ಹೊಂಗನಸು ಸೀರಿಯಲ್ ರಿಷಿ ಸಾರ್ ಅಂತಲೇ ಫೇಮಸ್ ಆಗಿರೋ ಮುಖೇಶ್ ಗೌಡ ಈ ಬಾರಿಯ Biggboss kannada 11ಗೆ ಬರ್ತಿದ್ದಾರಂತೆ! ನಿಜಾನ?
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರೋ ಡಬ್ಬಿಂಗ್ ಸೀರಿಯಲ್ 'ಹೊಂಗನಸು'. ಒರಿಜಿನಲ್ ಹೆಸರು 'ಗುಪ್ಪೆಡಂಥಾ ಮನಸು'. ಇದರ ಹೀರೋ ರಿಷಿ ಸರ್ ಅಂತಲೇ ಫೇಮಸ್ ಆಗಿರೋ ಮುಖೇಶ್ ಗೌಡ. ಬಿಗ್‌ಬಾಸ್ ಮನೆಗೆ ಇವ್ರು ಎಂಟ್ರಿ ಕೊಡ್ತಾರ?
ಸ್ಟಾರ್ ಸುವರ್ಣದಲ್ಲಿ ಹೊತ್ತಲ್ಲದ ಹೊತ್ತಲ್ಲಿ ಪ್ರಸಾರವಾದ್ರೂ, ಡಬ್ಬಿಂಗ್ ಸೀರಿಯಲ್ ಆದ್ರೂ ಅಪಾರ ಫ್ಯಾನ್ ಫಾಲೋವಿಂಗ್ ಹೊಂದಿದ್ದ ಸೀರಿಯಲ್ 'ಹೊಂಗನಸು'. ಅದರಲ್ಲೂ ಇದರ ನಾಯಕ ರಿಷಿ ಸಾರ್ ಅಂತಲೇ ಫೇಮಸ್ ಆಗಿರೋ ಮೈಸೂರಿನ ಮುಖೇಶ್ ಗೌಡ ಅಂದರೆ ಸಿಕ್ಕಾಪಟ್ಟೆ ಮಹಿಳಾ ಫ್ಯಾನ್ಸ್‌ಗಳ ಫೇವರಿಟ್. ನಾಯಕಿ ರಕ್ಷಾಗೂ ಬಹಳ ಪಾಪ್ಯುಲಾರಿಟಿ ಇದೆ. ಇದರ ಒರಿಜಿನಲ್ 'ಗುಪ್ಪೆಡಂಥಾ ಮನಸು' ಅನ್ನೋ ತೆಲುಗು ಸೀರಿಯಲ್. ಮುಖೇಶ್, ರಕ್ಷಾ ಈ ಜೋಡಿ ಅಂದರೆ ತೆಲುಗು ರಾಜ್ಯಗಳು, ಕರ್ನಾಟಕ, ಕೇರಳ, ತಮಿಳ್ನಾಡು ಮಾತ್ರವಲ್ಲದೇ ಇಡೀ ಭಾರತದಲ್ಲೇ ಫ್ಯಾನ್ ಫಾಲೋವಿಂಗ್ ಹೊಂದಿರುವ ಫೇಮಸ್ ಜೋಡಿ. ಆದರೆ ಕ್ರಮೇಣ ಏನೇನೋ ಬೆಳವಣಿಗೆಗಳಾಗಿ ಈ ಸೀರಿಯಲ್‌ನ ಟಿಆರ್‌ಪಿ ತಗ್ಗಿತು. ಇದಕ್ಕೆ ಮುಖ್ಯ ಕಾರಣ ನಾಯಕ ಮುಖೇಶ್ ನಿರ್ಗಮನ. ಗಾಯದ ಸಮಸ್ಯೆ ಎಂಬ ಕಾರಣದಲ್ಲಿ ಅವರು ಆರೇಳು ತಿಂಗಳು ಸೀರಿಯಲ್‌ನಿಂದ ನಾಪತ್ತೆ ಆದರು. ಇನ್ನು ಬರೋದೇ ಇಲ್ಲ ಅಂದಾಗ ವಾಪಾಸ್ ಎಂಟ್ರಿ ಕೊಟ್ಟರು. ಆದರೆ ಮೊದಲಿನ ಜನಪ್ರಿಯತೆ ಮತ್ತೆ ಸಿಗಲಿಲ್ಲ.
