ಉದಯ ಟಿವಿಯಲ್ಲಿ 2 ಹೊಸ ಧಾರಾವಾಹಿ ಆ.23ರಿಂದ ಕಾದಂಬರಿ, ನಿನ್ನಿಂದಲೇ ಪ್ರಸಾರ ಆರಂಭ

ಉದಯ ಟಿವಿಯಲ್ಲಿ ಆ.23 ಸೋಮವಾರದಿಂದ ‘ಕಾದಂಬರಿ’ ಹಾಗೂ ‘ನಿನ್ನಿಂದಲೇ’ ಎಂಬ ಎರಡು ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಿವೆ. ಮನೆಯ ಜವಾಬ್ದಾರಿ ಹೊತ್ತ ಹುಡುಗಿ ಗೃಹಿಣಿಯಾಗುವ ಕನಸಿನ ಕತೆ ಕಾದಂಬರಿ ಧಾರಾವಾಹಿಯದು. ಸೋಮವಾರದಿಂದ ಶನಿವಾರವರೆಗೆ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗುವ ‘ಕಾದಂಬರಿ’ ಸೀರಿಯಲ್‌ಗೆ ದರ್ಶಿತ್‌ ಭಟ್‌ ನಿರ್ದೇಶನ, ಗಣಪತಿ ಭಟ್‌ ನಿರ್ಮಾಣವಿದೆ. ಪವಿತ್ರಾ ನಾಯಕ್‌, ರಕ್ಷಿತ್‌ ಮುಖ್ಯಪಾತ್ರದಲ್ಲಿದ್ದಾರೆ.

ನಿರ್ಮಾಪಕರು ನೀಡಿದ ಬೆಳ್ಳಿ ಪೆನ್ನು ನಿರ್ದೇಶಕರಿಗೆ ನೀಡಿದ ಕಿಚ್ಚ

ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 2.30ಕ್ಕೆ ಪ್ರಸಾರವಾಗುವ ‘ನಿನ್ನಿಂದಲೇ’ ಸೀರಿಯಲ್‌ನ ನಿರ್ಮಾಪಕ ರಾಜೇಶ್‌ ನಟರಂಗ. ದಿಲೀಪ್‌ ನಿರ್ದೇಶಕರು. ಎರಡು ಕುಟುಂಬಗಳ ಪ್ರೀತಿ-ವೈಷಮ್ಯದ ಕಥೆ ಈ ಸೀರಿಯಲ್‌ನದು. ಚಿತ್ರಶ್ರೀ, ದೀಪಕ್‌ ನಾಯಕ ನಾಯಕಿಯರು. ಜಯಂತ ಕಾಯ್ಕಿಣಿ ಅವರ ಸಾಹಿತ್ಯ ಈ ಸೀರಿಯಲ್‌ ಹಾಡಿಗಿದೆ.

View post on Instagram
View post on Instagram