ಭರ್ಜರಿ ಬ್ಯಾಚುಲರ್ ಶೋನಲ್ಲಿ ಪ್ರಪೋಸ್ ಮಾಡಿದ ಜಗ್ಗಪ್ಪ ಸುಶ್ಮಿತಾ. 6 ವರ್ಷಗಳ ಲವ್ ಬಗ್ಗೆ ಕೇಳಿ ನೆಟ್ಟಿಗರು ಶಾಕ್‌.... 

ಮಜಾ ಭಾರತ ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ಜಗಪ್ಪ ಮತ್ತು ಸುಶ್ಮಿತಾ 6 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಈ ವಿಚಾರವನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ. ಅಲ್ಲದೆ ಗುರು ಹಿರಿಯ ಮುಂದೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ.

ಕೈಯಲ್ಲಿ 5 ಗುಲಾಬಿ ಹಿಡಿದ ಜಗಪ್ಪ ಡಿಫರೆಂಟ್ ಡಿಫರೆಂಟ್ ಆಗಿ ಪ್ರಪೋಸ್ ಮಾಡುತ್ತಾರೆ. 'ಬೆಂಗಳೂರಿಗೆ ಬಂದಾಗ ಬಟ್ಟೆನೇ ಇಲ್ಲದ ನಂಗೆ ಬದುಕನ್ನು ಕಟ್ಟಿಕೊಟ್ಟಿರುವ ನೀನು ಅದಿಕ್ಕೆ ನೀನು ಅಂದ್ರೆ ನಂಗೆ ತುಂಬಾ ಇಷ್ಟ' ಎಂದು ಮೊದಲ ಗುಲಾಬಿ ಕೊಟ್ಟಿದ್ದಾರೆ. 'ಐ ಲವ್ ಯು' ಎಂದು ಎರಡನೇ ಗುಲಾಬಿ ಕೊಟ್ಟಿದ್ದಾರೆ. 'ಜೀವನದಲ್ಲಿ ಗುರಿ ಮುಂದೆ ಇರ ಬೇಕು ಗುರು ಹಿಂದೆ ಇರಬೇಕು ಎನ್ನುತ್ತಾರೆ. ನನ್ನ ತಾಯಿ ನಂತರ ನೀನೇ ನನ್ನ ಎರಡನೇ ಗುರು' ಎಂದು ಮೂರನೇ ಗುಲಾಬಿ ಕೊಟ್ಟಿದ್ದಾರೆ. 'ಯಾವ ಕೆಲಸನೂ ಬೇಡ ನನ್ನ ಜೀವನ ಇಲ್ಲಿಗೆ ಮುಗಿಯಿತ್ತು ಇಲ್ಲಿಂದ ಹೊರಡಬೇಕು ಎಂದು ನಿರ್ಧಾರ ಮಾಡಿದಾಗ ಇಲ್ಲ ನಿನ್ನಲ್ಲಿ ಏನೋ ಒಂದು ಇದೆ ನೀನು ಇಲ್ಲೇ ಇರಬೇಕು ಇಲ್ಲೇ ಬೆಳೆಯಬೇಕು ಎಂದು ಪ್ರೋತ್ಸಾಹ ಕೊಟ್ಟು ನನ್ನ ಎರಡನೇ ತಾಯಿ ಆಗಿರುವುದಕ್ಕೆ' ಎಂದು ಹೇಳಿ ನಾಲ್ಕನೇ ಹೂ ಕೊಡುತ್ತಾರೆ. 'ಇಷ್ಟು ದಿನ ನಾನು ನೋಡಿದ್ದೇಲ್ಲಾನೂ ಇಂದು ಪ್ರಪಂಚ ನಿನ್ನ ಮದುವೆಯಾಗುತ್ತಿರುವೆ...ಇನ್ನು ಮುಂದೆ ನೀನೇ ನನ್ನ ಪ್ರಪಂಚ' ಎಂದು ಐದನೇ ಗುಲಾಬಿ ಕೊಡುತ್ತಾರೆ. ನನ್ನಿಂದ ಏನೇ ತಪ್ಪಾಗಿದ್ದರೂ ಏನೇ ಹೇಳಿದರೂ ದಯವಿಟ್ಟು ಕ್ಷಮಿಸಿ ಬಿಡು ಎಂದು ಮಂಡಿಯೂರುತ್ತಾರೆ.

ಬಿಗ್ ಬಾಸ್‌ನಲ್ಲಿರೋ ಬೆಂಕಿ ಬಿರುಗಾಳಿ ನೀನೇ; ತನಿಷಾ ಆಟದ ಬಗ್ಗೆ ನಿಮ್ಮ ಅಭಿಪ್ರಾಯವೇನು?

'ಜೀವನದಲ್ಲಿ ಸರಿಯಾಗಿ ಐ ಲವ್ ಯು ಅಂತಾನೂ ಹೇಳಿರಲಿಲ್ಲ. ಖುಷಿ ಆಯ್ತು' ಎಂದು ಸುಶ್ಮಿತಾ ಗುಲಾಬಿ ಕೊಡುತ್ತಾರೆ. ಮೊದಲ ಗುಲಾಬಿ ನನ್ನ ಜೀವನಕ್ಕೆ ಕಾಲಿಟ್ಟಿದ್ದಕ್ಕೆ, ಎರಡನೇ ಗುಲಾಬಿ ನನಗೆ ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಕ್ಕೆ ಇಂಡಸ್ಟ್ರಿಯಲ್ಲಿ ಇಷ್ಟು ವರ್ಷದಿಂದ ಇರಲು ಸಾಧ್ಯವಾಗಿದ್ದು. ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಾ ನನ್ನ ತಂಗಿಯನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿರುವುದಕ್ಕೆ ಮೂರನೇ ಗುಲಾಬಿ. ನಾನು ಎಲ್ಲೇ ಹೋದರು ಜಗಪ್ಪ ಅನ್ನೋ ಹೆಸರಿನಿಂದ ನನ್ನನ್ನು ಕಂಡು ಹಿಡಿಯುತ್ತಾರೆ ಅದು ನನಗೆ ಹೆಮ್ಮೆ ಎಂದು ನಾಲ್ಕನೇ ಗುಲಾಬಿ ಕೊಡುತ್ತಾರೆ. ನಾನು ನಿಮ್ಮನ್ನು ಬಿಟ್ಟು ಹೋಗಲ್ಲ ಯಾವುದೇ ಕಾರಣಕ್ಕೂ ನೀವು ನನ್ನನ್ನು ಬಿಟ್ಟು ಹೋಗಬಾರದು ಎಂದು ಐದನೇ ಗುಲಾಬಿ ಕೊಡುತ್ತಾರೆ.