ಲೇಡಿ ರಾಮಾಚಾರಿ ಸತ್ಯ ಹೊಡೆತಕ್ಕೆ ರೌಡಿಗಳು ಮಟಾಶ್. ಸೀರೆ ಉಟ್ಕೊಂಡೇ ರೌಡಿಗಳನ್ನು ಹೆಡೆಮುರಿ ಕಟ್ಟಿಹಾಕಿದ ಸತ್ಯ ಸಾಹಸ ಕಂಡು ಬೆಂಕಿ ಅಂದ್ರು ವೀಕ್ಷಕರು.
ಸತ್ಯ ಸೀರಿಯಲ್‌ನಲ್ಲಿ ಹೀರೋಯಿನ್ ಸತ್ಯ ರೌಡಿಗಳ ಹೆಡೆಮುರಿ ಕಟ್ಟಿದ್ದಾಳೆ. ಈ ಲೇಡಿ ರಾಮಾಚಾರಿ ಸಾಹಸಕ್ಕೆ ಕೆಲವರು ಓವರ್ರಾಯ್ತು ಅಂತ ಮೂಗು ಮುಗಿದರೆ ಮತ್ತೊಂದಿಷ್ಟು ಜನ ಅಬ್ಬಾ, ನಮ್ ಸತ್ಯ ಬೆಂಕಿ ಅಂದಿದ್ದಾರೆ. ಅಂದ ಹಾಗೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್‌ನ ಕಥೆಯಲ್ಲಿ ಇಷ್ಟು ದಿನ ಸತ್ಯ ಅತ್ತೆಯನ್ನು ಮೆಚ್ಚಿಸೋದಕ್ಕೆ ಏನೇನೆಲ್ಲ ಸರ್ಕಸ್ ಮಾಡ್ತಿದ್ಲು. ಆದರೆ ಇದು ಅತ್ತೆ ಸೀತಾಗೆ ಮಾತ್ರ ಬಹಳ ಕಿರಿ ಕಿರಿ ಆಗುತ್ತಾ ಇರುತ್ತದೆ. ಈ ಹಿಂದಿನ ಎಪಿಸೋಡ್‌ನಲ್ಲಿ ಸೀತಾ ಎಣ್ಣೆ ಹಚ್ಚಲು ಊರ್ಮಿಳಾ ಬಳಿ ಹೇಳುತ್ತಾಳೆ. ಆದರೆ ಊರ್ಮಿಳಾ ಸತ್ಯಳನ್ನು ಸೀತಾ ತಲೆಗೆ ಎಣ್ಣೆ ಹಚ್ಚುವಂತೆ ಊರ್ಮಿಳಾ ಕಳುಹಿಸುತ್ತಾಳೆ. ಹೀಗೆಯೇ ಅತ್ತೆ ಹಾಗೂ ಸೊಸೆಯನ್ನು ಬಹಳ ಹತ್ತಿರ ಮಾಡಲು ಮುಂದಾಗುತ್ತಾಳೆ. ಆದರೆ ಸತ್ಯ ತನ್ನ ತಲೆಗೆ ಎಣ್ಣೆ ಹಾಕುತ್ತ ಇದ್ದಾಳೆ ಎಂದು ಗೊತ್ತಾಗುತ್ತಾ ಇದ್ದ ಹಾಗೆಯೇ ಸೀತಾ ಯಾಕೆ ಏನು ಎತ್ತ ಎಂದು ಕೇಳದೆ ಸತ್ಯ ಹಾಗೂ ಉರ್ಮೀಳರನ್ನು ತರಾಟೆಗೆ ತೆಗೆದುಕೊಂಡು ಬಿಡುತ್ತಾಳೆ. ಇದನ್ನೆಲ್ಲ ನೋಡಿದ ಕಾರ್ತಿಕ್ ಅಮ್ಮನಿಗೆ ಚೆನ್ನಾಗಿ ಬೈದು ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾನೆ.
