ನಿರೂಪಕಿ Anupama Gowda ವರ್ಕೌಟ್, ದಿನಚರಿ ಹೀಗಿರುತ್ತಂತೆ!
ಹೆವಿ ವರ್ಕೌಟ್ ಮಾಡುವವರು ಎಷ್ಟು ಊಟ ಸೇವಿಸಬೇಕು? ಏನೆಲ್ಲಾ ತಿನ್ನಬೇಕು ಎಂದು ಸಣ್ಣ ಟಿಪ್ಸ್ ಕೊಟ್ಟಿದ್ದಾರೆ ಅನುಪಮಾ.
ಅಕ್ಕ (Akka) ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಅನುಪಮಾ ಗೌಡ (Anupama Gowda,) ಸದ್ಯ ಬೇಡಿಕೆಯಲ್ಲಿರುವ ನಿರೂಪಕಿ. ಮಜಾ ಭಾರತ (Maja Bharata), ಮಜಾ ಕಾಮಿಡಿ (Maja Comedy), ರಾಜ ರಾಣಿ (Raja Rani), ನನ್ನಮ್ಮ ಸೂಪರ್ ಸ್ಟಾರ್ (Nanamma Superstar) ಸೇರಿ ಅನೇಕ ಅವಾರ್ಡ್ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಈ ವೇಳೆ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲೂ (Youtube) ತಮ್ಮ ಹವಾ ಹೆಚ್ಚಿಸಿದ್ದಾರೆ.
ಹೌದು! ತುಂಬಾನೇ ಕ್ರಿಯೇಟಿವ್ ಆಗಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಅನುಪಮಾ ಗೌಡ. ಇದ್ದಕ್ಕಿದ್ದಂತೆ ಸಿಕ್ಕಾಪಟ್ಟ ಸಣ್ಣಗಾದರು. ವರ್ಕೌಟ್ (Workout) ಮಾಡುತ್ತಿರುವುದರ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದರೂ, ಅಭಿಮಾನಿಗಳ ಪ್ರಶ್ನೆ ಕಡಿಮೆ ಆಗಿಲ್ಲ. ಹೀಗಾಗಿ ಎರಡು ವಿಡಿಯೋಗಳ ಮೂಲಕ ತಮ್ಮ ದಿನಚಚರಿ ಹೇಗಿರುತ್ತದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ವಿಡಿಯೋವೊಂದನ್ನು ಹಂಚಿಕೊಂಡು, ಸಣ್ಣ ಪುಟ್ಟ ಟಿಪ್ಸ್ ಕೂಡ ಕೊಡುತ್ತಾರೆ.
ಮಾಲಾಶ್ರೀ ಆಯ್ತು ಈಗ ನಟಿ ಆರತಿ ಲುಕ್‌ನಲ್ಲಿ ಕಾಣಿಸಿಕೊಂಡ ನಿರೂಪಕಿ ಅನುಪಮಾ ಗೌಡ!ಬೆಳಗ್ಗೆ 4.30ಗೆ ಏಳುವ ಅನುಪಮಾ, ಮೊದಲು ದೇವರಿಗೆ ಕೈ ಮುಗಿದು ಹಾಸಿಗೆ (Bed) ಮೇಲೆ ಕೆಲವು ನಿಮಿಷಗಳ ಕಾಲ ಧ್ಯಾನ (Meditate) ಮಾಡುತ್ತಾರಂತೆ. ಆನಂತರ ಒಂದು ಬಾಟಲ್ ಪೂರ್ತಿ ನೀರು (Water) ಕುಡಿದ ನಂತರ ತಮ್ಮ ಹಾಸಿಗೆ ಸರಿ ಮಾಡಿ ದಿನ ಆರಂಭಿಸುತ್ತಾರೆ. 2021ರಿಂದ ಈ ದಿನಚರಿ (Daily Routine) ಅಭ್ಯಾಸ ಮಾಡಿಕೊಂಡಿರುವ ಕಾರಣ ಈ ವರ್ಷದಲ್ಲಿಯೂ ಇದನ್ನು ಪಾಲಿಸುತ್ತಿರುವೆ, ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಜಿಮ್ (Gym) ಕ್ಲಾಸ್ ಶುರು ಮಾಡುವ ಮುನ್ನ ಸುಮಾರು 1 ಗಂಟೆಗಳ ಕಾಲ ಜಾಗಿಂಗ್ ಮತ್ತು ವಾಕಿಂಗ್ (Walking) ಮಾಡುವ ಕಾರಣ ಬ್ರಶ್ (Brush) ಮಾಡಿ ಮುಖ ತೊಳೆದುಕೊಂಡು ಸ್ಕಿನ್ ಹೈಡ್ರೇಟ್ ಆಗಿಟ್ಟಿಕೊಳ್ಳಲು mositure ಮಾತ್ರ ಹಾಕುತ್ತಾರಂತೆ. ನೀರು ಹೆಚ್ಚಿಗೆ ಕುಡಿಯಬೇಕು. ಎಂದು ಜಿಮ್‌ಗೂ ಕೂಡ ಡೊಡ್ಡ ಬಾಟಲ್ ಹೊತ್ತುಕೊಂಡು ಹೋಗುತ್ತಾರೆ. ಹೊರಡುವ ಮುನ್ನ ಮನೆಯಲ್ಲಿಯೇ ಒಂದು ಗ್ಲಾಸ್ ಬ್ಲಾಕ್ ಕಾಫಿ ಕುಡಿಯುತ್ತಾರೆ.
