ಕನ್ನಡ ಕಿರುತೆರೆ ನಟಿ ಇಶಿತಾ ವರ್ಷ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಪತ್ನಿಯ ಹುಟ್ಟುಹಬ್ಬಕ್ಕೆ ಡ್ಯಾನ್ಸ್ ಮಾಸ್ಟರ್, ಕೊರಿಯೋಗ್ರಾಫರ್ ಮುರುಗಾನಂದ ರೊಮ್ಯಾಂಟಿಕ್ ವಿಡಿಯೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಆ ಮೂಲಕ ಟ್ರೊಲ್ ಗಳಿಗೆ ತಿರುಗೇಟು ಕೊಟ್ಟಿದ್ದಾರೆ. 

ಇಶಿತಾ ವರ್ಷ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಪತಿ ಮುರುಗಾನಂದ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಇಶಿತಾ ವರ್ಷ. ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಮಾಯಾ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ಇಶಿತಾ , ಕಳೆದ 10 -15 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಪಾತ್ರದ ಮೂಲಕ ಮಿಂಚುತ್ತಿದ್ದಾರೆ. ಇತ್ತೀಚಿಗೆ ಇಶಿತಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಪತ್ನಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತಿ ಡ್ಯಾನ್ಸ್ ಮಾಸ್ಟರ್ ಹಾಗೂ ಕೊರಿಯೋಗ್ರಾಫರ್ ಆಗಿರುವ ಮುರುಗಾನಂದ ಇಶಿತಾ ಜೊತೆಗಿನ ಮುದ್ದಾದ ರೋಮ್ಯಾಂಟಿಕ್ ವಿಡಿಯೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಜೊತೆಗೆ ಇಶಿತಾ ತಮ್ಮ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನ ಹೇಳಿದ್ದಾರೆ. ಆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಡಿವೋರ್ಸ್ ರೂಮರ್ಸ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ವೈರಲ್ ಆಗ್ತಿದೆ ಮುದ್ದಾದ ವಿಡಿಯೋ

ಊರಲ್ಲಿ ಯಾರಿಲ್ಲ ನನ್ನಂತ ಹುಡುಗ ಅಷ್ಟೊಂದು ನಿನ್ನನ್ನು ಪ್ರೀತಿಸುವೆ ಎನ್ನುವ ಸಿದ್ ಶ್ರೀರಾಮ್ ಹಾಡಿರುವ ಮಧುರವಾದ ಪ್ರೇಮಗೀತೆಗೆ ಮತ್ತಷ್ಟು ಮುದ್ದಾಗಿ ಮುರುಗ ಮತ್ತು ಇಶಿತಾ ಹೆಜ್ಜೆ ಹಾಕಿದ್ದಾರೆ. ಇಶಿತಾ ಹುಟ್ಟುಹಬ್ಬದ ದಿನ ಈ ವಿಡಿಯೋವನ್ನು ಹಂಚಿಕೊಂಡಿರುವ ಮುರುಗ “ಹುಟ್ಟುಹಬ್ಬದ ಶುಭಾಶಯಗಳು, ನನ್ನ ಪ್ರೀತಿಯ ಪತ್ನಿ ಇಶಿತಾ, ನೀನು ಜಗತ್ತಿನ ಎಲ್ಲಾ ಸಂತೋಷ ಪಡೆಯಲು ಅರ್ಹಳು. (ಮತ್ತು ನನ್ನಂತಹ ಅದ್ಭುತ ಗಂಡನೂ ಸಹ). ಎಲ್ಲದರಲ್ಲೂ ನನ್ನ ಪಾಲುದಾರರಾಗಿದ್ದಕ್ಕಾಗಿ ಧನ್ಯವಾದಗಳು. ನೀನು ನನ್ನ ಹೆಂಡತಿ ಅಷ್ಟೇ ಅಲ್ಲ, ನನ್ನ ಆತ್ಮೀಯ ಸ್ನೇಹಿತೆ ಮತ್ತು ನನ್ನ ದೊಡ್ಡ ಶಕ್ತಿ ಕೂಡ. ಪ್ರತಿ ದಿನ ಕಳೆದಂತೆ ನಿನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಲೇ ಇರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಮುರುಗಾ ಪತ್ನಿಯ ಬಗ್ಗೆ ಮುದ್ದಾಗಿ ಬರೆದಿದ್ದಾರೆ.

