ರೂಟ್ ಬದಲಿಸಿದ ಕಾರ್ತಿಕ್ ಮಹೇಶ್, ಸಂಗೀತಾ ಸ್ನಾನಕ್ಕೆ ಹೋದಾಗ ನಮ್ರತಾ ಜತೆ ಲವ್ವಿ ಡವ್ವಿ
ನಾಯಕನನ್ನು ಆಯ್ದುಕೊಳ್ಳುವ ವಿಷಯದಲ್ಲಿ ಕಾರ್ತಿಕ್ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯ ಹುಟ್ಟಿತ್ತು. ಸಂಗೀತಾ 'ನೀನು ಫೇಕ್' ಎಂದು ಹೇಳಿದ್ದು ಕಾರ್ತಿಕ್ ಅವರನ್ನು ಘಾಸಿಗೊಳಿಸಿತ್ತು. ಅಲ್ಲದೆ ಮನೆ ಎರಡು ತಂಡಗಳಾಗಿ ವಿಂಗಡಣೆಯಾಗಿ, ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ಅವರು ನಮ್ರತಾ ನಾಯಕತ್ವದ 'ಉಗ್ರಂ' ತಂಡ ಸೇರಿಕೊಂಡಿದ್ದರು.
ಬಿಗ್ ಬಾಸ್ ಮನೆಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ನಾಯಕನನ್ನು ಆಯ್ದುಕೊಳ್ಳುವ ವಿಷಯದಲ್ಲಿ ಕಾರ್ತಿಕ್ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯ ಹುಟ್ಟಿತ್ತು. ಸಂಗೀತಾ 'ನೀನು ಫೇಕ್' ಎಂದು ಹೇಳಿದ್ದು ಕಾರ್ತಿಕ್ ಅವರನ್ನು ಘಾಸಿಗೊಳಿಸಿತ್ತು. ಅಲ್ಲದೆ ಮನೆ ಎರಡು ತಂಡಗಳಾಗಿ ವಿಂಗಡಣೆಯಾಗಿ, ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ಅವರು ನಮ್ರತಾ ನಾಯಕತ್ವದ 'ಉಗ್ರಂ' ತಂಡ ಸೇರಿಕೊಂಡಿದ್ದರು. ನಮ್ರತಾ ತಂಡ ಸೇರಿಕೊಂಡಾಗಿನಿಂದಲೂ ಕಾರ್ತಿಕ್ ನಮ್ರತಾ ಅವರ ಜೊತೆಗೆ ತುಸು ಹೆಚ್ಚೆ ಸಲಿಗೆಯಿಂದ ಇರಲು ಶುರುಮಾಡಿದ್ದರು. ಅವರೊಂದಿಗೆ ಡಾನ್ಸ್ ಕೂಡ ಮಾಡಿದ್ದರು.
ಇದೀಗ ಕಾರ್ತಿಕ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇಂದು ಬೆಳಿಗ್ಗೆ ಬಿಗ್‌ಬಾಸ್ ಮನೆಯ ಕಿಚನ್‌ನಲ್ಲಿ ಎಲ್ಲರೂ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದರೆ, ಕಾರ್ತಿಕ್, ನಮ್ರತಾ ಜೊತೆಗೆ ಫ್ಲರ್ಟ್ ಮಾಡುವುದರಲ್ಲಿ ಮುಳುಗಿದ್ದರು. ತಮಾಷೆ ತಮಾಷೆಯಾಗಿಯೇ ಶುರುವಾದ ಮಾತು, ನಮ್ರತಾ ಜೊತೆಗೆ ಡೇಟ್ ಮಾಡುವುದರವರೆಗೂ ಮುಂದುವರಿದಿದೆ. ಅಂದಹಾಗೆ ಅವರು ಡೇಟ್ ಮಾಡಲು ಪ್ಲ್ಯಾನ್ ಮಾಡಿರುವುದು ಬೇರೆ ಎಲ್ಲೂ ಅಲ್ಲ, ಬಿಗ್‌ಬಾಸ್ ಮನೆಯ ಬಾಲ್ಕನಿಯಲ್ಲಿ!. ಈ ಎಲ್ಲವೂ JioCinemaದ ಬಿಗ್‌ಬಾಸ್ ಕನ್ನಡ 24ಗಂಟೆ ನೇರಪ್ರಸಾರದಲ್ಲಿ ಪ್ರಸಾರವಾಗಿದೆ.
