ರಾಮಾಚಾರಿ, ಸತ್ಯ ಹೇಳಿದ್ರೆ ಸಾಯ್ತೀನಿ ಅಂತಿದ್ದಾಳೆ ಚಾರು, ರಾಮಚಾರಿ ಏನ್ಮಾಡಬೇಕು ನೀವೇ ಹೇಳಿ?

ರಾಮಾಚಾರಿ ಸೀರಿಯಲ್‌ನಲ್ಲಿ ಮತ್ತೆ ಕವಲುದಾರಿಯಲ್ಲಿ ರಾಮಾಚಾರಿ ನಿಂತಿದ್ದಾನೆ. ಅತ್ತ ಚಾರು ಮದುವೆಗೆ ಮುಹೂರ್ತ ಫಿಕ್ಸ್ ಮಾಡೋಕೆ ಆತನನ್ನೇ ಕರೆದಿದ್ದಾರೆ. ಇನ್ನೊಂದೆಡೆ ತಾನು ತಾಳಿ ಕಟ್ಟಿದ ಚಾರು ಸತ್ಯ ಹೇಳಿದ್ರೆ ಸಾಯ್ತೀನಿ ಅಂತಿದ್ದಾಳೆ.

In Ramachari serial Charu and Chari are in trouble

ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀರಿಯಲ್. ಆರಂಭದಲ್ಲಿ ಟಾಮ್ ಆಂಡ್ ಜೆರ್ರಿ ಥರ ಫೈಟ್ ಮಾಡ್ತಿದ್ದ ರಾಮಾಚಾರಿ ಮತ್ತು ಚಾರುಲತಾ ಆಮೇಲೆ ದ್ವೇಷಕ್ಕೆ ಬಿದ್ದು ಜಿದ್ದಾಜಿದ್ದಿಗೆ ಮುಂದಾದರು. ರಾಮಾಚಾರಿ ಸತ್ಯ, ಧರ್ಮ, ಸಂಪ್ರದಾಯ ಅಂತಿದ್ರೆ ಮಾಡರ್ನ್ ಹುಡುಗಿ ಚಾರು ಮಾತ್ರ ಧರ್ಮ, ಸತ್ಯ ಬಿಟ್ಟು ಅಡ್ಡದಾರಿ, ಶಾರ್ಟ್ ಕಟ್‌ನಲ್ಲೇ ಮುಂದೆ ಹೋಗ್ತಿದ್ಲು. ಯಾವುದೋ ಬಿಂದುವಿನಲ್ಲಿ ಚಾರು ಚಾರಿ ಮತ್ತೆ ಮತ್ತೆ ಸಂಧಿಸಲೇ ಬೇಕಾಯ್ತು. ಆ ಹೊತ್ತಲ್ಲಿ ಚಾರಿನ ಲವ್ ಮಾಡೋ ಥರ ಚಾರು ನಾಟ್ಕ ಆಡಿದ್ಲು. ಆಮೇಲೆ ಚಾರಿ ಬಗ್ಗೆ ನಿಜವಾದ ಪ್ರೀತಿ ಹುಟ್ಟಿತು. ಅತ್ತ ಚಾರಿಗೆ ಆರಂಭದಿಂದಲೇ ಚಾರು ಬಗ್ಗೆ ಕೊಂಚ ಬೇರೆ ಥರ ಭಾವ ಇದ್ದರೂ ಆತ ಅದನ್ನೆಲ್ಲೂ ಹೊರಗೆ ತೋರಿಸಿಕೊಳ್ಳೋದಿಲ್ಲ. ತನ್ನ ತೋಳನ್ನೇ ದಿಂಬು ಮಾಡಿಕೊಂಡು ತನ್ನ ಪಕ್ಕದಲ್ಲೇ ಚಾರು ಮಲಗಿದ್ದಾಗಲೂ ಕಾಳಜಿಯಿಂದ ಸುಮ್ಮನಿದ್ದವನು. ಇದೀಗ ಆತನಿಂದ ಚಾರು ಕಣ್ಣು ಹೋಗಿದೆ, ಮತ್ತೆ ಬಂದಿದೆ. ಆದರೆ ಆಗಬೇಕಾದ್ದು ಆಗಿ ಹೋಗಿದೆ. ಚಾರಿ ಚಾರುವಿಗೆ ತಾಳಿ ಕಟ್ಟಿ ಆಗಿದೆ. ಆದರೆ ಅದನ್ನೆಲ್ಲೂ ಬಾಯಿಬಿಟ್ಟಿಲ್ಲ. ಈಗ ಚಾರು ಮನೆಯಲ್ಲಿ ಆಕೆಗೆ ಒಬ್ಬ ಹುಡುಗನ ಜೊತೆಗೆ ಮದುವೆ ಮಾಡೋ ಪ್ಲಾನ್ ನಡೀತಿದೆ. ಇದಕ್ಕೆ ಚಾರಿಯೇ ಮುಹೂರ್ತ ಇಡಬೇಕಿದೆ.

