BBK 11: ತ್ರಿವಿಕ್ರಮ್ ಪಕ್ಕಾ ಮಾಸ್ಟರ್‌ಮೈಂಡ್; ಉದಾಹರಣೆ ಸಮೇತ ಬಿಚ್ಚಿಟ್ಟ ಧನರಾಜ್!
ʼಬಿಗ್ ಬಾಸ್ʼ ಮನೆಯಲ್ಲಿ ತ್ರಿವಿಕ್ರಮ್ ಅವರು ಪಕ್ಕಾ ಮಾಸ್ಟರ್‌ಮೈಂಡ್. ಹೇಗೆ ಆಟ ಆಡುತ್ತಿದ್ದಾರೆ ಎಂದು ಧನರಾಜ್ ಆಚಾರ್, ಗೌತಮಿ ಜಾಧವ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ʼಬಿಗ್ ಬಾಸ್ʼ ಮನೆಯಲ್ಲಿ ತ್ರಿವಿಕ್ರಮ್ ಪಕ್ಕಾ ಮಾಸ್ಟರ್‌ಮೈಂಡ್. ಹೀಗಂತ ಸ್ವತಃ ಧನರಾಜ್ ಆಚಾರ್ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಗ್ರ್ಯಾಂಡ್ ಫಿನಾಲೆಗೆ ಇನ್ನು ಒಂದು ವಾರ ಇರುವಾಗಲೇ ಧನರಾಜ್ ಆಚಾರ್, ಗೌತಮಿ ಜಾಧವ್ ಅವರು ಔಟ್ ಆಗಿದ್ದಾರೆ. ಸದ್ಯ ಸಂದರ್ಶನಗಳನ್ನು ಕೊಡುವುದರಲ್ಲಿ ಬ್ಯುಸಿಯಾಗಿರುವ ಅವರು ʼಬಿಗ್ ಬಾಸ್ʼ ಮನೆಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಧನರಾಜ್ ಆಚಾರ್ ಏನಂದ್ರು?
“ತ್ರಿವಿಕ್ರಮ್ ಅವರು ಯಾರ ಜೊತೆಯಾದರೂ ಗಲಾಟೆ ಮಾಡಿಕೊಂಡರೆ, ಬಹಳ ಕಡಿಮೆ ಸಮಯದಲ್ಲಿ ಅವರ ಜೊತೆ ಮಾತನಾಡಿ ಕ್ಲಿಯರ್ ಮಾಡಿಕೊಳ್ತಾರೆ. ಹೀಗಾಗಿ ಅವರನ್ನು ನಾಮಿನೇಟ್ ಮಾಡೋಕೆ ಕಾರಣವೇ ಇರೋದಿಲ್ಲ. ತ್ರಿವಿಕ್ರಮ್ ಅವರು ಜಿಮ್‌ನಲ್ಲಿ ಟ್ರೇನ್ ಮಾಡುತ್ತಿದ್ದರು. ಹೀಗೆ ಅವರ ಜೊತೆ ಮಾತನಾಡುವಾಗ ಎಂಥ ಮಾಸ್ಟರ್‌ಮೈಂಡ್ ಅಂಥ ಅನಿಸಿತ್ತು. ಇವರ ಬಳಿ ಹುಷಾರಾಗಿರಬೇಕು ಅಂತ ಆಗಲೇ ಅಂದುಕೊಂಡೆ. ಈ ಕೌಶಲ ಆಟಕ್ಕೆ ಬೇಕಿತ್ತು, ಅದನ್ನು ಅವರು ಮಾಡ್ತಿದ್ದಾರೆ” ಎಂದು ಧನರಾಜ್ ಆಚಾರ್ ಹೇಳಿದ್ದಾರೆ.
ಮಂಚದಲ್ಲಿನ ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್: ಹಾಕಲು ಬಟ್ಟೆ ಇಲ್ಲ ಎಂದ ನಟಿಯ ಎದುರಿಗೆ ಇರೋದ್ಯಾರು?
ಧನರಾಜ್ ಏನು ಹೇಳಿದ್ರು?
“ತ್ರಿವಿಕ್ರಮ್ ಜೊತೆ ನನಗೆ ಹಲವು ಸಲ ಮನಸ್ತಾಪ ಆಗಿತ್ತು. ನಿಮ್ಮ ಜೊತೆ ಇದ್ದವರನ್ನು ನೀವು ಬ್ಲೇಮ್ ಮಾಡ್ತೀರಿ. ಭವ್ಯಾ ಗೌಡಗೂ ನೀವು ಬ್ಲೇಮ್ ಮಾಡ್ತೀರಿ ಯಾಕೆ ಅಂತ ತ್ರಿವಿಕ್ರಮ್ ಅವರಿಗೆ ನಾನು ಕೇಳಿದಾಗ ಅವರು ಕಾರಣ ಕೊಟ್ಟರು. ಒಮ್ಮೆ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಡೆ ಬರ್ತೀನಿ ಅಂದಾಗ, “ಇಲ್ಲಿ ಯಾರು ಸಾಚಾ ಅಲ್ಲ, ನೀನ್ಯಾಕೆ ಹಾಗೆ ಯೋಚನೆ ಮಾಡ್ತೀಯಾ” ಎಂದು ಹೇಳಿದ್ದರು. ಆ ವಿಷಯ ನನಗೆ ತುಂಬ ಇಷ್ಟ ಆಯ್ತು” ಎಂದು ಧನರಾಜ್ ಆಚಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಕಾರಣಕ್ಕೆ ಪದೇ ಪದೇ ಕೊರಗಜ್ಜನ ಮೊರೆ ಹೋಗುತ್ತಿದ್ರು ಚೈತ್ರಾ ಕುಂದಾಪುರ; ಸತ್ಯ ಲೀಕ್ ಆಗೇಬಿಡ್ತು
ಗೌತಮಿ ಜಾಧವ್ ಏನಂದ್ರು?
