ನನಗೆ ಜೀವ ಬೆದರಿಕೆ ಹಾಕಿರುವುದು ನಿಜ, ಈಗಲೂ ತಂದೆ ತಾಯಿಗೆ ಧೈರ್ಯ ಹೇಳುತ್ತಿರುವೆ: ವರ್ಷ ಕಾವೇರಿ

ಎಫ್‌ಐಆರ್‌ ಆದ ಮೇಲೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವರ್ಷ ಕಾವೇರಿ. ಮೂರು ಸಲ ಮನವಿ ಮಾಡಿದ ಮೇಲೆ ದೂರು ನೀಡಲು ಮುಂದಾದ ಸುಂದರಿ..... 
 

Influencer Varsha kaveri talks with kirik keerthi about fir on Varun aradya vcs

ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ ಲವ್ ಬ್ರೇಕಪ್ ದೊಡ್ಡ ಸುದ್ದಿಯಾಗಿದೆ. ಅಲ್ಲದೆ ಕೆಲವು ದಿನಗಳ ಹಿಂದೆ ವರ್ಷ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ. ಮಾಜಿ  ಪ್ರಿಯಕರ ವರುಣ್ ಆರಾಧ್ಯ ಜೀವ ಬೆದರಿಕೆ ಹಾಕಿದ್ದಾರೆ ಅಲ್ಲದೆ ವೈಯಕ್ತಿಕ ಪೋಟೋಗಳನ್ನು ಲೀಟ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು. ಈ ಘಟನೆ ಬಗ್ಗೆ ವರ್ಷ ಕೊಟ್ಟ ಪ್ರತಿಕ್ರಿಯೆ ಇದು.... 

'ಭವಿಷ್ಯದಲ್ಲಿ ನನ್ನ ಜೀವನಕ್ಕೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ನಾನು  FIR ದಾಖಲು ಮಾಡಿದೆ. ನಾವಿಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾಗ ಸಾಕಷ್ಟು ವಿಡಿಯೋ ಮತ್ತು ಫೋಟೋಗಳನ್ನು ಟ್ರಿಪ್‌ಗೆ ಹೋಗಾದ ಕ್ಲಿಕ್ ಮಾಡಿಕೊಂಡಿದ್ವಿ ಅದು ಅವರ ಬಳಿ ಇನ್ನೂ ಇತ್ತು. ಸಾಮಾನ್ಯವಾಗಿ ಬ್ರೇಕಪ್ ಆದ ಮೇಲೆ ಅವರ ಫೋನ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಫೋಟೋಗಳನ್ನು ಡಿಲೀಟ್ ಮಾಡಿರಬೇಕು.. ನನ್ನ ಅಕೌಂಟ್‌ನಲ್ಲಿ ಯಾವುದನ್ನು ಉಳಿಸಿಕೊಂಡಿಲ್ಲ. ಅವರ ಸ್ನೇಹಿತರ ಮೂಲಕ ಸಂಪರ್ಕ ಮಾಡಿ ಡಿಲೀಟ್ ಮಾಡಲು ಮನವಿ ಮಾಡಿಕೊಂಡಿದ್ದೆ ಆದರೆ ಆತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಕಾರಣ ಡಿಲೀಟ್ ಮಾಡಲು ಸಮಯವಿಲ್ಲ ಎನ್ನುವಂತೆ attitude ತೋರಿಸಿದ್ದರು. ಒಂದು ಸಲ ಹಾಗೆ ಹೇಳಿದ್ದರು ಓಕೆ...ಅದಾದ ಮೇಲೆ ಮತ್ತೆ ಎರಡು ಸಲ ಕೇಳಿದರೂ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದ ಕಾರಣ ನಾನು ಲೀಗಲ್ ಆಗಿ ಮುಂದುವರೆದೆ. ಈ ಸಂಬಂಧವನ್ನು ಮರೆತು ನಾನು ಜೀವನ ನಡೆಸಬೇಕು ನನಗೂ ಮುಂದೆ ಮದುವೆ ಆಗಬೇಕು ಇಷ್ಟ ಪಡುವ ವ್ಯಕ್ತಿ ಜೊತೆ ಜೀವನ ಮಾಡಬೇಕು ....ನನ್ನ ಹಳೆ ಜೀವನದ ಯಾವುದೇ ಸುಳಿವು ಎಲ್ಲಿಯೂ ಸಿಗಬಾರದು ಅನ್ನೋ ಕಾರಣ ಹೀಗೆ ಮಾಡಿದೆ ಎಂದು ಕಿರಿಕ್ ಕೀರ್ತಿ ನಡೆಸಿದ ಸಂದರ್ಶನದಲ್ಲಿ ವರ್ಷ ಕಾವೇರಿ ಮಾತನಾಡಿದ್ದಾರೆ. 

ಮೂರ್ನಾಲ್ಕು ಚಿತ್ರಕ್ಕೆ 1 ಲಕ್ಷ ಕೊಟ್ರು, ಜಾಹೀರಾತಿನಲ್ಲಿ 7 ಸಾವಿರ ಬಂತು; ಸಂಭಾವನೆ ಗುಟ್ಟು ರಟ್ಟು ಮಾಡಿದ ಹಿತಾ!

