ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗೋ ಪ್ರತಿಯೊಂದು ಧಾರಾವಾಹಿನಲ್ಲೂ ಎರಡೆರಡು ಹೀರೋಯಿನ್, ಥೂ
ಅಲ್ಲಾ, ನಾನೇನು ತಪ್ಪು ಮಾಡಿದೆ? ನಾನು ಮುಗ್ಧೆ, ನಿಮ್ಮನ್ನು ಮನಸಾರೆ ಲವ್ ಮಾಡಿದ್ದೇ ತಪ್ಪಾ? ನನ್ನ ಲವ್ ಮಾಡೋ ನಾಟ್ಕ ಮಾಡ್ತಾ ಇನ್ನೊಬ್ಳನ್ನ ಲವ್ ಮಾಡಿದ್ರೆ ನಾನು ಸುಮ್ನೆ ಇರಬೇಕಾ? ಇರ್ತೀನಿ ಅಂದಕೊಂಡ್ಯಾ? ರಾಗಿಣಿ ಕೋಪ ಹಾಗೂ ನೋವಿನಿಂದ ಮಿಥುನ್ ಮುಂದೆ ಮಾತನಾಡುತ್ತಿದ್ದರೆ, ಮಿಥುನ್ ಸೈಲೆಂಟ್‌ಗೆ ಶರಣಾಗಿದ್ದಾನೆ.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಗೃಶಪ್ರವೇಶ ಸೀರಿಯಲ್ ಹೊಸ ತಿರುವು ಪಡೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಈ ಸೀರಿಯಲ್‌ನಲ್ಲಿ ನಾಯಕ ಮಿಥುನ್ ಅಕ್ಕ ಪಲ್ಲವಿ ಹಾಗೂ ತಂಗಿ ರಾಗಿಣಿ ಇಬ್ಬರನ್ನೂ ಲವ್ ಮಾಡುತ್ತಾನೆ. ಪಲ್ಲವಿ ಅಂದುಕೊಂಡು ರಾಗಿಣಿಗೆ ಐ ಲವ್ ಯೂ ಅಂತ ಹೇಳುತ್ತಾನೆ. ಆದರೆ, ಒಂದು ಹಂತದಲ್ಲಿ ರಾಗಿಣಿಗೆ ಅದು ಅನುಭವವಾಗುತ್ತದೆ. ರಾಗಿಣಿ ತಿರುಗಿ ಬೀಳುತ್ತಾಳೆ. ಮಿಥುನ್ ಬಳಿ ರಾಗಿಣಿ ಏನು ಹೇಳುತ್ತಾಳೆ ನೋಡಿ..
ನೀನು ಬೆನ್ನು ಹಾಕಿ ಐ ಲವ್ ಯೂ ಎಂದು ಹೇಳಿದ್ದು ನನಗಲ್ಲ, ಇನ್ಯಾವಳಿಗೋ! ನನಗೆ ಈಗ ಅದು ಅರ್ಥವಾಗುತ್ತಿದೆ. ನಾನು ಎಷ್ಟು ದಡ್ಡಿ ಅಲ್ವ? ನಾನು ನಿನ್ನ ಎಷ್ಟೊಂದು ಲವ್ ಮಾಡ್ತಿದೀನಿ ಗೊತ್ತಾ? ಎರಡು ವರ್ಷದಿಂದ ನಿನ್ ಮೇಲೆ ಪ್ರಾಣಾನೇ ಇಟ್ಕೊಂಡಿದೀನಿ. ಆದ್ರೆ, ನೀನು ನನ್ನ ಬಿಟ್ಟು ಇನ್ನೊಬ್ಳನ್ನ ಲವ್ ಮಾಡೋಕೆ ಈಸಿಯಾಗಿ ಬಿಟ್ಬಿಡ್ತನಿ ಅಂದ್ಕೊಂಡ್ಯಾ? ಖಂಡಿತ ಇಲ್ಲ. ಏನೇ ಆಗ್ಲಿ ನಾನು ನಿನ್ನ ಪಡೆಯೋಕೆ ಎಷ್ಟು ಆಗುತ್ತೋ ಅಷ್ಟೂ ಪ್ರಯತ್ನ ಪಡ್ತೀನಿ.
