Asianet Suvarna News Asianet Suvarna News

ಶೆಡ್‌ಗೆ ಕರೆಸುವ ಬದಲು, ಕೆಟ್ಟ ಮೆಸೇಜ್‌ ಮಾಡಿದ 1 ಸಾವಿರ ಅಕೌಂಟ್‌ಅನ್ನು ಬ್ಲಾಕ್‌ ಮಾಡಿದ ಜ್ಯೋತಿ ರೈ!

jyothi Rai Instagram Block Feature ಸೋಶಿಯಲ್‌ ಮೀಡಿಯಾದಲ್ಲಿ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕವೇ ಫೇಮಸ್‌ ಆದ ಕಿರುತೆರೆ ನಟಿ ಜ್ಯೋತಿ ರೈ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಅವರ ಪೋಸ್ಟ್‌ಗೆ ಬರುತ್ತಿರುವ ಕೆಟ್ಟ ಕಾಮೆಂಟ್ಸ್‌ಗಳು.

jyothi poorvaaj aka jyothi Rai says She Blocked 1 thousand Accounts in Instagram san
Author
First Published Aug 14, 2024, 8:26 PM IST | Last Updated Aug 14, 2024, 8:26 PM IST

ಟಿ ಜ್ಯೋತಿ ರೈ ಇತ್ತೀಚೆಗೆ ಸಖತ್‌ ಸುದ್ದಿಯಲ್ಲಿದ್ದಾರೆ. ಪ್ರತಿದಿನ ಹೊಸ ಹೊಸ ರೀತಿಯ ಹಾಟ್‌ಸ್ಟೈಲ್‌ನಲ್ಲಿ ಫೋಟೋ ಶೂಟ್‌ ಮಾಡಿ ಇಂಟರ್ನೆಟ್‌ನಲ್ಲಿ 'ಹಾಟ್‌' ಕಿಡಿ ಹೊತ್ತಿಸುವ ಜ್ಯೋತಿ ಪೂರ್ವಜ್‌ ಅಲಿಯಾಸ್‌ ಜ್ಯೋತಿ ರೈ ದೊಡ್ಡ ನಿರ್ಧಾರ ಮಾಡಿದ್ದಾರೆ. ಕನ್ನಡ ಬಿಗ್‌ಬಾಸ್‌ ಸೀಸನ್‌ಗೆ ಬರೋ ಸೂಚನೆಗಳ ನಡುವೆ ತಮ್ಮ ಪೋಸ್ಟ್‌ಗಳಿಗೆ ಕೆಟ್ಟ ಕಾಮೆಂಟ್‌ ಮಾಡುತ್ತಿದ್ದ ವ್ಯಕ್ತಿಗಳಿಗೆ ಸಖತ್‌ ಪಾಠ ಕಲಿಸಿದ್ದಾರೆ.  ಕೆಲ ತಿಂಗಳ ಹಿಂದೆ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಇದರಿಂದ ಕೊಂಚ ಇರಿಸುಮುರಿಸುಗೆ ಒಳಗಾಗಿದ್ದ ಕನ್ನಡದ ಪ್ರಖ್ಯಾತ ಕಿರುತೆರೆ ನಟಿ, ಬಳಿಕ ಈ ವಿಚಾರವಾಗಿ ಸೈಬರ್‌ ಕ್ರೈಮ್‌ಗೆ ದೂರು ಕೂಡ ನೀಡಿದ್ದರು. ಆ ಬಳಿಕ ಕೆಲ ಕಾಲ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಹಾಟ್‌ ಫೋಟೋ ಹಂಚಿಕೊಳ್ಳದ ಜ್ಯೋತಿ ರೈ ಈಗ ಮತ್ತೆ ಎಂದಿನ ಲಯಕ್ಕೆ ಬಂದಿದ್ದಾರೆ. ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ದಿನಕ್ಕೊಂದರಂತೆ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವುಗಳಿಗೆ ಭಿನ್ನ ಭಿನ್ನ ಕಾಮೆಂಟ್‌ಗಳು ಕೂಡ ಬರುತ್ತಿವೆ. ಅದರಲ್ಲಿ  ಹೆಚ್ಚಿನವು ಜ್ಯೋತಿ ರೈ ಬ್ಯೂಟಿ ಬಗ್ಗೆ ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಅಶ್ಲೀಲ ಕಾಮೆಂಟ್‌ ಮಾಡಿದ್ದರು.

