Asianet Suvarna News Asianet Suvarna News

ವಿವಾದದಿಂದ ಶುರುವಾದ ಮದುವೆ, ಕಮೆಂಟ್ಸ್​ಗಳಿಂದ ಮುರಿದೋಯ್ತಾ? ಮೊನ್ನೆಯಷ್ಟೇ ಒಟ್ಟಿಗಿದ್ದೋರು ಡಿವೋರ್ಸ್​ಗೆ ಹೋಗಿದ್ದೇಕೆ?

ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಡಿವೋರ್ಸ್​ಗೆ ಕಾರಣವೇನು? ನಿವೇದಿತಾ ಅವರ ರೀಲ್ಸ್​ ಕಮೆಂಟ್ಸ್​ಗೆ ನೆಟ್ಟಿಗರು ಹೇಳ್ತಿರೋದೇನು?
 

Is Reels comments reason for Nivedita Gowda and Chandan Shetty divorce fans reacts suc
Author
First Published Jun 7, 2024, 5:00 PM IST

ಸದ್ಯ ಸ್ಯಾಂಡಲ್​ವುಡ್​ನಲ್ಲಿ ನಿವೇದಿತಾ ಗೌಡ- ಚಂದನ್​ ಶೆಟ್ಟಿ ಡಿವೋರ್ಸ್​ ಮ್ಯಾಟರ್​ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಿದೆ. ಇದು ನಿಜನಾ ಸುಳ್ಳೋ ಎಂದು ಅಭಿಮಾನಿಗಳು ಸೋಷಿಯಲ್​ ಮೀಡಿಯಾ ತಡಕಾಡುತ್ತಿದ್ದಾರೆ. ಬಿಗ್​ಬಾಸ್​​ ಖ್ಯಾತಿಯ, ಬಾರ್ಬಿ ಡಾಲ್​ ಎಂದೇ ಅನ್ನಿಸಿಕೊಳ್ತಿದ್ದ ನಿವೇದಿತಾ ಅವರ ಇನ್​ಸ್ಟಾಗ್ರಾಮ್​ ಖಾತೆ ಹುಡುಕಿದರೆ ಕೆಲ ದಿನಗಳ ಹಿಂದಷ್ಟೇ ಪತಿ ಚಂದ್​ ಶೆಟ್ಟಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಕಲರ್ಸ್​ ಕನ್ನಡದ ರಿಯಾಲಿಟಿ ಷೋ ಕುರಿತು ಒಟ್ಟಿಗೇ ಮಾತನಾಡಿದ್ದಾರೆ. ಹೀಗಿರುವಾಗ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ನಿವೇದಿತಾ ಅವರು ತುಂಬಾ ಖುಷಿಯಲ್ಲಿಯೇ ಇರುವಂತೆ ಕಾಣುತ್ತಿದೆ. ಚಂದನ್​ ಶೆಟ್ಟಿ ಸ್ವಲ್ಪ ಮಂಕಾದಂತೆ ಕಂಡರೂ ಈ ವಿಡಿಯೋ ನೋಡಿದವರಿಗೆ ವಿಚ್ಛೇದನ ಸುಳಿವೂ ಸಿಗುವುದಿಲ್ಲ. ಆರು ದಿನಗಳ ಹಿಂದೆ ಶೇರ್​ ಮಾಡಿದ ವಿಡಿಯೋ ಇದಾಗಿದೆ. ಹಾಗಿದ್ದ ಮೇಲೆ ಏಕಾಏಕಿ ಏಕೆ ಹೀಗಾಯ್ತು ಎನ್ನುವುದು ಅಭಿಮಾನಿಗಳು ಗೊಂದಲದಲ್ಲಿ ಇದ್ದಾರೆ.

ಅಷ್ಟಕ್ಕೂ ಇವರ ಲವ್​ ಸ್ಟೋರಿ ಶುರುವಾಗಿದ್ದೇ ವಿವಾದದಿಂದ ಎನ್ನುವುದು ಅವರ ಅಭಿಮಾನಿಗಳಿಗೂ ಚೆನ್ನಾಗಿ ಗೊತ್ತಿದೆ. ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡ ಪ್ರಪೋಸ್‌ ಮಾಡಿದ್ದರು. ದಸರಾ ವೇದಿಕೆಯನ್ನು ಇಂಥ ಕಾರಣಕ್ಕೆ ಬಳಸಿಕೊಂಡಿದ್ದರಿಂದ ಭಾರಿ ಟೀಕೆ ವ್ಯಕ್ತವಾಗಿ ಅದು  ವಿವಾದಕ್ಕೆ ಕಾರಣವಾಗಿತ್ತು. ಅಂದು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಕೂಡ, ದಸರಾ ಕಾರ್ಯಕ್ರಮದಲ್ಲಿ ಇಂಥ ಘಟನೆ ನಡೆದಿದ್ದು ಸಹಿಸೋದಿಲ್ಲ ಇದು ಅಪರಾಧ ಎಂದು ಹೇಳಿದ್ದರು. ಹೀಗೆ ವಿವಾದದ ಮೂಲಕವೇ ಶುರುವಾಗಿದ್ದ ಮದುವೆ ಈಗ ಮುರಿದು ಬಿದ್ದ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್‌ಗೆ ಅರ್ಜಿ ಹಾಕಿದ ಸೆಲೆಬ್ರೆಟಿ!