ಡಯಟ್ ಶೇಕ್:
ವರ್ಕೌಟ್ ಮಾಡಿ ಮನೆಗೆ ಬಂದ ನಂತರ ತಕ್ಷಣ ತಮ್ಮ ಡಯಟ್ ಶೇಕ್ ಸೇವಿಸುತ್ತಾರೆ. ಎಳನೀರು (Coconut Water), ಮೂರು ಏಲಕ್ಕಿ ಬಾಳೆ ಹಣ್ಣು, ಎರಡು ಸ್ಪೂನ್‌ನಲ್ಲಿ ಓಟ್ಸ್ , 5 ಬಾದಾಮಿ (Badami) ಗೋಡಂಬಿ (Cashwe) ಮತ್ತು ಒಂದು ಸಣ್ಣ ಸ್ಪೂನ್ ಪ್ರೋಟಿನ್ ಹಾಕಿಕೊಂಡು ಸ್ಮೂತಿ ಮಾಡಿಕೊಂಡು ಕುಡಿಯುತ್ತಾರೆ. ಸಣ್ಣ ಆಗಲು ಹೆವಿ ವರ್ಕೌಟ್ ಮಾಡುತ್ತಿರುವವರು 15 ನಿಮಿಷಗಳ ಅಂತರದಲ್ಲಿ ತಿಂಡಿ ಸೇವಿಸಬೇಕು. ಬೆಳಗ್ಗೆ ದೋಸೆ, ಇಡ್ಲಿ (Dosa Idly) ತಿನ್ನಲು ಇಷ್ಟ ಪಡುವೆ. ಅನುಪಮಾ ವರ್ಷಗಳಿಂದ ತಿಂಡಿ ತಿಂದಿಲ್ವಂತೆ. ಬದಲಿಗೆ ಈ ರೀತಿ ಜ್ಯೂಸ್ ಕುಡಿದು ಆನಂತರ ತಮ್ಮ ದಿನ ಆರಂಭಿಸುತ್ತಾರಂತೆ.
ಕಾರ್ಯಕ್ರಮ ಚಿತ್ರೀಕರಣ ಮುಗಿಸಿಕೊಂಡು, ಕೆಲವೊಮ್ಮೆ ಮಧ್ಯ ರಾತ್ರಿ ಅಥವಾ ಬೆಳಗ್ಗಿನ ಜಾವ ಮನೆಗೆ ಬಂದಾಗ ಎಷ್ಟು ನಿದ್ರೆ ಮಾಡುತ್ತಾರೆ? ಎಷ್ಟು ಆಹಾರ ಸೇವಿಸುತ್ತಾರೆ ಎಂದು ಕೂಡ ಹೇಳಿಕೊಂಡಿದ್ದರು. ಮಧ್ಯಾಹ್ನ ಸಣ್ಣ ಪ್ರಮಾಣದಲ್ಲಿ ಅನ್ನ (Rice), ಸಾರು, ಕಾಳು ಮತ್ತು ತರಕಾರಿ ಪಲ್ಯ ಸೇವಿಸುತ್ತಾರಂತೆ. 100 ಗ್ರಾಂ ಅನ್ನ ಸೇವಿಸುತ್ತಿರುವ ಕಾರಣ ಮೂರು ಮೊಟ್ಟೆಯ ಬಿಳಿ ಭಾಗ ಸೇವಿಸುತ್ತಾರೆ. ಸಂಜೆ ಮತ್ತೆ ವರ್ಕೌಟ್ ಮಾಡುವ ಮುನ್ನ ಡ್ರ್ಯಾಗನ್ ಹಣ್ಣು ಸೇವಿಸುತ್ತಾರೆ.