Asianet Suvarna News Asianet Suvarna News

ಎಕ್ಸೈಟ್ ಇಲ್ಲದ ಚಂದನ್, ಎಲ್ಲದಕ್ಕೂ ಅತ್ಯುತ್ಸಾಹ ತೋರೋ ನಿವೇದಿತಾ: ಜೋಡಿ ಪರಸ್ಪರ ದೂರಿದ್ದೇನು?

ಚಂದನ್​ ಮತ್ತು ನಿವೇದಿತಾ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಜೊತೆಯಾಗಿ ಅವರು ನೀಡಿರುವ ಸಂದರ್ಶನ ವೈರಲ್​ ಆಗುತ್ತಿದೆ. ಅದರಲ್ಲಿ ಇಬ್ಬರೂ ಆರೋಪಿಸಿಕೊಂಡಿದ್ದೇನು? 
 

interview given by Chandan Shetty and Nivedita Gowda accusing each other gone viral after divorce suc
Author
First Published Jun 7, 2024, 5:45 PM IST

ಬಿಗ್​ಬಾಸ್​ ಖ್ಯಾತಿಯ, ಬಾರ್ಬಿ ಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಮತ್ತು ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಇದಾಗಲೇ ಡಿವೋರ್ಸ್​ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಏಕಾಏಕಿ ಈ ವಿಷಯ ವೈರಲ್​ ಆಗಿದ್ದು, ಇವರಿಬ್ಬರ ಅಭಿಮಾನಿಗಳಿಗೆ ಬರಸಿಡಿಲು ಬಂದೊದಿದೆ. ಅಷ್ಟಕ್ಕೂ ಇವರಿಬ್ಬರನ್ನೂ ಸ್ಯಾಂಡಲ್​ವುಡ್​ನ ಕ್ಯೂಟ್​ ತಾರಾ ಜೋಡಿ ಎಂದೇ ಕರೆಯಲಾಗುತ್ತಿತ್ತು. ಇನ್ನೂ ಚಿಕ್ಕಮಕ್ಕಳಂತೆಯೇ ಆಡುತ್ತಿದ್ದ ನಿವೇದಿತಾ ಅವರು ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್​ ಪಡೆದುಕೊಂಡಿರುವುದೇಕೇ ಎನ್ನುವುದು ಇನ್ನೂ ಎಲ್ಲರಿಗೂ ಪ್ರಶ್ನಾರ್ಹವಾಗಿಯೇ ಉಳಿದಿದೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ನಿವೇದಿತಾ ಗೌಡ- ಚಂದನ್​ ಶೆಟ್ಟಿ ಡಿವೋರ್ಸ್​ ಮ್ಯಾಟರ್​ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಿದೆ.

ಇದರ ನಡುವೆಯೇ ಸ್ಪೀಡ್​ ಕರ್ನಾಟಕ ಎನ್ನುವ ಖಾಸಗಿ ಚಾನೆಲ್​ವೊಂದಕ್ಕೆ ಇತ್ತೀಚಿಗೆ  ಅಂದರೆ ನಾಲ್ಕನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜೊತೆಯಾಗಿ ಇಬ್ಬರೂ ನೀಡಿರುವ ಸಂದರ್ಶನವೊಂದು ವೈರಲ್​ ಆಗುತ್ತಿದೆ.   2020ರ ಫೆ. 27ರಂದು  ಮದ್ವೆಯಾಗಿದ್ದ ಜೋಡಿ ಇದೇ ಫೆಬ್ರುವರಿಯಲ್ಲಿ  ನಾಲ್ಕನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು.  ಈ ಸಂದರ್ಭದಲ್ಲಿ ಜೊತೆಯಾಗಿ ರೊಮ್ಯಾನ್ಸ್​ ಮಾಡಿದ ವಿಡಿಯೋ ಒಂದನ್ನು ನಿವೇದಿತಾ ಶೇರ್​ ಮಾಡಿಕೊಂಡಿದ್ದರು. ಇವರಿಬ್ಬರೂ ಜೊತೆಯಾಗಿ ನಟಿಸ್ತಿರೋ ಕ್ಯಾಂಡಿ ಕ್ರಶ್​ ಮೂವಿಯ ಮೇಕಿಂಗ್​ ವಿಡಿಯೋ ಇದಾಗಿದ್ದು, ಜೋಡಿ ಇದರಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದರು. ಈ ಕುರಿತು ನಡೆದ ಸಂದರ್ಶನದಲ್ಲಿ ಆ್ಯಂಕರ್​ ಕೇಳಿದ ಪ್ರಶ್ನೆಗೆ ದಂಪತಿ ಒಬ್ಬರನ್ನೊಬ್ಬರ ಮೇಲೆ ಹುಸಿಮುನಿಸಿನಿಂದ ಒಂದಿಷ್ಟು ಮಾತನಾಡಿದ್ದಾರೆ.