ರೂಟ್ ಬದಲಿಸಿದ ಕಾರ್ತಿಕ್ ಮಹೇಶ್, ಸಂಗೀತಾ ಸ್ನಾನಕ್ಕೆ ಹೋದಾಗ ನಮ್ರತಾ ಜತೆ ಲವ್ವಿ ಡವ್ವಿ
ಅಲ್ಲಾ, ನಾನೇನು ತಪ್ಪು ಮಾಡಿದೆ? ನಾನು ಮುಗ್ಧೆ, ನಿಮ್ಮನ್ನು ಮನಸಾರೆ ಲವ್ ಮಾಡಿದ್ದೇ ತಪ್ಪಾ? ನನ್ನ ಲವ್ ಮಾಡೋ ನಾಟ್ಕ ಮಾಡ್ತಾ ಇನ್ನೊಬ್ಳನ್ನ ಲವ್ ಮಾಡಿದ್ರೆ ನಾನು ಸುಮ್ನೆ ಇರಬೇಕಾ? ಇರ್ತೀನಿ ಅಂದಕೊಂಡ್ಯಾ? ರಾಗಿಣಿ ಕೋಪ ಹಾಗೂ ನೋವಿನಿಂದ ಮಿಥುನ್ ಮುಂದೆ ಮಾತನಾಡುತ್ತಿದ್ದರೆ, ಮಿಥುನ್ ಸೈಲೆಂಟ್‌ಗೆ ಶರಣಾಗಿದ್ದಾನೆ. ಮಿಥುನ್ ಮುಂದೇನು ಮಾಡುತ್ತಾನೆ? ಸದ್ಯ ಕೋಪದಿಂದ ಕುದಿಯುತ್ತಿರುವ ರಾಗಿಣಿಯ ಮುಂದಿನ ಪ್ಲಾನ್ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದರೆ ಕಲರ್ಸ್ ಕನ್ನಡದಲ್ಲಿ ಮದ್ಯಾನ್ಹ 2.00 ಗಂಟೆಗೆ ಪ್ರಸಾರವಾಗುತ್ತಿರುವ'ಗೃಹಪ್ರವೇಶ' ಸೀರಿಯಲ್ ನೋಡಬೇಕು.
ರಾಮ್ ಲೀಲಾ ಚಿತ್ರಕ್ಕೆ ರಣವೀರ್ ಸಿಂಗ್ ಜೋಡಿ ಕರೀನಾ ಆಗಬೇಕಿತ್ತು, ದೀಪಿಕಾ ಎಂಟ್ರಿ ಹಿಂದಿನ ಸೀಕ್ರೆಟ್ ರಿವೀಲ್!
ಅಂದಹಾಗೆ, ಈ ಸೀರಿಯಲ್ ಪ್ರೋಮೋದಲ್ಲಿ ತೋರಿಸುತ್ತಿರುವಂತೆ ನಾಯಕ ಮಿಥುನ್ ಅಕ್ಕತಂಗಿಯರಿಬ್ಬರನ್ನೂ ಪ್ರೀತಿಸುತ್ತಿದ್ದಾನೆ. ಅಕ್ಕ ಅಂದುಕೊಂಡು ತಂಗಿಗೆ ಐ ಲವ್ ಯೂ ಅಂದಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಈ ಸೀರಿಯಲ್ ಪ್ರೊಮೋಗೆ ಸಾಕಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ. ಅದರಲ್ಲೊಂದು 'ಈ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗೋ ಪ್ರತಿಯೊಂದು ಧಾರಾವಾಹಿ ನಲ್ಲೂ ಎರಡೆರಡು ಹೀರೋಯಿನ್ ತೂ' ಎಂದಿದೆ. ಅದೆಷ್ಟೋ ಬಗೆಬಗೆಯಲ್ಲಿ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.