ಒಂದು ಟೈಮ್‌ನಲ್ಲಿ ಸಖತ್ ಒಳ್ಳೆ ರೆಸ್ಪಾನ್ಸ್ ಪಡೀತಿದ್ದ ಲಕ್ಷಣ ಸೀರಿಯಲ್ ಈಗ ಯಾಕೋ ಹಾದಿ ತಪ್ಪಿದಂಗಿದೆ ಅಂತಿದ್ದಾರೆ ಜನ. ಪವರ್ ಆಫ್ ಅಟಾರ್ನಿ ಬಗ್ಗೆ ಡೈರೆಕ್ಟರ್‌ಗೆ ಏನ್ ಗೊತ್ತು ಅಂತ ಕ್ಲಾಸ್ ತಗೊಳ್ತಿದ್ದಾರೆ ಫ್ಯಾನ್ಸ್.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಲಕ್ಷಣ ಸೀರಿಯಲ್ ಯಾಕೋ ಮೊದಲಿನ ಥರ ಬರ್ತಿಲ್ಲ ಅನ್ನೋದು ವೀಕ್ಷಕರ ಆರೋಪ. ಈ ಸೀರಿಯಲ್ ಪ್ರೊಮೊ ಬಂದ್ರೆ ಸಾಕು ಜನ ಉಗ್ದು ಉಪ್ಪಿನಕಾಯಿ ಹಾಕ್ತಿರುತ್ತಾರೆ. ಮೊದಲನೇದಾಗಿ ಜನರ ಪೇಶನ್ಸ್ ಪರೀಕ್ಷೆ ಮಾಡ್ತಿರೋದು ಕಥೆಯ ಹಿಗ್ಗಾಮುಗ್ಗ ಎಳೆತ. ಇನ್ನೊಂದು ಕತೆಯ ದಾರಿ ತಪ್ಪಿರೋದು, ಮತ್ತೊಂದು ಈ ಸೀರಿಯಲ್‌ನಲ್ಲಿ ಶ್ವೇತಾ, ನಕ್ಷತ್ರ ಮಾಡ್ತಿರೋದು ಓವರ್ ಆಕ್ಟಿಂಗ್ ಅಂತ ವೀಕ್ಷಕರ ಕಂಪ್ಲೇಂಟ್. ನಕ್ಷತ್ರ ಮೇಕಪ್, ಡ್ರೆಸ್ ಯಾಕೋ ಸರಿಯಿಲ್ಲ, ಇದೆಲ್ಲ ಕಾರಣಕ್ಕೆ ಈ ಸೀರಿಯಲ್ ನೋಡೋದೇ ಬೇಡ ಅನಿಸುತ್ತೆ ಅನ್ನೋದು ಫ್ಯಾನ್ಸ್ ಮಾಡ್ತಿರೋ ಕಂಪ್ಲೇಂಟ್. ಸದ್ಯಕ್ಕೀಗ ಈ ಸೀರಿಯಲ್‌ನ ಒಂದು ವಿಷಯ ಹಿಡ್ಕೊಂಡು ಜನ ಟ್ರೋಲ್ ಮಾಡ್ತಿದ್ದಾರೆ. ಜೊತೆಗೆ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್‌ಗೆ ಚೆನ್ನಾಗಿ ಕ್ಲಾಸ್ ತಗೊಳ್ತಿದ್ದಾರೆ. ಅದಕ್ಕೆ ಎರಡನೇ ಕಾರಣ ಶ್ವೇತಾ ಜೆಸಿಬಿಯಲ್ಲಿ ಕೂತು ಮನೆಯವರ ಮೇಲೆ ಜೆಸಿಬಿ ಹತ್ತಿಸ್ತೀನಿ ಅಂತ ಹೊರಟಿರೋದು, ಇದಕ್ಕೆ ಭೂಪತಿ, ಮೌರ್ಯ ಮುಖದಲ್ಲಷ್ಟೇ ಎಕ್ಸ್‌ಪ್ರೆಶನ್ ಕೊಟ್ಟು ಸುಮ್ಮನಾಗಿರೋದು. ಬರೀ ನಕ್ಷತ್ರ ಅಷ್ಟೇ ಏನೇನೋ ವೀರಾವೇಶದ ಡೈಲಾಗ್ ಹೊಡೀತಿರೋದು.
