ಬಿಗ್‌ಬಾಸ್‌ನಿಂದ ಹೊರಬಂದ ಗೌತಮಿ ಜಾಧವ್, ಫಿನಾಲೆ ತಲುಪದ ಬೇಸರ ವ್ಯಕ್ತಪಡಿಸಿದ್ದಾರೆ. ಮೋಕ್ಷಿತಾ, ಮಂಜು ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಮಂಜು ಅವರನ್ನು "ಗುರು" ಎಂದು ಕರೆಯುತ್ತಿದ್ದ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಆಟದ ಶಕ್ತಿ-ದೌರ್ಬಲ್ಯಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಬಟ್ಟೆ, ಸಂಭಾವನೆ ಮತ್ತು ಮುಂದಿನ ಸಿನಿಮಾ ಅವಕಾಶಗಳ ಬಗ್ಗೆಯೂ ತಿಳಿಸಿದ್ದಾರೆ.

ʼಬಿಗ್‌ ಬಾಸ್ʼ ಮನೆಯಿಂದ ಗೌತಮಿ ಜಾಧವ್‌ ಅವರು ಔಟ್‌ ಆಗಿದ್ದಾರೆ. ಇನ್ನೇನು ಗ್ರ್ಯಾಂಡ್‌ ಫಿನಾಲೆಗೆ ಒಂದು ವಾರ ಇರುವಾಗಲೇ ಅವರು ಮನೆಯಿಂದ ಹೊರಗಡೆ ಬಂದಿದ್ದಾರೆ. ಈಗ ಅವರು ಸಂದರ್ಶನಗಳಲ್ಲಿ ʼಬಿಗ್‌ ಬಾಸ್ʼ‌ ಮನೆಯ ವಿಚಾರಗಳನ್ನು ಮೆಲುಕು ಹಾಕಿದ್ದಾರೆ.

ಅಭಿಷೇಕ್‌ಗೆ ಬೇಸರ ಆಯ್ತು!
“ನಾನು ಗೆಲ್ಲಬೇಕು ಅಂತ ಅನೇಕರು ಹಾರೈಸಿದ್ದರು. ಆದರೆ ಈಗಲೇ ಹೊರಗಡೆ ಬರುವ ಹಾಗೆ ಆಯ್ತು. ನಾನು ಹೇಗಿದ್ದೆನೊ ಅಲ್ಲಿ ಹಾಗೆಯೇ ಆಡಿದ್ದೇನೆ. ನಾನು ಗೆಲ್ಲದಿರೋದು ಅನೇಕರಿಗೆ ಬೇಸರ ತಂದಿದೆ. ಅಭಿಷೇಕ್‌ ಅವರಿಗೂ ಬೇಸರ ಆಗಿದೆ” ಎಂದು ಗೌತಮಿ ಜಾಧವ್‌ ಅವರು ಹೇಳಿದ್ದಾರೆ.

BBK 11: ತ್ರಿವಿಕ್ರಮ್ ಪಕ್ಕಾ ಮಾಸ್ಟರ್‌ಮೈಂಡ್‌; ಉದಾಹರಣೆ ಸಮೇತ ಬಿಚ್ಚಿಟ್ಟ ಧನರಾಜ್!‌

ಗೌತಮಿ ಜಾಧವ್‌ ಏನಂದ್ರು?
“ಮೋಕ್ಷಿತಾ, ಮಂಜು ಅವರಿಂದ ದೂರ ಇದ್ದಿದ್ರೆ ನಾನು ಫಿನಾಲೆಯಲ್ಲಿ ಇರುತ್ತಿದ್ದೆ, ಆದರೆ ಗೌತಮಿಯಾಗಿ ಇರುತ್ತಿರಲಿಲ್ಲ. ಆಟಕ್ಕೆ ಸ್ನೇಹ ಮಾಡೋದು, ಸ್ನೇಹವನ್ನು ಕಟ್‌ ಮಾಡೋದು ತಪ್ಪು ಎನಿಸತ್ತೆ. ಟಾಸ್ಕ್‌ ವಿಚಾರ ಬಿಟ್ಟು ನಮಗೆ ಒಂದು ಪರ್ಸನಲ್‌ ಸ್ಪೇಸ್‌ ಇರುತ್ತದೆ. ಮೋಕ್ಷೊತಾ, ಮಂಜುಗೆ ತುಂಬ ಕನೆಕ್ಟ್‌ ಆಗಿದ್ದೆ, ಆದರೆ ಇತ್ತೀಚೆಗೆ ಹನುಮಂತ ಜೊತೆ ಕನೆಕ್ಟ್‌ ಆಗುತ್ತಿದ್ದೆ” ಎಂದು ಗೌತಮಿ ಜಾಧವ್‌ ಅವರು ಹೇಳಿದ್ದಾರೆ.

