ಏಜೆ ಯಂಗ್ ಡೇಸ್ ಕಥೆ ಸದ್ಯಕ್ಕೆ 'ಹಿಟ್ಲರ್ ಕಲ್ಯಾಣ' ಸೀರಿಯಲ್‌ನ ಮುಖ್ಯ ಆಕರ್ಷಣೆ. ಈ ವಾರ ಟಿಆರ್‌ಪಿಯಲ್ಲೂ ಈ ಸೀರಿಯಲ್ ಎರಡನೇ ಸ್ಥಾನದಲ್ಲಿದೆ. ಏಜೆ ಈ ಲುಕ್ ಮುಂದೆ ಯಂಗ್ ಹೀರೋಗಳೆಲ್ಲ ಡಮ್ಮಿ ಪೀಸ್ ಥರ ಕಾಣ್ತಾರೆ ಅಂತ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.
ಹಿಟ್ಲರ್ ಕಲ್ಯಾಣ ಜೀ ಕನ್ನಡದಲ್ಲಿ ಸಂಜೆ ಏಳಕ್ಕೆ ಪ್ರಸಾರವಾಗುತ್ತಿರುವ ಸೀರಿಯಲ್. ಇದರಲ್ಲಿ ಕಳೆದ ತಿಂಗಳವರೆಗೂ ಏಜೆ, ಲೀಲಾ ನಡುವಿನ ಮುನಿಸು, ಜಗಳ, ಕೋಪದ ಎಪಿಸೋಡ್‌ಗಳೇ ಪ್ರಸಾರವಾಗುತ್ತಿದ್ದವು. ಆದರೆ ಯಾವಾಗ ಏಜೆ ತಂಗಿ ಪವಿತ್ರಾಳನ್ನು ಮದುವೆ ಆಗಿ ಅವಳ ಬದುಕನ್ನು ಸರ್ವನಾಶ ಮಾಡಿದ್ದ ದೇವ್ ನ ನಿಜ ಮುಖವನ್ನು ಲೀಲಾ ಬಯಲು ಮಾಡಿದಳೋ ಆವಾಗಿನಿಂದ ಏಜೆ ಲೀಲಾಳನ್ನು ನೋಡುವ ದೃಷ್ಟಿ ಬದಲಾಗಿದೆ. ಅವಳಲ್ಲಿರುವುದು ಬರೀ ಮುಗ್ಧತೆ, ಒಳ್ಳೆತನ ಮಾತ್ರ. ಅವಳು ಏನೇ ಕೆಲಸ ಮಾಡಿದರೂ ಮನೆಯ ಹಿತಕ್ಕಾಗಿಯೇ ಮಾಡುತ್ತಾಳೆ ಅನ್ನೋದು ಗೊತ್ತಾಗಿದೆ. ಇದು ಗೊತ್ತಾದ ಮೇಲೆ ಲೀಲಾ ಮಾಡುವ ಎಡವಟ್ಟುಗಳನ್ನೆಲ್ಲ ಏಜೆ ಮಾಫಿ ಮಾಡುತ್ತಿದ್ದಾನೆ. ಜೊತೆಗೆ ಸೊಸೆಯಂದಿರು ಅವಳ ಮೇಲೆ ಮಾಡುವ ಆರೋಪಗಳಿಗೂ ಅವರನ್ನೇ ಹೊಣೆ ಮಾಡಿ ಗದರುತ್ತಿದ್ದಾನೆ. ಆದರೆ ಈಗ ಏಜೆ ಹಳೇ ಹೆಂಡ್ತಿ ಅಂತರಾ ಎಪಿಸೋಡ್‌ಗಳು ಪ್ರಸಾರವಾಗಲಿವೆ.
ಇದರಲ್ಲಿ ಯಂಗ್ ಆಗಿದ್ದ ಏಜೆಯ ಪ್ರೇಮ ಕಥೆ ತೆರೆದುಕೊಳ್ಳಲಿದೆ. ಈ ಭಾಗದ ದೃಶ್ಯಗಳ ಪ್ರೋಮೋವನ್ನು ಚಾನೆಲ್ ಈಗಾಗಲೇ ಪ್ರಸಾರ ಮಾಡಿದ್ದು ದಿಲೀಪ್ ರಾಜ್ ಯಂಗ್ ಆಂಡ್ ಎನರ್ಜಿಟಿಕ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 'ಏಜೆ ಯಂಗ್ ಲುಕ್ ಮುಂದೆ ಈಗಿರುವ ಯಂಗ್ ಹೀರೋಗಳೆಲ್ಲ ಡಮ್ಮಿ ಪೀಸ್‌ಗಳ ಥರ ಕಾಣ್ತಾರೆ' ಅನ್ನುವ ರೀತಿಯ ಕಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದುಬರುತ್ತಿವೆ. ಜನ ದಿಲೀಪ್ ರಾಜ್ ಅವರ ಪಾತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ.
ಜೊತೆ ಜೊತೆಯಲಿ: ಸಂಜುವೇ ಆರ್ಯ ಅನ್ನೋದು ಗೊತ್ತಾದ್ರೆ ಆರ್ಯನ ಪ್ರಾಣಕ್ಕೇ ಅಪಾಯ! ಕೊಲೆಗಾರರು ಯಾರು?
