Asianet Suvarna News Asianet Suvarna News

ಭಾಗ್ಯಲಕ್ಷ್ಮೀ ಸೀರಿಯಲ್‌ ಲಕ್ಷ್ಮೀ ಪಾತ್ರಧಾರಿ ಭೂಮಿಕಾ ದೊರೆಸಾನಿ ಸೀರಿಯಲ್‌ಗ್ಯಾಕೆ ಸೆಲೆಕ್ಟ್ ಆಗಿಲ್ಲ?

ಭೂಮಿಕಾ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್ ನಾಯಕಿ. ಈಕೆಯ ಪಾತ್ರಕ್ಕೆ ಬಹಳ ಮೆಚ್ಚುಗೆ ಹರಿದು ಬರ್ತಿದೆ. ಆದರೆ ಕೆಲವು ಸಮಯದ ಕೆಳಗೆ ಈಕೆ ಒಂದು ಸೀರಿಯಲ್‌ ಆಡಿಶನ್‌ನಲ್ಲಿ ಭಾಗವಹಿಸಿ ರಿಜೆಕ್ಟ್ ಆಗಿದ್ರು. ಅದಕ್ಕೇನು ಕಾರಣ, ಆ ಸೀರಿಯಲ್ ಯಾವುದು?

Bhagyalaxmi serial heroine real story
Author
First Published Mar 11, 2023, 3:10 PM IST

ಕಲರ್ಸ್ ಕನ್ನಡದಲ್ಲಿ ಸದ್ಯಕ್ಕೆ ಸಖತ್ ಜನಪ್ರಿಯವಾಗ್ತಿರೋ ಸೀರಿಯಲ್ ಭಾಗ್ಯಲಕ್ಷ್ಮೀ. ಈ ಸೀರಿಯಲ್ ಈಗ ಎರಡು ಸೀರಿಯಲ್‌ಗಳಾಗಿ ಬದಲಾಗಿದೆ. ಲಕ್ಷ್ಮೀ ಬಾರಮ್ಮ ಅನ್ನೋ ಹೊಸ ಅಧ್ಯಾಯ ಶುರುವಾಗ್ತಿದೆ. ಈ ಸೀರಿಯಲ್‌ನ ನಾಯಕಿ ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿರೋದು ಭೂಮಿಕಾ ರಮೇಶ್ ಅನ್ನೋ ಯುವ ನಟಿ. ಈ ಹುಡುಗಿ ಮೊದಲ ಪ್ರೆಸ್ ಮೀಟ್‌ಗೆ ಬಂದಿದ್ದಾಗ ಪತ್ರಕರ್ತರೊಬ್ಬರು, 'ಏನ್ ಸ್ಕೂಲ್ ಹುಡುಗೀನ ಎತ್ತಾಕ್ಕೊಂಡು ಬಂದಿದ್ದೀರ ಸರ್?' ಅಂತ ನಿರ್ದೇಶಕರಿಗೆ ಕ್ಲಾಸ್ ತಗೊಳ್ಳೋಕೆ ಹೊರಟಿದ್ರು. ನಿಜ ಹೇಳ್ಬಕಂದ್ರೆ ಹೀಗೇ ನೋಡಿದಾಗ ಭೂಮಿಕಾ ಅವರನ್ನು ಸ್ಕೂಲ್ ಹುಡುಗಿ ಥರನೇ ಕಾಣಿಸುತ್ತೆ. ಎಲ್ಲರೂ ಚಿಕ್ಕ ವಯಸ್ಸಿನವರ ಥರ ಕಾಣ್ಬೇಕು ಅಂತ ಏನೇನೆಲ್ಲ ಸರ್ಕಸ್ ಮಾಡ್ತಾರೆ. ಆದರೆ ಈ ಭೂಮಿಕಾಗೆ ಎಷ್ಟೋ ಸಲ ಇರೋದಕ್ಕಿಂತ ಚಿಕ್ಕೋಳ ಥರ ಕಾಣೋದೇ ಪ್ರಾಬ್ಲೆಂ ಆಗಿದೆ. ಇದರಿಂದ ಅವಕಾಶಗಳೂ ಮಿಸ್ ಆಗಿವೆ.

