ಲಕ್ಷಣ ಸೀರಿಯಲ್‌ನಲ್ಲಿ ವೈಷ್ಣವಿ ಪಾತ್ರ ಎಂಟ್ರಿಯಾಗಿದೆ. ನಕ್ಷತ್ರಾ ಭೂಪತಿ ವೈವಾಹಿಕ ಬದುಕು ಚಿಂದಿ ಚಿತ್ರಾನ್ನ ಆಗೋಕೆ ಇನ್ನೊಂಚೂರು ಟೈಮಷ್ಟೇ ಉಳಿದಂಗಿದೆ. ಇನ್ನೊಂದು ಕಡೆ ಶ್ವೇತಾನೂ ಭೂಪತಿ ಮನೆ ಸೇರ್ಕೊಂಡಿದ್ದಾಳೆ. ಮುಂದೇನಾಗಬಹುದು.
ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಬಿರುಗಾಳಿ ಎಬ್ಬಿಸುತ್ತಿರುವ ಸೀರಿಯಲ್ ಲಕ್ಷಣ. ಇದು ಚರ್ಮದ ಬಣ್ಣದ ಬಗೆಗಿನ ಮಿಥ್‌ಗಳನ್ನು ಒಡೆಯುತ್ತಲೇ ಸಂಬಂಧಗಳ ಬಗ್ಗೆಯೂ ಹೇಳೋ ಸೀರಿಯಲ್. ಇದರಲ್ಲೀಗ ಹೊಸತೊಂದು ಡ್ರಾಮಾ ಶುರುವಾಗೋದರಲ್ಲಿದೆ. ಡಾಕ್ಟರ್ ಮಾಡಿರೋ ಯಡವಟ್ಟಿನಿಂದ ಲಕ್ಷಣಾ ಮತ್ತು ಶ್ವೇತಾ ಬೇರೆ ಬೇರೆ ಮನೆ ಸೇರ್ಕೊಳ್ತಾರೆ. ಒಂದು ಹಂತದಲ್ಲಿ ಇದೆಲ್ಲ ರಿವೀಲ್ ಆಗುತ್ತೆ. ಬಡ ಕುಟುಂಬದಲ್ಲಿ ಹೀಗಳಿಕೆಗೆ ತುತ್ತಾಗಿದ್ದ ನಕ್ಷತ್ರಾ ಶ್ರೀಮಂತೆಯಾಗ್ತಾಳೆ. ಶ್ರೀಮಂತೆಯಾಗಿದ್ದ ಶ್ವೇತಾ ಬಡಮನೆಗೆ ಬರ್ತಾಳೆ. ಇನ್ನೊಂದೆಡೆ ಶ್ವೇತಾ ಮದುವೆ ಆಗಬೇಕಿದ್ದ ಹುಡುಗನನ್ನು ನಕ್ಷತ್ರಾ ಮನಸಾರೆ ಬಯಸುತ್ತಿರುತ್ತಾಳೆ. ನಕ್ಷತ್ರಾ ತಂದೆ ಚಂದ್ರಶೇಖರ್ ಇದನ್ನರಿತು ಶಕುಂತಲಾದೇವಿಗೆ ಬೆದರಿಕೆ ಒಡ್ಡಿ ನಕ್ಷತ್ರಳ ಮದುವೆಯನ್ನು ಬಲವಂತವಾಗಿ ಭೂಪತಿ ಜೊತೆ ಮಾಡ್ತಾರೆ. ಇದರಿಂದ ನಕ್ಷತ್ರಾ ಬದುಕೇ ಬದಲಾಗುತ್ತದೆ. ಶ್ವೇತಾ, ಭೂಪತಿ ತಾಯಿ ಶಕುಂತಲಾ ದೇವಿ ಹೇಗಾದರೂ ಶ್ವೇತಾ ಮತ್ತು ಭೂಪತಿ ಮದುವೆ ಮಾಡಲೇ ಬೇಕು ಅಂದುಕೊಳ್ಳುವಾಗ ಹೊಸತೊಂದು ತಿರುವು ಎದುರಾಗಿದೆ. ವೈಷ್ಣವಿ ಅನ್ನೋ ಹೊಸ ಪಾತ್ರ ಎಂಟ್ರಿಕೊಟ್ಟು ಭೂಪತಿ ಲೈಫು ಚಿಂದಿ ಚಿತ್ರಾನ್ನ ಆಗೋ ಹಾಗೆ ಮಾಡಿದೆ.
