Asianet Suvarna News Asianet Suvarna News

ಹುಟ್ಟುಹಬ್ಬ ಸಂಭ್ರಮದಲ್ಲಿ ನಿವೇದಿತಾ ಗೌಡ: ಗಂಡ ಸರಿ ಇದ್ರೆ ಹೀಗಾಗ್ತಿರಲಿಲ್ಲಾ ಅನ್ನೋದಾ ಫ್ಯಾನ್ಸ್​?

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರ ಹುಟ್ಟುಹಬ್ಬ ಇಂದು. ಹುಟ್ಟುಹಬ್ಬ ಆಚರಿಸಿದ ಪರಿ ನೋಡಿ ನೆಟ್ಟಿಗರು ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ. 
 

Biggboss fame Nivedita Gowda birthday celebration fans troll for reels suc
Author
First Published May 12, 2024, 1:30 PM IST

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರಂತೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಫೇಮಸ್​.  ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇಂದು (ಮೇ 12) ನಿವೇದಿತಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಸಿಗರೇಟ್​ ಸೇಯುವ ರೀತಿಯಲ್ಲಿ ತುಟಿಗೆ ಕ್ಯಾಂಡಲ್​ ಇಟ್ಟು ಸ್ಮೋಕ್​  ಮಾಡುವ ರೀತಿಯಲ್ಲಿ ಲೈಟರ್​ ಆನ್​ ಮಾಡಿ ಅದನ್ನು ಕೇಕ್​ ಮೇಲೆ ಇಟ್ಟು ರೀಲ್ಸ್​ ಮಾಡಿದ್ದಾರೆ. ಹುಟ್ಟುಹಬ್ಬದ ದಿನವೂ ಈ ರೀತಿಯ ಡ್ರೆಸ್​ ಮಾಡಿಕೊಂಡಿರುವುದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಇನ್ನು ಹಲವರು ಗಂಡ ಚಂದನ ಶೆಟ್ಟಿ ಸರಿಯಾಗಿದ್ದರೆ ನೀನು ಈ ರೀತಿಯೆಲ್ಲಾ ಚಿಕ್ಕಮಕ್ಕಳ ರೀತಿ ಮಾಡುತ್ತಿರಲಿಲ್ಲ ಎನ್ನುತ್ತಿದ್ದಾರೆ. 

58ರ ಸಲ್ಮಾನ್​ ಜೊತೆ 28ರ ರಶ್ಮಿಕಾ ರೊಮ್ಯಾನ್ಸ್​! ಫೋಟೋ ನೋಡಿ ಥೂ ಅಸಹ್ಯ ಅಂತಿದ್ದಾರೆ ಫ್ಯಾನ್ಸ್​

ಇನ್ನು ನಿವೇದಿತಾ ಕುರಿತು ಹೇಳುವುದಾದರೆ, ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.   ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ನಟಿ ವೈನಿಧಿ ಹಾಡಿಗೆ  ರೀಲ್ಸ್‌ ಮಾಡಿದ್ದಾರೆ. ಮಿನಿ ಸ್ಕರ್ಟ್​ ಧರಿಸಿ,  ಸೊಂಟ ಬಳಕಿಸುತ್ತಾ ರೀಲ್ಸ್‌ ಮಾಡುತ್ತಿದ್ದಾರೆ. ಆದರೆ ಮೊದಲಿಗಿಂತಲೂ ಸ್ವಲ್ಪ ಹೆಚ್ಚೇ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಯಾಕೋ ಬರ್ತಾ ಬರ್ತಾ ಡ್ರೆಸ್​ ಚಿಕ್ಕದಾಗ್ತಿದೆ, ತೋರಿಸೋದು ಜಾಸ್ತಿಯಾಗ್ತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಆಪರೇಷನ್​ ಏನಾದ್ರೂ ಮಾಡಿಸಿಕೊಂಡ್ರಾ ಎಂದೂ ಕೇಳುತ್ತಿದ್ದಾರೆ. ಕೆಲವು ನಟಿಯರು ದೇಹದ ಗಾತ್ರ ದೊಡ್ಡದಾಗಿ ಕಾಣಿಸಲು ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋಗುವುದು ಇದೆ. ಅದನ್ನೇ ಇಟ್ಟುಕೊಂಡು ನಿವೇದಿತಾಗೂ ಅದನ್ನೇ ಕೇಳುತ್ತಿದ್ದಾರೆ ನೆಟ್ಟಿಗರು. ಇನ್ನು ಕೆಲವರು ನಿವೇದಿತಾ ಪತಿ ಚಂದನ್​ ಶೆಟ್ಟಿಯವರನ್ನು ಅಯ್ಯೋ ಪಾಪ ಎನ್ನುತ್ತಿದ್ದರೆ, ಮತ್ತೆ ಕೆಲವರು ಮಗು ಮಾಡ್ಕೊ, ಸಾಕು ಈ ಹುಡುಗಾಟ ಎನ್ನುತ್ತಿದ್ದಾರೆ. ಯಾರು ಏನೇ ಕಮೆಂಟ್​ ಮಾಡಿದ್ರೂ ನಿವೇದಿತಾ ಮಾತ್ರ ಡೋಂಟ್​ ಕೇರ್​ ಎನ್ನುತ್ತಲೇ ಇರುತ್ತಾರೆ ಬಿಡಿ. 

ಅಮ್ಮನ ದಿನಕ್ಕೆ ಸಿಹಿ-ಸೀತಾ ಭರ್ಜರಿ ಆಫರ್​: ತಾಯಿಗೆ ಪ್ರಶ್ನೆ ಕೇಳಿ- ಟ್ಯಾಗ್​ ಮಾಡಿ- ಏನಿದು ವಿಶೇಷ?

Latest Videos
Follow Us:
Download App:
  • android
  • ios