ವಿವಾದದ ಬೆನ್ನಲೆ ಹೊಸ ಟ್ಯಾಟೂ ಹಾಕಿಸಿಕೊಂಡ ವೈಷ್ಣವಿ ಗೌಡ; ಅರ್ಥ ಏನು ಗೊತ್ತಾ?
ಮೊದಲ ಟ್ಯಾಟೂ ಹಾಕಿಸಿಕೊಂಡ ವೈಷ್ಣವಿ ಗೌಡ. ಅರ್ಥ ಕೇಳಿ ಶಾಕ್ ಆದ ನೆಟ್ಟಿಗರು..ಹರಿದು ಬಂತು ಬೆಸ್ ವಿಶ್‌ಗಳು....
ಅಗ್ನಿಸಾಕ್ಷಿ ಸುಂದರಿ, ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ತಮ್ಮ ಮೊದಲ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮೊದಲ ಟ್ಯಾಟೂ ಆಗಿದ್ದ ಕಾರಣ ಒಳ್ಳೆಯ ಅರ್ಥ ಕೊಡಬೇಕು ಎಂದು ಬಹು ದಿನಗಳ ಕಾಲ ಚಿಂತಿಸಿ ಈ ಡಿಸೈನ್ ಮಾಡಿಸಿಕೊಂಡಿದ್ದಾರೆ. ಟ್ಯಾಟೂ ನೋಡಲು ತುಂಬಾನೇ ಸಿಂಪಲ್ ಆಗಿದ್ದರೂ ದೊಡ್ಡ ಅರ್ಥ ಕೊಡುತ್ತದೆ..
ವೈಷ್ಣವಿ ಟ್ಯಾಟೂ:
'ಟ್ಯಾಟೂ ಹಾಕಿಸಿಕೊಂಡಿರುವೆ, ಇದು ನನ್ನ ಮೊದಲ ಟ್ಯಾಟೂ. ಟ್ಯಾಟೂ ಹೆಸರು -HE RAISING WOMEN SYMBOL. ಇದರ ಅರ್ಥ ಡಿವೈನ್ ಫೀಮೆಲ್ ಎನರ್ಜಿ (ಚಂದ್ರ) ಮತ್ತು ಡಿವೈನ್ ಪುರುಷ ಶಕ್ತಿ (ಸೂರ್ಯ) ಸೇರಿಕೊಂಡು ಸೃಷ್ಟಿ ಮಾಡುವ ಡಿವೈನ್ ಯೂನಿಯನ್ ವಿತ್ ಸ್ಪಿರಿಟ್. ಎತ್ತರಕ್ಕೆ ಬೆಳೆದು ಜೀವನದಲ್ಲಿ ಮುಂದೆ ನಡೆಯಲು ಇದೊಂದು ದಾರಿ' ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.
ನಿಶ್ಚಿತಾರ್ಥ ವಿಚಾರ:
ಕೆಲವು ದಿನಗಳ ಹಿಂದೆ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಹಾರ ಬದಲಾಯಿಸಿಕೊಂಡು ಸ್ವೀಟ್ ತಿನ್ನಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗಿತ್ತು. ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಎಲ್ಲೆಡೆ ಹರಿದಾಡಲು ಆರಂಭಿಸಿದ್ದಾಗ 'ಇದು ನಿಶ್ಚಿತಾರ್ಥವಲ್ಲ ತಪ್ಪು ಮಾಹಿತಿ ಹರಡುವುದು ಬೇಡ. ನಮ್ಮ ಪರ್ಸನಲ್ ಲೈಫ್‌ಗೆ ಸ್ಪೇಸ್ ಕೊಡಿ' ಎಂದು ವೈಷ್ಣವಿ ಪೋಸ್ಟ್ ಹಾಕಿದ್ದರು. ಇದರ ಬೆನ್ನಲೆ ಇಬ್ಬರು ಯುವತಿಯರು ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ವಿದ್ಯಾಭರಣ್ ಸರಿ ಇಲ್ಲ ಹುಡುಗಿಯರ ಜೊತೆ ಇದ್ದವನು ಅವರ ಕುಟುಂಬ ಸರಿ ಇಲ್ಲ ವೈಷ್ಣವಿ ಅವರನ್ನು ಇದರಿಂದ ಸೇಫ್ ಮಾಡಬೇಕು ಅವರ ಕುಟುಂಬಕ್ಕೆ ಇದನ್ನು ತಿಳಿಸಬೇಕು ಎಂದು ಹೇಳಿದ್ದರು. ಈ ಆಡಿಯೋ ವೈರಲ್ ಆಗಿ ಏನೋ ಆಗಿ ಇನ್ನೇನೋ ಆಗಿ ಮದುವೆ ಸಂಬಂಧ ಮುರಿಯುವ ಹಂತಕ್ಕೆ ಬಂದಿತ್ತು. ವಿದ್ಯಾಭರಣ್ ಮಾಧ್ಯಮಗಳಲ್ಲಿ ಎಷ್ಟೇ ಸ್ಪಷ್ಟನೆ ಕೊಟ್ಟರು ವೈಷ್ಣವಿ ಏನೂ ಹೇಳಿರಲಿಲ್ಲ... ಒಂದು ದಿನದ ನಂತರ ಇನ್‌ಸ್ಟಾಗ್ರಾಂನಲ್ಲಿ ಸಂಬಂಧ ಕೈ ಬಿಟ್ಟಿರುವುದಾಗಿ ತಿಳಿಸಿದ್ದರು. ವೈಷ್ಣವಿ ತಾಯಿ ಮತ್ತು ತಂದೆ ನಡೆದಿರುವ ಘಟನೆ ಬಗ್ಗೆ ಸ್ಪಷ್ಟನೆ ಕೊಡಲು ಪ್ರೆಸ್‌ಮಿಟ್ ಮಾಡಿದ್ದರು.