ಇನ್ನೊಂದು ಕಡೆ ಭೂಪತಿಯಿಂದ - ನಕ್ಷತ್ರಾಳನ್ನು ದೂರ ಮಾಡಿ ತಾನು ಭೂಪತಿಯ ಹೆಂಡತಿಯಾಗಬೇಕು ಎಂಬ ಕನಸು ಕಾಣುತ್ತಿರುವ ಶ್ವೇತಾ ಎಲ್ಲರ ನೀರಿಕ್ಷೆಯನ್ನು ಮೀರಿ ಶಕುಂತಲಾದೇವಿಯ ಮನೆ ಸೇರಿದ್ದಾಳೆ. ಪ್ರತಿ ಕ್ಷಣವೂ ನಕ್ಷತ್ರಾಳ ಕೇಡು ಬಯಸುವ ಶ್ವೇತಾಳಿಂದಾಗಿ ಇನ್ನೇನು ಅನಾಹುತ ನಡೆಯುತ್ತೆ ಎಂಬ ಆತಂಕವಿರುವಾಗಲೇ ಈ ಮನೆಗೆ ಮತ್ತೊಬ್ಬ ಹುಡುಗಿಯ ಆಗಮನವಾಗ್ತಿದೆ. ಆಕೆಯೇ ವೈಷ್ಣವಿ. ʼಭೂಪತಿ ನಂಗೆ ಮದುವೆ ಆಗ್ತೀನಿ ಅಂತ ಮಾತು ಕೊಟ್ಟಿದ್ದ..ʼ ಎಂಬ ಸಮರ್ಥನೆಯೊಂದಿಗೆ ಭೂಪತಿ ಮನೆಗೆ ಬರುವ ವೈಷ್ಣವಿ ಹೊಸ ತಿರುವಿಗೆ ಸಾಕ್ಷಿಯಾಗಲಿದ್ದಾರೆ. ಶ್ವೇತಾಳ ದುಷ್ಟ ತಂತ್ರ, ಅತ್ತೆಯ ಮುನಿಸು, ತವರು ಮನೆಯ ಆತಂಕ, ಮೌರ್ಯ ತಂದಿಟ್ಟ ಆಪತ್ತು…ಹೀಗೆ ಸಾಲು ಸಾಲು ಸಂಕಟದ ನಡುವೆಯೂ ಭೂಪತಿಯ ಮನಸ್ಸು ಗೆಲ್ಲುತ್ತಿರುವ ನಕ್ಷತ್ರಾಳಿಗೆ ವೈಷ್ಣವಿಯ ಆಗಮನದಿಂದಾಗಿ ದಿಕ್ಕು ಕಾಣದಂತಾಗಲಿದೆ.
Kannadathi: ಕೋಮಾದಲ್ಲಿ ಅಮ್ಮಮ್ಮ, ರತ್ನಮಾಲಾ ಕಥೆ ಇಲ್ಲಿಗೆ ಮುಕ್ತಾಯವಾ?