ಯೆಸ್, ಅಂದಹಾಗೆ ಇನ್ನೂ ಸ್ಕೂಲಿಗೆ ಹೋಗೋ ಹುಡುಗಿ ಥರ ಕಾಣೋ ಭೂಮಿಕಾ ಈ ಹಿಂದೆ 'ದೊರೆಸಾನಿ' ಆಡಿಶನ್‌ಗೆ ಹೋಗಿದ್ದರು. ಆದರೆ ದುರಾದೃಷ್ಟವಶಾತ್ ಅಲ್ಲಿ ಸೆಲೆಕ್ಟ್ ಆಗಿಲ್ಲ. ಕಾರಣ ತುಂಬ ಚಿಕ್ಕ ಹುಡುಗಿ ಥರ ಕಾಣ್ತಿದ್ದದ್ದು. ಆಗ ಈಕೆ ಸೆಕೆಂಡ್ ಪಿಯುಸಿ ಓದ್ತಿದ್ರಂತೆ. ನಟನೆಯ ಆಸೆಯಿಂದ ಆಡಿಶನ್‌ನಲ್ಲಿ ಭಾಗವಹಿಸಿದ್ರು. ಆದರೆ ಸೆಲೆಕ್ಟ್ ಆಗಿಲ್ಲ. ಇವರ ಫ್ಯಾನ್ಸ್ ಹೇಳೋ ಪ್ರಕಾರ ಅಲ್ಲಿ ಸೆಲೆಕ್ಟ್ ಆಗಿರದಿದ್ದದ್ದು ಒಂದು ಲೆಕ್ಕದಲ್ಲಿ ಈಕೆಗೆ ಒಳ್ಳೆಯದೇ ಆಯ್ತು. ದೊರೆಸಾನಿ ಸೀರಿಯಲ್ ಅಂದುಕೊಂಡ ಯಶಸ್ಸು ಸಾಧಿಸಲಿಲ್ಲ. ಅರ್ಧಕ್ಕೆ ನಿಂತುಹೋಯ್ತು. ಆದರೆ ಈ ಹೊಸ ಸೀರಿಯಲ್ ಭಾಗ್ಯಲಕ್ಷ್ಮೀ ಹಾಗಲ್ಲ. ಟಿಆರ್‌ಪಿಯಲ್ಲಿ, ಪ್ರಸಿದ್ಧಿಯಲ್ಲಿ ಎರಡರಲ್ಲೂ ಮುಂದಿದೆ. ಸೋ, ಆ ಅವಕಾಶ ಕೈ ತಪ್ಪಿದರೂ ಈಕೆಗೆ ಒಂದೊಳ್ಳೆ ಅವಕಾಶವೇ ಬಂದಿದೆ.

