ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಸ್ಪರ್ಧಿ ಗೌತಮಿ ಜಾಧವ್‌ ಅವರಿಗೆ ನಾಡಗೀತೆ ಬರೋದಿಲ್ಲ ಎಂದು ಯಮುನಾ ಶ್ರೀನಿಧಿ ಆರೋಪ ಮಾಡಿದ್ದರು. ಇದಕ್ಕೆ ಗೌತಮಿ ಜಾಧವ್‌ ಅವರು ಉತ್ತರ ಕೊಟ್ಟಿದ್ದಾರೆ.  

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಸ್ಪರ್ಧಿ ಗೌತಮಿ ಜಾಧವ್‌ ಅವರಿಗೆ ನಾಡಗೀತೆ ಬರಲ್ಲ, ನಾಡಗೀತೆಯನ್ನು ಕಲಿತಿಲ್ಲ ಅಂತ ಯಮುನಾ ಶ್ರೀನಿಧಿ ಅವರು Boss Tvಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು. ಈಗ ಈ ಬಗ್ಗೆ ಗೌತಮಿ ಜಾಧವ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಯಮುನಾ ಶ್ರೀನಿಧಿ ಆರೋಪ ಏನು?
“ಗೌತಮಿ ಜಾಧವ್‌ ಅವರು ಇಷ್ಟು ವರ್ಷಗಳಿಂದ ಕನ್ನಡದಲ್ಲಿದ್ದಾರೆ. ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿನ ಜಲ-ನೆಲ ಬೇಕು. ಅಮೆರಿಕಾದಲ್ಲಿರುವ ಮಕ್ಕಳು ಕನ್ನಡದ ನಾಡಗೀತೆಯನ್ನು ಹಾಡುತ್ತಾರೆ. ಗೌತಮಿ ಜಾಧವ್‌ ಅವರು ಕರ್ನಾಟಕದಲ್ಲಿದ್ದು ಹನ್ನೆರಡು ವರ್ಷಗಳಾಯ್ತು. ಆದರೂ ಕನ್ನಡ ಕಲಿತಿಲ್ಲ? ನಾಡಗೀತೆ ಹಾಡಿಲ್ಲ, ಗೊತ್ತಿಲ್ಲ. ʼಬಿಗ್‌ ಬಾಸ್ʼ‌ ಮನೆಯಲ್ಲಿ ನಾಡಗೀತೆ ಹಾಡುವಾಗ ಒಂದು ಮಾತು ಆಡಿಲ್ಲʼ ಎಂದು ಯಮುನಾ ಶ್ರೀನಿಧಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

BBK 11: ನನ್ನ ಪತಿ ಅಭಿಷೇಕ್‌ಗೆ ಬೇಸರ ಆಗಿದೆ; 3 ಎಕರೆ ಕೊಡ್ತೀನಿ, ಆಶ್ರಮ‌ ಕಟ್ಟು ಅಂತ ಮಂಜು ಹೇಳಿದ್ದಾರೆ: ಗೌತಮಿ ಜಾದವ್

ಗೌತಮಿ ಜಾಧವ್‌ ಏನಂದ್ರು? 
“ನನಗೆ ಎಲ್ಲೆಲ್ಲಿ ಗೊತ್ತಿತ್ತೋ ನಾನು ಅಲ್ಲಲ್ಲಿ ಹಾಡಿದ್ದೀನಿ. ಆ ವಿಡಿಯೋವನ್ನು ಅನೇಕರು ಹಾಡಿದ್ದಾರೆ. ಯಮುನಾ ಅವರು ಯಾಕೆ ಆ ರೀತಿ ಮಾತನಾಡಿದರು ಅಂತ ಗೊತ್ತಿಲ್ಲ. ನನಗೆ ನಾಡಗೀತೆ ಪೂರ್ಣ ಗೊತ್ತಿಲ್ಲ ಎನ್ನೋದನ್ನು ಒಪ್ಪಿಕೊಳ್ತೀನಿ. ನನಗೆ ತಪ್ಪು ತಪ್ಪಾಗಿ ಹಾಡೋಕೆ ಇಷ್ಟ ಇಲ್ಲ, ಎಲ್ಲೆಲ್ಲಿ ಗೊತ್ತಿತ್ತೋ ಅಲ್ಲಿ ಹಾಡಿದ್ದೀನಿ. ಆದರೆ ಕನ್ನಡದ ಮೇಲೆ ಪ್ರೀತಿ ಇದೆ, ಇದರಿಂದಲೇ ನಾನು ಬಿಗ್‌ ಬಾಸ್‌ ಮನೆಯಲ್ಲಿ ನೂರಾ ಹನ್ನೊಂದು ದಿನ ಇದ್ದೆ, ಅಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದೇನೆ. ಯಮುನಾ ಅವರಿಗೆ ನನ್ನ ಮೇಲೆ ಯಾಕೆ ಕೋಪ ಎನ್ನೋದು ಅರ್ಥ ಆಗ್ತಿಲ್ಲ” ಎಂದು ಗೌತಮಿ ಜಾಧವ್‌ ಅವರು ಹೇಳಿದ್ದಾರೆ. 

ಮದುವೆ ಆದಮೇಲೆ ಅದಾಗಲೇ ಇಲ್ಲ ಒಂದು ವರ್ಷ ಎಂದ ಲಾಯರ್ ಜಗದೀಶ್! ಮತ್ತೇನಾಯ್ತಂತೆ ಗೊತ್ತಾ?

