ಕನ್ನಡತಿ ಸೀರಿಯಲ್‌ನಲ್ಲಿ ಭುವಿ ರತ್ನಮಾಲಾ ಅವರ ಸೀಟ್‌ನಲ್ಲಿ ಕೂತುಬಿಟ್ಟಿದ್ದಾಳೆ. ಅತ್ತ ಮಾಲಾ ಕಂಪನಿಗಳ ಒಡತಿ ರತ್ಮಮ್ಮ ಮರೆವಿನ ಕಾಯಿಲೆಯ ಮೂರನೇ ಹಂತ ತಲುಪಿದ್ದಾರೆ. ಮುಂದೆ ರತ್ನಮ್ಮ ಉತ್ತರಾಧಿಕಾರಿಯಾಗಿ ಭುವಿ ಏನೆಲ್ಲ ಮಾಡ್ತಾಳೆ ಅನ್ನೋದನ್ನು ನೋಡಬೇಕಿದೆ. 

ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಸಂಜೆ ಏಳೂವರೆಗೆ ಪ್ರಸಾರವಾಗ್ತಿರೋ ಧಾರಾವಾಹಿ ಕನ್ನಡತಿ. ಇದೀಗ ಈ ಸೀರಿಯಲ್‌ ಮಹತ್ವದ ಘಟ್ಟ ತಲುಪಿದೆ. ರತ್ನಮಾಲಾ ಒಡೆತನದ ಕಂಪನಿಯ ವಾರ್ಷಿಕ ಸಭೆಯಲ್ಲಿ ಕಂಪನಿ ಒಡತಿ ರತ್ನಮಾಲಾ ಅವರ ಅನುಪಸ್ಥಿತಿ ಇದೆ. ಅವರ ಗೈರು ಹಾಜರಿಯಲ್ಲಿ ಅವರ ಉತ್ತರಾಧಿಕಾರಿ ಭುವಿಯೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಅವರ ಸ್ಥಾನವನ್ನು ತುಂಬಲು ಮುಂದಾಗುತ್ತಿದ್ದಾಳೆ. ಹಾಗೆ ನೋಡಿದರೆ ಈ ಸಭೆಗೆ ಬರೋ ಮುಂಚೆ ಭುವಿಗೆ ತಾನು ಈ ಸಭೆಯನ್ನು ಮ್ಯಾನೇಜ್‌ ಮಾಡಬೇಕಾಗುತ್ತದೆ ಅನ್ನೋದೇ ಗೊತ್ತಿರೋದಿಲ್ಲ. ಅವಳಿಗೆ ಹರ್ಷ ಮತ್ತು ಸಾನಿಯಾ ನಡುವಿನ ದ್ವೇಷ ಬೇಸರ ತಂದಿದೆ. ತನ್ನ ಕೆಲಸ ಹೋಗಲು ಸಾನಿಯಾನೇ ಕಾರಣ ಅನ್ನೋದು ತಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹರ್ಷ ಮತ್ತು ಸಾನಿಯಾ ನಡುವಿನ ದ್ವೇಷ ತನ್ನಿಂದಾಗಿ ಹೆಚ್ಚಾಗ್ತಿದೆ ಅನ್ನೋದು ಗೊತ್ತಾಗ್ತಿದೆ. ಇದನ್ನು ಹೇಗಾದರೂ ದೂರ ಮಾಡಬೇಕು ಅಂದುಕೊಂಡಿರುವ ಭುವಿ ಹರ್ಷನಿಂದಲೇ ದೂರಾಗುವ ನಿರ್ಧಾರ ತಗೊಳ್ತಾಳಾ ಅನ್ನೋ ಆತಂಕ ವೀಕ್ಷಕರನ್ನು ಆವರಿಸಿದೆ. ಇನ್ನೊಂದೆಡೆ ವೀಕ್ಷಕರ ಇಲ್ಲೀವರೆಗೆ ಕಾಯುತ್ತಿದ್ದ ಕ್ಷಣ ಹತ್ತಿರ ಬಂದಿದೆ. ಅಮ್ಮಮ್ಮನ ಸ್ಥಾನದಲ್ಲೀಗ ಭುವನೇಶ್ವರಿ ವಿರಾಜಮಾನಳಾಗಿದ್ದಾಳೆ.

