ಸೀತಾಳ ಮದುವೆಯ ದಿನ ರಾಮ್‌ ಎಂಟ್ರಿಯಾಗಿದೆ. ಸೀತಾ-ರಾಮ ಒಂದಾಗಿದ್ದಾರೆ. ಆದರೆ ಇದನ್ನು ನೋಡಿದ ನೆಟ್ಟಿಗರು ನಿರ್ದೇಶಕರಿಗೆ ಬೆದರಿಕೆ ಹಾಕಿದ್ದಾರೆ. ಯಾಕೆ?  

ಸೀತಾಳ ಮದ್ವೆದಿನ ಬಂದೇ ಬಿಟ್ಟಿದೆ. ಸೀತಾ ಹಾಗೂ ಆಕೆಯ ಮಗಳು ಸಿಹಿಯ ಮೇಲೆ ಜೀವವನ್ನೇ ಇಟ್ಟಿರುವ ರಾಮ್, ಸೀತಾಳಿಗೂ ಪ್ರೀತಿಯನ್ನು ತಿಳಿಸದೇ, ಮನಸ್ಸಿನಲ್ಲಿಯೇ ಪ್ರೀತಿಯನ್ನು ಅದುಮಿಟ್ಟುಕೊಂಡು ಸೀತಾಳ ಮದುವೆಯನ್ನೂ ನೋಡಲು ಮನಸ್ಸು ಮಾಡದೇ ಭಾರವಾರ ಮನಸ್ಸಿನಿಂದ ವಿದೇಶಕ್ಕೆ ತೆರಳಿದ್ದಾನೆ. ಕೊನೆ ಕ್ಷಣದಲ್ಲಿ ಏನಾದರೂ ಮ್ಯಾಜಿಕ್‌ ಆಗಿ ಸೀತಾ-ರಾಮ ಒಂದಾಗಬಹುದು ಎಂದುಕೊಂಡಿದ್ದೆ ಅಂದ ಅಶೋಕ್‌ನಿಗೆ ಇದೇನು ಸಿನಿಮಾನೇ ಹಾಗಾಗಲು ಎಂದು ರಾಮ್‌ ಹೇಳಿದ್ದಾನೆ. ಅದೇ ಇನ್ನೊಂದೆಡೆ, ಸೀತಾಳನ್ನು ಮದುವೆಯಾಗ ಹೊರಟಿರುವ ರುದ್ರಪ್ರತಾಪ್‌ ಸೀತಾಳ ಜೊತೆ ಮದ್ವೆಯಾಗುತ್ತಿದ್ದಂತೆಯೇ ಸಿಹಿಯನ್ನು ಅನಾಥಾಶ್ರಮಕ್ಕೆ ಸೇರಿಸುವ ಪ್ಲ್ಯಾನ್‌ ಮಾಡಿದ್ದಾನೆ. ಇದನ್ನು ಸಿಹಿ ಕೇಳಿಸಿಕೊಂಡು ಕಣ್ಣೀರಾಗಿದ್ದಾಳೆ... ಮುಂದೇನು..?

ಸೀತಾಳ ಮದ್ವೆ ರುದ್ರಪ್ರತಾಪ್‌ ಜೊತೆ ಆಗಿಬಿಡತ್ತಾ? ಸಿಹಿ ಅನಾಥಾಶ್ರಮಕ್ಕೆ ಸೇರ್ತಾಳಾ? ತಾನು ಕೇಳಿದ ವಿಷಯವನ್ನು ಮದುವೆಗೂ ಮುನ್ನ ಸಿಹಿ ಅಮ್ಮ ಸೀತಾಳಿಗೆ ಹೇಳ್ತಾಳಾ? ಈ ವಿಷಯವನ್ನು ರಾಮ್‌ಗೆ ತಿಳಿಸಲು ಸಿಹಿ ಫೋನ್‌ ಮಾಡಿದ್ರೂ ಅದನ್ನು ಆತ ಪಿಕ್‌ ಮಾಡಲಿಲ್ಲ. ಕೊನೆ ಕ್ಷಣದಲ್ಲಾದರೂ ಆತ ಫೋನ್‌ ಪಿಕ್‌ ಮಾಡಿ ಓಡೋಡಿ ಬರ್ತಾನಾ? ಸಿನಿಮಾದಲ್ಲಿ ಆಗುವಂತೆ ರಾಮನನ್ನು ಸೀತಾ ಮದ್ವೆಯಾಗ್ತಾಳಾ ಎನ್ನುವ ಪ್ರಶ್ನೆ ಸೀತಾರಾಮ ಸೀರಿಯಲ್‌ ಪ್ರಿಯರನ್ನು ಕಾಡುತ್ತಿದೆ. ಸೀತಾ-ರಾಮ ಒಂದಾಗಲಿ ಎಂದು ಫ್ಯಾನ್ಸ್‌ ಅಂದುಕೊಳ್ಳುತ್ತಿದ್ದರೆ, ಇವರಿಬ್ಬರೂ ಒಂದಾಗಿಬಿಟ್ಟರೆ ಸೀರಿಯಲ್‌ ಮುಗಿದು ಹೋಗತ್ತಲ್ಲಾ? ಹಾಗೆ ಮಾಡಲು ನಿರ್ದೇಶಕರು ಬಿಡ್ತಾರಾ ಎನ್ನುವುದು ಇನ್ನು ಕೆಲವರ ಪ್ರಶ್ನೆ.

