Asianet Suvarna News Asianet Suvarna News

ಅರ್ಧಾಂಗಿ: ಬನಶಂಕರಿ ಸನ್ನಿಧಾನದಲ್ಲಿ ಅದಿತಿ ದಿಗಂತ್, ತಾಯಿ ದಿಗಂತ್‌ನ ಕಾಪಾಡ್ತಾಳ?

Ardhangi Kannada Serial News: ತನ್ನ ಪತಿ ದಿಗಂತ್‌ಗೆ ಆಘಾತವಾಗಿ ನೆನಪಿನ ಶಕ್ತಿ ಹೋಗಿದೆ. ಮೊದಲೇ ಎಂಟು ವರ್ಷದ ಮಗುವಿನ ಬುದ್ಧಿಶಕ್ತಿಯಷ್ಟೇ ಇರುವ ಈತನನ್ನು ಪತ್ನಿ ಅದಿತಿ ಉಳಿಸಿಕೊಳ್ತಾಳಾ, ತಾಯಿ ಭಗವತಿ ಈಗಲಾದರೂ ಈ ದಂಪತಿಯತ್ತ ಕರುಣಾ ದೃಷ್ಟಿ ಹರಿಸ್ತಾಳಾ?

In Ardhangi serial Diganth and Adithi visited Banashankari Temple
Author
First Published Sep 24, 2022, 11:39 AM IST

'ಸ್ಟಾರ್ ಸುವರ್ಣ' ದಲ್ಲಿ ಪ್ರಸಾರವಾಗುತ್ತಿರುವ ವಿಭಿನ್ನ ಕಥೆಯ ಸೀರಿಯಲ್‌ 'ಅರ್ಧಾಂಗಿ'. ಇದರಲ್ಲಿ ಅದಿತಿ ಅನ್ನೋ ಗಟ್ಟಿಗಿತ್ತಿ ಹುಡುಗಿ ಹೇಗೆ ತನ್ನೆದುರಿಗಿರುವ ಬದುಕಿನ ಸವಾಲನ್ನು ಎದುರಿಸುತ್ತಾಳೆ ಅನ್ನೋ ಕಥೆ ಇದೆ. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಅದಿತಿ ಒಂದು ಹಂತದಲ್ಲಿ ಇನ್ನೂ ಎಂಟು ವರ್ಷದ ಮಗುವಿನ ಬುದ್ಧಿ ಇರುವ ಎಪ್ಪತ್ತೆಂಟು ವರ್ಷದ ದಿಗಂತ್‌ನನ್ನು ವರಿಸಬೇಕಾಗುತ್ತದೆ. ಪೃಥ್ವಿ ಶೆಟ್ಟಿ ಇದರಲ್ಲಿ ಚಿಕ್ಕ ಮಗುವಿನಂತಿರುವ ನಾಯಕ ದಿಗಂತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸವಾಲಿನಿಂದ ಕೂಡಿರುವ ಅದಿತಿ ಪಾತ್ರದಲ್ಲಿ ಅಂಜನಾ ದೇಶಪಾಂಡೆ ನಟಿಸುತ್ತಿದ್ದಾರೆ. ಇದೀಗ ಈ ದಂಪತಿಗೆ ಮತ್ತೊಂದು ಸವಾಲು ಎದುರಾಗಿದೆ. ಮಗುವಿನಂತೆ ಆಡುತ್ತಿದ್ದ ದಿಗಂತ್ ಆಕಸ್ಮಿಕವೊಂದರಲ್ಲಿ ನೆನಪಿನ ಶಕ್ತಿಯನ್ನೂ ಕಳೆದುಕೊಂಡಿದ್ದಾನೆ. ಇದು ಅದಿತಿಯ ನೆಮ್ಮದಿಯನ್ನು ಮತ್ತೆ ಕಸಿದುಕೊಂಡಿದೆ. ತನ್ನ ಗಂಡನನ್ನು ಉಳಿಸಿಕೊಳ್ಳೋದಕ್ಕೋಸ್ಕರ ಅದಿತಿ ತಾಯಿ ಭಗವತಿಯ ಮೊರೆ ಹೋಗಿದ್ದಾಳೆ. ಆ ಬನಶಂಕರಿ ತನ್ನೆಲ್ಲ ಕಷ್ಟಗಳನ್ನು ಪರಿಹರಿಸಿ ದಿಗಂತನನ್ನು ಮತ್ತೆ ಮೊದಲಿನ ಹಾಗೆ ಮಾಡ್ತಾಳೆ ಅನ್ನೋ ಗಟ್ಟಿ ನಂಬಿಕೆ ಅದಿತಿಯದು.