ಇದೀಗ ಸತ್ಯ ಹಾಗೂ ಸೀತಾ ಜಗಳ ಮಧ್ಯೆ ಕಾರ್ತಿಕ್ ನನಗೆ ಟೀ ಬೇಕು ಎಂದು ಹಠ ಹಿಡಿಯುತ್ತ ಇರುತ್ತಾನೆ. ಸತ್ಯ ಬಗ್ಗೆ ಏನೇನೆಲ್ಲ ಸೀತಾ ಬೈದರೂ ಅದನ್ನೆಲ್ಲ ಕೇಳಿಸಿಕೊಂಡ ಸತ್ಯ ಯಾಕೆ ಹೀಗೆಲ್ಲ ಹೇಳುತ್ತ ಇದ್ದೀರಿ ಎಂದೆಲ್ಲ ಅತ್ತೆಯನ್ನು ಪ್ರಶ್ನೆ ಮಾಡುತ್ತಾಳೆ.
ಮಳೆಯಲಿ ಜೊತೆಯಲಿ.. ಕನ್ನಡ ಸೀರಿಯಲ್‌ನಲ್ಲಿ ರೈನ್ ರೊಮ್ಯಾನ್ಸ್!
ಸತ್ಯ ರೌಡಿ ತರ ಮಾತನಾಡುವುದನ್ನು ನೋಡಿದ ಸೀತಾ ಊರ್ಮಿಳಾ ಬಳಿ ಏನು ಈಕೆ ಹೀಗೆಲ್ಲ ಮಾತನಾಡುತ್ತಾ ಇದ್ದಾಳಲ್ಲ ಎಂದೆಲ್ಲ ಬಹಳ ಬೇಸರ ಮಾಡಿಕೊಂಡು ಇರುವಾಗ ಸತ್ಯ ಏನಾಯಿತು ಸೀತಮ್ಮ, ಯಾಕೆ ಹೀಗೆ ಮಾಡುತ್ತ ಇದ್ದೀರಿ ನಾನೇನಾದರೂ ತಪ್ಪು ಮಾತನಾಡಿದೆನ ಎಂದೆಲ್ಲ ಹೇಳುತ್ತಾಳೆ. ಇನ್ನು ಕಾರ್ತಿಕ್ ಬಂದು ಸತ್ಯ ನನಗೆ ಒಂದು ಗ್ಲಾಸ್ ಟೀ ಬೇಕು ಅಂದಾಗ ಸತ್ಯ ಕಾರ್ತಿಕ್ ಗೆ ಟೀ ಮಾಡಿ ಕೊಡಲು ಹಿಂದೇಟು ಹಾಕಿದ್ದನ್ನು ನೋಡಿ ಸೀತಾಗೆ ಬಹಳ ಕೋಪ ಬರುತ್ತದೆ. ಈ ಟೀ ಎಪಿಸೋಡ್ ಮುಂದುವರಿದು ಅತ್ತೆ ಸೀತಾ ತನಗೆ ಸತ್ಯನೇ ಟೀ ಮಾಡಿ ತಂದುಕೊಡಬೇಕು ಅಂತ ಪಟ್ಟು ಹಿಡೀತಾಳೆ.
