Anupama Periods Hack: ಪೀರಿಯಡ್ಸ್ ನೋವು ಕಡಿಮೆ ಮಾಡಿಕೊಳ್ಳಲು ನಟಿ ಕೊಟ್ಟ ಸಲಹೆ ಇದು!
ಪೀರಿಯಡ್ಸ್ ನೋವು ಕಡಿಮೆ ಮಾಡಲು ಮನೆಯಲ್ಲಿದೆ ಮದ್ದು. ಅನುಪಮಾ ಗೌಡ ಕೊಟ್ಟ ಸಲಹೆ ವರ್ಕ್ ಆಯ್ತಾ?
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ (Anchor) ಮತ್ತು ನಟಿ ಅನುಪಮಾ ಗೌಡ (Anupama Gowda) ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳಿಗೆ ಹತ್ತಿರವಾಗಲು ಸೋಷಿಯಲ್ ಮೀಡಿಯಾದಲ್ಲಿ (Social Media) ತುಂಬಾನೇ ಅಕ್ಟೀವ್ ಆಗಿದ್ದಾರೆ. ಅವರು ಮೆಸೇಜ್‌ಗೆ ಪ್ರತಿಕ್ರಿಯೆ ಕೊಡುವುದಿಲ್ಲ ಅವರು ಮುಂದಿನ ಡಿಮ್ಯಾಂಡ್‌ಗಳನ್ನು ತಮ್ಮ ಯುಟ್ಯೂಬ್ ಚಾನೆಲ್ (Youtube Channel) ಮೂಲಕ ಪೂರೈಸುತ್ತಾರೆ. ಹೆಣ್ಣು ಮಕ್ಕಳು ಪೀರಿಯಡ್ಸ್ ನೋವಿನಿಂದ ಪಾರಾಗಲು ಪದೇ ಪದೇ ಉಪಾಯ ಕೇಳುತ್ತಿದ್ದರು ಅದಿಕ್ಕೆ ಅನುಪಮಾ ತಮ್ಮ ಮನೆ ಮದ್ದುಗಳನ್ನು ಹಂಚಿಕೊಂಡಿದ್ದಾರೆ.
ಮೇಕಪ್ (Makeup), ಶೂಟಿಂಗ್ (Shooting), ಜಿಮ್, ಮೈಸೂರು (Mysore) ಸೇರಿದಂತೆ ಹಲವಾರು ವಿಡಿಯೋಗಳನ್ನು ಅಪ್ಲೋಡ್ ಮಾಡಿ ಅನುಪಮಾ ಅವರು 86 ಸಾವಿರ subcribersನ ಪಡೆದುಕೊಂಡಿದ್ದಾರೆ. 'ಪೀರಿಯಡ್ಸ್ (Periods) ಆಗೋಕು ಮೂರು ದಿನ ಮುಂಚೆ ನನಗೆ ತುಂಬಾನೇ ಮೂಡ್ ಸ್ವಿಂಗ್ಸ್ (Mood Swings)ಆಗುತ್ತೆ. ಎಲ್ಲಾನೂ ಎಕ್ಸ್ಟ್ರೀಮ್ ಲೆವೆಲ್‌ಗೆ ಹೋಗುತ್ತೆ. ಎಷ್ಟೋ ಹೆಣ್ಣು ಮಕ್ಕಳಿಗೆ ಹೀಗೆ ಆಗುತ್ತೆ, ಆಗ ನಾನು ಐಸ್‌ಕ್ರೀಮ್ (Ice Cream) ಅಥವಾ ಚಾಕೋಲೇಟ್ (Chocolate) ತಿನ್ನುವೆ. ನನಗೆ ವರ್ಕ್ ಆಗುವುದು ನಿಮಗೆ ವರ್ಕ್ ಆಗದೇ ಇರಬಹುದು. ಪೀರಿಯಡ್ಸ್ ಸಮಯದಲ್ಲಿ ಯಾವುದೇ ಡಯಟ್ ಮಾಡುವುದಿಲ್ಲ. ಐಸ್ ಕ್ರೀಮ್ ನಮ್ಮ ಮೂಡ್ ಕಂಟ್ರೋಲ್ ಮಾಡುತ್ತದೆ' ಎಂದು ಅನುಪಮಾ ಗೌಡ ಮಾತನಾಡಿದ್ದಾರೆ.
