Lakshana serial: ಡೆವಿಲ್ ಭಾರ್ಗವಿಗೆ ಶ್ವೇತಾ ಮೇಲೆ ಕೆಂಡದಂಥಾ ಸಿಟ್ಟು! ಕಾರಣ ಏನು?

ಸಿಎಸ್‌ ಫ್ಯಾಮಿಲಿ, ನಕ್ಷತ್ರಳನ್ನು ಬಲಿ ಹಾಕಲು ಹೊಂಚು ಹಾಕುತ್ತಿರುವ ಡೆವಿಲ್ ಭಾರ್ಗವಿಯಲ್ಲಿ ಸಡನ್ ಬದಲಾವಣೆ. ಆಕೆ ನಕ್ಷತ್ರಾ ಎದುರು ಶ್ವೇತಾಗೆ ಆವಾಜ್ ಹಾಕ್ತಿದ್ದಾಳೆ. ಕೆಂಡದಂಥಾ ಕೋಪ ತೋರಿಸ್ತಿದ್ದಾಳೆ. ಇದರ ಹಿಂದಿನ ಕಾರಣ ಏನು?

In Lakshana serial Devil Bhargavi's new trick

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ‘ಲಕ್ಷಣ’ ದಲ್ಲಿ ಇದೀಗ ರೋಚಕ ತಿರುವು ಎದುರಾಗಿದೆ. ಈ ಸೀರಿಯಲ್ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ನಕ್ಷತ್ರ ಮತ್ತು ಭೂಪತಿಯನ್ನು ಬೇರೆ ಮಾಡಿ ತಾನು ಭೂಪತಿ ಮಡದಿ ಆಗಬೇಕು ಅನ್ನೋದು ಶ್ವೇತಾ ಬಯಕೆ. ಇದಕ್ಕೆ ಎಂತ ಕೆಲಸ ಮಾಡಲೂ ಶ್ವೇತಾ ಹೇಸುತ್ತಿಲ್ಲ. ಇಂಥಾ ಟೈಮಲ್ಲಿ ಡೆವಿಲ್ ಭಾರ್ಗವಿಯನ್ನೂ ಯಾವುದೋ ರಹಸ್ಯದಲ್ಲಿ ಸಿಕ್ಕಿ ಹಾಕಿಸಿ ಅವಳನ್ನೂ ತನ್ನ ಕೈಗೊಂಬೆ ಮಾಡಿಕೊಂಡಿದ್ದಾಳೆ. ಈಗ ಡೆವಿಲ್ ಸಹ ಶ್ವೇತಾ ಜೊತೆ ಕೈ ಜೋಡಿಸಿ ಭೂಪತಿ ಹಾಗೂ ಆತನ ಪತ್ನಿ ನಕ್ಷತ್ರಳನ್ನ ಬೇರೆ ಮಾಡಲು ಹೊರಟಿದ್ದಾಳೆ. ಗಂಡ ಹೆಂಡತಿಯನ್ನ ಬೇರೆ ಮಾಡುವ ಸಲುವಾಗಿ ನಕ್ಷತ್ರಳನ್ನ ಡೆವಿಲ್ ಹೆದರಿಸುತ್ತಿದ್ದಾಳೆ. ನಕ್ಷತ್ರಗೆ ಭಯ, ಆತಂಕ ಹುಟ್ಟಿಸುತ್ತಿದ್ದಾಳೆ. ಇಂಥಾ ಟೈಮಲ್ಲೇ ಇನ್ನೊಂದು ಟ್ವಿಸ್ಟ್ ಎದುರಾಗಿದೆ. ಸ್ವತಃ ಡೆವಿಲ್ ಶ್ವೇತಾ ವಿರುದ್ಧ ತೊಡೆ ತಟ್ಟಿನಿಂತಂತಿದೆ. ಶ್ವೇತಾ ನಿನ್ನ ಕುಟುಂಬ ಹಾಳು ಮಾಡ್ತಿದ್ದಾಳೆ ಅಂತ ಡೆವಿಲ್ ಭಾರ್ಗವಿಯೇ ನಕ್ಷತ್ರಾಗೆ ಹೇಳ್ತಿದ್ದಾಳೆ, ಅದೂ ಶ್ವೇತಾ ಎದುರಿಗೆ. ಈ ಸೀರಿಯಸ್ ಟ್ವಿಸ್ಟ್ ಕಂಡು ಶ್ವೇತಾನೇ ಕಂಗಾಲಾಗಿದ್ದಾಳೆ.

