ಯೂಟ್ಯೂಬ್ ಒಂದೇ ಅಲ್ಲ 12-13 ಮನೆಗಳ ಬಾಡಿಗೆ ಬರುತ್ತೆ; ಆದಾಯ ಎಷ್ಟಿದೆ ಎಂದು ಬಾಯಿಬಿಟ್ಟ ಮಧು ಗೌಡ!

ಯೂಟ್ಯೂಬ್‌ನಿಂದ ಮಾತ್ರ ಜೀವನ ನಡೆಸುತ್ತಿಲ್ಲ...ದುಡಿಮೆ ಮಾಡಲು ನಮ್ಮ ತಂದೆ ಸಾಕಷ್ಟು ಮಾಡಿಟ್ಟಿದ್ದಾರೆ ಎಂದ ಮಧು....
 

Kannada youtuber madhu gowda owns 13 house in bangalore for rent not just social media vcs

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಯೂಟ್ಯೂಬ್ ವ್ಲಾಗರ್‌ಗಳಲ್ಲಿ ಮಧು ಗೌಡ, ನಿಶಾ ರವೀಂದ್ರ ಮತ್ತು ನಿಖಿಲ್ ರವೀಂದ್ರ ಕೂಡ ಒಂದು ಟೀಂ. ಅಕ್ಟೋಬರ್ ತಿಂಗಳಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಮಧು ಮತ್ತು ನಿಖಿಲ್ ಒಂದಾದ ಮೇಲ್ಲೊಂದು ಐಷಾರಾಮಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಯೂಟ್ಯೂಬ್ ದುಡಿಮೆ ಬಗ್ಗೆ ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು...ಮದುವೆಯಾಗಿ ಗಂಡನ ಮನೆಗೆ ಕಾಲಿಡುವ ಮುನ್ನ ಕ್ಲಾರಿಟಿ ಕೊಡೋಣ ಎಂದು ಮಧು ಮತ್ತು ನಿಶಾ ವಿಡಿಯೋ ಮಾಡಿದ್ದಾರೆ. 

ಯೂಟ್ಯೂಬ್ ಬ್ಯಾನ್ ಆಗಿಬಿಟ್ಟರೆ ಏನ್ ಅಗುತ್ತೆ? ನೀವು ಬೇರೆ ಕೆಲಸ ಮಾಡುವುದಿಲ್ವಾ? ನಿಮ್ಮ ದುಡಿಮೆ ಏನು ಎಂದು ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ನಾನು ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವ ಮುನ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ ನನಗೆ ಖುಷಿಯಾಗುವಷ್ಟು ಸಂಬಳ ಕೊಡುತ್ತಿದ್ದರು ಆದರೆ ರಾತ್ರಿ ಶಿಫ್ಟ್ ಆಗಿದ್ದ ಕಾರಣ ಆರೋಗ್ಯ ಹಾಳಾಗುತ್ತಿತ್ತು, ವಿಪರೀತ ಸೊಂಟ ನೋವು ಮತ್ತು ಡಾರ್ಕ್ ಸರ್ಕಲ್ ಹೆಚ್ಚಾಗಿತ್ತು. ಇದನ್ನು ನೋಡಿ ಅಣ್ಣ ದಯವಿಟ್ಟು ನೀನು ಕೆಲಸ ಬಿಟ್ಟು ಬಿಡು ಎಂದು ಹೇಳಿದೆ ಅಂದೇ ಲಾಸ್ಟ್‌. ಅದಾದ ಮೇಲೆ ಇನ್‌ಸ್ಟಾಗ್ರಾಂಗೆ ಕಾಲಿಟ್ಟೆ' ಎಂದು ಮಧು ಗೌಡ ಮಾತನಾಡಿದ್ದಾರೆ.

ಒಂದು ರೀಲ್ಸ್ ಮಾಡೋಕೆ 20 ಸಾವಿರ ಕೇಳ್ತೀನಿ; ಬೇರೆ ಬೇರೆ ದುಡಿಮೆಗಳ ಬಗ್ಗೆ ರಿವೀಲ್ ಮಾಡಿದ ಅನುಪಮಾ ಗೌಡ!