'ಪೀರಿಯಡ್ಸ್ ಸಮಯದಲ್ಲಿ ಬರುವ ನೋವಿಗೆ ನಾವು ಏನೋ ತೆಗೆದುಕೊಂಡು ಏನೋ ಮಾಡಿ ಮಾಯ ಮಾಡುವುದಕ್ಕೆ ಆಗುವುದಿಲ್ಲ. ಯಾವುದೇ ರೀತಿಯ ಪೇನ್ ಕಿಲ್ಲರ್ (Pain Killers) ಮಾತ್ರೆ ತೆಗೆದುಕೊಳ್ಳಬೇಡಿ ನಾನು ಮಾತ್ರೆ ಬಳಸುವುದಿಲ್ಲ. ಹೀಟ್ ಥೆರಪಿ (Heat Therapy) ಎಷ್ಟೊಂದು ಜನರಿಗೆ ಸಹಾಯ ಆಗಿದೆ ಇದು ನನಗೂ ಸಹಾಯ ಮಾಡಿದೆ. ಇನ್ನೂ ಬಿಸಿ ನೀರಿನ ಶಾಖ ಅಥವಾ ಹಾಟ್ ವಾಟರ್ (Hot water Bag) ಬ್ಯಾಗ್ ಕಿರಿಕಿರಿ ಅನ್ಸುತ್ತೆ. ಮೊದಲೇ ನೋವು ಇರುತ್ತದೆ ಅದರಲ್ಲೂ ಮತ್ತೆ ಮತ್ತೆ ನೀರು ಬಿಸಿ ಮಾಡಿಕೊಂಡು ಇಟ್ಕೊಳ್ಳೋದು ಕಷ್ಟ. ಹೊರಗಡೆ ಪ್ರಯಾಣ ಮಾಡುವಾಗ ಸಾಧ್ಯವೇ ಇಲ್ಲ, ಎಲ್ಲಿ ನೀರು ಬಿಸಿ ಮಾಡಿಕೊಳ್ಳುವುದು ಹೇಗೆ ಅದಿಕ್ಕೆ ನಾನು ಸೆಲ್ಫ್ ಹೀಟಿಂಗ್ ಪ್ಯಾಚ್‌ಗಳನ್ನು (Self Heating Patch) ಬಳಸುವೆ' ಎಂದಿದ್ದಾರೆ ಅನುಪಮಾ.
ಮಾಲಾಶ್ರೀ ಆಯ್ತು ಈಗ ನಟಿ ಆರತಿ ಲುಕ್‌ನಲ್ಲಿ ಕಾಣಿಸಿಕೊಂಡ ನಿರೂಪಕಿ ಅನುಪಮಾ ಗೌಡ!'ಪ್ರತಿ ತಿಂಗಳು ನಾನು ಪೀರಿಯಡ್ ಡೇಟ್‌ನ ಟ್ರ್ಯಾಕ್ (Periods date Track) ಮಾಡ್ತೀನಿ. ಮುಂದಿನ ತಿಂಗಳು ಈ ದಿನಕ್ಕೆ ಆಗಬಹುದು ಅಂತ. ಆಗ ಮೂರು ದಿನ ಮುನ್ನ ಮೆಂಟಲಿ ಪ್ರಿಪೇರ್ ಆಗ್ತೀನಿ. ಶೂಟಿಂಗ್ ಡೇಟ್ (Shooting Date) ಕೊಟ್ಟಿಲ್ಲ ಅಂದ್ರೆ ನಾನು ಮೊದಲು ಎರಡು ದಿನ ಏನೂ ಮಾಡುವುದಿಲ್ಲ. ಹೊಟ್ಟೆ ನೋವು (Stomach Pain), ಸೊಂಟ ನೋವು ಮತ್ತು ಮೂಡ್ ಸರಿ ಇರುವುದಿಲ್ಲ ಅದಿಕ್ಕೆ ನಾನು ಮನೆಯಲ್ಲಿಯೇ ಇರುತ್ತೇನೆ' ಎಂದಿದ್ದಾರೆ ಅನುಪಮಾ.
'ಪೀರಿಯಡ್ಸ್ ಸಮಯದಲ್ಲಿ ನಮ್ಮ ಬಾಡಿನ ಹೈಡ್ರೇಟ್ (Hyderate) ಆಗಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ನಾನು ಚೆನ್ನಾಗಿ ನೀರು ಕುಡಿಯುತ್ತೇನೆ ಆಮೇಲೆ ಒಳ್ಳೆಯ ಡಯಟ್ ಫಾಲೋ ಮಾಡ್ತೀನಿ. ತುಂಬಾನೇ ಆಕ್ಟೀವ್ ಆಗಿರುವ ವ್ಯಕ್ತಿ ನಾನು . ನನ್ನ ಪೀರಿಯಡ್ಸ್ ಸಮಯದಲ್ಲಿ ನಾನು 3-4 ಲೀಟರ್ ನೀಡು ದಿನಕ್ಕೆ ಕುಡಿಯಬೇಕು ಅಂತ ಪ್ಲಾನ್ ಮಾಡ್ಕೊಳ್ತೀನಿ. ಕೆಲವರು ಜ್ಯೂಸ್ (Juice) ಅಥವಾ ಬಿಸಿ ನೀರು ಕುಡಿಯುತ್ತಾರೆ. ನೀವು ಕೂಡ ನೀರು ಕುಡಿಯಿರಿ' ಎಂದು ಸಲಹೆ ನೀಡಿದ್ದಾರೆ.