Asianet Suvarna News Asianet Suvarna News

ಮದುವೆ ಪತ್ರಿಕೆ ಫೋಟೋ ಹಂಚಿಕೊಂಡ ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ!

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ಪತ್ರಿಕೆ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡ ಕಿರುತೆರೆ ನಟಿ.....

Kannada actress Priyanka Chincholi share traditional wedding invite vcs
Author
Bangalore, First Published Nov 9, 2021, 5:08 PM IST
  • Facebook
  • Twitter
  • Whatsapp

ಕನ್ನಡ ಕಿರುತೆರೆ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ (Priyanka Chincholi) ಡಿಸೆಂಬರ್ 10ರಂದು ದಾಂಪತ್ಯ ಜೀವನಕ್ಕೆ (Wedding LOck) ಕಾಲಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿರುವ ನಟಿ ತಮ್ಮ ಮದುವೆ ಪತ್ರಿಕೆಯನ್ನು (Wedding card) ಹಂಚಿಕೊಂಡು, ತಮ್ಮ ಫಾಲೋವರ್ಸ್‌ಗೆ ಅಪ್ಡೇಟ್ ನೀಡುತ್ತಿದ್ದಾರೆ.

'ಮದುವೆ ಪತ್ರಿಕೆ ರೆಡಿಯಾಗಿದೆ. ನಮ್ಮ ಜೀವನದ ದೊಡ್ಡ ದಿನಗಳು ಹತ್ತಿರವಾಗುತ್ತಿವೆ.  #RPforever' ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಅವರ ನಿವಾಸದಲ್ಲಿ ಲಕ್ಷ್ಮಿ ಪೂಜೆ (Lakshmi Pooja) ಮಾಡಲಾಗಿತ್ತು. ಇದೇ ಸಮಯದಲ್ಲಿ ಮದುವೆ ಕಾರ್ಡ್‌ಗೆ ಪೂಜೆ ಮಾಡಿ, ಹಂಚಲು ಶುರು ಮಾಡಿದ್ದಾರೆ. ಮದುವೆ ಕಾರ್ಡ್‌ ಮೇಲೆ ಎರಡು ಆನೆಗಳ ಜೊತೆ RP ಎಂದು ಡಿಸೈಸ್ ಮಾಡಲಾಗಿದೆ. 

Kannada actress Priyanka Chincholi share traditional wedding invite vcs

ಆಗಸ್ಟ್‌ (August) ತಿಂಗಳಲ್ಲಿ ಪ್ರಿಯಾಂಕಾ ಮತ್ತು ರಾಕೇಶ್ (Rakesh) ಸರಳವಾಗಿ ರಿಜಿಟರ್ ಮ್ಯಾರೇಜ್ (Register Marriage) ಮಾಡಿಕೊಂಡರು. ಆಪ್ತ ಕುಟುಂಬಸ್ಥರಿಗೆ ಮಾತ್ರ ಸಣ್ಣ ಪಾರ್ಟಿ ಹಮ್ಮಿಕೊಂಡಿದ್ದರು. ಇಡೀ ಕುಟುಂಬಸ್ಥರು ಸಿನಿ ಸ್ನೇಹಿತರನ್ನು ಆಹ್ವಾನಿಸಿ, ಡಿಸೆಂಬರ್‌ನಲ್ಲಿ ಮದುವೆ ಆಗುತ್ತಿದ್ದಾರೆ.