ಈ ಸೀರಿಯಲ್ ಮೂಲ ಕತೆ ಪ್ರಕಾರ ಚಂದ್ರಶೇಖರ್ ಮತ್ತು ಆರತಿ ಪುತ್ರಿ ನಕ್ಷತ್ರ, ತುಕಾರಾಂ ಹಾಗೂ ಜಯ ಪುತ್ರಿ ಶ್ವೇತಾ ಡೆವಿಲ್ ಕುತಂತ್ರದಿಂದ ಹುಟ್ಟುತ್ತಲೇ ಅದಲು ಬದಲಾಗಿರುತ್ತಾರೆ. ಸ್ವಂತ ಸಹೋದರಿಯಾಗಿದ್ದರೂ ಚಂದ್ರಶೇಖರ್ ಹಾಗೂ ಕುಟುಂಬಕ್ಕೆ ಡೆವಿಲ್ ಕೇಡು ಬಯಸುತ್ತಿರುತ್ತಾಳೆ. 23 ವರ್ಷಗಳ ಬಳಿಕ ನಕ್ಷತ್ರ, ಶ್ವೇತಾ ಜನ್ಮರಹಸ್ಯ ಬಯಲಾಗುತ್ತದೆ. ತಂದೆಯಾಗಿ ಮಗಳ ಬದುಕಲ್ಲಿ ಖುಷಿ ತರಲು ಚಂದ್ರಶೇಖರ್ ಭೂಪತಿ - ಶ್ವೇತಾ ಮದುವೆ ತಪ್ಪಿಸಿ ಭೂಪತಿ - ನಕ್ಷತ್ರ ಮದುವೆ ನೆರವೇರುವ ಹಾಗೆ ಮಾಡುತ್ತಾರೆ. ಆರಂಭದಲ್ಲಿ ಇದರಿಂದ ನಕ್ಷತ್ರ ಭೂಪತಿ ದಾಂಪತ್ಯ, ಕುಟುಂಬ ಒಡೆದಂತೆ ಕಂಡರೂ ಒಂದು ಹಂತದಲ್ಲಿ ನಕ್ಷತ್ರ ಒಳ್ಳೆತನದಿಂದ ಇದೆಲ್ಲ ಸರಿಯಾಗಿದೆ. ಆದರೆ ಡೆವಿಲ್ ಕಂಟಕ ಎದುರಾಗಿದೆ. ಶ್ವೇತಾ ಡೆವಿಲ್ ಒಂದಾಗಿ ನಕ್ಷತ್ರ ಭೂಪತಿ ಲೈಫು ಹಾಳು ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ರಾಮಾಚಾರಿ, ಸತ್ಯ ಹೇಳಿದ್ರೆ ಸಾಯ್ತೀನಿ ಅಂತಿದ್ದಾಳೆ ಚಾರು, ರಾಮಚಾರಿ ಏನ್ಮಾಡಬೇಕು ನೀವೇ ಹೇಳಿ?

ಅಪರಿಚಿತ ನಂಬರ್‌ನಿಂದ ಮೆಸೇಜ್ ಮಾಡುತ್ತಾ ನಕ್ಷತ್ರಗೆ ಡೆವಿಲ್ ದಿಗಿಲು ಹುಟ್ಟಿಸುತ್ತಿದ್ದಾಳೆ. ಈ ವಿಷಯವನ್ನ ಯಾರಿಗೂ ಹೇಳದಂತೆ ಧಮ್ಕಿ ಹಾಕಿದ್ದಾಳೆ. ಮಯೂರಿ ಅನಾರೋಗ್ಯಕ್ಕೀಡಾಗಿರುವುದು, ಭೂಪತಿಗೆ ಏಟಾಗಿರುವುದನ್ನ ಗಮನಿಸಿರುವ ನಕ್ಷತ್ರ ತುಟಿ ಎರಡು ಮಾಡದಂತೆ ಒಬ್ಬಳೇ ಸಂಕಟ ಅನುಭವಿಸುತ್ತಿದ್ದಾಳೆ. ನಕ್ಷತ್ರಗೆ ಟಾರ್ಚರ್ ಕೊಡುತ್ತಾ ಡೆವಿಲ್ ಸಂತಸ ಪಡುತ್ತಿದ್ದಾಳೆ.