ಈ ಅಂಶಗಳಿಂದ ಸೀರಿಯಲ್ ಸಖತ್ ಫೇಕ್ ಅನ್ನೋ ಫೀಲ್ ಬರ್ತಿದೆ ಅನ್ನೋದು ವೀಕ್ಷಕರ ಅಭಿಪ್ರಾಯ. ಕಮೆಂಟ್ ಬಾಕ್ಸ್‌ನಲ್ಲಿ ಬಂದಿರೋ ಒಂದು ಮೇಜರ್ ಕಂಪ್ಲೇಂಟ್ ಅಂದರೆ ಈ ಸೀರಿಯಲ್ ಡೈರೆಕ್ಟರ್‌ಗೆ ಪವರ್ ಆಫ್ ಅಟಾರ್ನಿ ಅನ್ನೋದರ ಅರ್ಥ ಗೊತ್ತಿದೆಯಾ ಅನ್ನೋದು. ಈ ಸೀರಿಯಲ್‌ನಲ್ಲಿ ಅತ್ತೆ ಶಕುಂತಳಾ ದೇವಿ ತನ್ನ ಆಸ್ತಿಯ ಪವರ್ ಆಫ್ ಅಟಾರ್ನಿಯನ್ನ ಶ್ವೇತಾಗೆ ಕೊಟ್ಟಿರ್ತಾಳೆ. ಹೀಗಿರುವಾಗ ಒಂಚೂರಾದರೂ ಅವಳಿಗೆ ಆಸ್ತಿಯಲ್ಲಿ ಹಿಡಿತ ಇಲ್ಲ ಅಂತ ತೋರಿಸಿರೋದು ತಪ್ಪು ಅನ್ನೋದು ವೀಕ್ಷಕರ ವಾದ. ಜೊತೆಗೆ ಆಕೆ ಎಂಥವಳಾದ್ರೂ ವಯಸ್ಸಿಗೆ ಬಂದ ಮಕ್ಕಳ ಹೆಸರಲ್ಲಿ ಒಂಚೂರಾದರೂ ಹಣ, ಆಸ್ತಿ ಇಟ್ಟೇ ಇಟ್ಟಿರುತ್ತಾಳೆ. ಅಂಥಾದ್ರಲ್ಲಿ ಶಕುಂತಳಾ ದೇವಿ ಮಾತ್ರ ಸಮಸ್ತ ಆಸ್ತಿಯನ್ನೂ ಬರೀ ತನ್ನ ಹೆಸರಲ್ಲೇ ಇಟ್ಟುಕೊಂಡಳಾ? ಈ ತರದ್ದು ಜಗತ್ತಲ್ಲಿ ನಡೆಯುತ್ತಾ ಅನ್ನೋ ಪ್ರಶ್ನೆಯನ್ನೂ ವೀಕ್ಷಕರು ಕೇಳಿದ್ದಾರೆ.
ಲೇಡಿ ರಾಮಾಚಾರಿ ಸತ್ಯ ಸೀರೆ ಉಟ್ಕೊಂಡೇ ರೌಡಿಗಳ ಜೊತೆ ಹೆಂಗೆ ಫೈಟ್ ಮಾಡ್ತಿದ್ದಾಳೆ ನೋಡಿ!
