Ramachari Serial: ದೊಡ್ಡ ಪ್ರಪಾತಕ್ಕೆ ಬಿದ್ದ ಚಾರು! ಇದ್ಯಾಕೋ ಓವರಾಯ್ತು ಅಂತಿದ್ದಾರೆ ನೆಟ್ಟಿಗರು

ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ಮತ್ತು ಚಾರಿ ಚಿತ್ರದುರ್ಗದ ಕಲ್ಲಿನ ಕೋಟೆಗೆ ಬಂದಿದ್ದಾರೆ. ಇಲ್ಲಾದರೂ ಇವರಿಬ್ಬರ ಜಗಳ ಬಿಡಿಸಿ ಸ್ನೇಹಿತರನ್ನಾಗಿ ಮಾಡಬೇಕು ಅಂದ್ಕೊಂಡಿದ್ದಾರೆ ಬಬ್ಲಿ ಸಾರ್. ಅಲ್ಲಿ ರಾಮಾಚಾರಿ ದುರ್ಗದ ಚರಿತ್ರೆನ ಮರುಸೃಷ್ಟಿ ಮಾಡಿದ್ದಾನೆ. ಬಬ್ಲಿಗೆ ಚಾರುವೇ ಓಬವ್ವನ ಹಾಗೆ ಕಂಡಿದ್ದಾಳೆ. ಆದರೆ ಈಗ ಚಾರು ಪ್ರಪಾತದ ಮಧ್ಯೆ ಸಿಕ್ಕಾಕಿಕೊಂಡಿದ್ದಾಳೆ.

 

In Ramachari serial Charu fell into the ditch trolled by nitizens

ರಾಮಾಚಾರಿ ಸೀರಿಯಲ್ ಹೊಸ ಹೊಸ ಪ್ರಯೋಗಗಳಿಗೆ ಫೇಮಸ್. ಇದೀಗ ದುರ್ಗದ ಕತೆಯನ್ನು ಈ ಸೀರಿಯಲ್‌ನಲ್ಲಿ ಮರು ಸೃಷ್ಟಿ ಮಾಡಲು ಹೊರಟಿದ್ದಾರೆ. ಕಲರ್ಸ್ ಕನ್ನಡ ಚಾನಲ್‌ನಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ ಇದು. ಪುರೋಹಿತರ ಮನೆಯ ಸುಸಂಸ್ಕತ ಹುಡುಗನಾಗಿರುವ ರಾಮಾಚಾರಿ, ಉದ್ಯಮಿಯ ಮಗಳು ದುಡ್ಡಿನ ಮದದಿಂದ ಬೀಗುವ ಚಾರುಲತಾ ಮೇಲೆ ಈ ಸೀರಿಯಲ್ ಕತೆ ಸಾಗುತ್ತಿದೆ. ಸದ್ಯಕ್ಕೀಗ ರಾಮಾಚಾರಿ ಅತ್ತಿಗೆ ಅಪರ್ಣ ಕ್ಯಾನ್ಸರ್‍ ನಿಂದ ಬಳಲುತ್ತಿದ್ದಾಳೆ. ಆಕೆಯ ಆಪರೇಷನ್‍ ಗೆ ಹಣ ಹೊಂಚಲು ರಾಮಾಚಾರಿ ಒದ್ದಾಡುತ್ತಿದ್ದಾನೆ. ಈ ನಡುವೆ ಆಫೀಸ್ ನಲ್ಲಿ ಒಂದು ಪ್ರಾಜೆಕ್ಟ್ ಬಂದಿದೆ. ಅದನ್ನು ಮಾಡಲು ರಾಮಾಚಾರಿ ಚಿತ್ರದುರ್ಗಕ್ಕೆ ಹೋಗಿದ್ದಾನೆ. ಚಾರುವೂ ಅಲ್ಲಿಗೆ ಬಂದಿದ್ದಾಳೆ. ಚಿತ್ರದುರ್ಗದ ಪ್ರತಿಜಾಗವನ್ನೂ ಕಣ್ಣಗೆ ಕಟ್ಟುವ ಹಾಗೆ ವಿವರಿಸುವ ರಾಮಾಚಾರಿ ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ ಮಾಡಿದ್ದಾರೆ. ಚಾರುವೇ ಓಬವ್ವಳಾಗಿ ಸರ್ ಕಣ್ಣಿಗೆ ಕಾಣುತ್ತಿದ್ದಾಳೆ. ಚಾರು ಸೊಕ್ಕು, ರಾಮಾಚಾರಿ ಸ್ವಾಭಿಮಾನಿ, ನಡುವೆ ಸಿಕ್ಕಿ ಜೋಕರ್ ಆಗಿರುವ ಬಬ್ಲಿ ಸಾರ್ ಚಿತ್ರದುರ್ಗದಲ್ಲಿ ಇವರ ನಡುವೆಯೇ ಕಥೆ ಸಾಗುತ್ತಿರುವಾಗ ಪ್ರಮಾದವೊಂದು ಸಂಭವಿಸಿದೆ.