ಗೌತಮಿ ಜಾಧವ್‌ ಏನಂದ್ರು? 
“ನನ್ನನ್ನು ಯಾರಾದರೂ ಟಚ್‌ ಮಾಡಿದ್ರೆ ಇಷ್ಟ ಆಗೋದಿಲ್ಲ ಎಂದು ಗೌತಮಿ ಜಾಧವ್‌ ಅವರು ಹೇಳಿದ್ದರು. ಮಂಜಣ್ಣ ಅವರು ಹಗ್‌ ಮಾಡಿದ್ರೆ ಗೌತಮಿ ಅವರು ವಿರೋಧಿಸಿರಲಿಲ್ಲ, ಆದರೆ ಧನರಾಜ್‌ ಅವರು ತಲೆದಿಂಬಿನಿಂದ ಹೊಡೆದಾಗ ಗೌತಮಿ ಅವರು ಸಿಟ್ಟಿಗೆದ್ದಿದ್ದರು. ಈ ಬಗ್ಗೆ ಗೌತಮಿ ಅವರು ಮಾತನಾಡಿದ್ದಾರೆ. “ಯಾವುದೇ ವ್ಯಕ್ತಿ ಮುಟ್ಟಿ ಮುಟ್ಟಿ ಮಾತನಾಡಿಸಿದ್ರೆ ಇಷ್ಟ ಆಗೋದಿಲ್ಲ. ಅದರಲ್ಲಿಯೂ ಪರಿಚಯವಿಲ್ಲದಿರೋರು ಆ ರೀತಿ ಮಾಡಿದ್ರೆ ಇಷ್ಟ ಆಗೋದಿಲ್ಲ. ಮಂಜು ಅವರು ಮುಟ್ಟಿ ಮಾತನಾಡಿಸಿದಾಗ ನಾನು ವಿರೋಧಿಸಿದ್ದೆ. ಆದರೆ ಒಂದು ಸ್ನೇಹ ಸೃಷ್ಟಿಯಾದಾಗ ನಾನು ಹೇಳೋದನ್ನು ಮರೆತಿರಬಹುದು. ಇನ್ನು ಮಂಜು ಅವರು ಅಕ್ಕ-ತಂಗಿ ಜೊತೆ ಬೆಳೆದವರು. ಅವರು ಟಚ್‌ ಮಾಡಿದಾಗ ಕೆಟ್ಟ ಉದ್ದೇಶ ಇರಲಿಲ್ಲ, ಅದು ನನಗೆ ಗೊತ್ತಾಗಿತ್ತು. ನಾವು ಒಂದು ಪಾತ್ರದಲ್ಲಿ ನಟಿಸುವಾಗ ಡೈರೆಕ್ಟರ್‌ ಹೇಳಿದಂತೆ ನಟಿಸಬೇಕಾಗುತ್ತದೆ, ಅಲ್ಲಿ ಎಲ್ಲ ಬಾರಿಯೂ ನಮ್ಮ ಮಾತು ನಡೆಯೋದಿಲ್ಲ” ಎಂದು ಗೌತಮಿ ಜಾಧವ್‌ ಅವರು ಹೇಳಿದ್ದಾರೆ.

BBK 11: ತ್ರಿವಿಕ್ರಮ್ ಪಕ್ಕಾ ಮಾಸ್ಟರ್‌ಮೈಂಡ್‌; ಉದಾಹರಣೆ ಸಮೇತ ಬಿಚ್ಚಿಟ್ಟ ಧನರಾಜ್!‌

ಗೌತಮಿ ಜಾಧವ್‌ ಏನಂದ್ರು? 
“ರಜತ್‌ ಅವರಿಗೆ ಮಾತು ಎಷ್ಟು ವರವೋ ಅಷ್ಟೇ ನೆಗೆಟಿವ್‌ ಕೂಡ ಹೌದು, ನನ್ನ ಬಗ್ಗ ರಜತ್‌ ಅವರು ಮಾತನಾಡಿದ್ದ ಒಂದಷ್ಟು ಪದಗಳು ಬೇಸರ ತಂದಿದೆ. ಆದರೆ ಆ ವ್ಯಕ್ತಿ ಒಳ್ಳೆಯವರು. ಈ ಹಿಂದೆ ರಿಯಾಲಿಟಿ ಶೋ ಮಾಡಿದ್ದ ರಜತ್‌ಗೆ ಶೋನಲ್ಲಿ ಹೇಗೆ ಇರಬೇಕು ಅಂತಿದೆ. ಈಗ ಅವರು ಇನ್ನೊಂದಿಷ್ಟು ಕಂಟ್ರೋಲ್‌ನಲ್ಲಿದ್ದು ಮಾತನಾಡುತ್ತಾರೆ” ಎಂದು ಗೌತಮಿ ಜಾಧವ್‌ ಅವರು ಹೇಳಿದ್ದಾರೆ.

ಅಂದಹಾಗೆ ಗ್ರ್ಯಾಂಡ್‌ ಫಿನಾಲೆಗೆ ಒಂದು ವಾರ ಇದ್ದಾಗಲೇ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಮನೆಯಿಂದ ಹೊರಗಡೆ ಬಂದಿದ್ದಾರೆ. ಇನ್ನು ಮೋಕ್ಷಿತಾ ಪೈ, ಹನುಮಂತ, ರಜತ್‌, ತ್ರಿವಿಕ್ರಮ್‌, ಭವ್ಯಾ ಗೌಡ, ಉಗ್ರಂ ಮಂಜು ಅವರು ಯಾರು ವಿಜೇತರಾಗುತ್ತಾರೆ ಎಂದು ಕಾದು ನೋಡಬೇಕಿದೆ.