Asianet Suvarna News Asianet Suvarna News

ಬಿಗ್ ಬಾಸ್ ಮನೆಯಲ್ಲಿ ಈಶಾನಿಗೆ ಹೆಲ್ಪ್ ಮಾಡುತ್ತಿರುವ ರಕ್ಷಕ್, ಸ್ನೇಹಿತ್ ಕತೆ ಏನಾಯ್ತು?

ಅದು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದ 24ಗಂಟೆ ಉಚಿತನೇರಪ್ರಸಾರದಲ್ಲಿ ದಾಖಲಾಗಿದೆ. ಇಶಾನಿ ಅವರೊಳಗಿನ ರಾಪ್‌ ಗರ್ಲ್‌ ಮಾತಾಡತೊಡಗಿದ್ದಕ್ಕೆ ಸಾಕ್ಷಿಯಾಗಿದ್ದು, ಬುಲೆಟ್‌ ರಕ್ಷಕ್‌. ಬರೀ ಸಾಕ್ಷಿಯಾಗಿದ್ದಷ್ಟೇ ಅಲ್ಲ, ಅವರ ಸಹಾಯಕ್ಕೂ ನಿಂತಿದ್ದಾರೆ!

Ishani writes song in colors kannada Bigg Boss Kannada season 10 srb
Author
First Published Oct 27, 2023, 12:27 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ಮೂರನೆಯ ವಾರದ ಕೊನೆ ತಲುಪಿದೆ. ಇನ್ನೇನು ನಾಳೆ ಕಿಚ್ಚ ಸುದೀಪ್ ನಡೆಸಿಕೊಂಡುವ 'ಕಿಚ್ಚನ್ ಪಂಚಾಯಿತಿ ಎಪಿಸೋಡ್ ನೋಡಲಿದ್ದೀರಿ. ರಾಪ್ ಸಂಗೀತದ ಮೂಲಕವೇ ಗುರ್ತಿಸಿಕೊಂಡಿದ್ದರೂ ಇಶಾನಿ ಬಿಗ್‌ಬಾಸ್‌ ಮನೆಯೊಳಗೆ ಬಂದ ಮೇಲೆ ಅವರ ರಾಪ್‌ ಪ್ರೇಮ ವ್ಯಕ್ತಗೊಂಡಿದ್ದು ವಿರಳವೇ. ಮನೆಯೊಳಗಿನ ವಾತಾವರಣಕ್ಕೆ ಹೊಂದಿಕೊಳ್ಳುವ ಭರ, ಮೈಕೆಲ್‌ ಜೊತೆಗಿನ ಸ್ಪೆಷಲ್ ಫ್ರೆಂಡ್‌ಷಿಪ್‌, ಟಾಸ್ಕ್‌ಗಳ ಕಾವು, ಜಗಳ ಈಎಲ್ಲದರಿಂದ ಅವರೊಳಗಿನ ರಾಪ್‌ ಗರ್ಲ್‌ ಬಚ್ಚಿಟ್ಟುಕೊಂಡಂತಿದ್ದಳು. 

ಆದರೆ ಒಳಗೆ ಬಚ್ಚಿಟ್ಟುಕೊಂಡಿದ್ದನ್ನು ಹೊರತೆಗೆದು ಅಸಲಿ ಮುಖ ತೋರಿಸುವುದೇ ಬಿಗ್‌ಬಾಸ್‌ ರಿಯಾಲಿಟಿ ಷೋನ ಸ್ಪೆಷಾಲಿಟಿ ಅಲ್ಲವೇ? ಅದು ಈ ಸೀಸನ್‌ನಲ್ಲಿ ಕೂಡ ಪ್ರತಿದಿನ ಸಾಬೀತಾಗುತ್ತಿದೆ. ಮನೆಯೊಳಗೆ ಪ್ರವೇಶಿಸುವಾಗ ಇದ್ದ ಹಾಗೆ ಯಾರೂ ಈಗ ಇಲ್ಲ. ದಿನಕ್ಕೊಂದು ಹೊಸ ಹೊಸ ರೂಪಗಳು ಅವರೊಳಗಿಂದ ಹೊರಬೀಳುತ್ತಿವೆ. ಹಾಗೆಯೇ ಇಶಾನಿ ಅವರ ಮನಸೊಳಗೆ ಬಚ್ಚಿಟ್ಟುಕೊಂಡಿದ್ದ ರಾಪ್‌ ಗರ್ಲ್‌ ನಿಧಾನಕ್ಕೆ ಹೊರಬೀಳುತ್ತಿದ್ದಾಳೆ. 

