Asianet Suvarna News Asianet Suvarna News

ಸಿಹಿ ಮುತ್ತು, ಸಿಹಿ ಮುತ್ತು ಇನ್ನೊಂದು.. ರಾಮಾಚಾರಿ ಕೆನ್ನೆಗೆ ಚಾರು ಸಿಹಿಮುತ್ತು!

ರಾಮಾಚಾರಿ ಕೆನ್ನೆಗೆ ಚಾರು ಸಿಹಿ ಮುತ್ತು ಒತ್ತಿದ್ದಾಳೆ. ಕಚಗುಳಿ ಇಡೋ ಈ ಎಪಿಸೋಡ್‌ಗೆ ವೀಕ್ಷಕರು ಹಾರ್ಟು ಸಿಂಬಲ್ ಕೊಟ್ಟಿದ್ದಾರೆ.

In Ramachari serial Charu kisses Chari
Author
First Published Dec 29, 2023, 2:43 PM IST

'ನಿಮ್ಮ ಮಗ ಮುತ್ತು ಕೊಡು ಅಂತ ಕೇಳ್ತಾ ಇದ್ದ. ಕೊಡ್ಲೋ ಬೇಡ್ವೋ ಅಂತ ಅತ್ತೆಮ್ಮನ್ನ ಕೇಳಿದೆ. ಅವ್ರು ಕೊಡು ಅಂದ್ರು.'

'ನಾನ್ಯಾವಾಗ ರೀ ನಿಮ್ಮಲ್ಲಿ ಮುತ್ತು ಕೇಳಿದ್ದೆ?'

'ಕನಸಲ್ಲಿ!'

'ಅತಿಯಾಯ್ತು ನಿಮ್ದು.'

ವೀಕ್ಷಕರಿಗೆ ಕಚಗುಳಿ ಇಡೋ ಥರದ ಎಪಿಸೋಡ್ 'ರಾಮಾಚಾರಿ' ಸೀರಿಯಲ್‌ನಲ್ಲಿ ವೀಕೆಂಡ್ ಪ್ರಸಾರ ಆಗಿದೆ. ಹಾಗೆ ನೋಡಿದರೆ ಈ ಸೀರಿಯಲ್‌ನಲ್ಲಿ ಚಾರುವಿನ ಮುಗ್ಧತೆ, ತುಂಟಾಟ ಎಲ್ಲರಿಗೂ ಇಷ್ಟ ಆಗ್ತಿದೆ. ರಾಮಾಚಾರಿ ಮಾತ್ರ ಒಂಥರ ಪೇಚಿನಲ್ಲಿ ಸಿಲುಕಿದ ಹಾಗಿದ್ದಾನೆ. ಅದಾಗಿದ್ದು ಹೀಗೆ. ರಾಮಾಚಾರಿ ತಾಯಿ ಸೀತಮ್ಮ ಚಾರುವನ್ನು ಕರೆದು, 'ಇದು ರಾಮಾಚಾರಿಗೆ ಬಹಳ ಇಷ್ಟ. ಅವನಿಗೆ ಕೊಟ್ಟು ಬಿಡು' ಅಂತ ಸೀತಾಫಲ, ಅಂಜೂರ ಹಣ್ಣನ್ನು ನೀಡುತ್ತಾಳೆ. 'ಅಷ್ಟು ಸುಲಭಕ್ಕೆ ಕೊಟ್ಟು ಬಿಡ್ತೀನಾ' ಅಂತ ಮನಸ್ಸಲ್ಲೇ ಲೆಕ್ಕಾಚಾರ ಹಾಕಿದ ಚಾರು ಹಣ್ಣುಗಳನ್ನು ಅಡಗಿಸಿ ಇಡುತ್ತಾಳೆ. ಅದರ ಬದಲಿಗೆ, 'ರಾಮಾಚಾರಿ, ಅತ್ತೆಮ್ಮ ನಿಂಗೆ ಎನೋ ಕೊಡಲಿಕ್ಕೆ ಹೇಳಿದ್ದಾರೆ' ಅಂತಾಳೆ. ರಾಮಾಚಾರಿ 'ಏನು?' ಅಂತ ಕೇಳಿದರೆ, 'ಗೆಸ್ ಮಾಡು ನೋಡಾಣ, ಕೆ ಯಿಂದ ಶುರುವಾಗುತ್ತೆ' ಅಂತಾಳೆ. 'ನಂಗೆ ಗೆಸ್ ಮಾಡೋಕ್ಕೆ ಆಗಲ್ಲ. ನೀವೇ ಹೇಳಿ' ಅಂತಾನೆ ಚಾರಿ. 'ಮುತ್ತು'. ಅಂತಾಳೆ ಚಾರು. ಬೆಳ ಬೆಳಗ್ಗೆ ಕೀಟಲೆ ಮಾಡುವ ಹೆಂಡತಿಗೆ ರಾಮಾಚಾರಿ ಗುರಾಯಿಸುತ್ತಾನೆ. ಅಷ್ಟರಲ್ಲಿ ಚಾರು ಅತ್ತೆಗೆ ಚುಚ್ಚಿಕೊಡ್ತಾಳೆ.