ಸೆಲೆಬ್ರಿಟಿಗಳ ಬಗ್ಗೆ ಈ ರೀತಿಯ ವಿಷಯ ಹೊರಬಂದಾಗ ಸೋಷಿಯಲ್​ ಮೀಡಿಯಾಗಳಲ್ಲಿ ಸಹಜವಾಗಿಯೇ ಈ ಬಗ್ಗೆ ತಮ್ಮದೇ ಆದ ವಾದ-ಪ್ರತಿವಾದ ಹುಟ್ಟುಕೊಳ್ಳುವುದು ಸಹಜ.   ನಿವೇದಿತಾ ಮತ್ತು ಚಂದನ್​ ಶೆಟ್ಟಿ ಅವರ ವಿಷಯದಲ್ಲಿಯೂ ಹಾಗೆಯೇ ಆಗುತ್ತಿದೆ. ಕೆಲ ತಿಂಗಳುಗಳಿಂದ ನಿವೇದಿತಾ ಅವರು ರೀಲ್ಸ್ ಮಾಡುವುದು ಏಕಾಏಕಿ ಹೆಚ್ಚಾಗಿತ್ತು. ಅದರಲ್ಲಿಯೂ ಅವರು ಷಾರ್ಟ್ಸ್​, ಮಿನಿ, ಸ್ಲಿಟ್​ ಇಂಥವುಗಳನ್ನೇ ಬಳಸುತ್ತಿದ್ದರು. ಕೆಲ ದಿನಗಳಿಂದ ಅವರ ದೇಹ ಪ್ರದರ್ಶನವೂ ಹೆಚ್ಚಾಗಿತ್ತು ಎನ್ನುತ್ತಿದ್ದಾರೆ ಕಮೆಂಟಿಗರು. ಅವರು ಈ ರೀತಿ ಯಾಕೆ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ, ಇವರು ಈ ರೀತಿ ರೀಲ್ಸ್​ ಮಾಡಿದಾಗಲೆಲ್ಲವೂ ಕಮೆಂಟಿಗರು ನಟಿಯನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ನಿಮದ್ಯಾಕೋ ಅತಿಯಾಯ್ತು ಎಂದೇ ಹೇಳುತ್ತಿದ್ದರು. 

ಇದೀಗ ಇದೇ ನಿವೇದಿತಾ ಮತ್ತು ಚಂದನ್​ ಅವರ ಬಿರುಕಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿವೇದಿತಾ ಅವರು ರೀಲ್ಸ್ ಮಾಡಿದಾಗಲೆಲ್ಲಾ ಅವರ ವೇಷಭೂಷಣ ನೋಡಲಾಗದೇ ನೆಟ್ಟಿಗರು ಚಂದನ್​ ಎಲ್ಲಿದ್ದಿಯಪ್ಪಾ ಎಂದೇ  ಪ್ರಶ್ನಿಸುತ್ತಿದ್ದರು. ಅಷ್ಟರ ಮಟ್ಟಿಗೆ ನಿವೇದಿತಾ ಅವರಿಗೆ ಕಮೆಂಟ್​ಗಳ ಸುರಿಮಳೆಯಾಗುತ್ತಿತ್ತು. ಸೀರೆಯುಟ್ಟರೆ ಚೆನ್ನಾಗಿ ಕಾಣುವಿರಿ, ಪದೇ ಪದೇ ದೇಹ ಪ್ರದರ್ಶನ ಯಾಕೆ ಎಂದೇ ಎಲ್ಲರೂ ಹೇಳುತ್ತಿದ್ದರು. ಇದೀಗ ಇದು ಅತಿಯಾಗಿಯೇ ಇವರಿಬ್ಬರ ಬಿರುಕಿಗೆ ಕಾರಣವಾಗಿರಬೇಕು ಎಂದೇ ವಿಶ್ಲೇಷಿಸಲಾಗುತ್ತಿದೆ. ಇವರಿಬ್ಬರೂ ತಮ್ಮ ಕರಿಯರ್​ ದೃಷ್ಟಿಯಿಂದ ಡಿವೋರ್ಸ್​ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಮದುವೆಗೂ ಮುನ್ನ ಇವೆಲ್ಲಾ ಗೊತ್ತಿರಲಿಲ್ವಾ? ಇವೆಲ್ಲಾ ಸುಳ್ಳು ಎನ್ನುತ್ತಿದ್ದಾರೆ ಅಭಿಮಾನಿಗಳು. 

ಅದೆಷ್ಟೂ ಅಂತ ಕೂದಲು ಕಿತ್ಕೋತಿಯಾ ತಾಯಿ? ಕೈಮೇಲೆ ಮಾಡಿ ಏನ್‌ ತೋರಿಸ್ತಿದ್ದಿಯಾ? ನಿವೇದಿತಾಗೆ ಕೇಳ್ತಿದ್ದಾರೆ ಫ್ಯಾನ್ಸ್‌
 

Latest Videos
Follow Us:
Download App:
  • android
  • ios