Asianet Suvarna News Asianet Suvarna News

ಮೂರ್ನಾಲ್ಕು ಚಿತ್ರಕ್ಕೆ 1 ಲಕ್ಷ ಕೊಟ್ರು, ಜಾಹೀರಾತಿನಲ್ಲಿ 7 ಸಾವಿರ ಬಂತು; ಸಂಭಾವನೆ ಗುಟ್ಟು ರಟ್ಟು ಮಾಡಿದ ಹಿತಾ!

ಚಿತ್ರರಂಗಕ್ಕೆ ಕಾಲಿಡುತ್ತಿರುವ ನಟಿಯರಿಗೆ ಸಿಗುತ್ತಿರುವ ಸಂಭಾವನೆ ಎಷ್ಟು? ಹಿತಾ ಚಂದ್ರಶೇಖರ್ ಹೇಳಿದ ಮಾತುಗಳು ನಿಜ ಅಂತಿದ್ದಾರೆ ನೆಟ್ಟಿಗರು..... 

Actress Hitha Chandrashekar talks about remuneration from films and advertisements  vcs
Author
First Published Sep 12, 2024, 2:47 PM IST | Last Updated Sep 12, 2024, 2:47 PM IST

ಕನ್ನಡ ಚಿತ್ರರಂಗದ ಹಿರಿಯ ನಟ ಸಿಹಿ ಕಹಿ ಚಂದ್ರು ಮತ್ತು ನಟಿ ಸಿಹಿ ಕಹಿ ಗೀತಾ ಅವರ ಮುದ್ದಿನ ಜೇಷ್ಠ ಪುತ್ರಿ ಹಿತಾ ಚಂದ್ರಶೇಖರ್ ಕೂಡ ಬಣ್ಣದ ಪ್ರಪಂಚದಲ್ಲಿ ಮಿಂಚುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಈಗಿನ ಜನರೇಷನ್ ಹುಡುಗಿಯರಿಗೆ ತುಂಬಾನೇ ಕನೆಕ್ಟ್ ಆಗುತ್ತಾರೆ. ನೆಪೋಟಿಸಂ ಬಗ್ಗೆ ಪದೇ ಪದೇ ಮಾತನಾಡುವ ಜನರಿಗೆ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಸಂಭಾವನೆ ವಿಚಾರದಲ್ಲಿ ಎಷ್ಟು ಕಷ್ಟು ಪಡುತ್ತಾರೆಂದು ರಿವೀಲ್ ಮಾಡಿದ್ದಾರೆ. 

'ದೊಡ್ಡ ನಿರ್ಮಾಣ ಸಂಸ್ಥೆ ಅಥವಾ ಸ್ಟಾರ್ ನಾಯಕನಿರುವ ಸಿನಿಮಾ ಅಥವಾ ದೊಡ್ಡ ಹಿಟ್ ನೀಡಿರುವ ಚಿತ್ರತಂಡ ಜೊತೆ ಕೆಲಸ ಮಾಡಿದಾಗ 2 ಲಕ್ಷ ಕೊಡುತ್ತಾರೆ. ನಾಲ್ಕೈದು ಸಿನಿಮಾಗಳಲ್ಲಿ ಕೇವಲ 1 ಲಕ್ಷಕ್ಕೆ ಕೆಲಸ ಮಾಡಿದ್ದೀನಿ. ನನ್ನ ಮೊದಲ ಚಿತ್ರಕ್ಕೆ 1ಲಕ್ಷ ಕೊಟ್ಟರು...ಇರಲಿ ಬಿಡು ಮೊದಲ ಸಿನಿಮಾ ಅಲ್ವಾ ಎಂದು ನಾನು ಸುಮ್ಮನಾದೆ. ಸಿನಿಮಾಗಳ ನಡುವೆ ನಾನು ಜಾಹೀರಾತುಗಳನ್ನು ಮಾಡಲು ಶುರು ಮಾಡಿದ್ದೇ ಹಣ ಸಾಕಾಗುತ್ತಿರಲಿಲ್ಲ ಅಂತ. ಒಂದೊಂದು ಸಿನಿಮಾ ಮೂರ್ನಾಲ್ಕು ವರ್ಷಗಳ ಕಾಲ ನಡೆಯುತ್ತಿತ್ತು ಆ ಸಮಯದಲ್ಲಿ ಜೀವನ ಹೇಗೆ ನಡೆಸುವುದು? ನನ್ನ ಕಾಲಿನ ಮೇಲೆ ನಾನು ನಿಂತಿದ್ದೀನಿ ಎಂದು ಹೇಗೆ ಹೇಳುವುದ? ಅದಿಕ್ಕೆ ಸೈಡ್‌ ಅಲ್ಲಿ ಜಾಹೀರಾತುಗಳನ್ನು ಮಾಡಲು ಶುರು ಮಾಡಿದೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಹಿತಾ ಮಾತನಾಡಿದ್ದಾರೆ.

