ಮಲೇರಿಯಾದಿಂದ ಮುಖ ಹೇಗಾಗಿದೆ ನೋಡಿ; ನಟಿ ಕೃತಿ ಫೋಟೋ ವೈರಲ್!
'ಹಾಯ್ ಇದು ನನ್ನ ಮಲೇರಿಯಾ ಮುಖ'. ಚೇತರಿಸಿಕೊಳ್ಳುತ್ತಿರುವೆ,ಶೀಘ್ರವೇ ಗುಣಮುಖಳಾಗುವೆ. ಕೃತಿಗೆ ಬೆಂಬಲವಾಗಿ ನಿಂತ ಅಭಿಮಾನಿಗಳು.
ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಚಿತ್ರದಲ್ಲಿ ಮಿಂಚಿರುವ ನಟಿ ಕೃತಿ ಕರಬಂಧ ಕೆಲ ದಿನಗಳ ಹಿಂದೆ 30ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಪಾರ್ಟಿ ಮಾಡಿ ಗೆಳೆಯರ ಜೊತೆ ಫೋಟೋ ಹಾಕುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳು ನಟಿ ಶೇರ್ ಮಾಡಿದ ಫೋಟೋ ನೋಡಿ ಶಾಕ್ ಆಗಿದ್ದಾರೆ.
ಹೌದು! ಕೃತಿಗೆ ಮಲೇರಿಯಾ ಸೋಂಕು ತಗುಲಿದೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಲೇರಿಯಾದಿಂದ ಮುಖವೇ ಬದಲಾಗಿದ್ದು ಫೋಟೋ ಶೇರ್ ಮಾಡಿದ್ದಾರೆ. 'ಹಾಯ್ ಮಲೇರಿಯಾದಿಂದ ನನ್ನ ಮುಖ ಹೀಗಾಗಿದೆ. ಕೆಲವೇ ದಿನಗಳಲ್ಲಿ ಸರಿಯಾಗುತ್ತದೆ. ನಾನು ಶೀಘ್ರದಲ್ಲಿ ಕೆಲಸ ಪ್ರಾರಂಭಿಸುತ್ತೇನೆ' ಎಂದು ಬರೆದಿದ್ದಾರೆ.
ಕೃತಿ ಫೋಟೋಗೆ ಕಾಲೆಳೆದ ನೆಟ್ಟಿಗರು; ಶ್ವಾನದ ಜೊತೆ ಲಿಪ್ ಕಿಸ್!
ನಟಿಯ ಮುಖ ನೋಡಿ ಗಾಬರಿಗೊಂಡ ಅಭಿಮಾನಿಗಳು ಒಂದೇ ಸಮನೇ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಎಲ್ಲರನ್ನೂ ಮರು ಸಂಪರ್ಕಿಸಲು ಸಾಧ್ಯವಾಗದ ಕಾರಣ ಕೃತಿ ಸ್ಟೋರಿಯಲ್ಲಿ ' ನನ್ನ ಬಗ್ಗೆ ಗಾಬರಿಗೊಂಡು ವಿಚಾರಿಸಲು ಕರೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ಈ ಮಾತು. ನಾನು ಚೇತರಿಸಿಕೊಳ್ಳುತ್ತಿರುವೆ. ದಿನ ಕಳೆಯುತ್ತಿದ್ದಂತೆ ನಾನು ಗುಣಮುಖಳಾಗುವೆ. ಕೆಲವೊಮ್ಮೆ ನಿಜಕ್ಕೂ ಸುಸ್ತಾಗುತ್ತದೆ ಆದರೆ ಪರ್ವಾಗಿಲ್ಲ. ನನ್ನ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಡುತ್ತಿರುತ್ತೇನೆ' ಎಂದು ಹೇಳಿದ್ದಾರೆ.
ಯಶ್ ಚಿತ್ರದ ನಾಯಕಿಗೂ ಕೊರೋನಾ ಕಾಟ; 14 ದಿನ ಕ್ವಾರಂಟೈನ್ ಅನಿವಾರ್ಯ!
ಇನ್ನು ಮನೆಯಲ್ಲಿಯೇ ಕೂತು ಕೂತು ಬೂರ್ ಆಗುತ್ತಿದ್ದ ಕಾರಣ ಫನ್ನಿಯಾಗಿರುವ ಮೀಮಿಸ್‌ಗಳನ್ನು ಶೇರ್ ಮಾಡಿಕೊಳ್ಳಿ. ನನಗೆ ಟೈಂ ಪಾಸ್ ಆಗುತ್ತದೆ ಎಂದು ನೆಟ್ಟಿಗರನ್ನು ಕೇಳಿಕೊಂಡಿದ್ದಾರೆ.