ಗೌತಮ್‌ಗೆ ಶಕುಂತಲಾಳ ಅಸಲಿ ಮುಖ ಮತ್ತು ನಕಲಿ ಭೂಮಿಕಾಳ ರಹಸ್ಯ ಗೊತ್ತಾಗಿದ್ದು, ಸೀರಿಯಲ್ ಮುಕ್ತಾಯದ ಹಂತ ತಲುಪಿದಂತೆ ಕಾಣುತ್ತಿದೆ. ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಟಿ ಛಾಯಾ ಸಿಂಗ್ ಕೂಡ ಇದು ಸೀರಿಯಲ್‌ನ ಅಂತಿಮ ವರ್ಷ ಎಂಬ ಸುಳಿವು ನೀಡಿದ್ದಾರೆ. ಇದೇ ವೇಳೆ ಹಲವು ವಿಷಯಗಳ ಬಗ್ಗೆ ಮಾತನಾಡಿರುವ ನಟಿ, ಅಮೃತಧಾರೆ ಪಾರ್ಟ್-2 ಯಾವಾಗ ಕೇಳಿದ ಪ್ರಶ್ನೆಗೆ ಏನ್ ಹೇಳಿದ್ರು ನೋಡಿ
ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial )ನಲ್ಲಿ ಇದೀಗ ಗೌತಮ್ಗೂ ಶಕುಂತಲಾ ಅಸಲಿ ಮುಖ ಗೊತ್ತಾಗಿದೆ. ಶಕುಂತಲಾ ಮತ್ತು ಜೈದೇವ್ ಸೇರಿ ನಕಲಿ ಭೂಮಿಕಾಳನ್ನು ಮನೆಗೆ ತಂದಿರುವ ವಿಷ್ಯವನ್ನು ಭೂಮಿಕಾ ಗೌತಮ್ ಎದುರು ಹೇಳಿದ್ದಾಳೆ. ಶಕುಂತಲಾ ಅತ್ತೆ ಬದಲಾಗಿಲ್ಲ ಎಂದಿದ್ದಾಳೆ. ಅದೇ ಇನ್ನೊಂದೆಡೆ, ಮಹಿಮಾಗೆ ಭೂಮಿಕಾ ಅಮ್ಮ ಮಂದಾಕಿನಿ ತನಗೆ ಇಬ್ಬರು ಮಕ್ಕಳು ಅವಳಿ, ಜವಳಿ ಎನ್ನುವ ವಿಷ್ಯವನ್ನು ರಿವೀಲ್ ಮಾಡಿದ್ದಾಳೆ. ಅಲ್ಲಿಗೆ ಸೀರಿಯಲ್ ಮುಗಿದಂತೆ ಎಂದೇ ವೀಕ್ಷಕರು ಅಂದುಕೊಂಡಿದ್ದಾರೆ. ಅಷ್ಟಕ್ಕೂ ಈ ಹಿಂದೆ ಸಾಕಷ್ಟು ಬಾರಿ ಇದೇ ರೀತಿ ಸೀರಿಯಲ್ಮುಗಿಯತ್ತೆ ಮುಗಿಯತ್ತೆ ಎನ್ನುವಾಗಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಸೀರಿಯಲ್ ಮುಂದುವರೆಸಲಾಗಿತ್ತು. ಆದ್ದರಿಂದ ಈಗಲೂ ಸೀರಿಯಲ್ಮುಗಿಯತ್ತದೆಯೋ ಇಲ್ಲವೋ ಎಂದು ಗೊಂದಲದಲ್ಲಿದ್ದಾರೆ ವೀಕ್ಷಕರು.
ಅಮೃತಧಾರೆ ಸೀರಿಯಲ್ ಮುಗಿಯತ್ತಾ?
ಇದೀಗ ಭೂಮಿಕಾ ಉರ್ಫ್ ದೀಪಿಕಾ ಉರ್ಫ್ ನಟಿ ಛಾಯಾ ಸಿಂಗ್ (Amruthadhaare Chaya Singh) ಅವರು ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಚಿಕ್ಕದೊಂದು ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಅವಾರ್ಡ್ ಕಾರ್ಯಕ್ರಮಕ್ಕೂ ಮುನ್ನ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದೆ. ಅಲ್ಲಿ ಅವರು, ಅಮೃತಧಾರೆ ಸೀರಿಯಲ್‌ನ ಅಂತಿಮ ವರ್ಷ ಇದು. ಮುಂದಿನ ವರ್ಷ ನಾನು ಅವಾರ್ಡ್ ಫಂಕ್ಷನ್ನಲ್ಲಿ ಇರ್ತೇನೋ ಇಲ್ಲವೋ ಎಂದು ಗೊತ್ತಿಲ್ಲ ಎನ್ನುವ ಮೂಲಕ, ಅಮೃತಧಾರೆ ಸೀರಿಯಲ್ ಶೀಘ್ರದಲ್ಲಿ ಮುಗಿಯುವುದು ಬಹುತೇಕ ಖಚಿತವಾಗಿದೆ.