ಟಿವಿ ಇತಿಹಾಸದಲ್ಲೇ ಹೊಸ ಪ್ರಯೋಗ; ಏಳು ಗಂಟೆಗೆ ಅಕ್ಕನ ಕಥೆ, ಏಳೂವರೆಗೆ ತಂಗಿಯ ಕಥೆ

ಅಂದಹಾಗೆ ಈ ಹುಡುಗಿಯ ವಯಸ್ಸು ಈಗ ಇಪ್ಪತ್ತೆರಡರ ಆಸುಪಾಸು. ಸದ್ಯಕ್ಕೆ ಸೀರಿಯಲ್ ನಟನೆ ಜೊತೆಗೆ ಓದನ್ನೂ ಮುಂದುವರಿಸಿದ್ದಾರೆ. ಆನ್‌ಲೈನ್‌ನಲ್ಲೇ ಬಿಸಿಎ ಕೋರ್ಸ್ ಮಾಡ್ತಿದ್ದಾರೆ. ಕ್ಲಾಸ್ ಆನ್‌ಲೈನ್ ನಲ್ಲಿ ನಡೆಯೋ ಕಾರಣ ಕಾಲೇಜಿಗೆ ಹೋಗುವ ಅಗತ್ಯ ಇಲ್ಲ. ಹೀಗಾಗಿ ಓದು ಸೀರಿಯಲ್ ಎರಡನ್ನೂ ನಿಭಾಯಿಸೋದು ಕಷ್ಟ ಆಗ್ತಿಲ್ಲವಂತೆ. ಅಂದಹಾಗೆ ಈ ಹುಡುಗಿ ಸೀರಿಯಲ್‌ಗೆ ಬಂದಾಗ ಕಿರುತೆರೆಗೆ ಆಗಷ್ಟೇ ಬಂದಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ಪೂರ್ತಿ ನಿಜ ಅಲ್ಲ. ಈಕೆಯ ಮಾತಲ್ಲೇ ಹೇಳೋದಾದ್ರೆ, 'ನಾಲ್ಕನೇ ತರಗತಿಯಲ್ಲಿದ್ದಾಗಲೇ ನಾನು ತೆಲುಗು ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದೆ. ನಂತರ ‘ಸೈ ಅಂಟೆ ಸೈ’ ಮಲ್ಟಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದೆ. ನಂತರ 8ನೇ ತರಗತಿಯಲ್ಲಿದಾಗ ಕನ್ನಡ ರಿಯಾಲಿಟಿ ಶೋ ‘ಡಾನ್ಸಿಂಗ್‌ ಸ್ಟಾರ್‌’ನಲ್ಲಿ ಭಾಗವಹಿಸಿದ್ದೆ. ರಿಯಾಲಿಟಿ ಶೋ(Reality show)ನಲ್ಲಿ ಇರುವಾಗ ನನಗೆ ಭರತನಾಟ್ಯ ಗೊತ್ತಿರಲಿಲ್ಲ.

ಪಾಶ್ಚಾತ್ಯ ನೃತ್ಯವಷ್ಟೇ ಮಾಡುತ್ತಿದ್ದೆ. ನಂತರ ಭರತನಾಟ್ಯ ಕಲಿಯಲು ಪ್ರಾರಂಭಿಸಿದೆ. ಈಗ ಭರತನಾಟ್ಯದಲ್ಲಿ ಸೀನಿಯರ್‌ ಮುಗಿಸಿ ವಿದ್ವತ್‌ ತರಬೇತಿಯಲ್ಲಿದ್ದೇನೆ. ಶಾಲೆಯಲ್ಲಿಏಕಪಾತ್ರಾಭಿನಯ ಮಾಡುತ್ತಿದ್ದೆ. ಆಗ ಇದನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕೆಂಬ ಆಸೆ ಇರಲಿಲ್ಲ. ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕೆಂಬ ಆಸೆ ಇತ್ತು. ನನ್ನ ನಟನಾ ಹಾದಿಗೆ ತಂದೆ ತಾಯಿಯ ಪ್ರೋತ್ಸಾಹ ಹೆಚ್ಚು. ಜತೆಗೆ ನಾನು ನೃತ್ಯ(Dance) ಮಾಡುವಾಗ ನನ್ನ ಹಾವಾಭಾವ ನೋಡಿ ನೀನು ಏಕೆ ನಟನೆಯಲ್ಲಿ ತೊಡಗಿಸಿಕೊಳ್ಳಬಾರದೆಂದು ಹಿತೈಷಿಗಳು ಹೇಳುತ್ತಿದ್ದರು. ಅವರ ಹಾರೈಕೆ, ಆಶೀರ್ವಾದ, ನನ್ನ ಆಸಕ್ತಿಯಿಂದ ನಾನು ಈ ಹಾದಿ ಆಯ್ಕೆ ಮಾಡಿದೆ' ಎನ್ನುತ್ತಾರೆ ಭೂಮಿಕಾ.

ಮಧ್ಯೆರಾತ್ರಿ ಶೂಟಿಂಗ್‌ನಿಂದ ಬಂದ್ರೂ ಮಾರನೇ ದಿನಕ್ಕೆ ಅಡುಗೆ ಮಾಡ್ತಾಳೆ; ಪತ್ನಿ ಬಗ್ಗೆ 'ಗೀತಾ' ಶೋಭರಾಜ್‌ ಮಾತು

Follow Us:
Download App:
  • android
  • ios