ವಿವಾದದಿಂದ ಶುರುವಾದ ಮದುವೆ, ಕಮೆಂಟ್ಸ್​ಗಳಿಂದ ಮುರಿದೋಯ್ತಾ? ಮೊನ್ನೆಯಷ್ಟೇ ಒಟ್ಟಿಗಿದ್ದೋರು ಡಿವೋರ್ಸ್​ಗೆ ಹೋಗಿದ್ದೇಕೆ?

ಇನ್ನೂ ಚಿಕ್ಕವರಂತೆ ಇರುವ ನಿವೇದಿತಾ ಅವರನ್ನು ನೀವು ನಾಲ್ಕು ವರ್ಷ ಹೇಗೆ ಹ್ಯಾಂಡಲ್​ ಮಾಡಿದ್ರಿ ಎಂದು ಪ್ರಶ್ನೆ ಕೇಳಿದಾಗ, ಚಂದನ್​ ಶೆಟ್ಟಿಯವರು, ನಾನು ಸೌಮ್ಯ ಸ್ವಭಾವದವನು, ಯಾವುದಕ್ಕೂ ಜಾಸ್ತಿ ಎಕ್ಸೈಟ್ ಆಗುವುದಿಲ್ಲ. ಸುಖವೇ ಇರಲಿ, ದುಃಖವೇ ಇರಲಿ ಬಂದದ್ದನ್ನು ಹಾಗೆಯೇ ಸ್ವೀಕರಿಸುತ್ತೇನೆ. ಆದರೆ ಇವಳು ಹಾಗಲ್ಲ. ವಿಪರೀತ ಎಲ್ಲದಕ್ಕೂ ಎಕ್ಸೈಟ್ ಆಗ್ತಾಳೆ. ಚಿಕ್ಕ ಚಿಕ್ಕ ವಿಷಯಕ್ಕೂ ಎಕ್ಸೈಟ್ಮೆಂಟ್​ ಜಾಸ್ತಿ. ಸ್ವಲ್ಪ ಖುಷಿಯಾದ್ರೂ ಓವರ್​ ಆಗಿ ತೋರಿಸಿಕೊಳ್ತಾಳೆ, ಸ್ವಲ್ಪ ದುಃಖವಾದ್ರೂ ತುಂಬಾ ದುಃಖ ಪಡ್ತಾಳೆ. ಹಾಗೂ ಹೀಗೂ ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ ಎಂದರು. ಇದೇ ವೇಳೆ ಮಕ್ಕಳು ಮಾಡಿಕೊಳ್ಳುವ ವಿಚಾರದಲ್ಲಿ ಇನ್ನೂ ನನಗೆ ಕರಿಯರ್​ ಮುಂದುವರೆಸಬೇಕೆಂದು ಇದೆ. ಆದ್ದರಿಂದ ಸದ್ಯ ಬೇಡ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು. 

ಆಗ ಮಧ್ಯೆ ಪ್ರವೇಶಿಸಿದ ನಿವೇದಿತಾ, ಆಹಾಹಾ, ಒಹೊಹೊ ಹಾಗೇನಿಲ್ಲ. ಇವರಿಗೆ ತುಂಬಾ ಕೋಪ ಬರುತ್ತೆ. ಬಹಳ ಬೇಗ ಕೋಪ ಬರುತ್ತೆ ಎಂದರು. ಆಗ ಚಂದನ್​ ಅವರು, ನನಗೆ ಸ್ವಲ್ಪ ಕೋಪ ಜಾಸ್ತಿ ನಿಜ.  ಆದರೆ ಅಷ್ಟೇ ಬೇಗ ಕರಗಿಬಿಡುತ್ತದೆ. ಇವಳು ಹೇಳುವಷ್ಟು ಹೆಚ್ಚಿಗೆ ಕೋಪವೇನೂ ಬರಲ್ಲ, ಬೇಗ ತಣ್ಣಗಾಗಿಬಿಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಆನ್​ಸ್ಕ್ರೀನ್​ ರೊಮ್ಯಾನ್ಸ್​ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಜೋಡಿ ತುಂಬಾ ಖುಷಿಯಿಂದಲೇ ಇದ್ದರು. ಆದರೆ ಏಕಾಏಕಿ ಏನಾಯಿತೋ ಆ ದೇವರೇ ಬಲ್ಲ ಅಂತಿದ್ದಾರೆ ಫ್ಯಾನ್ಸ್​.  

ಹುಟ್ಟುಹಬ್ಬ ಸಂಭ್ರಮದಲ್ಲಿ ನಿವೇದಿತಾ ಗೌಡ: ಗಂಡ ಸರಿ ಇದ್ರೆ ಹೀಗಾಗ್ತಿರಲಿಲ್ಲಾ ಅನ್ನೋದಾ ಫ್ಯಾನ್ಸ್​?
 

Latest Videos
Follow Us:
Download App:
  • android
  • ios