ಮುಂದೆ ನನ್ನ ಜೀವನಕ್ಕೆ ಸಮಸ್ಯೆ ಆಗುತ್ತೆ. ಮುಂದೆ ನನ್ನ ಸಂಗಾತಿಯಾಗಿ ಬರುವವರು ಈ ವಿಡಿಯೋಗಳನ್ನು ನೋಡಿ ಬೇಸರ ಮಾಡಿಕೊಳ್ಳಬಾರದು. ಫ್ಯಾನ್ ಪೇಜ್‌ಗಳಲ್ಲಿ ಸಲ ವರುಣ್ ಅಕೌಂಟ್‌ನಲ್ಲಿ ಇರುವ ವಿಡಿಯೋ ಮತ್ತು ಫೋಟೋಗಳನ್ನು ಮತ್ತೆ ಅಪ್ಲೋಡ್ ಮಾಡುತ್ತಿದ್ದಾರೆ. ಫ್ಯಾನ್ ಪೇಜ್‌ಗಳ ಬಳಿಯೂ ನಾನು ಸಾಕಷ್ಟು ಮನವಿ ಮಾಡಿಕೊಂಡಿದ್ದೀನಿ ವರುಣ್‌ ಡಿಲೀಟ್ ಮಾಡಿಲ್ಲ ಅವರೇ ಹಾಕಿಕೊಂಡಿರುವಾಗ ನಾವು ಯಾಕೆ ಡಿಲೀಟ್ ಮಾಡಬೇಕು ಎನ್ನುತ್ತಿದ್ದರು. ಅವರು ಹೇಳಲು ಆಗದೆ ಇವರಿಗೂ ಹೇಳಲು ಆಗದೇ ಕಷ್ಟದಲ್ಲಿ ನಾನು ಹೋಗಿ ದೂರು ನೀಡಿದೆ ಎಂದು ವರ್ಷ ಕಾವೇರಿ ಹೇಳಿದ್ದಾರೆ. 

ಯೂಟ್ಯೂಬ್ ಒಂದೇ ಅಲ್ಲ 12-13 ಮನೆಗಳ ಬಾಡಿಗೆ ಬರುತ್ತೆ; ಆದಾಯ ಎಷ್ಟಿದೆ ಎಂದು ಬಾಯಿಬಿಟ್ಟ ಮಧು ಗೌಡ!

ಮೂರ್ನಾಲ್ಕು ತಿಂಗಳ ಕಾಲ ಡಿಪ್ರೆಶನ್‌ಗೆ ಹೋಗಿದ್ದೆ ಅದರಿಂದ ನಾನು ಬಂದ ಮೇಲೂ ಅದೇ ನೋಡಬೇಕು ಅದೇ ವ್ಯಕ್ತಿಯನ್ನು ನೋಡಬೇಕು ಅಂದ್ರೆ ಕಷ್ಟ ಆಗುತ್ತೆ. ಆ ವ್ಯಕ್ತಿಯಿಂದ ನನಗೆ ಯಾವುದೇ ಮೆಸೇಜ್ ಬಂದಿರಲಿಲ್ಲ ನನ್ನ ಉದ್ದೇಶ ಇದ್ದಿದ್ದು ಎಲ್ಲವನ್ನು ಡಿಲೀಟ್ ಮಾಡಬೇಕು ಎಂದು. ಎಫ್‌ಐಆರ್ ಮಾಡಿದರೆ ಮೀಡಿಯಾದಲ್ಲಿ ಬರುತ್ತದೆ ಅನ್ನೋ ಐಡಿಯಾ ನನಗೆ ಇರಲಿಲ್ಲ...ಅಲ್ಲಿಯೂ ಅಧಿಕಾರಿಗಳನ್ನು ಕೇಳಿ ಮೀಡಿಯಾದಲ್ಲಿ ಬರುವುದಿಲ್ಲ ಅನ್ನೋ ಪ್ರಶ್ನೆ ಮಾಡಿ ಮುಂದುವರೆಸಿದೆ. ನಮ್ಮ ಪರ್ಸನಲ್ ವಿಚಾರಗಳನ್ನು ಹೇಗೆ ಲೀಕ್ ಮಾಡಿದರು ಅನ್ನೋ ಐಡಿಯಾ ಇಲ್ಲ. ಈಗಲೂ ನನ್ನ ತಂದೆ ತಾಯಿಗೆ ಸಮಾಧಾನ ಮಾಡುತ್ತಿರುವೆ ಆದರೆ ನನ್ನ ಮೇಲೆ ನಂಬಿಕೆ ಇದೆ. ನನಗೆ ಜೀವನ ಬೆದರಿಕೆ ಹಾಕಿರುವುದು ನಿಜ ಎಂದಿದ್ದಾರೆ ವರ್ಷ ಕಾವೇರಿ.  

Influencer Varsha kaveri talks with kirik keerthi about fir on Varun aradya vcs

Latest Videos
Follow Us:
Download App:
  • android
  • ios