ರೂಟ್ ಬದಲಿಸಿದ ಕಾರ್ತಿಕ್ ಮಹೇಶ್, ಸಂಗೀತಾ ಸ್ನಾನಕ್ಕೆ ಹೋದಾಗ ನಮ್ರತಾ ಜತೆ ಲವ್ವಿ ಡವ್ವಿ

ಅದು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದ 24ಗಂಟೆ ಉಚಿತನೇರಪ್ರಸಾರದಲ್ಲಿ ದಾಖಲಾಗಿದೆ. ಇಶಾನಿ ಅವರೊಳಗಿನ ರಾಪ್‌ ಗರ್ಲ್‌ ಮಾತಾಡತೊಡಗಿದ್ದಕ್ಕೆ ಸಾಕ್ಷಿಯಾಗಿದ್ದು, ಬುಲೆಟ್‌ ರಕ್ಷಕ್‌. ಬರೀ ಸಾಕ್ಷಿಯಾಗಿದ್ದಷ್ಟೇ ಅಲ್ಲ, ಅವರ ಸಹಾಯಕ್ಕೂ ನಿಂತಿದ್ದಾರೆ!

ಈವತ್ತಿಡೀ ಇಶಾನಿ ಮ್ಯೂಸಿಕ್ ಮೂಡ್‌ನಲ್ಲಿಯೇ ಇದ್ದಂತಿತ್ತು. ನಡೆದಾಡುತ್ತಿರುವಾಗ, ಹರಟೆಗೆಂದು ಕೂತಿದ್ದಾಗಲೆಲ್ಲ ಗುನುಗುತ್ತಿದ್ದರು. 
ಡಿಪ್ರೆಶನ್‌ಗೂ ಜಾರಿದ್ದ ಇಶಾನಿ: ಕೆಲವು ವರ್ಷಗಳ ಹಿಂದೆ ಇಶಾನಿ ಡಿಪ್ರೆಶನ್‌ಗೆ ಹೋಗಿದ್ದರಂತೆ. ಇದರ ಕುರಿತೂ ಈವತ್ತು ಬಿಗ್‌ಬಾಸ್‌ ಮನೆಯಲ್ಲಿ ಅವರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿನಯ್, ಇಶಾನಿ, ನಮ್ರತಾ, ಮೈಕಲ್ ಎಲ್ಲರೂ ಕೂತು ಡಿಪ್ರೆಶನ್‌ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗೋ ಪ್ರತಿಯೊಂದು ಧಾರಾವಾಹಿನಲ್ಲೂ ಎರಡೆರಡು ಹೀರೋಯಿನ್, ಥೂ

ಮೈಕಲ್ ಮತ್ತು ನಮ್ರತಾ ಕೂಡ ಹಿಂದೊಮ್ಮೆ ಡಿಪ್ರೆಶನ್‌ಗೆ ಜಾರಿದ್ದರಂತೆ. ಮೈಕಲ್‌ ಅವರಿಗೆ ಡಿಪ್ರೆಶನ್‌ನಿಂದ ಹೊರಬರಲು ವರ್ಕೌಟ್‌ ತುಂಬ ಸಹಾಯ ಮಾಡಿದೆ. ನಮ್ರತಾಗೆ ಡಾನ್ಸ್‌ ಕೂಡ ಸಹಾಯ ಮಾಡಿತ್ತಂತೆ. 'ನಾನು ಡಿಪ್ರೆಶನ್‌ನಿಂದ ಹೊರಗೆ ಬರಲು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಆಗುತ್ತಿರಲಿಲ್ಲ. ಸಂಗೀತ ಕ್ಲಾಸ್‌, ಡಾನ್ಸ್‌ ಕ್ಲಾಸ್‌ ಎಲ್ಲದಕ್ಕೂ ಹೋಗುತ್ತಿದ್ದೆ. ಆದರೆ ಮನಸ್ಸನ್ನು ಆವರಿಸಿದ ಖಿನ್ನತೆಯಿಂದ ಹೊರಬರುವುದು ಸುಲಭವಾಗಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲ ನನಗೆ ಯಾವ ಅವಕಾಶಗಳೂ ಸಿಗಲಿಲ್ಲ. ಇದೂ ನಾನು ಖಿನ್ನತೆಗೆ ಜಾರಲು ಕಾರಣವಾಗಿತ್ತು' ಎಂದು ಅವರು ಹೇಳಿಕೊಂಡಿದ್ದಾರೆ.

