Asianet Suvarna News Asianet Suvarna News

ರಸ್ತೆ ಅಪಘಾತದಲ್ಲಿ ರೀಲ್ಸ್‌ ತೇಜಸ್ ಸಾವು; ಸಮಾಧಿ ಮುಂದೆ ವರುಣ್ ಆರಾಧ್ಯ ಭಾವುಕ

ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ ಟಿಕ್‌ ಟಾಕ್‌ ರೀಲ್ಸ್‌ ಹುಡುಗ ತೇಜಸ್. ಅಪ್ತ ಗೆಳೆಯನನ್ನು ಕಳೆದುಕೊಂಡು ನೋವಿನಲ್ಲಿ ವರುಣ್ ಅರಾಧ್ಯ....

Instagram reels star Tejas friend of Varun aradhya passes away in road accident vcs
Author
First Published Jun 27, 2024, 10:39 AM IST

ಕಿರುತೆರೆ ನಟ ವರುಣ್ ಆರಾಧ್ಯ ಆಪ್ತ ಸ್ನೇಹಿತ ತೇಜಸ್ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಣ್ಣನ ಜೊತೆ ಜಿಟಿ ಬೈಕ್‌ನಲ್ಲಿ ಪ್ರಯಾಣ ಮಾಡುವಾಗ ರಸ್ತ ಅಪಘಾತ ಸಂಬವಿಸಿದ್ದು ಕಾರು/ಲಾರಿಯ ಚಕ್ರ ತೇಜಸ್‌ ತಲೆ ಮೇಲೆ ಹರಿದಿದೆ ಎನ್ನಲಾಗಿದೆ. ಸ್ಥಳದಲ್ಲೇ ತೇಜಸ್‌ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ತೇಜಸ್‌ ಜೊತೆಗಿದ್ದ ಅಣ್ಣನ ಸ್ಥಿತಿ ಇನ್ನು ಗಂಭೀರವಾಗಿದೆ ಎನ್ನಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದ ತೇಜಸ್‌ನ ನೆನೆದು ಎಲ್ಲರು ಭಾವುಕರಾಗಿದ್ದಾರೆ. ತೇಜಸ್‌ ಸದಾ ನಗುತ್ತಿದ್ದ ವ್ಯಕ್ತಿ ನಗು ನಗುತ್ತಲೇ ಮಾತನಾಡಿಸುತ್ತಿದ್ದ ಯಾರೂ ಅವನನ್ನು ದ್ವೇಷಿಸುತ್ತಿರಲಿಲ್ಲ ಅವನಿಗೆ ಶತ್ರುಗಳೇ ಇರಲಿಲ್ಲ ಎಂದು ಅನೇಕರು ಬರೆದುಕೊಂಡಿದ್ದಾರೆ. ನಟ ವರುಣ್ ಆರಾಧ್ಯ ಬೆಳವಣಿಗೆಯಲ್ಲಿ ತೇಜಸ್ ಪ್ರಮುಖ ಪಾತ್ರವಹಿಸುತ್ತಾನೆ ಎಂದು ಇತ್ತೀಚಿಗೆ ವಿಡಿಯೋವೊಂದರಲ್ಲಿ ಹೇಳಿದ್ದರು. 

ಮಧ್ಯರಾತ್ರಿ 2 ಗಂಟೆ ಆದ್ರೂ ಬಾಗಲು ಬಡಿಯುತ್ತಿದ್ದರು, ಏಡ್ಸ್‌ ಕಾಯಿಲೆ ಬಂದ್ಮೇಲೆ ಕಡಿಮೆ ಆಯ್ತು: ನಟಿ ಅನ್ನಪೂರ್ಣಮ್ಮ

'ವಾಪಸ್‌ ಬಂದು ಬಿಡು ದಯವಿಟ್ಟು. ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ನೀನು ನನಗೆ ಒಬ್ಬನೇ ಅಣ್ಣ ಯಾಕೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋದೆ ಮಚ್ಚಾ. ದಯವಿಟ್ಟು ಬಾ' ಎಂದು ವರುಣ್ ಆರಾಧ್ಯ ಬರೆದುಕೊಂಡಿದ್ದಾರೆ. ತೇಜಸ್‌ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಕೈ ಮುಗಿಯುತ್ತಾ ನಿಂತುಕೊಂಡು 'ನಿನ್ನ ಗೆಳೆತನಕ್ಕೆ ನಾನೆಂದು ಸದಾ ಚಿರರುಣಿ' ಎಂದಿದ್ದಾರೆ ವರುಣ್. 

ನನ್ನ ಟೀ-ಶರ್ಟ್‌ ಅವ್ರಿಗೆ ನೈಟಿ ತರ ಆಗುತ್ತಂತೆ...ಅವ್ರು ಚಿಕ್ಕ ಇರೋದು; ದಿವ್ಯಾ ದೊಡ್ಡ ಹೆಂಗಸು ಅಂತ ಆರೋಪ ಮಾಡಿದ ಜಿಜಿ

'ನೀನು ಇರುವುದಿಲ್ಲ ಅಂತ ಕಲ್ಪನೆ ಕೂಡ ಮಾಡಿಕೊಳ್ಳಲು ಆಗುವುದಿಲ್ಲ ಡುಮ್ಮು. ಯಾರನ್ನು ನಾನು ಡುಮ್ಮು ಅಂತ ಕರಿಯಲಿ? ಯಾಕೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋದೆ? ಕಣ್ಣು ಮುಚ್ಚಿದಾಗಲೇಲ್ಲ ನಿನ್ನ ನಗು ಮುಖ ಕಾಣಿಸುತ್ತದೆ. ಯಾವಾಗಲೂ ನನ್ನ ಅಮ್ಮ ಅಂತ ಕರೆಯುತ್ತಿದ್ದೆ ನನ್ನನ್ನು ನಿನ್ನ ಎರಡನೇ ತಾಯಿ ಎನ್ನುತ್ತಿದ್ದೆ. ಆದಷ್ಟು ಬೇಗ ಈ ಅಮ್ಮನ ಮಡಿಲಿಗೆ ಬಂದು ಸೇರು ಮಗನೇ. ನಿನಗಾಗಿ ಕಾಯುತ್ತಿರುತ್ತೇನೆ' ಎಂದು ವರುಣ್ ಆರಾಧ್ಯ ಸಹೋದರಿ ಚೈತ್ರಾ ಬರೆದುಕೊಂಡಿದ್ದಾರೆ. 

 

Latest Videos
Follow Us:
Download App:
  • android
  • ios