ಹಾಗೆ ನೋಡಿದರೆ ವಾರ್ಷಿಕ ಮೀಟೀಂಗ್‌ಅನ್ನು ರತ್ನಮಾಲಾ ಅವರೇ ನೋಡಿಕೊಳ್ಳಬೇಕು. ಆದ್ರೆ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅದನ್ನು ನಿಭಾಯಿಸಲು ಆಗುತ್ತಿಲ್ಲ. ಅದಕ್ಕೆ ಜೊತೆಗೆ ಬಾ ಎಂದು ಭುವಿಯನ್ನು ಕರೆದುಕೊಂಡು ಬಂದಿದ್ದಾರೆ. ಭುವಿ ತಾನು ಸುಮ್ಮನೇ ಜೊತೆ ಬಂದಿರುವುದು ಎಂದುಕೊಂಡಿರುತ್ತಾಳೆ. ಆದರೆ ಅವಳ ಊಹೆ ಸುಳ್ಳಾಗಿದೆ. ರತ್ನಮಾಲಾ ಅವಳಿಗೆ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. 'ಆರೋಗ್ಯ ಸರಿ ಇಲ್ಲ. ಸುಸ್ತಾಗ್ತಾ ಇದೆ. ನನ್ನ ಕೈಯಲ್ಲಿ ಸಭೆ ಮಾಡಲು ಆಗಲ್ಲ. ಹಾಗಾಗಿ ಭುವಿ ನೀನೇ ಇದನ್ನು ನೋಡಿಕೋ' ಎಂದು ರತ್ನಮಾಲಾ ಎಂದು ಎಲ್ಲ ಫೈಲ್ ಗಳನ್ನು ಭುವಿಯ ಕೈಯಲ್ಲಿ ಇಡುತ್ತಾರೆ. ಭುವಿ ಬೇಡ ಅಮ್ಮ ಅಂದ್ರೂ ಕೇಳಲ್ಲ. 'ನನ್ನ ಸ್ಥಾನದಲ್ಲಿ ನಿಂತು ಎಲ್ಲ ಜವಾಬ್ದಾರಿ ನಿರ್ವಹಿಸು. ಯಾವುದೇ ನಿರ್ಧಾರ ಇದ್ರೂ ನಿನೇ ತೆಗೆದುಕೋ' ಎಂದು ಹೇಳುತ್ತಾರೆ.

BBK9 ಅನುಪಮಾ ಗೌಡ ಸ್ವಿಮ್ ಸ್ಯೂಟ್‌ ಫೋಟೋ ವೈರಲ್; ಆಟ ಈಗ ಶುರು ಎಂದ ನೆಟ್ಟಿಗರು

ಅಮ್ಮಮ್ಮ ಅಷ್ಟು ಕೇಳಿಕೊಂಡ ಮೇಲೆ ಭುವಿಗೆ ಮತ್ತೇನು ಹೇಳಲೂ ತೋಚುವುದಿಲ್ಲ. ಅಮ್ಮನ ಅನಾರೋಗ್ಯ(Health problem)ದ ಕಾರಣ ಅವರ ಮಾತಿಗೆ ಒಪ್ಪಿ, ವಾರ್ಷಿಕ ಸಭೆಗೆ ಹಾಜರಾಗಿದ್ದಾಳೆ. ಆದರೆ ಅಲ್ಲಿದ್ದವರೆಲ್ಲಾ ಕೆಲವು ಪ್ರಶ್ನೆಗಳಿಗೆ ರತ್ನಮಾಲಾ ಮೇಡಂ ಉತ್ತರ ನೀಡಬೇಕು. ಅವರೇ ಬರಬೇಕು ಎನ್ನುತ್ತಾರೆ. ಅಲ್ಲೇ ಇದ್ದ ಸಾನಿಯಾ ಕೂಡ ಅದನ್ನೇ ಹೇಳ್ತಾಳೆ. ಆದ್ರೆ ಭುವಿ ಎಲ್ಲರ ಮನವೊಲಿಸಿ ತಾನೇ ಈ ಸಭೆ(Meeting) ನಡೆಸುವುದಾಗಿ ಹೇಳ್ತಾಳೆ. ಅದನ್ನು ನೋಡಿ ಅಮ್ಮಮ್ಮ ಖುಷಿ ಆಗ್ತಾರೆ.