ಹಾಗೆ ನೋಡಿದರೆ ಬಬ್ಲಿ ಸಾರ್ ಗೆ ಚಾರು ಚಾರಿ ಮದುವೆ (Wedding) ಆಗಲಿ ಅನ್ನೋ ಮನಸ್ಸು. ಅವರಿಬ್ಬರು ಮದುವೆ ಆಗ್ತಾರೆ ಅಂತಲೇ ಅವರು ಭಾವಿಸಿದ್ದಾರೆ. ಜೊತೆಗೆ ತನ್ನ ಭವಿಷ್ಯ ಸುಳ್ಳಾಗೋದಿಲ್ಲ ಅಂತಲೂ ಅಂದುಕೊಂಡಿದ್ದಾರೆ. ಮದುವೆ ಒತ್ತಟ್ಟಿಗಿರಲಿ. ಈ ಸೀರಿಯಲ್ ಶುರುವಾದಾಗಿಂದ ಹಾವು ಮುಂಗುಸಿಯಂತೆ ಆಡುತ್ತಲೇ ಇರುವ ಚಾರು, ಚಾರಿ ತಮ್ಮ ಮನಸ್ಥಿತಿಯಿಂದ ಒಂಚೂರೂ ಹೊರಬಂದಿಲ್ಲ. ಪ್ರಾಜೆಕ್ಟ್‌ ನೆವದಲ್ಲಿ ಚಿತ್ರದುರ್ಗಕ್ಕೆ ಬಂದ ಮೇಲಾದರೂ ಅವರಿಬ್ಬರ ಜಗಳ ಬಗೆ ಹರಿದು ಅವರಿಬ್ಬರೂ ಫ್ರೆಂಡ್ ಆಗಬಹುದು ಅಂತ ಬಬ್ಲಿ ಸಾರ್ ಅಂದುಕೊಳ್ತಾರೆ. ದುರ್ಗದ ಓಬವ್ವನಾಗಿ ಅವರ ಕಣ್ಣಿಗೆ ಚಾರುವೇ ಕಾಣ್ತಿದ್ದಾಳೆ. ಆದರೆ ಅವರ ಈ ದೃಷ್ಟಿಕೋನವನ್ನು ಚಾರು, ಚಾರಿ ಇಬ್ಬರೂ ಟೀಕಿಸಿದ್ದಾರೆ. ಈ ಜನ್ಮದಲ್ಲಿ ತಾವಿಬ್ಬರೂ ಮದುವೆ ಆಗೋದು ಸಾಧ್ಯವಿಲ್ಲದ ಮಾತು ಅಂತ ಸ್ಟ್ರಿಕ್ಟ್ ಆಗಿ ಹೇಳಿದ್ದಾರೆ.

ರಾಮಾಚಾರಿ ಚಿತ್ರದುರ್ಗದ ಕಲ್ಲಿನಕೋಟೆಯ ಇತಿಹಾಸವನ್ನು ಬಬ್ಲಿ ಸರ್ ಗೆ ಹೇಳುತ್ತಿರುವುದು ಇಂಟರೆಸ್ಟಿಂಗ್ ಚಾಪ್ಟರ್. ಓಬವ್ವ ನೀರು ತರಲು ಬಂದ ಜಾಗದಲ್ಲಿ ನೀರು ಯಾವಾಗಲು ಜಿನುಗುತ್ತಾ ಇರುತ್ತಂತೆ. ವರ್ಷ ಪೂರ ಹರಿಯುತ್ತಂತೆ. ಓಬವ್ವನ ಗಂಡ ಪೂಜೆ ಮಾಡುತ್ತಿದ್ದ ಹನುಮಂತನ ಗುಡಿ, ಅವನು ಕೆಲಸ ಮಾಡುತ್ತಿದ್ದ ಜಾಗ. ಅವರು ವಾಸವಿದ್ದ ಸ್ಥಳದ ಬಗ್ಗೆ ಹೇಳುತ್ತಿದ್ದಾನೆ.

Jothe jotheyali: ಹೊಸ ಆರ್ಯವರ್ಧನನಾಗಿ ಹರೀಶ್ ರಾಜ್! ವಿಶ್ವಾಸನೇ ಸುಭಾಷ್ ಆಗ್ತಿದ್ದಾನೆ!

