ್ (Bill) ಕಟ್ಟಿರುವುದಕ್ಕೆ ಮೊಬೈನ್‌ನಲ್ಲಿ ಸಾಕ್ಷಿ ಇದೆ. ಈ ರೀತಿ ಎಲ್ಲರೂ ಕ್ಯಾಮೆರಾ ಹಿಡಿದುಕೊಂಡು ಬಂದಾಗ ನಾನು ಯಾಕೆ ನೀವು ವಿಡಿಯೋ ಮಾಡ್ತಿದ್ದೀರಿ ಅಂತ ಒಂದೇ ಪ್ರಶ್ನೆ ಕೇಳಿದ್ದು ಅದನ್ನು ಯಾಕೆ ಇವ್ರು ತಪ್ಪಾಗಿ ತೋರಿಸುತ್ತಿದ್ದಾರೆ? ನಿಜ ಇದರ ಬಗ್ಗೆ ನನಗೆ ಮಾತನಾಡುವುದಕ್ಕೆ ಇಷ್ಟವಿಲ್ಲ. ನನ್ನ ಸ್ನೇಹಿತ ಮಾತನಾಡುತ್ತಿದ್ದ, ಜವಾಬ್ದಾರಿಯಿಂದ ಮಾತನಾಡಿ ಮೊಬೈಲ್‌ನಲ್ಲಿ ಯಾಕೆ ವಿಡಿಯೋ ಮಾಡ್ತಿದ್ದೀರಾ ಅಂತ ಪ್ರಶ್ನೆ ಮಾಡಿದಕ್ಕೆ ಅವರ ಮೇಲೂ ಹೋಗುತ್ತಿದ್ದಾರೆ' ಎಂದು ದಿವ್ಯಾ ಹೇಳಿದ್ದಾರೆ.
Divya Suresh: ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಿಗ್ ಬಾಸ್ ಸ್ಪರ್ಧಿ ವಿರುದ್ದ ದಾಖಲಾಗುತ್ತಾ ಎಫ್‌ಐಆರ್?
'ಎಲ್ಲಾ ಕಡೆ ರಾಸ್ತ ಪಬ್ ಅಂತ ತೋರಿಸುತ್ತಿದ್ದಾರೆ ದಯವಿಟ್ಟು ಗೂಗಲ್ (Google) ಮಾಡಿ ನೋಡಿ ಅದು ರಾಸ್ತ ಪಬ್ ಅಥವಾ ರಾಸ್ತ ಕೆಫೆ ನಾ ಎಂದು. ಇದನ್ನು ಮೀರಿ ನಾನು ಉತ್ತರ ಕೊಡುವುದಕ್ಕೆ ಆಗೋಲ್ಲ. ಇವ್ರು ಇನ್ನೂ ಏನ್ ಏನೋ ಹೇಳ್ತಿದ್ದಾರೆ ನನ್ನ ಬಗ್ಗೆ. ಪಬ್‌ಗೆ ಹೋಗಿ ಕುಡಿದಿದ್ದು (Drinks) ಕುಡಿದ ಮತ್ತಲ್ಲಿ ಏನ್ ಏನ್........ನೀವು ಬಂದು ನೋಡಿದ್ರಾ ನಾನು ಕುಡಿದಿದ್ದೆ ಅಂತಾ? ನಾನು ಕುಡಿದಿದ್ದೆ ಅಂತ ನಿಮ್ಮ ಹತ್ರ ಸಾಕ್ಷಿ ಇದ್ಯಾ? ಆಯ್ತು ಸಾಕ್ಷಿ ಬಗ್ಗೆ ಬಿಡಿ ನಾನು ಏನಾದರೂ ಅಸಭ್ಯವಾಗಿ ವರ್ತಿಸಿದ್ನಾ? ನನಗೆ ಈಗ ಅರ್ಥ ಆಗ್ತಿದೆ ಯಾಕೆ ಸೆಲೆಬ್ರಿಟಿಗಳು ಜಾಸ್ತಿ ಮಾತನಾಡುವುದಿಲ್ಲ, ಎಲ್ಲ ವಿಚಾರಗಳನ್ನು ಕೆದಕುವುದಕ್ಕೆ ಹೋಗಲ್ಲ ಅಂತ. ವೈಯಕ್ತಿಕವಾಗಿ ಈ ವಿಚಾರ ಮಾತನಾಡುವುದಕ್ಕೆ ನನಗೇ ಇಷ್ಟ ಇರಲಿಲ್ಲ ಆದರೂ ಈ ವಿಚಾರದ ಬಗ್ಗೆ ನಾನು ಕ್ಲಾರಿಟಿ ಕೊಡಬೇಕು ಅನಿಸಿತು' ಎಂದಿದ್ದಾರೆ.
ಭರ್ಜರಿ ಸ್ಟಂಟ್ ಪ್ರ್ಯಾಕ್ಟೀಸ್ ಮಾಡುತ್ತಿರುವ ಬಿಗ್‌ಬಾಸ್ ದಿವ್ಯಾ ಸುರೇಶ್ ವಿಡಿಯೋ ವೈರಲ್!
ಏನಿದು ಘಟನೆ:
ರಾತ್ರಿ 10ಕ್ಕೆ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯ ಪಬ್‌ಗಳಿಂದ ಗ್ರಾಹಕರು ಹೊರ ಬರುತ್ತಿದ್ದರು. ಈ ವೇಳೆ ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ಕ್ಯಾಮರಾದಲ್ಲಿ ಗ್ರಾಹಕರು ಹೊರ ಬರುವ ದೃಶ್ಯಾವಳಿ ಶೂಟ್ ಮಾಡುತ್ತಿದ್ದರು. ಈ ವೇಳೆ ಪಬ್‌ನಿಂದ ಹೊರ ಬಂದ ದಿವ್ಯಾ ಸುರೇಶ್, ಗ್ರಾಹಕರ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಜತೆ ಕಿರಿಕ್ ತೆಗೆದು ರಂಪಾಟ ಮಾಡಿದರು. ಹಾಗೂ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ಪೊಲೀಸರಿಗೇ ದಿವ್ಯಾ ಆವಾಜ್ ಹಾಕಿದ್ದಾರೆ. ಮದ್ಯದ ಅಮಲಿನಲ್ಲಿದ್ದ ದಿವ್ಯಾ ಸುರೇಶ್ ಅವರನ್ನು ಇಬ್ಬರು ಯುವಕರು ಸಮಾಧಾನಪಡಿಸಿ ಬಳಿಕ ಆಟೋ ರಿಕ್ಷಾದಲ್ಲಿ ಕರೆದೊಯ್ದರು.