ಆಶ್ರಮ ಕಟ್ಟು! 
“ಹುಲಿಯಾಗಿದ್ದ ಮಂಜುವನ್ನು ಗೌತಮಿ ಜಿಂಕೆ ಮಾಡಿದಳು ಎನ್ನುವ ಮಾತು ಬಂತು. ಇದು ನಿಜವಾಗಿಯೂ ಹೌದು ಅಂತ ಅನಿಸ್ತಾ ಎಂದು ಮಂಜು ಬಳಿ ಪ್ರಶ್ನೆ ಮಾಡಿದ್ದೆ. ಮಂಜು ಬಳಿ ಮಾತನಾಡುವಾಗ ಯಾರಿಗೂ ಕಾಣದ ಮಂಜು ನನಗೆ ಕಾಣಿಸಿದ್ದು ಸತ್ಯ. ಮಂಜು ಅವರು ಮೂಡಿ, ಆರಂಭದಲ್ಲಿ ಅವರು ಜಗದೀಶ್‌ ಜೊತೆ ಜಗಳ ಆಡುತ್ತಿದ್ದರು. ನನ್ನನ್ನು ಗುರು ಅಂತ ಮಂಜು ಹೇಳುತ್ತಿದ್ದರು. ಹೊರಗಡೆ ಮೂರು ಎಕರೆ ಕೊಡ್ತೀನಿ, ಆಶ್ರಮ ಕಟ್ಟು ಅಂತ ತಮಾಷೆಯಾಗಿ ಹೇಳಿದ್ದಿದೆ” ಎಂದು ಗೌತಮಿ ಜಾಧವ್‌ ಅವರು ಹೇಳಿದ್ದಾರೆ.

BBK 11: ಮಾಜಿ ಗೆಳತಿ ಜೊತೆಗಿನ ರಜತ್ ಫೋಟೋ ವೈರಲ್;‌ ದೂರು ನೀಡಿದ ಪತ್ನಿ ಅಕ್ಷಿತಾ!

ಗೌತಮಿ ಜಾಧವ್‌ ಏನಂದ್ರು? 
“ನನ್ನ ವ್ಯಕ್ತಿತ್ವ ಎಷ್ಟು ಪ್ಲಸ್‌ ಇದೆಯೋ ಅದರಲ್ಲಿ ಮೈನಸ್‌ ಕೂಡ ಇದೆ. ನನಗೆ ಕಿರುಚಾಡಿ, ಕೂಗಾಡೋದು ಮಾಡೋಕೆ ಬರಲ್ಲ. ಕಳೆದ ವಾರ ನಾನು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನನ್ನ ಪ್ಲಸ್‌ ವಿಷಯಗಳಿಂದಲೇ ನಾನು ಆ ಮನೆಯಲ್ಲಿ ಇಷ್ಟು ವಾರ ಇದ್ದಿದ್ದೆ. ಮಂಜು ನನ್ನ ಮಾತುಗಳಿಗೆ ಬೆಲೆ ಕೊಡುತ್ತಿದ್ದರು, ಮಂಜು ನನ್ನ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು ಅಂತ ಭವ್ಯಾ ಹೇಳಿದ್ರೆ ಅದು ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಮಂಜು ಅವಳಿ ಬಳಿಯೇ ನಾನು ಎಲ್ಲರ ಜೊತೆ ಇರಿ, ತ್ರಿವಿಕ್ರಮ್‌ ಜೊತೆ ಇರಿ, ಭವ್ಯಾ ಜೊತೆ ಮಾತನಾಡಿ ಅಂತ ಹೇಳಿದ್ದೇನೆ, ಅದೆಲ್ಲ ಯಾರಿಗೂ ಕಾಣಿಸೋದಿಲ್ಲ” ಎಂದು ನಟಿ ಗೌತಮಿ ಜಾಧವ್‌ ಅವರು ಹೇಳಿದ್ದಾರೆ.

“ನನ್ನ ಸಿಕ್ಕಾಪಟ್ಟೆ ಬಟ್ಟೆಗಳನ್ನು ತಗೊಂಡು ಹೋಗಿದ್ದೆ. ಸತ್ಯ ಧಾರಾವಾಹಿಯಲ್ಲಿ ಹಾಕಿರದ ಬಟ್ಟೆಗಳನ್ನು ನಾನು ಆ ಮನೆಗೆ ತಗೊಂಡು ಹೋಗಿದ್ದೆ. ಇನ್ನೊಂದು ಕಡೆ ನನ್ನ ಪತಿ ಶಾಪಿಂಗ್‌ ಮಾಡಿ, ಮಾಡಿ ಕಳಿಸುತ್ತಿದ್ದರು. ಇನ್ನೂ ಡ್ರೆಸ್‌ ಉಳಿದಿದೆ. ಇನ್ನು ಎಷ್ಟೋ ಇಂಟರ್‌ವ್ಯೂಗಳಿಗೆ ಡ್ರೆಸ್‌ ಹಾಕಿದರೂ ಮತ್ತೆ ಉಳಿಯುತ್ತದೆ. ನನಗೆ ಪ್ರೀತಿಯಿಂದ ಏನು ಕೊಟ್ಟಿದ್ದಾರೋ, ಅಷ್ಟೇ ಸಂಭಾವನೆ ತಗೊಂಡಿದ್ದೇನೆ. ಈ ಹಿಂದೆ ನಾನು ನಾಲ್ಕು ಸಿನಿಮಾ, ಎರಡು ಧಾರಾವಾಹಿಗಳಲ್ಲಿ ನಟಿಸಿದ್ದೆ, ಆ ವಿಷಯ ಎಲ್ಲವೂ ಈಗ ಹೊರಗಡೆ ಬರುತ್ತಿದೆ. ಇನ್ಮುಂದೆ ಬರುವ ಅವಕಾಶಗಳನ್ನು ನೋಡಿಕೊಂಡು ಸಿನಿಮಾ ಮಾಡ್ತೀನಿ” ಎಂದು ನಟಿ ಗೌತಮಿ ಜಾಧವ್‌ ಅವರು ಹೇಳಿದ್ದಾರೆ.