'ಅತ್ತೆ ನಿಮ್ಮ ಮಗನಿಗೆ ಬೇಡವಂತೆ' ಅಂತಾಳೆ. ಅಡುಗೆ ಮನೆಯಿಂದ ಚಾರು ಮಾತು ಕೇಳಿದ ಸೀತಮ್ಮ, 'ರಾಮಾಚಾರಿ ಯಾಕೆ ಬೇಡ ಅಂತಿದ್ದೀಯ, ನಿಂಗೆ ಇಷ್ಟ ಅಂತ ನಾನೇ ಕಳಿಸಿದ್ದು. ತಗೋಪ್ಪಾ' ಅಂತಿದ್ದಾರೆ.

ರಾಮಾಚಾರಿಗೆ ಚಾರು ಮಾತು ಕೇಳಿ ಆಶ್ಚರ್ಯ. ಅಮ್ಮ ಬೆಳಬೆಳಗ್ಗೆ ಹೀಗೆ ಯಾಕೆ ಹೇಳಿರಬಹುದು ಅಂತ ಅರ್ಥ ಆಗೋದಿಲ್ಲ.

ಬೆಂಕಿ ಬಿರುಗಾಳಿ ಕುಸುಮಾ ಮುಂದೆ ಥಂಡಾ ಆದ ತಾಂಡವಮೂರ್ತಿ! ಈ ಸಲ ಕಿಚ್ಚನ ಚಪ್ಪಾಳೆ ಕುಸುಮಾಗೆ ಅಂತಿದ್ದಾರೆ ಫ್ಯಾನ್ಸ್

ರಾಮಾಚಾರಿ ಏನಾಗ್ತಿದೆ ಅಂತ ಗೊತ್ತಾಗದೇ ಕೂತಿರುವಾಗಲೇ ಚಾರು ಅವನ ಕೆನ್ನೆಗೆ ಮುತ್ತನ್ನು ನೀಡುತ್ತಾಳೆ. ಅನಿರೀಕ್ಷಿತ ಆಘಾತಕ್ಕೆ ಶಾಕ್ ಆಗುವ ಸರದಿ ರಾಮಾಚಾರಿಯದ್ದು. ಆಮೇಲೆ ಚಾರುವಿಗೆ ಮತ್ತೆ ಕ್ಲಾಸ್ ಶುರು. 'ನಿಮ್ಗೆ ಒಂದಿಷ್ಟೂ ಸಂಕೋಚ ಅನ್ನೋದೆ ಇಲ್ವಾ?' ಅಂತ ಕ್ಲಾಸ್ ತಗೊಳ್ತಾನೆ. ಆಗ ಚಾರು ಸತ್ಯ ಏನು ಅಂತ ಹೇಳ್ತಾಳೆ.

