Asianet Suvarna News Asianet Suvarna News

Kannadathi: ಪೊಲೀಸ್‌ ಸ್ಟೇಶನ್‌ನಲ್ಲಿ ಭುವಿ, ಹೊರಗೆ ಬಂದರೆ ದೊಡ್ಡ ಶಾಕ್!

ಕನ್ನಡತಿ ಸೀರಿಯಲ್‌ನಲ್ಲಿ ಒಂದು ಕಡೆ ಹಬ್ಬದ ಆಚರಣೆ ಗ್ರ್ಯಾಂಡ್ ಆಗಿ ನಡೆದರೆ ಇನ್ನೊಂದು ಕಡೆ ಭುವಿ ಪೊಲೀಸ್ ಸ್ಟೇಶನ್‌ ಮೆಟ್ಟಿಲೇರಿದ್ದಾಳೆ. ರತ್ನಮಾಲಾಳ ಪರ ಭುವಿ ಪೊಲೀಸ್ ಸ್ಟೇಶನ್‌ಗೆ ಬಂದಿದ್ದಾಳೆ. ರತ್ನಮಾಲಾ ಮಾಡಿರೋ ಅಪರಾಧವಾದರೂ ಏನು?

In Kannadathi serial Bhuvi went Police station
Author
First Published Sep 27, 2022, 3:11 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಲು ಜನಪ್ರಿಯ ಧಾರಾವಾಹಿ 'ಕನ್ನಡತಿ'. ಇದರಲ್ಲಿ ಒಂದು ಕಡೆ ರತ್ನಮಾಲಾ ಮನೆ ಹಬ್ಬದ ಸಂಭ್ರಮ, ಸಡಗರದಿಂದ ರಂಗೇರುತ್ತಿರುವಾಗಲೇ ಮನೆ ಎದುರು ಪೊಲೀಸರ ಆಗಮನವಾಗಿದೆ. ಭುವಿ ಈ ಬಗ್ಗೆ ಪೊಲೀಸರಲ್ಲಿ ವಿಚಾರಿಸಿದಾಗ ಅವರು ದರ್ಪದಿಂದ ಮಾತಾಡಿದ್ದಾರೆ. ರತ್ನಮಾಲಾ ಅವರನ್ನು ಕರೆಸಲು ಹೇಳಿದರೂ ಭುವಿ ಕರೆದಿಲ್ಲ. ಕೊನೆಗೆ ಪೊಲೀಸರು ಭುವಿಯನ್ನೇ ಪೊಲೀಸ್ ಜೀಪ್‌ನಲ್ಲಿ ಕರೆದೊಯ್ದಿದ್ದಾರೆ. ಆಮೇಲೆ ತಿಳಿದ ವಿಷಯ ಅಂದರೆ ರತ್ನಮಾಲಾ ಅವರ ಕಾರ್‌ನಿಂದ ಅಪಘಾತವಾಗಿದೆ. ಅದಕ್ಕಾಗಿ ಪೊಲೀಸರು ರತ್ನಮಾಲಾ ಹುಡುಕಿಕೊಂಡು ಅವರ ಮನೆಗೆ ಬಂದಿದ್ದರು. ಮರೆವಿನ ಸಮಸ್ಯೆಯಿಂದ ಬಳಲುತ್ತಿರುವ ರತ್ನಮಾಲಾ ಅವರನ್ನು ಕಾಪಾಡುವ ಬದಲು ಭುವಿ ತಾನೇ ಆ ಅಪಘಾತವಾಗಿರೋ ಕಾರನ್ನು ಡ್ರೈವಿಂಗ್ ಮಾಡ್ತಿದ್ದೆ ಎಂದು ಸುಳ್ಳು ಹೇಳಿದ್ದಾಳೆ. ಮರೆವಿನ ಸಮಸ್ಯೆಗೆ ಸಿಲುಕಿರುವ ರತ್ನಮ್ಮ ಡ್ರೈವಿಂಗ್ ಮಾಡುವಾಗ ಏನಾದರೂ ಮಾಡಿಕೊಂಡರಾ, ಅಥವಾ ಇದರ ಹಿಂದೆ ಬೇರೆ ಮಸಲತ್ತಿದೆಯಾ?