ರಾಮಾಚಾರಿ ಅತ್ತಿಗೆ ಅಪರ್ಣ ಮತ್ತು ತಂಗಿ ಶೃತಿ ಹೋಗುವಾಗ ಚಾರು ಸ್ನೇಹಿತೆ ಅವರನ್ನು ತಡೆಯುತ್ತಾಳೆ. ನಾನು ಚಾರು ಬಗ್ಗೆ ಮಾತನಾಡಬೇಕು ಎನ್ನುತ್ತಾಳೆ. ಏನು ಎಂದಾಗ, ನಾನು ಅವಳನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೀನಿ. ಅವಳು ಏನ್ ಬೇಡ ಅಂತಾಳೋ, ಅವರ ಜೊತೆ ಇರುತ್ತಾಳೆ. ಅದೇ ಚಾರು ಗುಣ. ಅವಳು ಈಗ ರಾಮಾಚಾರಿಯನ್ನು ದ್ವೇಷ ಮಾಡ್ತಾ ಇದಾಳೆ. ಆದ್ರೆ ಮುಂದೊಂದು ದಿನ ಅವಳು ರಾಮಾಚಾರಿಯನ್ನೇ ಮದುವೆ ಆಗ್ತಾಳೆ ಎನ್ನುತ್ತಾಳೆ. ಅದನ್ನು ಕೇಳಿ ಅವರು ಶಾಕ್ ಆಗಿದ್ದಾರೆ. ಮನೆಗೆ ಬಂದು ಆ ವಿಷ್ಯವನ್ನು ಮನೆಯವರ ಮುಂದೆ ಹೇಳಿದ್ದಾರೆ. ಈ ಜೋಡಿ ಬಗ್ಗೆಯೇ ಮನೆಮಂದಿ ಎಲ್ಲ ಮಾತಾಡುತ್ತಿದ್ದಾರೆ.

ಇನ್ನೊಂದು ಕಡೆ ಚಾರು ಪ್ರಮಾದದಿಂದ ಪ್ರಪಾತಕ್ಕೆ ಬಿದ್ದಿದ್ದಾಳೆ. 

 

ರಾಮಾಚಾರಿ ಆತಂಕದಿಂದ ಆಕೆಯನ್ನು ಕರೆಯುತ್ತಿದ್ದಾನೆ. ಬಿದ್ದರೆ ಮೂಳೆಯೂ ಸಿಗಲಾರದಂಥಾ ಪ್ರಪಾತವದು. ಈ ಪ್ರಪಾತಕ್ಕೆ ಬಿದ್ದ ಚಾರು, ಅಲ್ಲೇ ಇದ್ದ ಮರದ ಕೊಂಬೆಯನ್ನು ಹಿಡಿದು ನೇತಾಡುತ್ತಿದ್ದಾಳೆ. ಬಂಡೆಗೆ ಒತ್ತಿರುವ ಆ ಕೊಂಬೆ ಯಾವಾಗ ಬೇಕಾದರೂ ಮುರಿದು ಬೀಳಬಹುದು. ಪ್ರಪಾತದಲ್ಲಿ ನೇತಾಡುತ್ತಿರುವ ಚಾರುವನ್ನು ಚಾರಿ ಹೇಗೆ ಕಾಪಾಡ್ತಾನೆ ಅನ್ನೋದೇ ಸದ್ಯದ ಕೌತುಕ.

ಕನ್ನಡತಿ: ರತ್ನಮಾಲಾ ಸಾಮ್ರಾಜ್ಯಕ್ಕೆ ಭುವಿ ಹೊಸ ಒಡತಿ, ಸಾನ್ಯಾ ಗತಿ?

'ಈ ಬಿಲ್ಡಪ್ ಓವರ್ ಆಯ್ತು', 'ವಿಎಫ್‌ಎಕ್ಸ್‌ ಮತ್ತು ನಿರ್ದೇಶಕ ರಾಮ್ ಜೀಯದ್ದು ನೆವರ್ ಎಂಡಿಂಗ್ ಲವ್‌ ಸ್ಟೋರಿ', 'ಅಮರಳಾದಳು ಚಾರವ್ವ' ಅನ್ನೋ ಕಮೆಂಟ್‌ಗಳೆಲ್ಲ ಹರಿದುಬರುತ್ತಿವೆ. ಚಾರು ಪಾತ್ರದಲ್ಲಿ ಮೌನಾ ಗುಡ್ಡೆಮನೆ, ರಾಮಾಚಾರಿಯಾಗಿ ರಿತ್ವಿಕ್ ಕೃಪಾಕರ್ ನಟಿಸಿದ್ದಾರೆ.

Latest Videos
Follow Us:
Download App:
  • android
  • ios