'ನಿಂಗೆ ಏನ್ ಮಾಡ್ಕೊಡ್ಬೇಕು ಹೇಳು. ನಾನು ಮಾಡ್ಕೊಡ್ತೀನಿ' ಎಂದೂ ಕಾರ್ತಿಕ ಕೇಳಿದ್ದಾರೆ. ನಮ್ರತಾ ಅವರೂ ನಗುತ್ತಲೇ ಸ್ಟೈಲಿಶ್ ಆಗಿ, 'ಟೂ ಡಿಶ್ ಲಂಚ್ ಮಾಡೋಣ. ಒನ್ ಇಟಾಲಿಯನ್ ಆಮ್ಲೆಟ್ ಬೇಕು. ಐಸ್‌ಕ್ರೀಮ್ ಕೂಡ ಬೇಕು. ಜೊತೆಗೆ ಒಂದು ಡ್ರಿಂಕ್' ಎಂದು ಹೇಳಿದ್ದಾರೆ.
ಕಾರ್ತಿಕ್: ಓ ಐಸ್ ಕ್ರೀಮ್! ಆರಾಮಾಗಿ ಮಾಡ್ಬೋದು. ನಾನು ಇಲ್ಲೇ ಮಾಡ್ಕೊಡ್ತೀನಿ… ಈ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳಲು ಸಂಗೀತಾ ಅಲ್ಲಿರಲಿಲ್ಲ ಎನ್ನುವುದು ಬೇರೆ ಮಾತು!
ಕಾರ್ತಿಕ್ ಉತ್ಸಾಹ ನೋಡಿ ತನಿಷಾ, 'ಸಂಗೀತಾ ಸ್ನಾನಕ್ಕೆ ಹೋಗಿದಾರೆ ಅಂತ ಒಬ್ಬರ ಉತ್ಸಾಹ ಜಾಸ್ತಿ ಆಗ್ತಿದೆ ಎಂದು ತಮಾಷೆ ಮಾಡಿದ್ದಾರೆ.
ಕಾರ್ತಿಕ್ ನಮ್ರತಾ ಜೊತೆಗೆ ಡೇಟ್ ಮಾಡೋದಷ್ಟೇ ಅಲ್ಲ, ಜೊತೆಗೆ ವೇಟರ್ ಆಗಿ ಸಂಗೀತಾ ಅವರನ್ನು ಇರಬೇಕು ಎಂದೂ ಹೇಳಿದ್ದಾರೆ.
ಇದನ್ನೆಲ್ಲ ಕೇಳಿಸಿಕೊಳ್ಳುತ್ತ ಅಲ್ಲೇ ಕೂತಿದ್ದ ವಿನಯ್, 'ಎಲ್ಲಾನೂ ಬರೆದಿಟ್ಕೋತೀನಿ. ಸಂಗೀತಾ ಬಂದ್ಮೇಲೆ ಹೇಳ್ತೀನಿ' ಎಂದು ಬರೆದಿಟ್ಟುಕೊಳ್ಳಲು ಶುರುಮಾಡಿದ್ದಾರೆ.
ವಿನಯ್ ಹಾಗೂ ತನಿಷಾ ಮಾತಿಗೆ ಕಾರ್ತಿಕ್, 'ಲೈಫಲ್ಲಿ ಮಜಾ ಇರ್ಬೇಕಂದ್ರೆ ಹಿಂಗೆಲ್ಲ ಮಾಡ್ತಿರ್ಬೇಕು' ಎಂದು ತೇಲಿಸಿಬಿಟ್ಟಿದ್ದಾರೆ. ಮತ್ತೆ ಮಾತು ಡೇಟಿಂಗ್ ಕಡೆಗೆ ಹೊರಳಿದೆ. ನಮ್ರತಾ ಕೂಡ ತಮಾಷೆಯಾಗಿ, 'ನಾನು ಇದೇ ಫಸ್ಟ್ ಟೈಮ್ ಯಾರ ಜೊತೆಗೋ ಡೇಟ್ ಮಾಡ್ತಿರೋದು. ನಾನು ಹೇಗೆ ಡ್ರೆಸ್ ಮಾಡ್ಕೊಂಡು ಬರ್ಬೇಕು? ಟ್ರೆಡಿಷನಲ್ ಆಗಿ ಸೀರೆ ಉಟ್ಕೊಂಡುಬರ್ಲಾ ಅಥವಾ ಮಾಡ್ ಆಗಿ ಡ್ರೆಸ್ ಮಾಡ್ಕೋಬೇಕಾ?' ಎಂದೆಲ್ಲ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್, 'ನಿಂಗೆ ಯಾವ್ದು ಇಷ್ಟ ಆಗತ್ತೋ ಹಾಗೇ ಡ್ರೆಸ್ ಮಾಡ್ಕೋ. ಮಾಡ್ ಆಗೇ ರೆಡಿ ಆಗು' ಎಂದಿದ್ದಾರೆ.