Lakshana: ಲೇಡಿ ವಿಲನ್ ಅಬ್ಬರಕ್ಕೆ ತತ್ತರಿಸಿದ ಭೂಪತಿ ಫ್ಯಾಮಿಲಿ

ಒಂದು ಕಡೆ ಅಮ್ಮಮ್ಮನ ಮರೆವಿನ ಕಾಯಿಲೆ ಮೂರನೇ ಸ್ಟೇಜ್‌(Stage) ತಲುಪಿದೆ. ತನ್ನ ಕೊನೆಯ ದಿನಗಳು ಸಮೀಪಿಸುತ್ತಿದೆ ಅನ್ನೋದು ಅವರಿಗೆ ಗೊತ್ತಾಗುತ್ತದೆ. ಹೀಗಿರುವಾಗ ತಾನು ಕೊನೆಯುಸಿರು ಎಳೆಯುವ ಮೊದಲೇ ಭುವಿಯನ್ನು ಎಂಡಿ ಸ್ಥಾನದಲ್ಲಿ ನೋಡಬೇಕು ಅನ್ನೋದು ಅವರ ಕನಸು. ಆದರೆ ಭುವಿಯನ್ನು ಹೆಂಡತಿ ಆಗಿಯಷ್ಟೇ ಪ್ರೀತಿಸುವ ಹರ್ಷನಿಗೆ ಅವಳನ್ನು ತನಗಿಂತ ಮೇಲಿನ ಸ್ಥಾನದಲ್ಲಿ ಊಹಿಸಿಕೊಳ್ಳೋದೂ ಕಷ್ಟ. ತನ್ನ ಇಗೋ ಸಮಸ್ಯೆಯಿಂದ ಅವನು ಈಗಾಗಲೇ ಭುವಿಗೆ ಹರ್ಟ್(Hurt) ಆಗೋ ಹಾಗೆ ನಡೆದುಕೊಂಡಿದ್ದಾನೆ. ಮುಂದೆ ಭುವಿಯೇ ಮಾಲಾ ಕಂಪನಿ(Company) ಒಡತಿ ಆದರೆ ಹರ್ಷ ಅವಳೊಂದಿಗಿರುತ್ತಾನಾ, ಇದನ್ನೆಲ್ಲ ನೋಡಿಕೊಂಡು ಸಾನಿಯಾ ಸುಮ್ಮನಿರುತ್ತಾಳಾ ಅನ್ನೋ ಪ್ರಶ್ನೆ ವೀಕ್ಷಕರ ಮುಂದಿದೆ. ಜೊತೆಗೆ ಭುವಿ ರತ್ನಮಾಲಾ ಸ್ಥಾನದಲ್ಲಿ ಕಂಪನಿಯನ್ನು ಹೇಗೆ ನಿಭಾಯಿಸುತ್ತಾಳೆ, ಸಾನ್ಯಾ ಥರದವರನ್ನು ಹೇಗೆ ಮಟ್ಟ ಹಾಕುತ್ತಾಳೆ, ಜೊತೆಗೆ ತನ್ನ ಸಂಸಾರವನ್ನೂ ಹೇಗೆ ಚೆನ್ನಾಗಿಟ್ಟುಕೊಳ್ತಾಳೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.