“ತ್ರಿವಿಕ್ರಮ್ ಅವರು ಮಾಸ್ಟರ್‌ಮೈಂಡ್ ಅಂತೂ ಹೌದು. ಒಂದಷ್ಟು ತಲೆ ಓಡಿಸಿ ಆಟ ಆಡುತ್ತಿದ್ದಾರೆ. ನನ್ನ ಹಾಗೂ ಮಂಜು ಕಥೆಯನ್ನು ಹುಲಿ-ಜಿಂಕೆ ಕಥೆ ಥರ ಹೇಳಿದರು. ನಾನು ಹುಲಿಯನ್ನು ಜಿಂಕೆ ಮಾಡ್ತೀನಿ ಅಂದ್ರೆ ಮನೆಯಲ್ಲಿದ್ದವರನ್ನೆಲ್ಲ ಮಾಡಬಹುದಿತ್ತು. ನಾನು ಆ ರೀತಿ ಯೋಚಿಸಿ ಆಟ ಆಡಿರಲಿಲ್ಲ. ಎಲ್ಲರೂ ಹುಲಿ ಜಿಂಕೆ ಕಥೆ ಬಗ್ಗೆ ಮಾತನಾಡುತ್ತಿರೋದು ಆಶ್ಚರ್ಯ ಮೂಡಿಸಿದೆ” ಎಂದು ಗೌತಮಿ ಜಾಧವ್ ಅವರು ಹೇಳಿದ್ದಾರೆ.
ಭವ್ಯಾ ಗೌಡ, ತ್ರಿವಿಕ್ರಮ್ ಮಧ್ಯೆ ಶೀತಲ ಸಮರ!
ದೊಡ್ಮನೆಯಲ್ಲಿ ಭವ್ಯಾ ಗೌಡ ಅವರು “ತ್ರಿವಿಕ್ರಮ್ ಬಹಳ ಬುದ್ಧಿವಂತರು. ಅವರು ಯೋಚಿಸಿ ನಿರ್ಧಾರಗಳನ್ನು ತಗೊಳ್ತಾರೆ. ಅವರ ಆಟದ ಪರಿ ನನಗೆ ಇಷ್ಟವಾಗಿದೆ” ಎಂದು ಹೇಳಿದ್ದರು. ಸದ್ಯ ತ್ರಿವಿಕ್ರಮ್ ಅವರು “ತನ್ನ ಆಟಕ್ಕೋಸ್ಕರ ಭವ್ಯಾ ಗೌಡ ನನ್ನನ್ನು ಬಳಸಿಕೊಂಡರು. ಇದು ಇವನ ಸ್ವಾರ್ಥ” ಎಂದು ಹೇಳಿದ್ದಾರೆ. ಈ ವಿಚಾರವಾಗಿ ಇವರಿಬ್ಬರ ಮಧ್ಯೆ ಶೀತಲ ಸಮರ ನಡೆಯುತ್ತಿದೆ.
ಗ್ರ್ಯಾಂಡ್ ಫಿನಾಲೆ ಯಾವಾಗ?
ಅಂದಹಾಗೆ ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಜನವರಿ 25, 26ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎನ್ನಲಾಗಿದೆ. ಕಿಚ್ಚ ಸುದೀಪ್ ಅವರು ಈ ಶೋನ ನಿರೂಪಣೆ ಮಾಡಿದ್ದು, ಇದು ಇವರ ನಿರೂಪಣೆಯ ಕೊನೆಯ ಸೀಸನ್ ಎನ್ನಲಾಗಿದೆ. ಅಂದಹಾಗೆ ಮೋಕ್ಷಿತಾ ಪೈ, ಭವ್ಯಾ ಗೌಡ, ತ್ರಿವಿಕ್ರಮ್, ಉಗ್ರಂ ಮಂಜು, ರಜತ್, ಹನುಮಂತ ಅವರಲ್ಲಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂದು ಕಾದುನೋಡಬೇಕಿದೆ. ಒಟ್ಟಿನಲ್ಲಿ ಈ ಬಾರಿ ಯಾರು ಟ್ರೋಫಿ ಗೆಲ್ತಾರೆ ಎನ್ನುವ ಕುತೂಹಲ ಜೋರಾಗಿದೆ.