ರಾಮ್ ಲೀಲಾ ಚಿತ್ರಕ್ಕೆ ರಣವೀರ್ ಸಿಂಗ್ ಜೋಡಿ ಕರೀನಾ ಆಗಬೇಕಿತ್ತು, ದೀಪಿಕಾ ಎಂಟ್ರಿ ಹಿಂದಿನ ಸೀಕ್ರೆಟ್ ರಿವೀಲ್!
'ಹೇರ್ ಸ್ಟೈಲ್ ಹೇಗಿರ್ಬೇಕು? ಓಪನ್ ಹೇರ್ ಬಿಟ್ಕೊಂಡ್ ಬರ್ಬೇಕಾ? ಅಥವಾ ಬನ್ ಹಾಕ್ಕೊಬೇಕಾ?' ನಮ್ರತಾ ಅವರ ಸಂದೇಹಕ್ಕೆ ಕಾರ್ತಿಕ್, ನಮ್ರತಾಗೆ ಬನ್ ಚೆನ್ನಾಗಿ ಕಾಣಿಸುತ್ತೆ' ಎಂದೂ ಸಲಹೆ ಕೊಟ್ಟಿದ್ದಾರೆ. ತನಿಷಾ, ಮೈಕಲ್, ಸಿರಿ, ವಿನಯ್, ತುಕಾಲಿ ಸಂತೋಷ್, ಪ್ರತಾಪ್ ಎಲ್ಲವೂ ಇವರಿಬ್ಬರ ಮಾತುಕತೆ ಕೇಳಿಸಿಕೊಂಡು ನಗುತ್ತ ನಿಂತಿದ್ದರು.
ಭಾಗ್ಯಲಕ್ಷ್ಮೀ: ಮನೆಗೇ ನುಗ್ಗಿ ಮನೆಮಂದಿ ಮುಂದೆಯೇ ತಾಂಡವ್ ತಬ್ಬಿಕೊಂಡ ಶ್ರೇಷ್ಠಾ, ಮುಂದಿದೆಯಾ ಗ್ರಹಚಾರ?
ಕಾರ್ತಿಕ್ ಮತ್ತು ನಮ್ರತಾ ಡೇಟಿಂಗ್ ಮ್ಯಾಟರ್ ಕೇಳಿಸಿಕೊಂಡ ಮೇಲೆ ಸಂಗೀತಾ ಕೂಡ ಅಷ್ಟೇ ಈಸಿಯಾಗಿ ನಗುನಗುತ್ತಾ ಇರ್ತಾರಾ ಅಥವಾ ಮುಖ ಊದಿಸಿಕೊಳ್ಳುತ್ತಾರಾ ಎಂಬುದನ್ನು ನೋಡಲು ಮನೆಯ ಸದಸ್ಯರೆಲ್ಲರೂ ಕಾದು ಕೂತಿರುವಂತಿದೆ. ಇದಕ್ಕೆ ಪೂರಕವಾಗಿ ಸಂತೋಷ್, 'ನಿಂಗೆ ಹೊಗೆನೇ ಕಾರ್ತಿಕ… ಹಾಸ್ಯಕ್ಕೋಸ್ಕರ ಮಾಡ್ತಿರೋ ಈ ಪ್ರೀತಿ, ಮುಂದೆ ನಿನ್ನ ಬಾಳಿನ ಕಣ್ಣೀರಿನ ಕಥೆಯಾಗುತ್ತದೆ ಕಣೋ…. ನಂಗೆ ಮುನ್ಸೂಚನೆ ಈಗಲೇ ಕಾಣಿಸುತ್ತಿದೆ' ಎಂದು ಬೇರೆ ಭವಿಷ್ಯ ನುಡಿದಿದ್ದಾರೆ.
ಇದನ್ನೆಲ್ಲ ನೀವು ವೀಕ್ಷಿಸಲು https://www.jiocinema.com/videos/bigg-boss-kannada-24-hrs-live-channel/3831324 ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.