ಜನ ಏಜೆಯ ಯಂಗ್ ಲುಕ್ ಅನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಅಭಿ ಮತ್ತು ಅಂತರಾ ನಡುವಿನ ಲವ್ ಸ್ಟೋರಿಯ ಎಪಿಸೋಡ್ ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ. ಸದ್ಯಕ್ಕೀಗ ಜೀ ಕನ್ನಡ ವಾಹಿನಿ ಈ ಸೀನ್‌ನ ಪ್ರೋಮೋ(Promo)ವನ್ನು ಹೊರಬಿಟ್ಟಿದೆ. ಇದರಲ್ಲಿ ಅಂತರಾ ಮತ್ತು ಅಭಿ ಅಂದರೆ ಏಜೆ ಕಾಲೇಜ್ ದಿನಗಳ ಸ್ಟೋರಿ ಓಪನ್ ಆಗಿದೆ. ಇದರಲ್ಲಿ ಅಂತರಾ ಎಂಥಾ ಸೌಂದರ್ಯವತಿ ಆಗಿದ್ದಳು, ಆಕೆಯನ್ನು ನೋಡೋದಕ್ಕಾಗಿ, ಅವಳನ್ನು ಪ್ಲೀಸ್ ಮಾಡೋದಕ್ಕಾಗಿ ಹುಡುಗರು ಏನೆಲ್ಲ ಸಾಹಸ ಮಾಡುತ್ತಿದ್ದರು ಅನ್ನೋದನ್ನು ಬಹಳ ಕಲರ್‌ಫುಲ್ ಆಗಿ ತೋರಿಸಲಾಗಿದೆ. ಜೊತೆಗೆ ಚೆಂದದ ಹುಡುಗಿ ಅಂತಾರ ಜೊತೆಗೆ ಹುಡುಗನೊಬ್ಬ ಕೆಟ್ಟದಾಗಿ ನಡೆದುಕೊಂಡಾಗ ಅಲ್ಲಿಗೆ ಏಜೆ ಎಂಟ್ರಿ ಆಗುತ್ತೆ. ಬೈಕ್‌ನಲ್ಲಿ ಸ್ಟೈಲಾಗಿ ಬಂದು ಅಂತರಾಗೆ ತೊಂದರೆ ಕೊಟ್ಟವನನ್ನು ಅಟ್ಟಾಡಿಸಿ ಹೊಡೆಯುತ್ತಾನೆ. ಹಾಗೆ ಹೊಡೆದು ಹೀರೋ ಲುಕ್‌ನಲ್ಲಿ ಕ್ಯಾಮರಾ(Camara) ಎದುರು ಬರೋ ದಿಲೀಪ್ ರಾಜ್ ಆಕ್ಟಿಂಗ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಎಪಿಸೋಡನ್ನು ನೋಡಲು ಕಾತರರಾಗಿ ಕಾಯುತ್ತಿರುವುದಾಗಿ ಕಮೆಂಟ್ ಮಾಡಿದ್ದಾರೆ.
ಇನ್ನೊಂದು ಕಡೆ ಇದೇ ಹೊತ್ತಿಗೆ ಸೋಮವಾರದಿಂದ ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್ 'ಭಾಗ್ಯಲಕ್ಷ್ಮಿ' ಶುರುವಾಗ್ತಿದೆ. ನಟಿ ಸುಷ್ಮಾ ಹತ್ತು ವರ್ಷಗಳ ನಂತರ ಈ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಸೀರಿಯಲ್‌ನ ಪ್ರೇಕ್ಷಕರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸೀರಿಯಲ್ ಟೀಮ್ ಹೀಗೊಂದು ಮಾಸ್ಟರ್ ಪ್ಲಾನ್(Master plan) ಮಾಡಿದೆ ಅಂತಲೂ ಕಿರುತೆರೆಯ ವಿಮರ್ಶಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಸೋಮವಾರದಿಂದ ಹಿಟ್ಲರ್ ಕಲ್ಯಾಣದಲ್ಲಿ ಪ್ರಸಾರವಾಗಲಿರೋ ಈ ಎಪಿಸೋಡ್(Episode)ಗಳು ಪ್ರೇಕ್ಷಕರನ್ನು ಕುರ್ಚಿಗೇ ಕಟ್ಟಿ ಹಾಕುವಂತಿರೋದು ಗ್ಯಾರೆಂಟಿ ಅನ್ನೋದು ವೀಕ್ಷಕರ ಅಭಿಪ್ರಾಯ. ಈ ಸೀರಿಯಲ್(Serial)ಅನ್ನು ದಿಲೀಪ್ ರಾಜ್ ನಿರ್ದೇಶಿಸಿದ್ದಾರೆ. ಅವರೇ ನಾಯಕನಾಗಿ ಮಿಂಚುತ್ತಿದ್ದಾರೆ. ನಾಯಕಿ ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್ ನಟಿಸಿದ್ದಾರೆ. ಅಂತರಾ ಪಾತ್ರದಲ್ಲಿ ರಜನಿ ಕಾಣಿಸಿಕೊಂಡಿದ್ದಾರೆ.
ಕೆಂಡಸಂಪಿಗೆ: ಓಟಿಗಾಗಿ ಸುಮನಾಗೆ ತಾಳಿ ಕಟ್ಟಿದ ತೀರ್ಥಂಕರ್, ಎಲೆಕ್ಷನ್ ಮುಗಿದ ಮೇಲೆ ಡಿವೋರ್ಸ್!