ಪ್ಲೀಸ್‌ ಬಾಗಿಲು ತೆಗೆಯಿರಿ... ಅಪ್ಪ-ಅವ್ವನ್ನ ನೋಡ್ಬೇಕು... ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌!

ಇದರ ನಡುವೆಯೇ, ವೀಕ್ಷಕರ ತಲೆಗೆ ಹುಳು ಬಿಡುವ ಪ್ರೊಮೋ ಒಂದನ್ನು ಜೀ ಕನ್ನಡ ವಾಹಿನಿ ಶೇರ್‌ ಮಾಡಿದೆ. ಇದರಲ್ಲಿ ಸೀತಾ ಮದುಮಗಳಾಗಿ ಹಸೆಮಣೆ ಏರಿದ್ದಾಳೆ. ರಾಮ ಓಡೋಡಿ ಬಂದಿದ್ದಾನೆ. ಮದುಮಗ ಅಲ್ಲಿ ಕಾಣಿಸುತ್ತಿಲ್ಲ. ರಾಮನನ್ನು ನೋಡುತ್ತಿದ್ದಂತೆಯೇ ಸೀತಾ ಹಸೆಮಣೆಯಿಂದ ಎದ್ದು ಓಡಿ ಬಂದು ರಾಮ್‌ನನ್ನು ಅಪ್ಪಿಕೊಂಡಿದ್ದಾಳೆ. ಅಲ್ಲಿದ್ದವರೆಲ್ಲರೂ ಅಚ್ಚರಿಯಿಂದ ಈ ಕ್ಷಣವನ್ನು ನೋಡಿದ್ದಾರೆ... ಈ ಪ್ರೊಮೋಗೆ ಹಾರ್ಟ್‌ ಇಮೋಜಿಗಳ ಸುರಿಮಳೆಯಾಗಿದೆ. ಆದರೆ ನಿಜಕ್ಕೂ ಹೀಗಾಗತ್ತಾ ಎನ್ನುವುದು ಬಹುತೇಕ ಪ್ರೇಕ್ಷಕರ ಪ್ರಶ್ನೆ.

ಇದು ಖಂಡಿತವಾಗಿಯೂ ಕನಸೇ ಎಂದಿರುವ ಕಮೆಂಟಿಗರು, ಒಂದು ವೇಳೆ ಇದು ಕನಸೇ ಆಗಿದ್ದರೆ ನಿರ್ದೇಶಕರನ್ನು ಹುಡುಕಿ ಬಂದು ಹೊಡೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸೀತಾಳ ಮದುವೆ ಯಾವುದೇ ಕಾರಣಕ್ಕೂ ರುದ್ರಪ್ರತಾಪ್‌ ಜೊತೆ ಮಾಡಬಾರದು. ಈ ದೃಶ್ಯ ಕನಸು ಆಗಿರಬಾರದು, ಇದು ನಿಜವೇ ಆಗಿರಬೇಕು. ಆದರೆ ಈ ದೃಶ್ಯ ನೋಡಿದರೆ ಇದು ಖಂಡಿತವಾಗಿಯೂ ಕನಸು ಎಂದು ಎನಿಸುತ್ತಿದೆ. ಒಂದು ವೇಳೆ ಹಾಗೇನಾದರೂ ಮಾಡಿದರೆ ನಿರ್ದೇಶಕರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹಲವಾರು ಮಂದಿ ಕಮೆಂಟ್‌ ಮೂಲಕ ತಿಳಿಸಿದ್ದಾರೆ. ಹಾಗಿದ್ದರೆ ಇದು ಕನಸೋ ನನಸೋ? ಸೀರಿಯಲ್‌ ನೋಡಿದ ಮೇಲಷ್ಟೇ ಉತ್ತರ ಸಿಗಲಿದೆ. 

ಬಿಹಾರದ ಎಮ್ಮೆ, ಮೇಕೆ ಜೊತೆ ಕಾಣಿಸಿಕೊಂಡ ಡಾ.ಬ್ರೋ: ಫೋಟೋ ನೋಡಿ ಕುಣಿದಾಡಿದ ಫ್ಯಾನ್ಸ್‌

View post on Instagram