ಯೂಟ್ಯೂಬ್ ಒಂದೇ ಅಲ್ಲ 12-13 ಮನೆಗಳ ಬಾಡಿಗೆ ಬರುತ್ತೆ; ಆದಾಯ ಎಷ್ಟಿದೆ ಎಂದು ಬಾಯಿಬಿಟ್ಟ ಮಧು ಗೌಡ!

'ಮೊದಲ ಸಿನಿಮಾ ನಟಿಸುವ ಮುನ್ನವೇ ಜಾಹೀರಾತು ಮಾಡಲು ಶುರು ಮಾಡಿದೆ ಏಕೆಂದರೆ ಮೊದಲ ಎರಡು ಸಿನಿಮಾಗಳು ಅರ್ಧಕ್ಕೆ ನಿಂತುಬಿಟ್ಟಿತ್ತು. ನಟಿಯಾಗಿ ನಾನು ಚೆನ್ನಾಗಿರುವ ಬಟ್ಟೆ ಹಾಕಬೇಕು, ಸಲೂನ್‌ಗೆ ಹೋಗಿ ರೆಡಿಯಾಗಬೇಕು ಅಥವಾ ಫಿಟ್ ಆಗಿರಲು ನಾನು ಜಿಮ್‌ಗೆ ಹೋಗಬೇಕು...ಇದಕ್ಕೆಲ್ಲಾ ಅಪ್ಪ ಅಮ್ಮನ ಬಳಿ ದುಡ್ಡು ಕೇಳುವುದು ಕಷ್ಟ ಅಂತ ಆಡ್‌ ಮಾಡಲು ಶುರು ಮಾಡಿಕೊಂಡೆ. 2015ರ ಸಮಯದಲ್ಲಿ ಸಿನಿಮಾ ಇದ್ದರೂ ನಾನು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿ ಪರಿಚಯ ಇರುವ ಪ್ರತಿಯೊಬ್ಬರಿಗೂ ಮೆಸೇಜ್ ಮಾಡಿ ಸಹಾಯ ಕೇಳಿದ್ದೀನಿ. ಮೊದಲು ಆಡಿಷನ್‌ ಕೊಟ್ಟ ಜಾಹೀರಾತಿನಲ್ಲಿ ನಾನು ಸೆಲೆಕ್ಟ್ ಆಯ್ತು ಅಲ್ಲಿ ನನಗೆ 7 ಸಾವಿರ ರೂಪಾಯಿ ಕೊಟ್ಟರು. ಅಲ್ಲಿಂದ ಅವಕಾಶಗಳು ಸಿಕ್ಕಿತ್ತು ಚೆನ್ನೈ ಅಲ್ಲಿ ಇಲ್ಲಿ ಹೋಗಿ ಮಾಡುತ್ತಿದ್ದೆ ಏಕೆಂದರೆ ಆಗ ನಾನು ಹಣ ಮಾಡಬೇಕು ಅನ್ನೋದು ಅಷ್ಟೇ ಆಸೆ ಇತ್ತು. ಹಣ ಕೂಡ ಸರಿಯಾದ ಸಮಯಕ್ಕೆ ಬರುತ್ತಿತ್ತು ಫಾಲೋ ಅಪ್ ಮಾಡುವ ಅವಶ್ಯಕತೆ ಇರಲಿಲ್ಲ' ಎಂದು ಹಿತಾ ಹೇಳಿದ್ದಾರೆ. 

ಒಂದು ರೀಲ್ ಮಾಡೋಕೆ 20 ಸಾವಿರ ಕೇಳ್ತೀನಿ; ಬೇರೆ ಬೇರೆ ದುಡಿಮೆ ಬಗ್ಗೆ ರಿವೀಲ್ ಮಾಡಿದ ಅನುಪಮಾ ಗೌಡ!

Latest Videos
Follow Us:
Download App:
  • android
  • ios