ತಮ್ಮ ಪ್ರೊಫೈಲ್‌ಗೆ ಬರುತ್ತಿದ್ದ ಅಶ್ಲೀಲ ಹಾಗೂ ಕೆಟ್ಟ ಮೆಸೇಜ್‌ಗಳಿಂದ ಹೈರಾಣಾಗಿದ್ದ ಜ್ಯೋತಿ ರೈ ದೊಡ್ಡ ನಿರ್ಧಾರ ಮಾಡಿದ್ದಾರೆ. ಹಾಗಂತ ಅವರು ಯಾವುದೇ ಸೈಬರ್‌ ಕ್ರೈಮ್‌ಗೆ ದೂರು ಕೊಟ್ಟಿಲ್ಲ. ಹಾಗಂತ ತಮ್ಮ ಪತಿಗೆ ಹೇಳಿ ಕೆಟ್ಟ ಮೆಸೇಜ್‌ ಮಾಡೋ ವ್ಯಕ್ತಿಯನ್ನ ಶೆಡ್‌ಗೆ ಕೂಡ ಕರೆಸಿಲ್ಲ. ಇನ್ಸ್‌ಟಾಗ್ರಾಮ್‌ನ ಬ್ಲಾಕ್‌ ಫೀಚರ್‌ಅನ್ನು ಅವರು ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಅವರು ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲೇ ಮಾಹಿತಿ ನೀಡಿದ್ದಾರೆ. 'ಇನ್ಸ್‌ಟಾಗ್ರಾಮ್‌ನ ಬ್ಲಾಕ್‌ ಫೀಚರ್‌ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಾಮೆಂಟ್‌ ಸೆಕ್ಷನ್‌ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್‌ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದುಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ. ಧನಾತ್ಮಕ ಪರಿಸರವನ್ನು ರಚನೆ ಮಾಡಲು ನೀವೂ ಕೂಡ ಇಂಥ ಟೂಲ್‌ಗಳನ್ನು ಬಳಕೆ ಮಾಡಿ. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ..' ಎಂದು ಅವರು ಬರೆದುಕೊಂಡಿದ್ದಾರೆ.

ಇನ್ಸ್‌ಟಾಗ್ರಾಮ್‌ನಲ್ಲಿ ಕೆಟ್ಟ ಮೆಸೇಜ್‌ ಮಾಡಿದರೆ, ಯಾವ ರೀತಿಯ ಪರಿಣಾಮಗಳು ಆಗುತ್ತವೆ ಅನ್ನೋದಕ್ಕೆ ರೇಣುಕಾಸ್ವಾಮಿ ಕೊಲೆ ಕೇಸ್‌ ಸಾಕ್ಷಿ. ಆತ ಹಾಕಿದ್ದ ಕೆಟ್ಟ ಮೆಸೇಜ್‌ಗಳಿಂದ ಇಂದು ಹಲವು ಕುಟುಂಬದ ಬದುಕು ಬೀದಿಪಾಲಾಗಿದೆ. ಕನ್ನಡದ ದೊಡ್ಡ ಸ್ಟಾರ್‌ ನಟ ದರ್ಶನ್‌ ಜೈಲುಪಾಲಾಗಿದ್ದಾರೆ. ಅಂದು ದರ್ಶನ್‌ ಅವರ ಗೆಳತಿ ಪವಿತ್ರಾ ಗೌಡ, ತನ್ನ ಪೋಸ್ಟ್‌ಗಳಿಗೆ ನಿರಂತರವಾಗಿ ಕೆಟ್ಟ ಕಾಮೆಂಟ್‌ ಮಾಡ್ತಿದ್ದ ರೇಣುಕಾಸ್ವಾಮಿಯ ಅಕೌಂಟ್‌ಅನ್ನು ಈ ಬ್ಲಾಕ್‌ ಫೀಚರ್‌ ಬಳಸಿಕೊಂಡು ಬ್ಲಾಕ್‌ ಮಾಡಿದ್ದರೆ ಅಥವಾ ಪೊಲೀಸರಿಗೆ ಸೂಕ್ತವಾಗಿ ಮಾಹಿತಿ ತಿಳಿಸಿದ್ದರೆ, ಇಂದು ಇಂತ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಮತ್ತೆ ಹೊಸ ಫೋಟೋ ಹಂಚಿಕೊಂಡ ಜ್ಯೋತಿ ರೈ, ಹಾಟ್‌ನೆಸ್‌ಗೆ ನೀವೇ ಬ್ರಾಂಡ್‌ ಅಂಬಾಸಿಡರ್‌ ಎಂದ ನೆಟ್ಟಿಗರು

ಕೆಟ್ಟ ಮೆಸೇಜ್‌ ಮಾಡಿದ್ದು, ದರ್ಶನ್‌ಗೆ ಗೊತ್ತಾದ ಬಳಿಕ ಆತನನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕಿಡ್ನಾಪ್‌ ಮಾಡಿ ಕರೆತಂದು ದರ್ಶನ್‌ ಹಾಗೂ ಅವರ ಗ್ಯಾಂಗ್‌ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿತ್ತು. ಈ ಕೇಸ್‌ನಲ್ಲಿ ಈವರೆಗೂ 17 ಮಂದಿ ಜೈಲು ಪಾಲಾಗಿದ್ದು, ಪವಿತ್ರಾಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್‌ ತೂಗುದೀಪ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿದ್ದಾರೆ.

ಕನ್ನಡ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಧಾರಾವಾಹಿ ನಟಿ ಜ್ಯೋತಿ ರೈ ಕೊಟ್ಟ ಕಾರಣ ಹೀಗಿದೆ..

Latest Videos
Follow Us:
Download App:
  • android
  • ios