ಇನ್ನು ಲಕ್ಷಣಾ ಸೀರಿಯಲ್‌ನಲ್ಲಿ ಸದ್ಯ ಮನೆಯವರ ಯಾರ ಮಾತನ್ನೂ ಕೇಳದ ಶಕುಂತಳಾ ದೇವಿ ಶ್ವೇತಾ ಮಾಡಿದ ನಾಟಕಕ್ಕೆ ಬಲಿಯಾದ್ದಾಳೆ. ಅವಳು ನಾಟಕವಾಡಿದ್ದನ್ನೇ ಒಪ್ಪಿ ತನ್ನೆಲ್ಲ ಆಸ್ತಿಯ ಪವರ್ ಆಫ್ ಅಟಾರ್ನಿಯನ್ನು ಶ್ವೇತಾಗೆ ಕೊಟ್ಟಿದ್ದಾಳೆ. ಯಾವಾಗ ತನಗೆ ಅಧಿಕಾರ ಬಂತೋ ಶ್ವೇತಾ ತನ್ನ ಆಟ ಶುರು ಮಾಡಿದ್ದಾಳೆ. ಎಲ್ಲ ಪವರ್‌ಅನ್ನೂ ತಾನೇ ಕೈಗೆ ತಗೊಂಡಿದ್ದಾಳೆ. ಮನೆಯವರನ್ನೆಲ್ಲ ಕೀಲು ಕೊಟ್ಟ ಗೊಂಬೆ ಥರ ಆಟ ಆಡಿಸ್ತಿದ್ದಾಳೆ. ಶ್ವೇತಾಳ ಈ ನಾಟಕ ಅತ್ತೆ ಶಕುಂತಳಾ ದೇವಿಗೆ ಅರ್ಥವಾಗುವ ಹೊತ್ತಿಗೆ ಇಡೀ ಫ್ಯಾಮಿಲಿ ಬೀದಿಗೆ ಬಿದ್ದಿದೆ. ಈ ನಡುವೆ ಪರಿಸ್ಥಿತಿ ಹೀಗಿದ್ದರೂ ಶಕುಂತಳಾ ದೇವಿ ಬರ್ತ್ ಡೇಯನ್ನು ಆಚರಿಸಲು ನಕ್ಷತಾ, ಭೂಪತಿ ಮತ್ತು ಮನೆಯವರು ಅವರ ಹಳೆಯ ಜಾಗಕ್ಕೆ ಬಂದಿದ್ದಾರೆ. ಅದು ಶಕುಂತಳಾ ದೇವಿ ತನ್ನ ಹೊಟೇಲ್ ಉದ್ಯಮ ಆರಂಭಿಸಿದ ಜಾಗ. ಅಲ್ಲಿ ಆಕೆಯ ಬರ್ತ್ ಡೇ ಆಚರಿಸಲು ಮನೆಯವರು ಮುಂದಾಗಿದ್ದಾರೆ.
ಆ ಟೈಮಿಗೆ ಅಲ್ಲಿ ಜೆಸಿಬಿ ಬಂದಿದೆ. ಶಕುಂತಳಾ ದೇವಿಯ ಹಳೆಯ ರೆಸ್ಟೊರೆಂಟನ್ನೇ ಉರುಳಿಸಲು ಶ್ವೇತಾ ಸಂಚು ಮಾಡಿದ್ದಾಳೆ. ಜೆಸಿಬಿ ತಗೊಂಡು ಬಂದು ಹಳೆ ಬಿಲ್ಡಿಂಗ್ ಒಡೆಯಲು ಮುಂದಾಗಿದ್ದಾಳೆ. ಮನೆಯವರು ಒಪ್ಪದಿದ್ದಾಗ ತಾನೇ ಜೆಸಿಬಿ ಏರಿ ಮನೆಯವರ ಮೇಲೆ ಹತ್ತಿಸಲು ಮುಂದಾಗಿದ್ದಾಳೆ. ಈ ಸೀನ್‌ಗಳಲ್ಲಿ ಶ್ವೇತಾ ಮತ್ತು ನಕ್ಷತ್ರಾದ್ದು ಓವರ್ ಆಕ್ಟಿಂಗ್ ಆಯ್ತು ಅನ್ನೋದು ವೀಕ್ಷಕರ ಕಂಪ್ಲೇಂಟ್.
Shrirasthu Shubhamasthu: ಮಾಧವನ ಪ್ರೇಮ ನಿವೇದನೆಗೆ ತುಳಸಿ ಗ್ರೀನ್ ಸಿಗ್ನಲ್ ಕೊಟ್ಟಾಯ್ತು!
