ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತ ಕಾರ್ಯಕ್ರಮದಲ್ಲಿ ಆದಮ್ ಪಾಶಾಗೆ ಅಕುಲ್ ಬಾಲಾಜಿ ವೇದಿಕೆ ಮೇಲೆಯೇ ಅವಮಾನಿಸಿರುವುದಾಗಿ ಆರೋಪಿಸಿದ್ದಾರೆ.

ಯಾಕೋ ಎನೋ ಗೊತ್ತಿಲ್ಲ, ಬಿಗ್‌ಬಾಸ್ ಸೀಸನ್-6 ಸ್ಪರ್ಧಿಗಳು ಒಂದಾದ ನಂತರ ಮತ್ತೊಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಒಬ್ಬರು ಮತ್ತೊಬ್ಬರ ಮೇಲೆ ಕಿರುಕುಳ ನೀಡಿದ್ದಾಗಿ ದೂರು ನೀಡಿದರೆ, ಮತ್ತೊಬ್ಬ ಸ್ಪರ್ಧಿಯನ್ನು ಪ್ರಸಿದ್ಧ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿಯೇ ಅವಮಾನಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ ಬಾಸ್-6: ಡ್ರ್ಯಾಗ್ ಕ್ವೀನ್ ಆದಂ ಪಾಶಾ ಮನದಾಳದ ಮಾತು

ಕೆಲವು ದಿನಗಳ ಹಿಂದೆ ಕಿರುತೆರೆ ನಟಿ ಕವಿತಾ ಗೌಡ ತನ್ನ ಸಹಸ್ಪರ್ಧಿ ಆ್ಯಂಡ್ರೂ ಮೇಲೆ ಮಾನಸಿಕ ಕಿರುಕುಳ ನೀಡಿದ್ದಾಗಿ ಮಹಿಳಾ ಆಯೋಗದಲ್ಲಿ ದೂರು ನೀಡಿದ್ದಾರೆ. ಈಗ ಕಿರುತೆರೆ ಖ್ಯಾತ ನಿರೂಪಕ ಅಕುಲ್ ಬಾಲಾಜಿ ತಮ್ಮನ್ನು ಅವಮಾನಿಸಿದ್ದಾಗಿ, ಆದಮ್ ಪಾಶಾ ಆರೋಪಿಸಿದ್ದಾರೆ.

ಎಲ್ಲರಿಗೂ ತಿಳಿದಿರುವ ಹಾಗೆ ಆದಮ್ ಪಾಶಾ LGBT ಕಮ್ಯೂನಿಟಿಗೆ ಸೇರಿದವರು. ಅದನ್ನು ತಿಳಿದಿದ್ದರೂ ಆದಮ್ ಡ್ಯಾನ್ಸ್ ಮಾಡಿದ ನಂತರ ವೇದಿಕೆ ಮೇಲೆಯೇ ನಿರೂಪಕ ಅಕುಲ್ ಆದಮ್ ಉಡುಗೆ ಬಗ್ಗೆ ಅಸಭ್ಯವಾಗಿ ಪ್ರಶ್ನಿಸಿದ್ದಾರೆ, ಎನ್ನಲಾಗಿದೆ.

ಅಕುಲ್ ಮಾತ್ರವಲ್ಲದೇ ಕಾರ್ಯಕ್ರಮದ ನಿರ್ದೇಶಕಿ ಶ್ರದ್ಧಾ ಅವರ ಮೇಲೂ ಆರೋಪಿಸಿದ್ದಾರೆ ಆದಮ್. ಕ್ಷಮೆಯಾಚಿಸಿದರೂ ತಮ್ಮ ನಿರ್ಧಾರ ಬದಲಿಸುವುದಿಲ್ಲವೆಂದು ಶೋನಿಂದ ಹೊರ ನಡೆದಿದ್ದಾಗಿ ಹೇಳಿದ್ದಾರೆ ಆದಮ್.