ಪೊಲೀಸ್ ಸ್ಟೇಶನ್‌ಗೆ ಭುವಿಯನ್ನು ಕರೆತಂದಾಗ ಅಲ್ಲೊಬ್ಬ ವ್ಯಕ್ತಿ ಕೂತಿದ್ದರು. ಆತನ ಬಳಿ ಪೊಲೀಸರು ಕೇಳಿದ್ದಾರೆ, ಈಕೆಯೇ ನಿಮಗೆ ಆಕ್ಸಿಡೆಂಟ್ ಮಾಡಿರೋದಾ ಅಂತ. ಭುವಿಯನ್ನು ನೋಡಿ ತಬ್ಬಿಬ್ಬಾದ ಆತ ಕತ್ತಲಿತ್ತು. ತನಗೆ ಸರಿಯಾಗಿ ಏನೂ ಕಾಣಲಿಲ್ಲ ಅಂತ ಸುಳ್ಳು ಹೇಳಿದ್ದಾನೆ. ಇತ್ತ ಪೊಲೀಸ್ ಇನ್ಸ್ ಪೆಕ್ಟರ್ ಭುವಿ ಬಳಿ ಸಖತ್ ಒರಟಾಗಿ ಆಗಿ ಮಾತನಾಡಿದ್ದಾರೆ. ಶ್ರೀಮಂತರು ಏನೂ ಬೇಕಿದ್ರೂ ಮಾಡ್ತಾರೆ ಅನ್ನುತ್ತಾ ಒಂದು ಹಂತದಲ್ಲಿ ಭುವಿ ಕುಡಿದು ಡ್ರೈವಿಂಗ್ ಮಾಡಿರಬೇಕು, ಅದಕ್ಕೆ ಈಗ ಏನು ಅಂತ ನೆನಪಾಗ್ತಿಲ್ಲ ಎಂದೆಲ್ಲ ಆಕೆಯ ಮೇಲೆ ಆರೋಪ ಮಾಡಿದ್ದಾರೆ.

 

ಇಷ್ಟೆಲ್ಲ ಆದಮೇಲೂ ಯಾಕೋ ಡೌಟ್(Doubt)  ಬಂದು ಸಿಸಿಟಿವಿ ಫುಟೇಜ್ ಚೆಕ್ ಮಾಡಿದಾಗ ಒಂದು ದೊಡ್ಡ ಸತ್ಯ ರಿವೀಲ್ ಆಗುತ್ತೆ. ಮತ್ತೇನಿಲ್ಲ, ಅಲ್ಲಿ ಅಪಘಾತವೇ ಆಗಿರಲಿಲ್ಲ. ಯಾವುದೋ ಬೈಕ್ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಗುದ್ದಿಗೊಂಡು ಹೋಗಿತ್ತು. ಅದಕ್ಕೆ ಕಾರಲ್ಲ ಸ್ಕ್ರಾಚ್(Scratch) ಆಗಿತ್ತು. ಇದನ್ನು ಕಂಡು ಪೊಲೀಸರು ದಂಗಾದರೆ ಆ ವ್ಯಕ್ತಿ ತಲೆ ತಗ್ಗಿಸಿನಿಂತಿದ್ದ. ಇಷ್ಟೊತ್ತಿಗೆ ಪೊಲೀಸರಿಗೆ ತಪ್ಪು ರತ್ನಮಾಲಾದಲ್ಲ. ಈ ವ್ಯಕ್ತಿಯದೇ ಅಂತ ಗೊತ್ತಾಗಿದೆ. ಈಗ ಭುವಿ ತನ್ನ ತಪ್ಪು ಒಪ್ಪಿಕೊಳ್ಳುತ್ತಾಳೆ. ತಾನು ಡ್ರೈವಿಂಗ್ ಮಾಡಿರಲಿಲ್ಲ ಅನ್ನೊ ಸತ್ಯ ಹೇಳ್ತಾಳೆ. ಆಗ ಪೊಲೀಸ್ ಸತ್ಯವನ್ನೇ ಹೇಳಬಹುದಿತ್ತಲ್ವಾ, ಪೊಲೀಸರ ಎದುರು ಯಾಕೆ ಸುಳ್ಳು ಹೇಳಬೇಕಿತ್ತು, ಪೊಲೀಸ್ ಸ್ಟೇಶನ್ ಅಂದರೆ ನಿಮಗೆಲ್ಲ ಯಾಕೆ ಬೇರೆ ಭಾವನೆ ಇದೆ ಅನ್ನುತ್ತಾ, ಈ ಬಗ್ಗೆ ಕಂಪ್ಲೇಟ್ ಕೊಡಲು ರತ್ನಮಾಲಾ ಅವರನ್ನೇ ಸ್ಟೇಶನ್‌ಗೆ ಕರೆಸಲು ಮುಂದಾಗುತ್ತಾರೆ. ಆದರೆ ಭುವಿ ಇದಕ್ಕೆ ಸುತಾರಾಂ ಒಪ್ಪೋದಿಲ್ಲ. ಇದ್ಯಾವ ಕಾರಣವೂ ಅಲ್ಲ, ತನ್ನ ಅತ್ತೆ ರತ್ನಮಾಲಾ ಅವರ ಆರೋಗ್ಯ ಸರಿಯಿಲ್ಲ. ಅದಕ್ಕಾಗಿ ತಾನೇ ಕಂಪ್ಲೇಂಟ್ ಕೊಡೋದಾಗಿ ಹೇಳ್ತಾಳೆ.