'ಯೂಟ್ಯೂಬ್‌ನಿಂದ ಹಣ ಮಾಡುತ್ತಿದ್ದೀರಾ ಇದೇ ನಿಮ್ಮ ದುಡಿಮೆ ಎಂದು ಅನೇಕರು ಹೇಳುತ್ತಾರೆ ಆದರೆ ಖಂಡಿತಾ ಅಲ್ಲ. ನಮ್ಮ ತಂದೆ ನಮಗೆ ಚೆನ್ನಾಗಿ ಮಾಡಿಟ್ಟಿದ್ದಾರೆ ಸುಮಾರು 12-13 ಮನೆಗಳು ಬಾಡಿಗೆಗೆ ಬಿಟ್ಟಿದ್ದೀವಿ ಇದರಿಂದ ನಮಗೆ ತಿಂಗಳು ಬಾಡಿಗೆ ಬರುತ್ತದೆ ಹಾಗೂ ಒಂದೆರಡು ಚೀಟಿ ಕಟ್ಟುತ್ತೀನಿ ಅದು ಕೂಡ ನಮಗೆ ಸೇವಿಂಗ್ಸ್ ಆಗುತ್ತದೆ. ಅಣ್ಣ ಸರ್ಕಾರದ ರೋಡ್ ಕಾಂಟ್ರಾಕ್ಟ್‌ ಕೆಲಸ ಮಾಡಿಸುತ್ತಿದ್ದ ಅದರಿಂದ ವಿಪರೀತ ಓಡಾಡ ಶುರುವಾಯ್ತು ಹೀಗಾಗಿ ಅವನಿಗೆ ಆ ಕೆಲಸ ಮಾಡಬೇಡ ಈಗ ಮದುವೆ ಓಡಾಟ ನೋಡಿಕೊಂಡು ಇರು ಎಂದು ಹೇಳಿದ್ದೀನಿ. ಅವನು ಕೂಡ ಚೀಟಿ ಕಟ್ಟಿದ್ದಾನೆ. ನಾವು ಅನುಕೂಲದಲ್ಲಿ ಇದ್ದೀವಿ' ಎಂದು ಮಧು ಗೌಡ ಹೇಳಿದ್ದಾರೆ.

3 ದಿನಗಳಲ್ಲಿ ಕ್ಲಾರಿಟಿ ಕೊಡುತ್ತೀನಿ; ಠಾಣೆ ಮೆಟ್ಟಿಲೇರಿದ ಮೇಲೆ ಉಲ್ಟಾ ಹೊಡೆದ್ರಾ ವರ್ಷ ಕಾವೇರಿ?

ನಿಖಿಲ್ ರವೀಂದ್ರ ಬಳಿ ಇರುವ ಹಣ ನೋಡಿ ಮಧು ಗೌಡ ಲವ್ ಮಾಡಿರುವುದು ಎಂದು ಅನೇಕರು ಕಾಮೆಂಟ್ ಮಾಡಿದ್ದರು. ನಮ್ಮ ಹಣ ನೋಡಿ ಮಧು ಬಂದಿಲ್ಲ ಮಧು ಫ್ಯಾಮಿಲಿ ಕಡೆ ತುಂಬಾ ಚೆನ್ನಾಗಿದ್ದಾರೆ ಇನ್ನೂ ಮಧು ಬಂದ ಮೇಲೆ ನಾವು ಸೇವಿಂಗ್ ಮಾಡಲು ಶುರು ಮಾಡಿದ್ದು ಮನೆಯಲ್ಲಿ ನಡೆಯುತ್ತಿರುವ ಮಧುವೆ ಖರ್ಚುಗಳನ್ನು ನೋಡಿಕೊಳ್ಳಲು ಪ್ಲ್ಯಾನ್ ಮಾಡುವುದೇ ಮಧು ಎಂದು ನಿಖಿಲ್ ನಿಶಾ ಆಗಾಗ ಹೇಳುತ್ತಿರುತ್ತಾರೆ. 

Latest Videos
Follow Us:
Download App:
  • android
  • ios