ದೊಡ್ಡಬಳ್ಳಾಪುರ (ಏ.21):  ಕಿರುತೆರೆತ ಟಾಕಿಂಗ್ ಟಾಮ್‌ ಅಕುಲ್‌ ಬಾಲಾಜಿ ಕೊರೋನಾ ವೈರಸ್‌ ಲಾಕ್‌ಡೌನ್‌ ಉಲ್ಲಂಘನೆ ಮಾಡಿದ್ದಾರೆ.

"

ಮಾತಿನ ಮಲ್ಲ ಅಕುಲ್‌ ಬಾಲಾಜಿ ಫಿಟ್ನೆಸ್‌ ಫ್ರೀಕ್‌ ಪತ್ನಿ ನೋಡಿ!

ದೊಡ್ಡಬಳ್ಳಪುರದ  ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿರುವ ಅಕುಲ್‌ ಬಾಲಾಜಿ ಒಡೆತನದ ಸನ್‌ಶೈನ್‌ ರೆಸಾರ್ಟ್‌ನಲ್ಲಿ ಭಾನುವಾರ ಬೆಂಗಳೂರಿನ ಥಣಿಸಂದ್ರ ನಿವಾಸಿಗಳ ವಿವಾಹ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದ್ದು, ಮಧ್ಯರಾತ್ರಿ ವೇಳೆ 20ಕ್ಕೂ ಹೆಚ್ಚು ಮಂದಿ ರೆಸಾರ್ಟ್‌ಗೆ ಬಂದಿಳಿದಿದ್ದಾರೆ. 

ತಕಧಿಮಿತ ಡ್ಯಾನ್ಸ್ ಶೋ: ಆದಮ್‌ ಅವಮಾನಿಸಿದ ಅಕುಲ್!

ಇದನ್ನು ಕಂಡ ಗ್ರಾಮಸ್ಥರು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ರೆಸಾರ್ಟ್‌ ನಡೆಸಿದ ಆರೋಪದಡಿ ನಿರೂಪಕ ಅಕುಲ್‌ ಬಾಲಾಜಿ ಮತ್ತು ಶ್ರೀನಿವಾಸ ಸುಬ್ರಹ್ಮಣ್ಯಂ ಎಂಬುವವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.