ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ!
ರಾಕೇಶ್ ಜೊತೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ. ಈ ನಿರ್ಧಾರಕ್ಕೆ ಕಾರಣ ಏನೆಂದು ಪ್ರಶ್ನಿಸಿದ ನೆಟ್ಟಿಗರು.
ಕನ್ನಡ ಕಿರುತೆರೆ ವಾಹಿನಿಯ ಜನಪ್ರಿಯಾ ನಟಿ ಪ್ರಿಯಾಂಕಾ ಚಿಂಚೋಳಿ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಹೇಳಿ, ಈಗಲೇ ಸರಳವಾಗಿ ಅದೂ ರಿಜಿಸ್ಟರ್ ಮ್ಯಾರೇಜ್ ಆಗಿರುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಚಾರದ ಬಗ್ಗೆ ಸ್ವತಃ ಪ್ರಿಯಾಂಕಾ ವಿಷಯ ಹಂಚಿಕೊಂಡಿದ್ದಾರೆ.
'ಮದುವೆ ಸಂಭ್ರಮ ಶುರುವಾಗಿದೆ. ಈಗಷ್ಟೇ ಫಾರ್ಮಲ್ ಆಗಿ ಮದುವೆ ರಿಜಿಸ್ಟ್ರೇಷನ್ ಆಗಿದೆ. ರಾಕೇಶ್ ಮತ್ತು ಡಿಸೆಂಬರ್ 2021, 10ರಂದು ಸಂಪ್ರದಾಯದಂತೆ ಮದುವೆ ಆಗಲಿದ್ದೇವೆ,' ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗುತ್ತಿರುವ ಪ್ರಿಯಾಂಕಾ ಎರಡೆರಡು ಬಾರಿ ಮದುವೆ ಆಗುತ್ತಿರುವುದಕ್ಕೆ ಕಾರಣವೇನು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಕ್ಕೆ ಸಿಕ್ಕ ಉತ್ತರವನ್ನೂ ನೀಡಿದ್ದಾರೆ ಕಿರುತೆರೆಯ ಖ್ಯಾತ ನಟಿ.
ರಾಕೇಶ್ ಅವರು ಅಮೆರಿಕದಲ್ಲಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ವೀಸಾಗೆ ರಿಜಿಸ್ಟರ್ ಮದುವೆಯ ಪ್ರಮಾಣಪತ್ರದ ಅಗತ್ಯವಿದೆ. ಮತ್ತೊಂದೆಡೆ ಕೊರೋನಾ ಆತಂಕವೂ ಇರುವುದಿಂದ ವೀಸಾಗೋಸ್ಕರ ರಿಜಿಸ್ಟರ್ ಮದುವೆಯಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್‌ನಲ್ಲಿ ಸಂಪ್ರದಾಯಬದ್ಧವಾಗಿ ಬೆಂಗಳೂರಿನಲ್ಲಿ ಮದುವೆ ಆಗುತ್ತೇವೆ ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಮದುವೆ ನಂತರ ವಿದೇಶಕ್ಕೆ ಹಾರಲು ಸಿದ್ಧರಾದ ಅನೇಕರ ಮಾಡುವಂತೆ, ಪ್ರಿಯಾಂಕಾ ಸಹ ರಿಜಿಸ್ಟರ್ ಮದುವೆಯಾಗಿದ್ದಾರೆನ್ನುವುದು ಸ್ಪಷ್ಟವಾಗಿದೆ.
ಮದುವೆಯಲ್ಲಿ ಕೆಂಪು ಮತ್ತು ಹಸಿರು ಬಣ್ಣದಲ್ಲಿ ಸೀರೆಯಲ್ಲಿ ಪ್ರಿಯಾಂಕಾ ಕಂಗೊಳ್ಳಿಸುತ್ತಿದ್ದಾರೆ ಹಾಗೂ ರಾಕೇಶ್ ನೀಲಿ ಮತ್ತು ಬಿಳಿ ಬಣ್ಣದ ಸೂಟ್ ಧರಿಸಿದ್ದಾರೆ. ಇಬ್ಬರೂ ಹಾರ ಬದಲಾಯಿಸಿಕೊಳ್ಳುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹೈ ಹನುಮಾನ್ ಹಾಗೂ ಮನಸಾರೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ ಪ್ರಿಯಾಂಕಾ. ಅಲ್ಲದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸೆಲ್ಲಾ ನೀನೆ ಧಾರಾವಾಹಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.