Dhruva Sarja ಪತ್ನಿ ಪ್ರೇರಣಾ ಅದ್ಧೂರಿ ಸೀಮಂತ ಶಾಸ್ತ್ರ; ಫೋಟೋ ವೈರಲ್
ಹಸಿರು ಸೀರೆಯಲ್ಲಿ ಮಿಂಚಿದ ಪ್ರೇರಣಾ ಸರ್ಜಾ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ ಸೀಮಂತ ಫೋಟೋಗಳು....

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಸೆಪ್ಟೆಂಬರ್ 3ರಂದು ತಂದ-ತಾಯಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೇ ತಿಂಗಳು ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳುತ್ತಿರುವ ಧ್ರುವ ಸರ್ಜಾ ಕುಟುಂಬ ನಿನ್ನೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.
ಬೆಂಗಳೂರಿನ ಐಷಾರಾಮಿ ಹೋಟೆಲ್ ಶೆರಾಟನ್ ಗ್ರ್ಯಾಂಡ್‌ನಲ್ಲಿ ಸೀಮಂತ ಶಾಸ್ತ್ರಿ ನಡೆದಿದೆ. ಕುಟುಂಬದಸ್ಥರು ಮತ್ತು ಚಿತ್ರರಂಗದ ಆಪ್ತರು ಭಾಗಿಯಾಗಿದ್ದರು.
ಹಸಿರು ಮತ್ತು ಕೆಂಪು ಕಾಂಬಿನೇಷನ್ ಸೀರಿಯಲ್ಲಿ ಪ್ರೇರಣಾ ಮಿಂಚುತ್ತಿದ್ದಾರೆ. ರೇಶ್ಮೆ ಶರ್ಟ್ ಮತ್ತು ಧೋತಿಯಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದೆ.
ಸೀಮಂತ ಕಾರ್ಯಕ್ರಮಕ್ಕೆ ವೇದಿಕೆಯನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಶಕ್ತಿ ಪ್ರಸಾದ್ ಮತ್ತು ಚಿರಂಜೀವಿ ಸರ್ಜಾ ಫೋಟೋ ಕೂಡ ಇಡಲಾಗಿತ್ತು.
ಡಿಸೈನರ್ ಮೆಹೆಂದಿ ಕೂಡ ಹಾಕಿಸಿಕೊಂಡಿದ್ದಾರೆ. 'Our little happiness is one the way' ಎಂದು ಒಂದು ಕೈ ಮೇಲೆ ಬರೆದು ಧ್ರುವ ಪತ್ನಿಗೆ ಮುತ್ತಿಡುತ್ತಿರುವ ಡಿಸೈನ್ ಹಾಕಲಾಗಿದೆ.
ಮತ್ತೊಂದು ಕೈ ಮೇಲೆ 'You mean the world to us' ಎಂದು ಬರೆದು. ಪುಟ್ಟ ಕೃಷ್ಣ ಅಮ್ಮನ ಮಡಿಲಿನಲ್ಲಿ ಕುಳಿತಿರುವುದನ್ನು ಬಿಡಿಸಲಾಗಿದೆ. ಅಲ್ಲದೆ ಪುಟ್ಟ ಮಗುವೊಂದು ಫೀಡಿಂಗ್ ಬಾಡಲ್ ಮತ್ತು ಬಾಲ್ ಜೊತೆಗಿರುವಂತೆ ಡಿಸೈನ್ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.