ಅಭಿಮಾನಿಗಳ ಕಾಮೆಂಟ್

ಈ ಮುದ್ದಾದ ವಿಡಿಯೋಗೆ ಅಭಿಮಾನಿಗಳು, ನಟರು ಕಾಮೆಂಟ್ ಮಾಡಿ ಶುಭ ಕೋರಿದ್ದಾರೆ. ನಟಿ ಹಾಗೂ ಇಶಿತಾ ವರ್ಷ ಸ್ನೇಹಿತೆಯಾಗಿರುವ ನೇಹಾ ಗೌಡ ಕಾಮೆಂಟ್ ಮಾಡಿ ನೀನು ಅವಳನ್ನು ಪ್ರೀತಿಸುವ ರೀತಿ ನನಗೆ ತುಂಬಾ ಇಷ್ಟ. ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ ಎಂದು ಶುಭ ಹಾರೈಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಸೋಶಿಯಲ್ ಮೀಡೀಯಾದಲ್ಲಿ ನೀವಿಬ್ಬರು ಡಿವೋರ್ಸ್ ಪಡೆಯುತ್ತೀರಿ ಎನ್ನುವ ಸುದ್ದಿ ಕೇಳಿ ಶಾಕ್ ಆಗಿತ್ತು. ಆದರೆ ಇದೀಗ ಬಹಳ ಸಮಯದ ಬಳಿಕ ನಿಮ್ಮಿಬ್ಬರನ್ನು ಜೊತೆಯಾಗಿ ನೋಡಿ ತುಂಬಾನೆ ಖುಷಿಯಾಯಿತು ಎಂದಿದ್ದಾರೆ. ಇನ್ನೂ ಕೆಲವರು ಕಾಮೆಂಟ್ ಮಾಡಿ, ಮುರುಗಾ ತುಂಬ ಒಳ್ಳೆಯ ಮನುಷ್ಯ, ಆದರೆ ಇಶಿತಾ ಯಾವತ್ತೂ ಮುರುಗಾ ಜೊತೆಗಿನ ಫೋಟೊ ಪೋಸ್ಟ್ ಮಾಡುವುದಿಲ್ಲ, ಮುರುಗಾ ಹಾಕಿದ ಫೋಟೊಗಳಿಗೆ ಲೈಕ್, ಕಾಮೆಂಟ್ ಎರಡೂ ಮಾಡುವುದಿಲ್ಲ. ಹಿಂದೊಮ್ಮೆ ಇಶಿತಾ ತಮ್ಮ ಸಂದರ್ಶನದಲ್ಲಿ ನನಗೆ ಪರ್ಸನಲ್ ವಿಷಯವನ್ನು ಪರ್ಸನಲ್ ಆಗಿ ಇಡೋದಕ್ಕೆ ಇಷ್ಟ ಎಂದಿದ್ದರು. ಪ್ರೀತಿ ಮಾಡಿ ಮದುವೆಯಾಗಿದ್ದಾರೆ ಎಂದ ಮಾತ್ರಕ್ಕೆ, ಎಲ್ಲಾ ಕಪಲ್ ಫೋಟೊಗಳನ್ನು ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಳ್ಳಲೇಬೇಕು ಎಂದೇನಿಲ್ಲ ಅಲ್ವಾ? ಇಬ್ಬರು ಜೊತೆಯಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇಬ್ಬರು ಸಂತೋಷದಿಂದ ಇದ್ರೆ ಅದಕ್ಕಿಂತ ಮತ್ತೇನು ಬೇಕು ಅಲ್ವಾ?

View post on Instagram