ಇನ್‌ಸ್ಟಾಗ್ರಾಂ ಮತ್ತು ಮೇಲ್‌ನಲ್ಲಿ ವೈಷ್ಣವಿಗೆ ಬಂದಿದೆ ಸಾವಿರಾರು ಮದುವೆ ಪ್ರಪೋಸಲ್‌ಗಳು!
ಬಿಗ್ ಬಾಸ್‌ಯಿಂದ ಫ್ಯಾನ್ಸ್:
ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ನಡುವಳಿಗೆ ಎಲ್ಲವೂ ಕಿರುತೆರೆ ವೀಕ್ಷಕರಿಗೆ ತುಂಬಾನೇ ಇಷ್ಟವಾಗಿತ್ತು. ಬಿಬಿ ಮನೆಯಲ್ಲಿ ತಮ್ಮ ಲೈಫ್ ಪಾರ್ಟನರ್ ಹೇಗಿರಬೇಕು, ಮದುವೆ ಹೇಗಿರಬೇಕು ಎಂದು ಚರ್ಚೆ ಮಾಡುತ್ತಿದ್ದ ಕಾರಣ ಅವರ ಮದುವೆ ಅಂದ್ರೆ ಎಲ್ಲರಿಗೂ ಕ್ಯೂರಿಯಾಸಿಟಿ.
'ಸೆಕೆಂಡ್ ಇನಿಂಗ್ಸ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ ಮಾಡ್ತೀನಿ. ನಗ್ ನಗ್ತಾ ಎಲ್ಲಾ ಸಂದರ್ಭಗಳನ್ನೂ ಎದುರಿಸುತ್ತೇನೆ. ನನ್ನ ಬಗ್ಗೆ ಅಮ್ಮನಿಗೆ ಎರಡು ವಿಷಯಗಳು ಇಷ್ಟವಾಗಿಲ್ಲ. ನಾನು ಚಪಾತಿ ಕದ್ದು ಮುಚ್ಚಿ ತಿಂದಿದ್ದು ಅವರಿಗೆ ಇಷ್ಟವಾಗಿಲ್ಲ. ನೀನೇ ಅಡುಗೆ ಮಾಡುತ್ತೀಯಾ ನೀನೇ ಕೇಳಿ ಇಸ್ಕೊಂಡು ತಿನ್ನೋಕೆ ಆಗಲ್ವಾ ಅಂದಿದ್ರು. ಮತ್ತೊಂದು ನಾನು ಪದೆ ಪದೇ ಮದುವೆ ಬಗ್ಗೆ ಮಾತನಾಡಿದ್ದು. ನಮಗೇನು ಜವಾಬ್ದಾರಿ ಇಲ್ವಾ? ಎಂದು ಅಮ್ಮ ಕೇಳಿದ್ರು. ಅದಕ್ಕೆ ಈ ಸಲ ಮನೆಯೊಳಗೆ ಮದುವೆ ಬಗ್ಗೆ ಮಾತನಾಡುವುದೇ ಇಲ್ಲ.'ಅಯ್ಯೋ ಸಿಕ್ಕಾಪಟ್ಟೆ ಪ್ರಪ್ರೋಸಲ್ಸ್ ಬಂದಿವೆ ಸರ್. ಸುಮಾರು 200-300 ಬಂದಿರಬಹುದು. ಒಂದನ್ನೂ ನೋಡಬೇಕು ಅಂತಲೇ ಅನ್ನಿಸಲಿಲ್ಲ. ನಾನು ಯಾವಗಲೂ ಮನಸ್ಸಿನ ಮಾತು ಕೇಳುತ್ತೇನೆ. ಸೋ ಯಾವುದು ಕನೆಕ್ಟ್ ಆಗಲೇ ಇಲ್ಲ . ಪ್ರೀತಿ ಮೂಡಬೇಕು ಅಂದ್ರೆ ಮುಖವನ್ನೇ ನೋಡಬೇಕು ಅಂತಿಲ್ಲ' ಎಂದು ವೈಷ್ಣವಿ ವೇದಿಕೆ ಮೇಲೆ ಸುದೀಪ್ ಜೊತೆ ಮಾತನಾಡುವಾಗಿ ಹೇಳಿದ್ದರು.