'ನಾಯಿಗಳ ರಕ್ಷಣೆ ಮಾಡುವ NGO ಮೂಲಕ ನನಗೆ ರಾಕೇಶ್ ಪರಿಚಯವಾಗಿತ್ತು. ಈ ಎನ್‌ಜಿಓ ಮಾಲೀಕರಾದ ಪ್ರವೀಣ್ ಅವರು ಅನಿತಾ ಆಂಟಿ ಅವರಿಗೆ ಪರಿಚಯ ಮಾಡಿಕೊಟ್ಟರು . ದಿನ ಕಳೆಯುತ್ತಿದ್ದಂತೆ ಅವರ ಜೊತೆ ಒಳ್ಳೆಯ ಸಂಪರ್ಕ ಬೆಳಸಿಕೊಂಡೆ. ಆಗ ನನ್ನ ತಾಯಿ ನನಗೆ ಹುಡುಗ ಹುಡುಕುತ್ತಿರುವ ವಿಚಾರವನ್ನು ಕೂಡ ಇವರಿಗೆ ಹೇಳಿದೆ. ಆಗ ಆಂಟಿ ಕುಟುಂಬದಲ್ಲಿ ಒಬ್ಬರಿಗೆ ಹುಡುಗಿ ಹುಡುಕುತ್ತಿರುವ ಮಾಹಿತಿ ಹಂಚಿಕೊಂಡು. ನನ್ನ ತಾಯಿಗೆ ಈ ವಿಚಾರ ಹೇಳಿದರು. ನಾನು ಅವರ ಮೊಬೈಲ್ ನಂಬರ್ ಪಡೆದುಕೊಂಡೆ. ಆಗ  ಒಬ್ಬರನ್ನೊಬ್ಬರ ಬಗ್ಗೆ ಪರಿಚಯವಾಯ್ತು,' ಎಂದು  E ಟೈಮ್ಸ್‌ ಸಂದರ್ಶನದಲ್ಲಿ ಪ್ರಿಯಾಂಕಾ ಹೇಳಿದ್ದಾರೆ.

ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ!

'2021ರ ಹೊಸ ವರ್ಷದಂದು (New year) ರಾಕೇಶ್‌ ನನಗೆ ರೊಮ್ಯಾಂಟಿಕ್ (Romantic) ಆಗಿ ಪ್ರಪೋಸ್ ಮಾಡಿದರು. ನಾನು ಕೂಡಲೇ ಒಪ್ಪಿಕೊಂಡೆ. ರಾಕೇಶ್ ತುಂಬಾ ಒಳ್ಳೆಯ ವ್ಯಕ್ತಿ. ನಾನು ಮಾಡುವ ಕೆಲಸದ ಬಗ್ಗೆ ಅವರಿಗೆ ಹೆಮ್ಮೆ ಇದೆ ಹಾಗೂ ಗೌರವಿದೆ.  ಅವರು ಆಗಾಗ ನನ್ನನ್ನು ತೆರೆ ಮೇಲೆ ನೋಡುತ್ತಾರೆ. ಏಕೆಂದರೆ ನನ್ನ ಅಳುವ ಪಾತ್ರ ಅವರಿಗೆ ಇಷ್ಟವಿಲ್ಲ.  ಮನಸ್ಸಾರೆ ಧಾರಾವಾಹಿಯಲ್ಲೂ ನನಗೆ ಎಂಗೇಜ್‌ಮೆಂಟ್ ಆಯ್ತು. ಅದಾದ ಕೆಲವು ದಿನಗಳಿಗೆ ನನ್ನ ರಿಯಲ್‌ ಲೈಫ್‌ನಲ್ಲಿ ಎಂಗೇಜ್ ಆದೆ.  ರೀಲ್ ಹಾಗೂ ರಿಯಲ್‌ ಲೈಫ್‌ ಘಟನೆಗಳು ಸಿಂಕ್ ಆಗಿದ್ದಕ್ಕೆ ಸಂತೋಷವಿದೆ,' ಎಂದಿದ್ದಾರೆ.

ಮದುವೆ ಆದ ನಂತರೂ ನಟಿಸುವುದಾಗಿ ಹೇಳುತ್ತಾ ಪ್ರಿಯಾಂಕಾ ಶೀಘ್ರದಲ್ಲಿ ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

 

Follow Us:
Download App:
  • android
  • ios