- Home
- Entertainment
- TV Talk
- Amruthadhaare Serial: ಚೆನ್ನಾಗಿ ತಿರುಗಿಸಿ ಕೊಟ್ಟ ಕರ್ಮ; ಎಲ್ಲಿ ಬಿದ್ನೋ ಅಲ್ಲೇ ಎದ್ದ ಗೌತಮ್ ದಿವಾನ್!
Amruthadhaare Serial: ಚೆನ್ನಾಗಿ ತಿರುಗಿಸಿ ಕೊಟ್ಟ ಕರ್ಮ; ಎಲ್ಲಿ ಬಿದ್ನೋ ಅಲ್ಲೇ ಎದ್ದ ಗೌತಮ್ ದಿವಾನ್!
Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಕಥೆ ಈಗ ನಿಜಕ್ಕೂ ರೋಚಕ ಘಟ್ಟಕ್ಕೆ ಬಂದಿದೆ. ಉದ್ಯಮಿ ಗೌತಮ್ ದಿವಾನ್ ತನ್ನ ಎಲ್ಲ ಆಸ್ತಿಯನ್ನು ಮಲಸಹೋದರ ಜಯದೇವ್ ದಿವಾನ್‌ಗೆ ನೀಡಿದ್ದನು. ಈಗ ಅವನು ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾನೆ. ಅವನು ತನ್ನ ಆಸ್ತಿಯನ್ನು ಮರಳಿ ಪಡೆಯುವ ಹಾಗೆ ಕಾಣ್ತಿದೆ.

ಪ್ರೋಮೋ ರಿಲೀಸ್ ಆಗಿದೆ
ತನ್ನ ಸಾಮ್ರಾಜ್ಯ ಅಥವಾ ಪೂರ್ವಜರಿಂದ ಬಂದ ಆಸ್ತಿ ಎಲ್ಲವೂ ಪರರ ಪಾಲಾಗಬಾರದೆಂದು ಗೌತಮ್ ದಿವಾನ್ ತಾನೇ ಆ ಆಸ್ತಿಯನ್ನು ಹರಾಜಿನಲ್ಲಿ ಖರೀದಿ ಮಾಡುತ್ತಿರುವ ಹಾಗೆ ಪ್ರೋಮೋ ರಿಲೀಸ್ ಆಗಿದೆ. ಈ ದಿನಕ್ಕೋಸ್ಕರ ವೀಕ್ಷಕರು ಕಾಯುತ್ತಿದ್ದಾರೆ.
ಧಾರಾವಾಹಿಯ ಕಥೆ ಏನು?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಯಶಸ್ವಿ ಉದ್ಯಮಿ. ತಮ್ಮನ ಮೋಸದಿಂದ ಅವನು ಸಿಕ್ಕಾಪಟ್ಟೆ ಕಷ್ಟಪಟ್ಟನು. ಈಗ ಅವನು ಹೊಸ ಆಫೀಸ್ ಆರಂಭಿಸಿದ್ದಾನೆ. ಜಯದೇವ್ ಅನೈತಿಕ ಕೆಲಸ ಮಾಡಿ, ಮೋಸದಿಂದ ಈಗ ಇರುವ ಹಣವನ್ನು ಕಳೆದುಕೊಂಡಿದ್ದಾನೆ. ಹೀಗಾಗಿ ಆಸ್ತಿಯನ್ನೆಲ್ಲವನ್ನು ಹರಾಜಿಗೆ ಹಾಕಲಾಗಿದೆ ಎಂದು ಪ್ರೋಮೋದಲ್ಲಿ ಕಾಣಿಸುತ್ತಿದೆ.
ಅಖಿಲಾಂಡೇಶ್ವರಿ ಆಗಮನ
ಆಸ್ತಿಯನ್ನು ಬೇರೆಯವರಿಗೆ ಬಿಟ್ಟುಕೊಡಬಾರದು ಎಂದು ಗೌತಮ್ ಈ ಆಸ್ತಿ ಖರೀದಿ ಮಾಡಲು ಮುಂದಾಗ್ತಾನೆ. ಇದಕ್ಕಾಗಿ ಅವನು ಪಾರು ಧಾರಾವಾಹಿ ಅಖಿಲಾಂಡೇಶ್ವರಿಯ ಸಹಾಯ ಪಡೆಯುತ್ತಾನೆ. ಹೌದು, ಈ ಸೀರಿಯಲ್‌ನಲ್ಲಿ ಅಖಿಲಾಂಡೇಶ್ವರಿ ಆಗಮನ ಕೂಡ ಆಗಿದೆ.
ಸೀರಿಯಲ್ ಮುಗಿಯತ್ತಾ?
ಜಯದೇವ್ ಸಂಪೂರ್ಣ ನಾಶ ಆದ್ಮೇಲೆ ಗೌತಮ್ ಮಗಳು ಯಾರು? ಎಲ್ಲಿದ್ದಾಳೆ ಎಂದು ಕಂಡುಹಿಡಿಯಬೇಕು ಅಷ್ಟೇ. ಅದನ್ನು ಬಿಟ್ಟರೆ ಈ ಸೀರಿಯಲ್‌ನಲ್ಲಿ ಸದ್ಯ ರೋಚಕ ಕಥೆ ಇಲ್ಲ. ಹೀಗಾಗಿ ಧಾರಾವಾಹಿ ಅಂತ್ಯ ಮಾಡಿದರೂ ಆಶ್ಚರ್ಯ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