ಇನ್ನೊಂದು ಕಡೆ ಅತ್ತೆ ಸೊಸೆ ಮಾರ್ಕೆಟ್ ಗೆ ಬರ್ತಾರೆ. ಅಲ್ಲಿ ರೌಡಿಗಳ ಗ್ಯಾಂಗ್ ಹುಡುಗಿಯೊಬ್ಬಳನ್ನು ಚುಡಾಯಿಸುತ್ತಾ ಆಕೆಯ ಕಣ್ಣಲ್ಲಿ ನೀರು ತರಿಸುತ್ತಿರುತ್ತಾರೆ. ಇದನ್ನು ಕಂಡು ರೊಚ್ಚಿಗೇಳುವ ಸತ್ಯ ಆ ಹುಡುಗಿಯಲ್ಲಿ ಧೈರ್ಯ ತುಂಬುತ್ತಾಳೆ. 'ಹೆದರಿಸೋರಿಗೂ ಹೆದರಿಕೆ ಅನ್ನೋದಿರುತ್ತೆ. ನಾವು ಹೆದರೋ ಬದಲು ಎದುರಿಸಿ ನಿಂತರೆ ಅವರು ಹೆದರ್ತಾರೆ' ಅನ್ನೋ ಮಾಸ್ ಡೈಲಾಗ್ ಹೊಡೀತಾಳೆ. ಅಷ್ಟೇ ಅಲ್ಲ, ಆ ಹಳೇ ರೌಡಿಯನ್ನು, ಅವನ ಗ್ಯಾಂಗ್ ಅನ್ನು ಅಟ್ಟಾಡಿಸಿ ಹೊಡೀತಾಳೆ. ಲೇಡಿ ರಾಮಾಚಾರಿ ಫೈಟಿಗೆ ರೌಡಿಗಳು ತತ್ತರಿಸಿ ಹೋಗ್ತಾರೆ. ಆದರೆ ಸತ್ಯಾ ಫೈಟಿಂಗ್ ಮುಂದುವರೀಬೇಕು ಅಂದ್ರೆ ಮತ್ತೇನಾದ್ರೂ ಆಗಲೇ ಬೇಕಲ್ವಾ..
ಗುಟ್ಟಾಗಿ 2ನೇ ಮದ್ವೆಯಾದ್ರಾ ಜ್ಯೋತಿ ರೈ? ತೆಲುಗು ನಿರ್ದೇಶಕನಿಗಾಗಿ ಹೆಸರು ಬದಲಾಯಿಸಿಕೊಂಡ 'ಹೊಂಗನಸು' ನಟಿ
ರೌಡಿಗಳು ಈಗ ಸತ್ಯ ಅತ್ತೆ ಸೀತಾಳ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ. ಸತ್ಯಾ ತಮ್ಮ ಅಡ್ಡಾಕ್ಕೆ ಬಂದು ಅದನ್ನು ಬಿಡಿಸಿಕೊಂಡು ಹೋಗಲಿ ಅಂತ ಚಾಲೆಂಜ್ ಹಾಕ್ತಾರೆ. ಚಾಲೆಂಜ್‌ಗೇ ಚಾಲೆಂಜ್ ಹಾಕೋ ನಮ್ ಸತ್ಯ ಇದೀಗ ರೌಡಿ ಅಡ್ಡಾಕ್ಕೆ ಎಂಟ್ರಿಕೊಟ್ಟಿದ್ದಾಳೆ. ರೌಡಿಗಳ ಜೊತೆ ಅದ್ಯಾವ ಲೆವೆಲ್‌ಗೆ ಫೈಟ್ ಮಾಡ್ತಿದ್ದಾಳೆ ಅಂದರೆ ಎಲ್ಲಾದ್ರೂ ಇದನ್ನು ಅತ್ತೆ ಸೀತಾ ನೋಡಿಬಿಟ್ರೆ ಎದೆ ಒಡ್ಕೊಂಡು ರೈಟ್ ಹೇಳೋರು ಅಂತ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ. ಹೆಣ್ಮಕ್ಕಳು ಸ್ಟ್ರಾಂಗ್ ಆಗಿರೋದನ್ನು ಯಾವಾಗ್ಲೂ ಗೇಲಿ ಮಾಡೋ ಕೆಲವು ಕೆಟ್ಟ ಮನಸ್ಸಿನವರು ಈ ಫೈಟ್ ಸೀಕ್ವೆನ್ಸ್ ಬಗ್ಗೆ ಎಂದಿನಂತೆ ಕೊಳಕು ಮನಸ್ಸಿನ ಕಮೆಂಟ್ ಮಾಡಿದ್ದಾರೆ. ಆದರೆ ಎಷ್ಟೋ ಜನ ವೀಕ್ಷಕರು ಸತ್ಯಳ ಸಾಹಸಕ್ಕೆ ಶಭಾಷ್ ಅಂದಿದ್ದಾರೆ.