ಇದೀಗ 'ಗುಪ್ಪೆಡಂಥಾ ಮನಸು' ತೆಲುಗು ಸೀರಿಯಲ್ ಮುಕ್ತಾಯವಾಗುತ್ತಿದೆ. ಅಂದರೆ ಕನ್ನಡದ ಹೊಂಗನಸು ಸೀರಿಯಲ್ ಕೂಡಾ ವೈಂಡ್‌ಅಪ್ ಆಗುತ್ತೆ. ಸಖತ್ ಫ್ಯಾನ್ ಫಾಲೋವಿಂಗ್ ಇರೋ ಈ ಸೀರಿಯಲ್ ಹೀರೋ ರಿಷಿ ಸಾರ್ ಅರ್ಥಾತ್ ಮುಖೇಶ್ ಗೌಡ ಬಿಗ್‌ಬಾಸ್ ಕನ್ನಡ ಸೀಸನ್ 11ಗೆ ಎಂಟ್ರಿ ಕೊಡ್ತಾರ ಅನ್ನೋದು ಸದ್ಯದ ಪ್ರಶ್ನೆ. ಇದಕ್ಕೂ ಕಾರಣ ಇದೆ. ಇವರು ನಟಿಸುತ್ತಿದ್ದ 'ಹೊಂಗನಸು' ಸೀರಿಯಲ್‌ನಲ್ಲಿ ಇವರ ತಾಯಿ ಜಗತಿ ಪಾತ್ರ ಮಾಡುತ್ತಿದ್ದವರು ಏಕಾಏಕಿ ಹಾಟ್ ಲೇಡಿ ಆಗಿ ಬದಲಾದ ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವರಾಜ್.
ಶೆಡ್‌ಗೆ ಕರೆಸುವ ಬದಲು, ಕೆಟ್ಟ ಮೆಸೇಜ್ ಮಾಡಿದ 1 ಸಾವಿರ ಅಕೌಂಟ್‌ಅನ್ನು ಬ್ಲಾಕ್ ಮಾಡಿದ ಜ್ಯೋತಿ ರೈ!
ಇತ್ತೀಚೆಗೆ ಏಕಾಏಕಿ ಬದಲಾದ ತನ್ನ ಹಾಟ್ ಲುಕ್, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವೀಡಿಯೋಗಳಿಂದ ಸಾಕಷ್ಟು ಪ್ರಸಿದ್ಧಿಗೆ ಬಂದ ಈ ನಟಿಗೆ ಬಿಗ್‌ಬಾಸ್‌ಗೆ ಆಫರ್ ಬಂದಿತ್ತು. ಅದನ್ನು ಇವರೇ ಹೇಳಿದ್ದರು. ಆದರೆ ಈ ಆಫರ್ ಅನ್ನು ಜ್ಯೋತಿ ತಿರಸ್ಕರಿಸಿದ್ದರು. ಇದೀಗ ಬಿಗ್‌ಬಾಸ್ ಮನೆಗೆ ರಿಷಿ ಸರ್ ಬಂದರೆ ಬಿಗ್‌ಬಾಸ್‌ನ ಟಿಆರ್‌ಪಿ ಏರೋದ್ರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಅನ್ನೋ ಮಾತಿದೆ. ಏಕೆಂದರೆ ಇವರಿಗೆ ಕನ್ನಡದಲ್ಲೂ ಅಪಾರ ಅಭಿಮಾನಿ ಬಳಗ ಇದೆ.