ದೇವಿಯ ಸನ್ನಿಧಾನಕ್ಕೆ ಬರುವುದಕ್ಕೂ ಮುನ್ನ ಅದಿತಿ ಹಾಗೂ ದಿಗಂತ್ ಕಲ್ಲು ಮುಳ್ಳಿನ ದಾರಿಯನ್ನು ದಾಟಿ ಬಂದಿದ್ದಾರೆ. ಆದರೆ ತಾಯಿ ಬನಶಂಕರಿಗೆ ತನ್ನನ್ನು ಆರಾಧಿಸುವ ಮಕ್ಕಳ ಬಗ್ಗೆ ಮಮತೆ ಇದೆ. ಆಕೆ ಇವರ ಮುಂದಿದ್ದ ಸಂಕಷ್ಟ ನಿವಾರಿಸಿ ತನ್ನ ಮಕ್ಕಳನ್ನು ತನ್ನ ಸಾನ್ನಿಧ್ಯಕ್ಕೆ ಕರೆಸಿಕೊಂಡಿದ್ದಾಳೆ. ಅದಿತಿಗೆ ದಿಗಂತ್‌ಗೋಸ್ಕರ ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಿದ್ದಾಳೆ. ಜೊತೆಗೆ ದಿಗಂತ್ ಮೊದಲಿನಂತೆ ಮಾಡುವುದಕ್ಕೆ ಹೋರಾಟ ನಡೆಸುತ್ತಿದ್ದಾಳೆ. ಮನೆಯವರೆಲ್ಲರ ವಿರೋಧದ ನಡುವೆಯೂ ತಾಯಿ ಬನಶಂಕರಿ ಸನ್ನಿಧಾನಕ್ಕೆ ಕರೆದುಕೊಂಡು ಬಂದಿದ್ದಾಳೆ. ಬರುವಾಗಲೂ ಪ್ರಾಣಾಪಾಯ ಎದುರಾಗಿತ್ತು. ಆದರೆ ಹೇಗೊ ಅದರಿಂದ ಬಚಾವ್ ಆಗಿ ಬಂದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Star Suvarna (@starsuvarna)

 

ಸದ್ಯಕ್ಕೀಗ ದಿಗಂತ್ ಸರಿ ಹೋಗಬೇಕು ಅಂತಾದರೆ ದೊಡ್ಡ ಪವಾಡವೇ ನಡೆಯಬೇಕು. ಆ ಪವಾಡ ಸಾಧ್ಯವಾಗಿಸೋ ಶಕ್ತಿ ಇರೋದು ಈ ತಾಯಿಗೆ. ವೈದ್ಯಲೋಕ ಕೈ ಚೆಲ್ಲಿದ ದಿಗಂತ್ ಕೇಸನ್ನು ಆಕೆ ತನ್ನ ಪವಾಡದಿಂದ ಸರಿ ಮಾಡಬೇಕಿದೆ. ಅದಿತಿ ದೇವರನ್ನು(God) ನಂಬಿ ಬಂದಿದ್ದಾಳೆ. ದಿಗಂತ್ ನನ್ನು ಮೊದಲಿನಂತೆ ಮಾಡು ತಾಯಿ ಎಂದು ಬೇಡಿಕೊಳ್ಳುತ್ತಿದ್ದಾಳೆ. ದಿಗಂತ್ ಗಾಗಿ ವಿಶೇಷ ಪೂಜೆ ಮಾಡಿಸುತ್ತಿದ್ದಾಳೆ.

ಕೆಂಡಸಂಪಿಗೆಯಲ್ಲಿ ರಾಜೇಶ್‌ ಪಾತ್ರ ಕೊನೆ, ಬಿಗ್‌ ಬಾಸ್‌ ಬರ್ತಿದ್ದಾರಾ ಶನಿ ಖ್ಯಾತಿಯ ಸುನೀಲ್‌?