ಅದರ ಜೊತೆಗೆ ಫಟಾಫಟ್ ಉತ್ತರ ಕೊಡುವ ರೌಂಡ್ನಲ್ಲಿ ನಟಿ ಕೆಲವೊಂದು ವಿಷಯಗಳನ್ನು ಮಾತನಾಡಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಎಪಿಸೋಡ್ ಕಂಡಿರುವ ಅಮೃತಧಾರೆ ಸೀರಿಯಲ್ ಬಗ್ಗೆ ಮಾತನಾಡಿದ ನಟಿ, ಇದು ಸಾಧ್ಯ ಆಗಿದ್ದು, ಜನರ ಪ್ರೀತಿಯಿಂದ. ಅವರು ಇಷ್ಟು ಪ್ರೀತಿ ಕೊಟ್ಟಿರಲಿಲ್ಲಾ ಎಂದರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎಂದರು.
ಕೊನೆಗೆ ಕೇಳಿದ ಒಂದಿಷ್ಟು ಪ್ರಶ್ನೆಗೆ ಈ ರೀತಿ ಉತ್ತರ ಕೊಟ್ಟರು. ಇದರಲ್ಲಿ ಅಮೃತಧಾರೆ ಪಾರ್ಟ್-2 ಬರತ್ತಾ ಎನ್ನುವ ಪ್ರಶ್ನೆಯೂ ಇದೆ.
- ಮಗೆ ಭೂಮಿಕಾ ಇಷ್ಟಾನೋ, ದೀಪಿಕಾನೋ ಕೇಳಿದಾಗ ಇಬ್ಬರೂ ಎಂದರು.
- ಡುಮ್ಮಾ ಸರೋ, ದೀಪಿಕಾನೋ ಎಂದು ಕೇಳಿದಾಗ ನನ್ನನ್ನು ಸಿಕ್ಕಿ ಹಾಕಿಸಿದ್ರಿ ಎಂದರು.
- ನೈಟ್ ಶೂಟಾ, ಡೇ ಶೂಟಾ ಎಂದಾಗ ಹಗಲಿನಲ್ಲಿ ಶೂಟಿಂಗ್ ಇಷ್ಟ ಎಂದರು.
- ಮನೆ ಫುಡ್ ಅಥ್ವಾ ಹೊರಗಡೆದಾ ಕೇಳಿದಾಗ ಎರಡೂ ಎಂದ ನಟಿ, ಒಮ್ಮೆ ಅದು, ಒಮ್ಮೆ ಇದನ್ನು ತಿನ್ನುತ್ತೇನೆ ಎಂದರು
- ಪಿಜ್ಜಾ ಅಥವಾ ಬರ್ಗರ್ ಎಂದಾಗ ಪಿಜ್ಜಾ ಆಯ್ಕೆ ಮಾಡಿದರು.
- ಮಾಲ್ ಷಾಪಿಂಗೋ, ಆನ್ಲೈನೋ ಕೇಳಿದಾಗ ಮಾಲ್ ಷಾಪಿಂಗ್. ಯಾವಾಗ ಬೇಕಾದ್ರೂ ಹೋಗ್ತೇನೆ ಎಂದರು.
- ರಿಯಾಲಿಟಿ ಷೋನಾ ಸೀರಿಯಲ್ಲಾ ಎಂದು ಪ್ರಶ್ನಿಸಿದಾಗ, ಒಂದನ್ನು ಆಯ್ಕೆ ಮಾಡಲು ಆಗದೇ ಅಲ್ಲಿ ನೋಡಿ ಯಾರೋ ಕರೀತಾ ಇದ್ದಾರೆ ಎಂದು ತಮಾಷೆ ಮಾಡಿದರು. ನಂತರ ಎರಡೂ ಎಂದರು.
- ಜೋಡಿ ನಂಬರ್ 1 ಅಥ್ವಾ ಅಮೃತಧಾರೆನಾ ಎಂದು ಪ್ರಶ್ನಿಸಿದಾಗ ನನಗೆ ಪ್ರಶ್ನೆನೇ ಅರ್ಥ ಆಗಲಿಲ್ಲ ಎಂದರು. ನಂತರ ಅದೂ, ಇದೂ ಅಲ್ಲ, ಎರಡೂ ಇಷ್ಟ ಎಂದರು.
- ಅಮೃತಧಾರೆ-2 ಬರತ್ತಾ ಎಂದಾಗ ನಟಿ, ಕ್ರಿಯೇಟಿವ್ ಟೀಂ ಅನ್ನು ವಿಚಾರಿಸಿ ಎಂದು ತಮಾಷೆ ಮಾಡಿದರು.