ಹಾಡು ಹುಟ್ಟಿದ ಬಗೆ: ಕೊನೆಗೂ ತಮ್ಮನ್ನು ಖಿನ್ನತೆಯಿಂದ ಪಾರುಮಾಡಿದ ಸಂಗೀತದ ಶಕ್ತಿಯನ್ನು ಮನೆಯ ಸದಸ್ಯರಿಗೂ ತೋರಿಸಬೇಕು ಎಂದು ಅವರುನ ನಿರ್ಧರಿಸಿರಬೇಕು. ಇಶಾನಿ ಹಾಡು ಕಟ್ಟಲು ನಿರ್ಧರಿಸಿದ್ದರು. ಎಲ್ಲರೂ ಮಾತಾಡುತ್ತಿರುವಾಗ ಇಶಾನಿ ಹಾಳೆ ಪೆನ್ನು ಹಿಡಿದುಕೊಂಡು ಬಾಯಲ್ಲಿ ಏನೋ ಗುನುಗುತ್ತ ಮನಸ್ಸಿನೊಳಗೆ ಹುಟ್ಟುತ್ತಿರುವ ಹಾಡಿಗೆ ಅಕ್ಷರರೂಪ ನೀಡುತ್ತಿದ್ದರು. 
ನಾನು ಕ್ವೀನ್ ಇಶಾನಿ
ನಾನು ರಾಪರ್ ರಾಣಿ
ನಾನು ಏನ್ ಅಂತ ನನಗೆ ಗೊತ್ತು

ಇದು ಬಿಗ್ ಬಾಸ್
ಐ ಆಮ್‌ ಲೇಡಿ ಬಾಸ್ 
ನಾನು ಫೈಟರ್ ಲೇಡಿ
ಡೊಂಟ್ ಗಿವ್ ಅ 
ಆಚೆ ನನ್ನ ಫ್ಯಾನ್ಸು
ಕೊಡ್ರೀ ಒಂದು ಚಾನ್ಸು 
ಆಗ್ರೀನ್ ನಾನು ಬೌನ್ಸ್
ಇದೇ ನನ್ನ ರೂಲ್ಸು
-ಹೀಗೆ ಲಿರಿಕ್ಸ್‌ ಮತ್ತೆ ಮತ್ತೆ ಹೇಳಿಕೊಳ್ಳುತ್ತ, ಅದನ್ನು ತಿದ್ದಿಕೊಳ್ಳುತ್ತ ಬರೆದುಕೊಳ್ಳುತ್ತಿದ್ದಾರೆ.
ನಂತರ ಮನೆಯೊಳಗೆ ಬಂದು ಕೂತ ಮೇಲೆ ರಕ್ಷಕ್ ಕೂಡ ಅವರ ಲಿರಿಕ್ಸ್‌ಗೆ ತಮ್ಮೆರಡು ಸಾಲು ಸೇರಿಸಿದ್ದಾರೆ. 
'ಕೇಳ್ರೋ ನನ್ನ ಫ್ಯಾನ್ಸು
ನಾನೇ ಇಲ್ಲಿ ಬಾಸು'-ಇದು ರಕ್ಷಕ್ ಸೇರಿಸಿದ ಸಾಲುಗಳು. ಹಾಡು ಇನ್ನೂ ಮುಂದುವರಿಯುತ್ತಲೇ ಇದೆ… 

ಇಶಾನಿ ಇಷ್ಟೊಂದು ಉತ್ಸಾಹದಿಂದ ಕಟ್ಟುತ್ತಿರುವ ಹಾಡು ಪೂರ್ಣಗೊಂಡ ಮೇಲೆ ಹೇಗಿರಬಹುದು? ರಾಪ್‌ ಸಾಂಗ್ ಕಂಪೋಸ್ ಆದಮೇಲೆ ಹೇಗಿರುತ್ತದೆ? ಅದನ್ನು ಅವರು ಎಲ್ಲಿ ಹೇಗೆ ಹಾಡುತ್ತಾರೆ? ಅದಕ್ಕೆ ಮನೆಯವರ ರಿಯಾಕ್ಷನ್‌ ಹೇಗಿರುತ್ತದೆ ಎಂಬುದೆಲ್ಲ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.
 

Follow Us:
Download App:
  • android
  • ios