ಆದರೆ ಬಿಗ್‌ಬಾಸ್‌ನಲ್ಲಿ ಕೊಂಚ ವಿವಾದ ಇರುವವರಿಗೆ ಆದ್ಯತೆ ನೀಡುತ್ತಾರೆ ಎನ್ನುವ ಮಾತಿದೆ. ಆದರೆ ಎಲ್ಲರ ವಿಷಯದಲ್ಲೂ ಹೀಗಾಗುತ್ತೆ ಅನ್ನೋದಿಕ್ಕಾಗಲ್ಲ. ಈ ಮುಖೇಶ್ ಗೌಡ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಹೊಟ್ಟೆಕಿಚ್ಚಿನ ಮಂದಿ ಏನೇನೋ ಅಪವಾದ ಹೊರಿಸಿದರೂ ತನ್ನ ಸೀರಿಯಲ್ ಬಳಗದಲ್ಲಿ ಇವರು ತನ್ನ ಇನ್ನೋಸೆನ್ಸ್, ತರಲೆ, ಫ್ರೆಂಡ್ಲೀ ಗುಣಗಳಿಗೆ ಹೆಸರುವಾಸಿ. ಸಖತ್ ಕಲರ್‌ಫುಲ್ ವ್ಯಕ್ತಿತ್ವ ಹೊಂದಿರುವ ನೋಡಲೂ ಸ್ಮಾರ್ಟ್ ಆಗಿರುವ ಇವರು ಈಗಾಗಲೇ ತೆಲುಗು ಇಂಡಸ್ಟ್ರಿಯಲ್ಲಿ ಒಂದು ಸಿನಿಮಾದಲ್ಲಿ ನಟಿಸೋ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಸಿನಿಮಾ ಇವರು ಯಶಸ್ಸು ತಂದುಕೊಡುತ್ತೋ ಇಲ್ವೋ ಗೊತ್ತಿಲ್ಲ. ಯಾಕಂದರೆ ತೆಲುಗು ಸಿನಿಮಾಗಳಲ್ಲಿ ಕನ್ನಡ ಹುಡುಗಿಯರನ್ನು ಎಷ್ಟು ಮೆರೆಸ್ತಾರೋ ಹುಡುಗರನ್ನು ಅಷ್ಟೇ ತುಳೀತಾರೆ ಅನ್ನೋ ಮಾತಿದೆ. ಅದರೆ ಮುಖೇಶ್‌ಗೆ ಕನ್ನಡದಲ್ಲೂ ಸಿನಿಮಾ ಮಾಡುವ ಉದ್ದೇಶ ಇದೆ. ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ ಅದು ಹೆಸರು ತಂದಿಲ್ಲ.
ಇನ್ನೊಂದು ವಿಷಯ ಅಂದರೆ ಕಳೆದ ಬಾರಿ ಬಿಗ್‌ಬಾಸ್‌ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿರುವ ಕಾರ್ತಿಕ್ ಮಹೇಶ್ ಇವರ ಕ್ಲೋಸ್ ಫ್ರೆಂಡ್. ಇಬ್ಬರೂ ಜೊತೆಗೆ ಓದಿದವರು. ಓದಿನ ನಂತರ ಜೊತೆಗೇ ಮನರಂಜನಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಇಬ್ಬರೂ ಸೇರಿಯೇ ರೂಮ್ ಮಾಡ್ಕೊಂಡು ಇದ್ರು. ಸೋ ಗೆಳೆಯನ ಒತ್ತಾಸೆಯಿಂದ ಈ ಬಾರಿ ಫೇಮಸ್ ರಿಷಿ ಸರ್ ಅಂದ್ರೆ ಮುಖೇಶ್ ಕಿಚ್ಚ ಸುದೀಪ್ ಸಾರಥ್ಯದ ಬಿಗ್‌ಬಾಸ್‌ಗೆ ಬರ್ತಾರ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಆದರೆ ಬಂದರೆ ಮಾತ್ರ ಬಿಗ್‌ಬಾಸ್ ಟಿಆರ್‌ಪಿ ಏರೋದ್ರಲ್ಲಿ ಅನುಮಾನ ಇಲ್ಲ ಅಂತಿದ್ದಾರೆ ರಿಷಿ ಸಾರ್ ಫ್ಯಾನ್ಸ್.