ಗಾಯಕ ವಾಸುಕಿ ವೈಭವ್ ಕೆಲ ದಿನಗಳ ಹಿಂದೆ ತುಂಬಾನೇ ಫನ್ನಿಯಾಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದು ಹೇಗಿದೆ ನೋಡಿ.... 

ಕನ್ನಡ ಬಿಗ್ ಬಾಸ್‌ ಸೀಸನ್‌ 7ರ ರನ್ನರ್‌ ಅಪ್ ವಾಸುಕಿ ವೈಭವ್‌ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತಮ್ಮ ಮುಂದಿನ ಸಿನಿಮಾ ಹಾಡಿನ ಬಗ್ಗೆ, ನೆಚ್ಚಿನ ನಟನ ಜೊತೆ ಫೋಟೋ ಹೀಗೆ ವೆರೈಟಿಯಾಗಿ ಆಡಿಯನ್ಸ್‌ನ ಎಂಜೇಗ್‌ ಮಾಡುತ್ತಾರೆ. ಆದರೆ ಈಗ ಶೇರ್ ಮಾಡಿರುವ ಫೋಟೋ ಹೇಗಿದೆ ಅಂತ ನೀವೇ ಹೇಳಬೇಕು...

ನಿಜಕ್ಕೂ ವಾಸುಕಿ ವೋಟ್‌ ಇಲ್ಲದೆ ಸೋತರಾ? ಸುದೀಪ್ ಚಿತ್ರದಲ್ಲಿ ಆಫರ್‌ ಸಿಗ್ತಾ?

ವಾಸುಕಿ ತುಂಬಾನೇ ಫ್ರೆಂಡ್ಲಿ ವ್ಯಕ್ತಿ. ಎಲ್ಲರನ್ನೂ ಒಂದೇ ಸಮನಾಗಿ ಕಾಣುವ ಅಪರೂಪದ, ಟ್ಯಾಲೆಂಟೆಡ್‌ ಗಾಯಕ. ಕೆಲ ದಿನಗಳ ಹಿಂದೆ ಖಾಸಗಿ ಹೋಟೆಲ್‌ನಲ್ಲಿ ಬಾಳೆ ಎಳೆ ಊಟ ಮಾಡಿದ್ದಾರೆ. ಫೋಟೋ ಕ್ಲಿಕ್ ಮಾಡುತ್ತಿದ್ದರೆ ಹೇಗಿರುವೆ ರಿಯಾಲಿಟಿಯಲ್ಲಿ ಹೇಗಿರುವೆ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. 'ಭೋಜನ ಪ್ರಿಯಾ' ಎಂದು ಕ್ಯಾಪ್ಶನ್ ಬರೆದಿದ್ದಾರೆ.

View post on Instagram

2016ರಲ್ಲಿ ಕಿಚ್ಚ ಸುದೀಪ್ ಅಭಿನಯದ 'ರಾಮ ರಾಮ ಹರೇ' ಚಿತ್ರದ ಮೂಲಕ ಸಂಗೀತ ಸಂಯೋಜನ ಹಾಗೂ ಗಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಈಗ ಬಹುಬೇಡಿಕೆಯ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಮುಂದಿನ ನಿಲ್ದಾಣದ 'ಇನ್ನೂ ಬೇಕಾಗಿದೆ' ಹಾಗೂ ಫ್ರೆಂಚ್ ಬಿರಿಯಾನಿ ಚಿತ್ರದ 'ಬೆಂಗಳೂರು' ಹಾಡು ಸಿಕ್ಕಾಪಟ್ಟೆ ಹಿಟ್ ಆಯ್ತು.

ಮಲೇರಿಯಾದಿಂದ ಮುಖ ಹೇಗಾಗಿದೆ ನೋಡಿ; ನಟಿ ಕೃತಿ ಫೋಟೋ ವೈರಲ್! 

ಈಗ ನೀವೆ ಹೇಳಿ ವಾಸುಕಿ ಶೇರ್ ಮಾಡಿರುವು ಫೋಟೋ ಹೇಗಿದೆ ಎಂದು?