'ಆಕ್ಚುಲೀ ಇಲ್ಲೊಂದು ಟ್ವಿಸ್ಟ್ ಇದೆ. ಅತ್ತೆಮ್ಮ ಹೇಳಿದ್ದು ಮುತ್ತು ಕುಡೋದಕ್ಕಲ್ಲ. ಈ ಹಣ್ಣು ಕೊಡೋದಕ್ಕೆ' ಅಂತ ತನ್ನ ಕೈಯಲ್ಲಿರುವ ಅಂಜೂರ, ಸೀತಾಫಲವನ್ನು ಅವನ ಎದುರು ಹಿಡೀತಾಳೆ. ರಾಮಾಚಾರಿ ಹುಸಿ ಮುನಿಸಲ್ಲಿ ಮತ್ತೆ ಹೆಂಡತಿ ಕಡೆ ಗುರಾಯಿಸುತ್ತಾನೆ. ಇದನ್ನೆಲ್ಲ ಗಮನಿಸುವ ವೈಶಾಖ ಮೈ ಕೈ ಪರಚಿಕೊಳ್ಳೋದೊಂದು ಬಾಕಿ. ಒಂದು ಕಡೆ ಅವಳು ಕಾಯ್ತಿದ್ದ ಕಿಟ್ಟಿ ಮನೆಗೆ ಬಂದಿಲ್ಲ. ಆತನ ಮೇಲೆ ಕೇಸ್ ಹಾಕಿ ಜೈಲಲ್ಲಿ ಕೊಳೆಯೋ ಹಾಗೆ ಮಾಡಲಾಗಿದೆ. ಇನ್ನೊಂದು ಕಡೆ ಚಾರು ಚಾರಿ ಮುದ್ದಾಟ ಕಣ್ಣೆದುರಿಗೇ ನಡೆಯುತ್ತಿದೆ. ಎಂದೂ ದೇವರ ಕೋಣೆಗೆ ಹೋಗದ ವೈಶಾಖ ಈಗ ತನ್ನ ಪ್ಲಾನ್ ಸಕ್ಸಸ್ ಆಗಲಿ ಅಂತ ಕೇಳೋದಕ್ಕೆ ದೇವರ ಕೋಣೆಗೆ ಹೋಗ್ತಾಳೆ.

 

ಸಖತ್ ಫನ್ನಿ ಆಗಿರುವ ಈ ಎಪಿಸೋಡ್‌ಗಳನ್ನು ವೀಕ್ಷಕರು ಸಖತ್ತಾಗಿ ಎನ್‌ಜಾಯ್ ಮಾಡ್ತಿದ್ದಾರೆ. ಬಹಳ ಮಂದಿ ಹಾರ್ಟ್ ಇಮೋಜಿ ಹಾಕಿ ಈ ಕ್ಯೂಟ್ ಜೋಡಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇನ್ನೊಂದು ಕಡೆ 'ಚಾರು ನಿನ್ ಗಂಡಂಗೆ ನೀನು ಮುತ್ತು ಕೊಡೋದು ತಪ್ಪಲ್ಲಮ್ಮಾ' ಅಂತ ಚಾರು ಪರ ಓಟ್ ಮಾಡಿದ್ದಾರೆ. ಹೆವ್ವಿ ಡ್ರಾಮಾಗಳಿಲ್ಲದ ಲೈಟಾದ ಪ್ರೇಮ, ಕೀಟಲೆಯ ಈ ಎಪಿಸೋಡ್‌ಗಳು ಜನರ ಮನಗೆದ್ದಿವೆ.

ಸೀತಾ ಮದ್ವೆ ದಿನ ಭಾರಿ ಟ್ವಿಸ್ಟ್‌! ನಿರ್ದೇಶಕರನ್ನು ಹುಡುಕಿ ಹೊಡೆಯುವುದಾಗಿ ಬೆದರಿಕೆ ಹಾಕಿದ ರಾಮ್‌ ಫ್ಯಾನ್ಸ್‌...

Follow Us:
Download App:
  • android
  • ios