ರಾಮಾಚಾರಿ ಮತ್ತೆ ಬೆಂಕಿ ಮೇಲೆ ನಿಂತಿದ್ದಾನೆ. ಅತ್ತ ತನ್ನ ಮನೆಯವರಿಗೆ ಮದುವೆಯ ಸತ್ಯ ತಿಳಿಸಿಲ್ಲ. ಇತ್ತ ಚಾರು ಮದುವೆಗೆ ಮಾನ್ಯತಾ ಮುಂದಾಗಿದ್ದಾರೆ. ವಿಕಾಸ್ ಜೊತೆಗೆ ಆಕೆಯ ಮದುವೆ ಫಿಕ್ಸ್ ಮಾಡಿದ್ದಾರೆ. ಇದು ಚಾರುವಿಗೂ ನುಂಗಲಾರದ ತುತ್ತು. ಹೇಗೂ ಮದುವೆಗೆ ಮುಹೂರ್ತ ಇಡಬೇಕಾದವನು ಚಾರಿಯೇ ಆಗಿರೋ ಕಾರಣ ಈಗಲಾದರೂ ಸುಳ್ಳು ಹೇಳಿ ಆಗೋ ಮದುವೆಯನ್ನು ತಪ್ಪಿಸು ಅಂತ ಚಾರು ಪರಿಪರಿಯಾಗಿ ಚಾರಿಗೆ ಹೇಳ್ತಿದ್ದಾಳೆ. ಈ ಹಿಂದೆ ಚಾರಿ ಇಂಥದ್ದೇ ಇಬ್ಬಂದಿತನದಲ್ಲಿ ಸಿಲುಕಿದ್ದ. ಆಗ ಚಾರು ಮದುವೆ ಆಗೋ ಹುಡುಗ ವಿಕಾಸ್‌ ಜಾತಕ ಚಾರಿ ಕೈಯಲ್ಲಿತ್ತು. ಚಾರು ಮತ್ತು ವಿಕಾಸ್ ಜಾತಕದಲ್ಲಿ ಹೊಂದಾಣಿಕೆ ಆಗುತ್ತಾ ಅನ್ನೋ ಪ್ರಶ್ನೆ ಕೇಳಿದಾಗ ಪತಿ ಧರ್ಮವನ್ನೂ ಮರೆತು ವೃತ್ತಿ ಧರ್ಮಕ್ಕಾಗಿ ಆತ ಸತ್ಯವನ್ನೇ ಹೇಳಿದ್ದ. ಆತ ಅಂದು ಹೇಳಿದ ಸತ್ಯ ಇಂದು ಚಾರು ಚಾರಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಭಾಗ್ಯಲಕ್ಷ್ಮೀ ಸೀರಿಯಲ್‌ ಲಕ್ಷ್ಮೀ ಪಾತ್ರಧಾರಿ ಭೂಮಿಕಾ ದೊರೆಸಾನಿ ಸೀರಿಯಲ್‌ಗ್ಯಾಕೆ ಸೆಲೆಕ್ಟ್ ಆಗಿಲ್ಲ?

ಈಗ ರಾಮಾಚಾರಿ ತನ್ನ ಪತ್ನಿ ಚಾರುವಿನ ಮದುವೆಯ ಮಹೂರ್ತ ಇಡಬೇಕಾಗಿದೆ. ಈ ವಿಚಾರದಲ್ಲಾದ್ರೂ ಸುಳ್ಳು ಹೇಳು, ಏಳು ತಿಂಗಳ ನಂತರವೇ ಮದುವೆ ಮುಹೂರ್ತ ಇರೋದು ಅಂತ ಹೇಳು ಅಂತ ಚಾರು ಚಾರಿಗೆ ಒತ್ತಾಯ(Force) ಮಾಡ್ತಿದ್ದಾಳೆ. ಅತ್ತ ಚಾರಿ ಸುಳ್ಳು ಹೇಳಲಾಗದೇ ಒದ್ದಾಡುತ್ತಿದ್ದಾನೆ. ಇತ್ತ ಚಾರು ಕಟ್ಟಿಕೊಂಡವನನ್ನು ಬಿಟ್ಟು ಇನ್ನೊಬ್ಬನ ಜೊತೆ ಹಸೆಮಣೆ ಏರಬೇಕಾದ ಸ್ಥಿತಿ ನೆನೆದು ಭಯ(Fear) ಪಡುತ್ತಿದ್ದಾಳೆ. ಒಂದು ಹಂತದಲ್ಲಿ ರಾಮಾಚಾರಿ ಯಾವ ನಿರ್ಣಯಕ್ಕೂ ಬಾರದಿದ್ದಾಗ ಒಂದು ವೇಳೆ ರಾಮಾಚಾರಿ ವೃತ್ತಿ ಧರ್ಮಕ್ಕಾಗಿ ತನ್ನ ಪತಿಧರ್ಮ ಮರೆತರೆ ತಾನು ಮತ್ತೆ ಸಾವಿನ ದಾರಿ ಹಿಡಿಯಬೇಕಾಗುತ್ತದೆ ಎಂದು ಬೆದರಿಸುತ್ತಿದ್ದಾಳೆ.

ಮುಂದೆ ಚಾರಿ ಏನು ಮಾಡ್ತಾನೆ, ಹಿಂದಿನಂತೇ ಮುಹೂರ್ತ ಇಡುವ ವಿಚಾರದಲ್ಲೂ ಸುಳ್ಳು ಹೇಳಲಾಗದೇ ಸತ್ಯವನ್ನೇ(Truth) ಹೇಳ್ತಾನಾ? ಇವರಿಬ್ಬರ ನಡುವೆ ಸಮಸ್ಯೆ, ಕಗ್ಗಂಟುಗಳಷ್ಟೇ ಇವೆ, ಇಬ್ಬರ ನಡುವೆ ಪ್ರೇಮ ಚಿಗುರೋದು ಯಾವಾಗ? ಈ ಸಮಸ್ಯೆಯನ್ನು ಚಾರು, ಚಾರಿ ದಾಟಿ ಹೇಗೆ ಮುಂದೆ ಹೋಗ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Ramachari: ಯಾಕಂದ್ರೆ ನನಗೆ ಮದ್ವೆ ಆಗಿದೆ.. ಎದೇಲಿ ಬಚ್ಚಿಟ್ಟುಕೊಂಡ ಸತ್ಯ ಹೇಳೇಬಿಟ್ಟ ರಾಮಾಚಾರಿ..

Latest Videos
Follow Us:
Download App:
  • android
  • ios