ಗಟ್ಟಿಮೇಳ: ಡುಪ್ಲಿಕೇಟ್ ವೈದೇಹಿ ಹೈ ಡ್ರಾಮಾ ಶುರು, ರಿಯಲ್ ವೈದೇಹಿ ಹೊರಟೇ ಹೋಗ್ತಾಳಾ?

ಭುವಿ ಹೊರಗೆ ಬಂದಾಗ ಅವಳಿಗೆ ಒಂದು ದೊಡ್ಡ ಶಾಕ್ ಎದುರಾಗುತ್ತೆ. ಪೊಲೀಸ್ ಸ್ಟೇಶನ್(Police Station) ಹೊರಗೆ ಸುದರ್ಶನ್ ನಿಂತಿದ್ದಾರೆ! ಅವರನ್ನು ನೋಡಿ ಭುವಿಗೆ ಶಾಕ್. ಅವರ ಕಾರಲ್ಲೇ ಮನೆಗೆ ಬರುವ ಸುದರ್ಶನ್ ಭುವಿಗೆ ಬಾಯಿ ತೆರೆಯಲೂ ಅವಕಾಶ ನೀಡದೇ ತನ್ನ ಬಗ್ಗೆ ಬಡಾಯಿ ಕೊಚ್ಚಿಕೊಳ್ತಾರೆ. ತನಗೆ ದೊಡ್ಡ ದೊಡ್ಡ ಪೊಲೀಸ್ ಆಫೀಸರ್ಸ್ (Officers) ಎಲ್ಲ ಗೊತ್ತಿದ್ದಾರೆ, ಒಂದು ಫೋನ್ ಮಾಡಿದರೆ ಕೆಲಸ ಆಗುತ್ತೆ ಅನ್ನೋ ರೀತಿ ಮಾತಾಡಿದ್ದಾರೆ. ಭುವಿ ಇದೆಲ್ಲ ಏನು ಅಂತ ಕಕ್ಕಾಬಿಕ್ಕಿಯಾಗಿ ಬಿಡ್ತಾಳೆ. ಮನೆಗೆ ಬಂದರೆ ಸುದರ್ಶನ್ ಪ್ಲೇಟೇ ಚೇಂಜ್. ಸಣ್ಣ ಕಿರಿಕ್ ಆಗಿತ್ತು. ತಾನು ಸ್ಟೇಶನ್‌ಗೆ ಹೋಗಿದ್ದೆ. ಭುವಿ ಎಲ್ಲ ಸರಿಮಾಡಿ ತನ್ನನ್ನು ಬಿಡಿಸಿಕೊಂಡು ಬಂದಳು ಅಂತೆಲ್ಲ ಮಾತಾಡ್ತಾರೆ.

ಅರ್ಧಾಂಗಿ: ಬನಶಂಕರಿ ಸನ್ನಿಧಾನದಲ್ಲಿ ಅದಿತಿ ದಿಗಂತ್, ತಾಯಿ ದಿಗಂತ್‌ನ ಕಾಪಾಡ್ತಾಳ?

ಭುವಿಗೆ ಈಗ ಮತ್ತೊಂದು ಶಾಕ್. ಏನಾಗ್ತಿದೆ ಅಂತಲೇ ಅರ್ಥ ಆಗ್ತಿಲ್ಲ. ತನಗೆ ರತ್ನಮಾಲಾ ಕಾರಿಂದ ಆಕ್ಸಿಡೆಂಡ್(Accident) ಆಗಿದೆ ಎಂದ ಆ ವ್ಯಕ್ತಿಯನ್ನು ಬಹುಶಃ ಸುದರ್ಶನ್ನೇ ಕಳಿಸಿರಬೇಕು, ರತ್ನಮಾಲಾರನ್ನು ಸ್ಟೇಶನ್ ಮೆಟ್ಟಿಲು ಹತ್ತಿಸಿ ಟಾರ್ಚರ್ ಕೊಡೋದು ಅವರ ಉದ್ದೇಶ ಇರಬೇಕು ಅಂತ ಮೇಲ್ನೋಟಕ್ಕೆ ಅನಿಸುತ್ತದೆ.

ರಂಜನಿ ರಾಘವನ್ ಕನ್ನಡತಿ ಭುವಿಯಾಗಿ, ಕಿರಣ್‌ರಾಜ್ ಹರ್ಷನಾಗಿ, ಚಿತ್ಕಲಾ ಬಿರಾದಾರ್ ರತ್ನಮಾಲಾ ಪಾತ್ರದಲ್ಲಿ ನಟಿಸಿದ್ದಾರೆ. ಯಶವಂತ್ ಪಾಂಡು ನಿರ್ದೇಶನದ ಸೀರಿಯಲ್ ಇದು.

Follow Us:
Download App:
  • android
  • ios