ಇಷ್ಟಕ್ಕೂ ವೈಷ್ಣವಿ ಯಾರು? ಭೂಪತಿ ವೈಷ್ಣವಿಯನ್ನು ಮದುವೆ ಆಗ್ತೀನಿ ಎಂದು ಮಾತು ಕೊಟ್ಟಿದ್ದು ಯಾಕೆ? ಭೂಪತಿ ಮನೆಯಲ್ಲಿ ವೈಷ್ಣವಿಯನ್ನು ಹೇಗೆ ಸ್ವೀಕರಿಸ್ತಾನೆ ? ಈಗಾಗಲೇ ಶ್ವೇತಾಳ ದುಷ್ಟ ತಂತ್ರದಿಂದ ಪರದಾಡುತ್ತಿರುವ ನಕ್ಷತ್ರಾ - ವೈಷ್ಣವಿಯನ್ನು ಹೇಗೆ ಎದುರಿಸ್ತಾಳೆ? ಈ ಎಲ್ಲಾ ಪ್ರಶ್ನೆಗಳಿಗೆ ಇದೇ ಸೋಮವಾರ (ಅಕ್ಟೋಬರ್ 31 ರಾತ್ರಿ 8:30) ದಿಂದ ಪ್ರಸಾರವಾಗುವ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಅಗ್ನಿ ಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 8 ರ ನಂತರ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದು ಈ ಬಗ್ಗೆ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
ಸದ್ಯಕ್ಕೀಗ ಈ ಸೀರಿಯಲ್(Serial)ನಲ್ಲಿ ವಿಲನ್ ಪಾತ್ರದಲ್ಲಿ ಅಟ್ಟಹಾಸ ಮಾಡ್ತಾ ಇರೋದು ಡೆವಿಲ್ ಭಾರ್ಗವಿ. ಆಕೆ ನಕ್ಷತ್ರಾ ತಂದೆ ಚಂದ್ರಶೇಖರ್ ಬದುಕನ್ನು ಸರ್ವನಾಶ ಮಾಡುತ್ತೇನೆ ಅಂತ ಹೊರಟಿದ್ದಾಳೆ. ಆಕೆಯ ಮಗಳು ಮಿಲಿಯೂ ಇದಕ್ಕೆ ಸಾಥ್ ನೀಡಿದ್ದಾಳೆ. ಈ ವೈಷ್ಣವಿಯೂ ಭಾರ್ಗವಿಯ ಕುಮ್ಮಕ್ಕಿನಿಂದಲೇ ಬಂದವಳಾ? ಭೂಪತಿಗೆ ಮೊದಲೇ ಒಬ್ಬ ಹುಡುಗಿಯ ಜೊತೆಗೆ ಅಫೇರ್(Affair) ಇತ್ತಾ? ಅದಕ್ಕಾಗಿ ಆತ ಲಕ್ಷಣಾ ಜೊತೆ ರೊಮ್ಯಾಂಟಿಕ್(Romantic) ಲೈಫ್ ಲೀಡ್ ಮಾಡಲಿಕ್ಕೆ ಆಗ್ತಾ ಇಲ್ವಾ?
Ramachari: ಚಾರು ಬದುಕೋದು ಕಷ್ಟ ಅಂದ ಡಾಕ್ಟರ್, ಕಂಗಾಲಾಗಿದ್ದಾನೆ ಚಾರಿ!
ಈ ಎಲ್ಲ ಪ್ರಶ್ನೆ(Question)ಗಳಿಗೆ ಈ ಸೀರಿಯಲ್‌ನಲ್ಲಿ ಉತ್ತರ ಸಿಗಲಿದೆ. ಜಗನ್ನಾಥ್ ಈ ಸೀರಿಯಲ್ ಅನ್ನು ನಿರ್ದೇಶಿಸಿ(Direction) ನಾಯಕನಾಗಿ ನಟಿಸಿದ್ದಾರೆ. ವಿಜಯಲಕ್ಷ್ಮೀ ನಾಯಕಿ ನಕ್ಷತ್ರಾ ಪಾತ್ರ ಮಾಡ್ತಿದ್ದಾರೆ. ಇದೀಗ ವೈಷ್ಣವಿ ಗೌಡ ಅವರ ಆಗಮನೂ ಆಗಿದ್ದು, ಆಕೆ ಈ ಸೀರಿಯಲ್‌ನಲ್ಲಿ ಎಷ್ಟು ಕಾಲ ಇರ್ತಾರೆ, ಅವರದ್ದು ಕೇವಲ ಅತಿಥಿ(Guest) ಪಾತ್ರ ಅಷ್ಟೆಯಾ ಅನ್ನೋದನ್ನ ಕಾದು ನೋಡಬೇಕಿದೆ.