ಇನ್ನೊಂದೆಡೆ ಪ್ರಸಾದ ಕೊಡುವ ನೆವದಲ್ಲಿ ಭಾರ್ಗವಿ ನಕ್ಷತ್ರ ಮನೆಗೆ ಬಂದಿದ್ದಾಳೆ. ಸೀರೆ ಅರಿಶಿನ ಕುಂಕುಮ ಕೊಟ್ಟಿದ್ದಾಳೆ. ಇದನ್ನು ಕಂಡು ಶ್ವೇತಾ ಸಿಟ್ಟಲ್ಲಿ ಕುಣಿಯುತ್ತಿದ್ದಾಳೆ. ಆದರೆ ನಕ್ಷತ್ರ ಪ್ರೊಗ್ರೆಸ್(Progress) ಬಗ್ಗೆ ತಿಳ್ಕೊಳ್ಳೋಕೆ ಬಂದೆ ಅನ್ನುತ್ತಾಳೆ. ಆ ಬಳಿಕ ನಕ್ಷತ್ರ ಹತ್ರ ಶ್ವೇತಾಳ ಬಗ್ಗೆ ಕಿಡಿ ಕಾರ್ತಿದ್ದಾಳೆ. ಅವಳಿಂದ ನಿನ್ನ ಮನೆ, ಕುಟುಂಬ ಹಾಳಾಗ್ತಿದೆ ಅನ್ನೋ ರೀತಿ ಮಾತಾಡ್ತಿದ್ದಾಳೆ. ತಾನು ಈ ಬಗ್ಗೆ ವಾರ್ನಿಂಗ್ ಕೊಡೋದಕ್ಕೆ ಬಂದೆ ಅಂತಿದ್ದಾಳೆ. ಡೆವಿಲ್ ಇದೀಗ ಶ್ವೇತಾ ಹತ್ರನೂ ಆಟ(Game) ಶುರು ಮಾಡಿದ್ಲಾ? ನಕ್ಷತ್ರ ಭೂಪತಿ ಲೈಫಲ್ಲಿ(Life) ಮುಂದೆ ಏನೆಲ್ಲ ಆಟ ಆಡ್ತಾಳೆ? ಈಗ ನಕ್ಷತ್ರ ಭೂಪತಿ ನಡುವೆ ಬರ್ತಿರೋ ತೊಂದರೆಯನ್ನು ನಕ್ಷತ್ರ ಹೇಗೆ ನಿಭಾಯಿಸ್ತಾಳೆ ಅನ್ನೋದನ್ನು ಕಾದು ನೋಡಬೇಕು. ಈ ಸೀರಿಯಲ್‌ನಲ್ಲಿ ಸಿಎಸ್ ಆಗಿ ಕೀರ್ತಿ ಭಾನು, ನಕ್ಷತ್ರಾ ತಾಯಿ ಆರತಿ ಆಗಿ ದೀಪಾ ಅಯ್ಯರ್, ನಾಯಕಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ನಕ್ಷತ್ರ ಪತಿ ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಚಂದ್ರಶೇಖರ್ ಸಹೋದರಿ ಭಾರ್ಗವಿ ಅಲಿಯಾಸ್ ಡೆವಿಲ್ ಆಗಿ ಪ್ರಿಯಾ ಶಠಮರ್ಷಣ, ಶ್ವೇತಾ ಆಗಿ ಸುಕೃತಾ ನಾಗ್ ಅಭಿನಯಿಸುತ್ತಿದ್ದಾರೆ.

ಭಾಗ್ಯಲಕ್ಷ್ಮೀ ಸೀರಿಯಲ್‌ ಲಕ್ಷ್ಮೀ ಪಾತ್ರಧಾರಿ ಭೂಮಿಕಾ ದೊರೆಸಾನಿ ಸೀರಿಯಲ್‌ಗ್ಯಾಕೆ ಸೆಲೆಕ್ಟ್ ಆಗಿಲ್ಲ?

Latest Videos
Follow Us:
Download App:
  • android
  • ios