ದಿಗಂತ್ ಮೊದಲಿನಂತೆ ಆಗಬೇಕು ಎಂಬ ಕಾರಣಕ್ಕೆ ಅದಿತಿ ಬನಶಂಕರಿ ತಾಯಿ ದೇವಸ್ಥಾನ(Temple)ದಲ್ಲಿ ಉರುಳು ಸೇವೆ ಮಾಡಿದ್ದಾಳೆ. ನೆಲದ ಮೇಲೆ ಪ್ರಸಾದ ಸ್ವೀಕರಿಸಿದ್ದಾಳೆ. ಉರುಳು ಸೇವೆ ಮಾಡುವಾಗ ಹೊಟ್ಟೆಗೆ ಗಾಜಿನ ಪುಡಿಗಳು ಚುಚ್ಚಿವೆ. ಅದಕ್ಕೂ ಗಮನ ಕೊಡದೆ ತನ್ನ ಸೇವೆಯನ್ನು ಮುಂದುವರೆಸಿದ್ದಾಳೆ. ಅತ್ತ ಕಡೆ ಮಗ ಸೊಸೆಗೆ ಯಾವ ತೊಂದರೆಯೂ ಆಗದಿರಲಿ ಎಂದು ಮನೆಯಲ್ಲೂ ಪ್ರತಿದಿನ ಪೂಜೆ ಪುನಸ್ಕಾರ ಮುಂದುವರೆಸಿದ್ದಾರೆ. ದಿಗಂತ್ ಗೆ ಹಳೆಯ ನೆನಪು(Memory) ಬರುವುದು ಕಷ್ಟವೇನು ಅನ್ನಿಸುತ್ತಿಲ್ಲ. ಯಾಕೆಂದರೆ ಈಗಾಗಲೇ ದಿಗಂತ್ ತಾನೂ ಓಡಾಡಿದ ಜಾಗಕ್ಕೆ ಕರೆದುಕೊಂಡು ಹೋದಾಗಲೂ ಹಳೆಯ ನೆನಪುಗಳು ಮರುಕಳುಹಿಸಿದೆ. ಆದರೆ ಯಾವುದೋ ಒಂದು ಸಣ್ಣ ಭಯ(Fear) ಅವನ ನೆನಪನ್ನು ಅಳಿಸಿ ಹಾಕುತ್ತಿದೆ. ಇದೀಗ ತಾಯಿಯ ಸನ್ನಿಧಾನಕ್ಕೆ ಬಂದಿದ್ದು, ಆ ಭಯವೂ ಹೋಗುವ ಸೂಚನೆ ಸಿಕ್ಕಿದೆ. ಆದರೆ ದಿಗಂತ್‌ಗೆ ಹಳೆಯ ನೆನಪುಗಳು ಬಂದರೆ ಅದಿತಿಯನ್ನು ಒಪ್ಪಿಕೊಳ್ಳುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.

Jothe jotheyali: ರಾಜನಂದಿನಿಗೆ ಹೊಸ ಆರ್ಯವರ್ಧನ್! ಒಪ್ಪಿಕೊಳ್ಳದ ವೀಕ್ಷಕರು..

ಸದ್ಯಕ್ಕೀಗ ಈ ಸೀರಿಯಲ್ ಕುತೂಹಲಕರ ಘಟ್ಟದಲ್ಲಿ ನಿಂತಿದೆ. ಮುಂದೆ ಏನಾಗಬಹುದು ಅನ್ನೋದು ವೀಕ್ಷಕರ ಊಹೆಯನ್ನೂ ಮೀರಿದ್ದು. ಈ ಸೀರಿಯಲ್‌(Serial)ಗೆ ಮಹತ್ವದ ತಿರುವನ್ನು ಎದುರು ನೋಡ್ತಿದ್ದ ಫ್ಯಾನ್ಸ್‌(Fans)ಗೆ ಈ ಸೀರಿಯಲ್‌ ಟೀಮ್ ಪ್ಲೆಸೆಂಟ್ ಸರ್ಪ್ರೈಸ್‌ ಕೊಡುತ್ತಾ ಕಾದು ನೋಡಬೇಕಿದೆ.

Follow Us:
Download App:
  • android
  • ios